ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅನುಭವ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಅನ್ವಯಿಕ ಸಿದ್ಧಾಂತಗಳು, ಮಾಧ್ಯಮ ಯಶೋಗಾಥೆ ಮತ್ತು ಸಮರ್ಥ ಗುರುವಿನ ನಿರೀಕ್ಷೆ...

ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಒಂದು ತಿಂಗಳ ಇಂಟನರ್್ಶಿಪ್ಗಾಗಿ ಸೇರಿದ್ದ ದಿನಗಳು. ಪತ್ರಿಕೋದ್ಯಮದಲ್ಲಿ ಮೂರು ವರ್ಷದ ಡಿಗ್ರಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಕೋಸರ್ಿನ ಒಂದು ವರ್ಷದ ಅವಧಿ ಪೂರ್ಣಗೊಂಡಿತ್ತು. ಇನ್ನೊಂದು ವರ್ಷದ ಅಧ್ಯಯನ ಬಾಕಿಯಿತ್ತು. ಮಂಗಳೂರು ಡೆಕ್ಕನ್ ಹೆರಾಲ್ಡ್ನ ಮುಖ್ಯಸ್ಥ ರೊನಾಲ್ಡ್ ಫನರ್ಾಂಡೀಸ್ ನನ್ನನ್ನು ಕರೆದು ಒಂದು ಉದ್ದದ ಪತ್ರಿಕಾ ಹೇಳಿಕೆಯನ್ನು ಕೊಟ್ಟು ಅದರ ಆಧಾರದಲ್ಲಿ ಚುಟುಕು ಸುದ್ದಿಯೊಂದನ್ನು ಬರೆಯಲು ಹೇಳಿದರು. ಪತ್ರಿಕಾ ಹೇಳಿಕೆಯನ್ನು ಆಮೂಲಾಗ್ರವಾಗಿ ಓದಿದ ನನಗೆ ಆ ಪತ್ರಿಕಾ ಹೇಳಿಕೆಯಲ್ಲಿ ಸುದ್ದಿ ಯಾವುದು, ಸುದ್ದಿಯಲ್ಲದ್ದು ಯಾವುದು ಎಂಬುದರ ವ್ಯತ್ಯಾಸ ಫಕ್ಕನೆ ಹೊಳೆಯಲಿಲ್ಲ. ಪತ್ರಿಕೋದ್ಯಮ ತರಗತಿಗಳಲ್ಲಿ ಆರಂಭದಲ್ಲಿಯೇ ಬೋಧಿಸುವ "5 ಡಬ್ಲ್ಯೂ 1 ಎಚ್ "ಪಾಠಗಳು ಆ ಹೊತ್ತಿಗೆ ನನಗೆ ಸಾಕಷ್ಟು ಬಾರಿ ಆಗಿದ್ದವು. "ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ "ಎಂಬ ಪಾಠಗಳಂತೂ ಬೋರು ಹೊಡೆಸುವಷ್ಟು ಆಗಿದ್ದವು. ಹೀಗಿದ್ದರೂ ರೊನಾಲ್ಡ್ ಅವರು ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ "5ಡಬ್ಲ್ಯೂ "ಯಾವುದು "1ಎಚ್" ಯಾವುದು ಎಂಬ ಗೊಂದಲ ಬಗೆಹರಿಯುತ್ತಿರಲಿಲ್ಲ. ಅಷ್ಟೊಂದು ದೊಡ್ಡ ಪತ್ರಿಕಾ ಹೇಳಿಕೆಯನ್ನು ನೂರಿನ್ನೂರು ಪದಗಳಲ್ಲಿ ಬರೆಯುವುದು ಹೇಗೆಂಬುದೂ ...

ಕೃಷಿ ತಾತ್ಸಾರಕ್ಕೆ ಶಿಕ್ಷಣ ವ್ಯವಸ್ಥೆಯೂ ಕಾರಣವಲ್ಲವೇ?

" ಹಳ್ಳಿಯ ಬಗ್ಗೆ ನಿಮಗೇನ್ರಯ್ಯಾ ಗೊತ್ತು ? ನಿಮ್ಮ ಪ್ರಕಾರ ಹಳ್ಳಿಗಳು ಎಂದರೆ ಒಂಥರಾ ವಾರಾಂತ್ಯದ ರಜಾ ತಾಣಗಳಿದ್ದಂತೆ . ನಿಮಗೆ ಇಲ್ಲಿನ ತಂಪಾದ ಹವೆ ಇಷ್ಟ , ಇಲ್ಲಿನ ಪರಿಸರ ಇಷ್ಟ ಮತ್ತು ಇಲ್ಲಿನ ಹಸಿರು ಇಷ್ಟ ..." ಮೊನ್ನೆ ವಯಕ್ತಿಕ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಅಲ್ಲಿನ ಹಳ್ಳಿಯೊಂದರಲ್ಲಿ ಸ್ವಂತ ತೋಟ, ಗದ್ದೆ ನೋಡಿಕೊಂಡಿರುವ ಸ್ನೇಹಿತನ ಜೊತೆ ಮಾತಾಡುತ್ತಿದ್ದಾಗ ಹಳ್ಳಿಯ ಜೀವನದ ಬಗ್ಗೆ ನಾನು ವ್ಯಕ್ತಪಡಿಸಿದ ಅಭಿಮಾನಕ್ಕೆ ಆತನ ಪ್ರತಿಕ್ರಿಯೆ ಈ ಮೇಲಿನಂತಿತ್ತು. "...ಆದರೆ ನಮ್ಮ ಹಳ್ಳಿಗಳಿಗೆ ಭವಿಷ್ಯವಿದೆ ಅಂತ ನನಗಂತೂ ಅನಿಸುತ್ತಿಲ್ಲ. ಬೆಳೆಗೆ ಬೆಲೆಯಿಲ್ಲ. ನಾವು ಮಾಡುವ ಕೆಲಸಕ್ಕೆ ಗೌರವವಿಲ್ಲ. ಒಬ್ಬ ವ್ಯಕ್ತಿ ಅಲ್ಪ ಸ್ವಲ್ಪ ಓದಿಕೊಂಡು ಯಾವುದೋ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂದರೆ ಹೆಣ್ಣು ಹೆತ್ತವರು ಸ್ಪರ್ದೆಗೆ ಬಿದ್ದವರಂತೆ ಅವನ ಬೆನ್ನು ಬೀಳುತ್ತಾರೆ. ಅದೇ ಹಳ್ಳಿಯ ಕೃಷಿಕನೊಬ್ಬನಿಗೆ ಹೆಣ್ಣು ಕೊಡುವವರು ಇಲ್ಲ. ಆತ ತನ್ನ ಕೃಷಿ ಅಗತ್ಯತೆಗಾಗಿ ಏನೇ ಸಂಶೋಧನೆ ಮಾಡಿದರೂ ಅವನ ಬೌದ್ಧಿಕ ಕೆಲಸಕ್ಕೆ ಮರ್ಯಾದೆ ಇಲ್ಲ. ಅಲ್ಲ ಮಾರಾಯಾ, ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಶ್ರೀಮಂತವಾಗಿರಬಹುದು ಆದರೆ ಅವುಗಳ ಹಿತ್ತಿಲಿನಲ್ಲಿ ತರಕಾರಿ ಬೆಳೆಯಲು ಸಾಧ್ಯವಾ ಹೇಳು. ಇನ್‌ಫೋಸಿಸ್‌ನವರು ಎಲ್ಲಾದರೂ ಅಕ್ಕಿ ಬೆಳೆದು ಅವರ ನೌಕರರ ಹೊಟ್ಟೆ ತುಂಬಿಸಲ...

ಕುಪ್ಪಳಿಯ ಸಾಂಗತ್ಯ

ಕುಪ್ಪಳಿಯಲ್ಲಿ ಮೊನ್ನೆ ತಾನೆ ಮುಕ್ತಾಯವಾದ ಎರಡು ದಿನಗಳ ಚಿತ್ರೋತ್ಸವದ ಬಗ್ಗೆ ನನ್ನ ನಾಲ್ಕು ಮಾತು ಬರೆಯೋಣ ಎಂದು ಕುಳಿತರೆ ಏನು ಬರೆಯುವುದು ಎಂಬ ಪ್ರಶ್ನೆ ಮತ್ತೆ ಮತ್ತೆ ಕಾಡುತ್ತಿದೆ. ಕಾರಣ; ಸಾಂಗತ್ಯ ತಂಡದವರು ಆಯೋಜಿಸಿದ ಚಿತ್ರೋತ್ಸವದ ಕೊನೆಯಲ್ಲಿ ಪ್ರದರ್ಶಿಸಿದ ಬಾಯ್ ಇನ್ ದಿ ಸ್ಟ್ರೈಪ್ಡ್ ಪಾಯ್ಜಾಮಾ ಚಿತ್ರದ ಗುಂಗಿನಿಂದ ಇನ್ನೂ ಹೊರಬರಲು ಆಗುತ್ತಿಲ್ಲ. ಅಷ್ಟೊಂದು ಮನಮುಟ್ಟುವ ಚಿತ್ರ ಅದು. ಜೂನ್ ನಲ್ಲಿ ಡೆಕ್ಕನ್ ಹೆರಾಲ್ಡ್ ಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಇಂಟರ್ನ್‌ಶಿಪ್ ಮಾಡುತ್ತಿದ್ದಾಗ ಅಲ್ಲಿನ ಸಿಬ್ಬಂದಿ ಸಿಬಂತಿ ಪದ್ಮನಾಭ ಅವರು ಕುಪ್ಪಳಿಯಲ್ಲಿ ಸಾಂಗತ್ಯ ಬಳಗದವರು ನಡೆಸುವ ಚಿತ್ರೋತ್ಸವದ ಬಗ್ಗೆ ಹೇಳಿದ್ದರು. ಚಿತ್ರೋತ್ಸವಕ್ಕೆ ಬರಲು ಆಪ್ತ ಆಮಂತ್ರಣವನ್ನೂ ನೀಡಿದ್ದರು. ಆದರೂ ಮನಸ್ಸು ಮಾತ್ರ ಹೋಗಲೋ ಬೇಡವೋ ಎಂದು ಕಾಲಹರಣ ಮಾಡುತ್ತಿತ್ತು. ನೀನು ಸ್ನಾತಕೋತ್ತರ ಪತ್ರಿಕೋದ್ಯಮ ವಿದ್ಯಾರ್ಥಿಯಾಗಿದ್ದು, ತೃತೀಯ ಸೆಮಿಸ್ಟರ್ ಓದುತ್ತಿರುವವನಾಗಿದ್ದರೆ ಈ ಕಾರ್ಯಕ್ರಮಕ್ಕೆ ನೀನು ಕಡ್ಡಾಯವಾಗಿ ಬರಲೇಬೇಕು ಎಂದ ಸಿಬಂತಿ ಪದ್ಮನಾಭರ ಮಾತು ಮತ್ತು ಸಲಹೆ-ಚಿತ್ರೋತ್ಸವದಲ್ಲಿ ಬರುವಂತೆ ಮಾಡಿತು. ಆದರೂ ಚಿತ್ರೋತ್ಸವ ಹೇಗಾಗುತ್ತದೆಯೋ ಏನೋ, ಅಲ್ಲಿಗೆ ಯಾರ್ಯಾರು ಬರುತ್ತಾರೋ ಎಂಬ ಪ್ರಶ್ನೆಗಳೊಂದಿಗೆ ಕುಪ್ಪಳಿ ತಲುಪಿದ್ದೆ. ಆದರೆ ಈಗ ಯಾವ ಪ್ರಶ್ನೆಗಳು, ಯಾವ ಅನುಮಾನಗಳೂ ಉಳಿದಿಲ್ಲ. ಅಲ್ಲಿನ ವಾತಾವರಣ, ಬಳಗದವರ ಆತ್ಮೀಯತೆ, ಪ್ರದರ್ಶಿಸಿ...

“ಮಡಿಕ್ಕಳಿ ಸಾರ್!”

ಒಂದು ತಿಂಗಳಿಗೂ ಮಿಕ್ಕಿ ಮಾಡಿದ ಕೆಲಸವೊಂದು ಅಂತಿಮ ಹಂತಕ್ಕೆ ಬಂದಿದೆ. ಅದರ ಕೆಲಸದ ನಿಮಿತ್ತ ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಮೂರು ದಿನ ಬೆಂಗಳೂರಲ್ಲಿದ್ದು ಮೊನ್ನೆ ಮಂಗಳವಾರ ಧರ್ಮಸ್ಥಳಕ್ಕೆ ಹೋಗುವ ಬಸ್ ಹತ್ತಿದೆ. ಬಸ್ ತನ್ನ ಪಯಣ ಆರಂಭಿಸಿತು. ಇನ್ನೂ ಬೆಂಗಳೂರನ್ನು ಬಸ್ಸು ಬಿಟ್ಟಿರಲಿಲ್ಲ. ಬಿಸಿಲು ತೀವ್ರವಾಗಿದ್ದ ಕಾರಣ ಬಾಯಾರಿಕೆ ಜೋರಾಗಿತ್ತು. ಬಸ್ಸು ಅದ್ಯಾವುದೋ ಸಿಗ್ನಲ್ಲಿನ ಬಳಿ ಬಂದು ನಿಂತಿತು. ಬಸ್ ನಿಂತ ಕೂಡಲೇ ಒಂದಿಷ್ಟು ಮಂದಿ ಹುಡುಗರು "ಮಜ್ಗೆ ಸಾರ್ ಮಜ್ಗೆ, ತಂಪು ಮಜ್ಗೆ" ಅಂತ ಕೂಗುತ್ತಾ ತಂಪಾದ ನಂದಿನಿ ಮಜ್ಜಿಗೆ ಪ್ಯಾಕೆಟ್ ಮಾರಲು ಬಸ್ಸನ್ನೇರಿದರು. ಅವರೆಲ್ಲರೂ ಹತ್ತರಿಂದ ಹದಿನಾಲ್ಕರ ನಡುವಿನ ವಯಸ್ಸಿನವರು. ನನಗೂ ಬಾಯಾರಿಕೆ ತೀವ್ರವಾಗಿದ್ದ ಕಾರಣ ಒಬ್ಬನನ್ನು ಕರೆದು "ಒಂದು ಪ್ಯಾಕ್ ಮಜ್ಜಿಗೆಗೆ ಎಷ್ಟು" ಅಂತ ಕೇಳಿದೆ. "ಏಳ್ರುಪಾಯ್ ಸಾರ್" ಅಂದ. "ಸರಿ, ಒಂದು ಪ್ಯಾಕ್ ಕೊಡು" ಅಂದೆ. ಒಂದು ಪ್ಯಾಕ್ ಮಜ್ಜಿಗೆಯನ್ನು ಅವನಿಂದ ಇಸಿದುಕೊಂಡು ಅವನಿಗೆ ಹತ್ತು ರೂಪಾಯಿ ನೋಟು ಕೊಟ್ಟೆ. ಆ ಹುಡುಗ "ಚಿಲ್ರೆ ಕೊಡಿ ಸಾರ್" ಎಂದ. ನನ್ನ ಬಳಿ ಏಳು ರೂಪಾಯಿ ಚಿಲ್ಲರೆ ಇರಲಿಲ್ಲ. "ಚಿಲ್ರೆ ಇಲ್ಲಪ್ಪಾ, ನೀನೇ ಕೊಡು" ಎಂದೆ. ಊಹೂಂ, ಆ ಹುಡುಗ ಎಷ್ಟೇ ತಡಕಾಡಿದರೂ ಅವನಿಗೆ ನನಗೆ ಕೊಡಲು ಬೇಕಾದ ಮೂರು ರೂಪಾಯಿ ಚಿಲ್ಲರೆ ಸಿಗಲಿಲ್ಲ. "ಏನ್ಮಾಡ್ಲಿ ಸಾರ್? ಚಿ...

ಹೀಗೊಂದು ಗುರುವಂದನೆ...

ಬದುಕೊಂದು ಸುಂದರವಾಗಬೇಕಾದರೆ ಎಷ್ಟೆಲ್ಲ ಜನರು ನಮ್ಮ ಮೇಲೆ ಪ್ರಭಾವ ಬೀರುತ್ತಾರಲ್ಲ? ಹೆತ್ತವರು, ಬಂಧುಗಳು, ಸ್ನೇಹಿತರು, ಗುರುಗಳು ಹಾಗೂ ಪರಿಸರ - ಎಲ್ಲರೂ ಒಂದಲ್ಲ ಒಂದು ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲೆ ಇರುವುದು ಹೌದಾದರೂ, ಬಹುತೇಕ ಬಾರಿ ನಮ್ಮ ಹಿತೈಷಿಗಳ, ಆಪ್ತರ ಸಣ್ಣ ಪುಟ್ಟ ಸಲಹೆ ಸೂಚನೆ ನಮ್ಮ ಜೀವನಕ್ಕೊಂದು ತಿರುವು ನೀಡುತ್ತದೆ, ಬಾಳು ಬೆಳಗಿಸಲು ಸಹಕರಿಸುತ್ತದೆ. ನನಗೂ ಹೀಗೇ ಆಯ್ತು. ನಾನು ಎಂಟನೇ ತರಗತಿಯಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಅಲ್ಲಿನ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರಸನ್ನ ಕುಮಾರ ಐತಾಳರು ನನ್ನನ್ನು ತರಗತಿಯ ಆರಂಭದ ದಿನದಲ್ಲಿಯೇ ಕರೆದು ಹೇಳಿದ ಮಾತು ಇಂದಿಗೂ ನನ್ನಲ್ಲಿ ಅಚ್ಚಳಿಯದೇ ನಿಂತಿವೆ. ಹೆಚ್ಚೂ ಕಡಿಮೆ ಯಾವುದೇ ಹುಟ್ಟಾ ಫಟಿಂಗನೂ ಹುಬ್ಬೇರಿಸುವಂತೆ ವರ್ತಿಸುತ್ತಿದ್ದ ನನ್ನನ್ನು ತರಗತಿಯಲ್ಲಿ ನಿಲ್ಲಿಸಿ, "ನಿನಗೇನಾದರೂ ಮನುಷ್ಯನಾಗಬೇಕು ಎಂದಿದ್ದರೆ ಮೊದಲು ಈ ಉಢಾಳತನವನ್ನೆಲ್ಲಾ ಬಿಟ್ಟು ತರಗತಿಯ ಪಾಠಗಳತ್ತ ಹೆಚ್ಚಿನ ಗಮನಕೊಡು. ಅದಕ್ಕಿಂತಲೂ ಹೆಚ್ಚಾಗಿ ಮೊದಲು ಪುಸ್ತಕಗಳನ್ನು ಓದಲು ಆರಂಭಿಸು. ಪುಸ್ತಕಗಳನ್ನು ಓದದ ಮನುಷ್ಯ ಮನುಷ್ಯನೇ ಅಲ್ಲ" ಎಂದು ನನ್ನನ್ನು ಪುಸ್ತಕಗಳತ್ತ ಮುಖಮಾಡಿ ನಿಲ್ಲುವಂತೆ ಮಾಡಿದ್ದು ಐತಾಳರು. ತೇಜಸ್ವಿ, ಭೈರಪ್ಪ ಮುಂತಾದ ಖ್ಯಾತನಮರ ಕೃತಿಗಳನ್ನು ತೋರಿಸಿದ್ದು ಕೂಡಾ ಅವರೇ. ಇವ...

ಹೀಗೊಂದು ಅನುಭವ

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಒಂದು ದಿನ ಕಾಲೇಜು ಬಿಟ್ಟ ನಂತರ ನಮ್ಮ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಬಳಿ ಹೋಗಿದ್ದೆ. ಅದೇ ತಾನೆ ಬರೆದು ಮುಗಿಸಿದ್ದ ಎರಡು ಅಸೈನ್‌ಮೆಂಟುಗಳನ್ನು ಅವರಿಗೆ ತೋರಿಸಬೇಕಾಗಿತ್ತು. ಅಸೈನ್‌ಮೆಂಟುಗಳನ್ನು ಅವರ ಟೇಬಲ್ಲಿನ ಮೇಲಿಟ್ಟು ವಾಪಸ್ ಬರಬೇಕು ಅನ್ನುವಷ್ಟರಲ್ಲಿ ವಿಭಾಗ ಮುಖ್ಯಸ್ಥರು ನನ್ನನ್ನು ಕರೆದು "ಬೆಂಗಳೂರಿನಿಂದ ಗರ್ವ ಪತ್ರಿಕೆಯ ಪತ್ರಕರ್ತರೊಬ್ಬರು ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಇಲ್ಲಿಗೆ ಬರಲಿಕ್ಕಿದ್ದಾರೆ. ಅವರನ್ನು ಭೇಟಿ ಮಾಡಬೇಕು ಎನ್ನುವಂತಿದ್ದರೆ ಸ್ವಲ್ಪ ಸಮಯ ನಿಲ್ಲಿ. ಅವರ ಜೊತೆ ಮಾತನಾಡಿ ಹೋಗೋಣ" ಎಂದರು. ನಾನು ಆಗ ಗರ್ವ ಪತ್ರಿಕೆಯನ್ನು ಒಂದೂ ಬಿಡದೆ ಓದುತ್ತಿದ್ದೆ. ಹಾಗಾಗಿ ನಿಂತು ಅವರ ಜೊತೆ ಮಾತನಾಡಿ ಹೋಗುವ ಮನಸ್ಸಾಯಿತು. ಐದೇ ನಿಮಿಷದಲ್ಲಿ ಅವರು ಬಂದರು. ನಮ್ಮ ವಿಭಾಗ ಮುಖ್ಯಸ್ಥರ ಬಳಿ ಸ್ವಲ್ಪ ಹೊತ್ತು ಪತ್ರಿಕೆ-ಸಾಹಿತ್ಯ-ಬರವಣಿಗೆ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದರು. ನಂತರ ನನ್ನ ಹೆಸರು ಕೇಳಿದರು. ತಮ್ಮ ಪರಿಚಯವನ್ನೂ ಮಾಡಿಕೊಂಡರು. ಆದರೆ ಅವರು ಗರ್ವ ಪತ್ರಿಕೆಯವರಲ್ಲ ಎಂದು ನಂತರ ತಿಳಿತು. ತಿಳಿದಾಗ ಸ್ವಲ್ಪ ಬೇಸರವೂ ಆತು! ಅವರು ತುಂಬ ಓದಿಕೊಂಡಿದ್ದಾರೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತಿತ್ತು. ನನ್ನ ಮತ್ತು ಅವರ ಸಂಬಂಧ ನಂತರದ ದಿನಗಳಲ್ಲಿ ಆತ್ಮೀಯವಾತು. ಅವರು ಕಾರ್ಕಳ, ಉಡುಪಿ, ಕುಂದಾಪುರದಂತಹ ಕರಾವಳಿಯ ಊರುಗಳಿಗೆ ಬಂದಾಗ ಅವರ ಜೊತೆ ಮಾತನಾಡಲೆ...

ಉತ್ತರವಿಲ್ಲದ ಪ್ರಶ್ನೆಗಳು

ಈ ಘಟನೆ ನಡೆದದ್ದು ಜನವರಿ 13, 2007 ರಂದು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಥಿಂಕ್ ಇಂಡಿಯಾ ಎಂಬ ಕಾರ್ಯಕ್ರಮದಲ್ಲಿ. ಇಡೀ ಕಾರ್ಯಕ್ರಮ 'ಆಧ್ಯಾತ್ಮ ಮತ್ತು ರಾಷ್ಟ್ರದ ಪ್ರಗತಿ' ಎಂಬ ವಿಶಯದ ಮೇಲೆ ಕೇಂದ್ರಿತವಾಗಿತ್ತು. ಆ ದಿನ ಬೆಳಿಗ್ಗೆ ಕೇರಳದ ವಿಜಯ್ ಮೆನನ್ ಅವರ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾದನೆಯ ಬಗ್ಗೆ ಭಾಷಣವನ್ನು ಕೇಳಿದ ಸುಮಾರು ಒಂದು ಸಾವಿರದಷ್ಠಿದ್ದ ಯುವಜನತೆ ರೋಮಾಂಚಿತಗೊಂಡಿತ್ತು. ಅವರ ಭಾಷಣದಲ್ಲಿನ ಎರಡು ವಿಚಾರಗಳು ಮನಮುಟ್ಟುವಂತಿದ್ದವು: ವಿವೇಕಾನಂದರು ತಮ್ಮ ಚಿಕಾಗೋ ಉಪನ್ಯಾಸದಲ್ಲಿ "ನಾನು ಸ್ವಾಮಿ ವಿವೇಕಾನಂದ, ನಾನು ಭಾರತದಿಂದ ಬಂದಿದ್ದೇನೆ" ಅಂತ ಒಮ್ಮೆಯೂ ಹೇಳಿಕೊಳ್ಳಲಿಲ್ಲ. ಬಡಲಿಗೆ ಅವರು "ಜಗತ್ತಿಗೇ ವಿಶ್ವಭ್ರಾತ್ರ ತ್ವ ಮತ್ತು ವಿಶ್ವಶಾಂತಿಯ ಸಂದೇಶ ನೀಡಿದ ಮಹಾನ್ ಪರಂಪರೆಯ ಪ್ರತಿನಿಧಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ" ಅಂತ ಹೇಳಿದ್ದರು. ಇದು ವಿವೇಕಾನಂದರ ನಿರಹಂಕಾರ ಸ್ಥಿತಿಯನ್ನು ತೋರಿಸುತ್ತದೆ. ಇವತ್ತು ಬಹುತೇಕ ಭಾಷಣಕಾರರು ತಮ್ಮ ಭಾಷಣವನ್ನು 'ನನ್ನ ಸಹೋದರ ಸಹೋದರಿಯರೇ' ಅಂತಲೇ ಆರಂಭಿಸುತ್ತಾರೆ. ಆದರೆ ಅವರುಗಳ ಈ ರೀತಿಯ ಆರಂಭಕ್ಕೆ ಯಾರೂ ಚಪ್ಪಾಳೆ ತಟ್ಟುವುದಿಲ್ಲ. ಆದರೆ ವಿವೇಕಾನಂದರು ಚಿಕಾಗೋ ಉಪನ್ಯಾಸದ ಆರಂಭದಲ್ಲಿ "ಅಮೆರಿಕದ ನನ್ನ ಸಹೋದರ ಸಹೋದರಿಯರೇ" ಅಂತ ಹೇಳಿದ್ದ...
A day with him… It happened in the month of July, 2006… One evening in the month of July, I went to our Journalism Department and kept some of my completed assignments on the table. I was about to come back to the hostel. At that time ma’am called me and said, “Vijay, a media person is coming to our department from Bangalore. If you want to meet him just wait for a while.” As a student of journalism I was very eager to meet him. Just after 5-10 minutes he arrived and I welcomed him at the door. “I wanted to meet you since many days” he said as though he knew me since many years. I was happy for a moment for being recognized by an elderly and well-read person. Our friendship turned out to be a ‘close friendship’ in the later days. I used to meet him whenever he visited coastal towns like Kundapur, Udupi, Karkala etc. We used to discuss many issues of social relevance. Once I met him in Karkala. He was on an official visit to Karkala. As usual we discussed many issues. Since my childhood...