ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಡಿಸೆಂಬರ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಇತಿಹಾಸದ ಬಗ್ಗೆ ನಮ್ಮ ಹರಟೆ

ಮೊನ್ನೆ ವೈಯುಕ್ತಿಕ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಹಲವಾರು ಐತಿಹಾಸಿಕ ಸ್ಥಳಗಳನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿರುವ ಊರು ಶಿರಸಿ. ಕದಂಬರಾಳಿದ ಇತಿಹಾಸ ಪ್ರಸಿದ್ಧ ಬನವಾಸಿ, ಅರಸಪ್ಪ ನಾಯಕನ ಸೋದೆ (ಅಥವಾ ಸೋಂದಾ)ಯಂತಹ ಐತಿಹಾಸಿಕ ಪ್ರದೇಶಗಳಿರುವುದು ಶಿರಸಿ ತಾಲೂಕಿನಲ್ಲಿ. ಪಶ್ಚಿಮ ಘಟ್ಟಗಳ ಬೆಟ್ಟವೊಂದರ 'ಶಿರ' ಭಾಗದಲ್ಲಿ ಈ ಪಟ್ಟಣ ಬೆಳೆದಿರುವುದರಿಂದಲೇ ಇದಕ್ಕೆ 'ಶಿರಸಿ' ಎಂಬ ಹೆಸರು ಬಂತು. ಹಾಗೆ ಶಿರಸಿ ತಾಲೂಕಿನ ಸೋಂದಾ ಗ್ರಾಮಕ್ಕೆ ಹೋಗಿದ್ದಾಗ ಧಾರವಾಡ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿ ಈಗ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಯುವ ಮಿತ್ರರೊಬ್ಬರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತ್ತು. ಹಾಗೇ ಅವರ ಜೊತೆ ಅದು-ಇದು ಅಂತ ಮಾತನಾಡುತ್ತಿದ್ದಾಗ ನಮ್ಮ ಮಾತುಕತೆ ನಿಧಾನವಾಗಿ ಇತಿಹಾಸವನ್ನು ಶಾಸ್ತ್ರೀಯವಾಗಿ ಓದುವುದರ ಅಗತ್ಯತೆಯ ಬಗ್ಗೆ ಹೊರಳಿತು. ಪ್ರಾಥಮಿಕ ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳು, ಅವುಗಳಲ್ಲಿ ಬರುವ ಯುದ್ಧ ವಿವರಣೆಗಳು, ರಾಜರ ಜೀವನ ವಿಧಾನಗಳ ಬಗ್ಗೆಯೂ ನಾವು ಮಾತನಾಡಿದೆವು. ಇತಿಹಾಸವನ್ನು ಓದಲು ಇವತ್ತಿನ ಯುವ ಸಮುದಾಯ ತೋರಿಸುತ್ತಿರುವ ನಿರಾಸಕ್ತಿಯ ಬಗ್ಗೆ ನಮ್ಮಲ್ಲಿ ನಡೆದ ಮಾತುಕತೆಯ ಸಾರವನ್ನು ನಿಮಗೂ ಉಪಯೋಗವಾಗಬಹುದು ಎಂಬ ಕಾರಣದಿಂದ ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 'ಇತಿಹಾಸ ಪಠ್ಯಪುಸ್ತಕಗಳು' ಎ