ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ರಾಷ್ಟ್ರೀಯತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ದೇಶಪ್ರೇಮ ಅನ್ನುವುದು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಾ?

ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ ನೋಡಿದರೆ, ಭಾರತ ಗೆಲುವು ಸಾಧಿಸಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ಅಲ್ಲ; ಅದಕ್ಕಿಂತಲೂ ಮಿಗಿಲಾದ ಸ್ಪರ್ಧೆಯೊಂದರಲ್ಲಿ ಎಂಬ ಭಾವನೆ ಮೂಡುತ್ತಿತ್ತು. ‘ಯುವಜನತೆಯಲ್ಲಿ ದೇಶದ ಬಗ್ಗೆ ಗೌರವ ಇಲ್ಲ, ದೇಶಭಕ್ತಿಯೇ ಇಲ್ಲ’ ಎಂಬಂತಹ ಗೊಣಗಾಟಗಳಿಗೆ ಉತ್ತರ ಎಂಬಂತಿತ್ತು ಅಂದಿನ ಸಂಭ್ರಮಾಚರಣೆ. ಹಾಗಾದರೆ ಯುವಕರ ದೇಶಪ್ರೇಮ ಎಂದರೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಉಕ್ಕಿಬರುವಂಥದ್ದಾ? ಬೇರೆ ದೇಶಗಳ ವಿರುದ್ಧ ಭಾರತ ಜಯಗಳಿಸಿದಾಗ ಈ ಪರಿಯ ಖುಷಿ ಏಕಿರುವುದಿಲ್ಲ? ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಗೆದ್ದಾಗ ಈ ಪರಿಯ ದೇಶಪ್ರೇಮ ಎಲ್ಲಿ ಅಡಗಿರುತ್ತದೆ? ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ೮೫ ರನ್ ಸಿಡಿಸಿದಾಗ ನಮ್ಮಲ್ಲಿ ಉಕ್ಕಿ ಬರುವ ಭಾವನೆಗಳು ಅದೇ ‘ಕ್ರಿಕೆಟ್ ದೇವತೆ’ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದಾಗ ಏಕೆ ಸ್ಫುರಿಸುವುದಿಲ್ಲ? ಎಂಬ ಪ್ರಶ್ನೆಗಳೂ ಹಿರಿಯರಿಂದ ಸಹಜವಾಗಿಯೇ ಬಂದವು. ನಿಜ, ಪಾಕಿಸ್ತಾನದ ವಿರು...

ದೇಶಪ್ರೇಮದ ಆಯಾಮಗಳು...

ಕನ್ನಡಿಗರ ಪಾಲಿಗೆ ಕುಂಟೆಗೋಡು ವಿಭೂತಿ ಸುಬ್ಬಣ್ಣ ಯಾವತ್ತಿಗೂ ಒಂದು ಅಚ್ಚರಿಯೇ ಸರಿ. ಮೈಸೂರಿನ ಮಾನಸಗಂಗೋತ್ರಿಯಲ್ಲಿ ತಮ್ಮ ಸ್ನಾತಕೋತ್ತರ ಅಧ್ಯಯನ ಮುಗಿಸಿದ ಕೆ. ವಿ. ಸುಬ್ಬಣ್ಣ ಮನಸ್ಸು ಮಾಡಿದ್ದರೆ ನಾಡಿನ ಯಾವುದಾದರೂ ವಿಶ್ವವಿದ್ಯಾಲಯದ ಆಯಕಟ್ಟಿನ ಜಾಗವನ್ನು ಆಕ್ರಮಿಸಿ ಕೂರಬಹುದಿತ್ತು. ಬಹುಷ: ಅವರು ಹಾಗೆ ಮಾಡಿದ್ದರೆ ತಮ್ಮ ನಿವೃತ್ತಿಯ ಅಂಚಿಗೆ ಬರುವ ಹೊತ್ತಿಗೆ ಒಂದಿಷ್ಟು ವಿದೇಶ ಪ್ರವಾಸ, ಒಂದಿಷ್ಟು ಡಾಕ್ಟರೇಟ್ ಡಿಗ್ರಿಗಳನ್ನು ತಮ್ಮ ಮುಡಿಗೇರಿಸಿಕೊಂಡಿರುತ್ತಿದ್ದರು. ಆದರೆ ಸುಬ್ಬಣ್ಣ ಹಾಗೆ ಮಾಡಲಿಲ್ಲ. ತಮ್ಮ ಊರಾದ ಹೆಗ್ಗೋಡಿಗೆ ವಾಪಸಾದ ಸುಬ್ಬಣ್ಣ ಅಲ್ಲಿಯೇ ನೀಲಕಂಠೇಶ್ವರ ನಾಟಕ ಸಂಘವನ್ನು ಕಟ್ಟಿದರು. ಬಹುಷ: ಜಾಗತಿಕ ರಂಗಭೂಮಿಯ ಯಾವ ಗಾಳಿಯೂ ಬೀಸದಿದ್ದ ಹೆಗ್ಗೋಡಿನಲ್ಲಿ ರಂಗಚಟುವಟಿಕೆಗಳನ್ನು ಆರಂಭಿಸಿದರು. ನೋಡನೋಡುತ್ತಿದ್ದ ಹಾಗೆ ನೀನಾಸಂ ಅನ್ನು ಜಗವೇ ಮೆಚ್ಚುವ ರೆಪರ್‍ಟರಿಯನ್ನಾಗಿಸಿದರು. ಕೆ ವಿ ಸುಬ್ಬಣ್ಣ ಕೇವಲ ವ್ಯಕ್ತಿಯಾಗುಳಿಯಲಿಲ್ಲ; ಈ ನಾಡಿನ ಪ್ರಜ್ಞೆಯಾಗಿ ಬೆಳೆದರು. ಕನ್ನಡ ರಂಗಭೂಮಿಯ ’ಗಾಂಧಿ’ಯಾದರು. *** ಕೈಗೆ ಪ್ರತಿ ತಿಂಗಳು ಲಕ್ಷಾಂತರ ರೂಪಾಯಿ ಸಂಬಳ ತರುವ ಕೆಲಸ ಬ್ಲಿಟ್ಜ್ ಪತ್ರಿಕೆಯಲ್ಲಿತ್ತು. ಕೆಲ ಕಾಲ ಆ ಕೆಲಸವನ್ನು ಮಾಡಿದ ಪಿ ಸಾಯಿನಾಥ್‌ಗೆ ಅದೇಕೋ ಇದ್ದಕ್ಕಿದ್ದಂತೆ ಆ ಕೆಲಸ ತಮಗೆ ಸರಿಹೊಂದುವುದಿಲ್ಲ ಅಂತ ಅನಿಸಿಬಿಟ್ಟಿತು. ಸರಿ, ತಮ್ಮ ಪೆನ್ನು, ಪುಸ್ತಕ ಹಿಡಿದು ಬ್ಯಾಗ್ ಹೆಗಲಿಗೇರಿಸಿ ಹೊರಟ ಸಾಯಿನ...

ವಿವೇಕ ವಾಣಿ ನೆನಪಿರಲಿ...

ಸ್ವಾಮಿ ವಿವೇಕಾನಂದರು ವಿದೇಶದಿಂದ ಭಾರತಕ್ಕೆ ಹಿಂದಿರುಗಿ ಬರುತ್ತಿದ್ದರು. ಸ್ವಾಮೀಜಿಯವರು ಬರುತ್ತಿದ್ದ ಹಡಗಿನಲ್ಲಿಯೇ ಒಬ್ಬ ಕ್ರೈಸ್ತ ಪಾದ್ರಿಯೂ ಇದ್ದ. ಸ್ವಾಮೀಜಿಯವರು ಆ ಪಾದ್ರಿಯ ಬಳಿ ಪ್ರತಿದಿನವೂ ಧರ್ಮ, ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಪ್ರತಿ ಬಾರಿಯೂ ಆ ಪಾದ್ರಿ ಸ್ವಾಮೀಜಿಯ ಎದುರು ವಾದದಲ್ಲಿ ಸೋಲುತ್ತಿದ್ದ. ನಂತರ ವಿನಾಕಾರಣ ಭಾರತೀಯ ಸಂಸ್ಕೃತಿಯನ್ನು, ಹಿಂದೂ ಧರ್ಮವನ್ನು ನಿಂದಿಸುತ್ತಿದ್ದ. ಸ್ವಾಮೀಜಿ ಮೊದಮೊದಲು ಸುಮ್ಮನಿದ್ದರಾದರೂ ನಂತರ ಒಂದು ದಿನ ಆ ಪಾದ್ರಿಯು ಹಡಗಿನ ಅಂಚಿನಲ್ಲಿ ಇದ್ದಾಗ ಅವನ ಸಮೀಪಕ್ಕೆ ಹೋಗಿ, ಅವನನ್ನು ಬಿಗಿಯಾಗಿ ಹಿಡಿದುಕೊಂಡು, "ನೋಡು, ನೀನು ನನ್ನ ಧರ್ಮವನ್ನು, ದೇಶವನ್ನು ಬಯ್ಯುವುದನ್ನು ಬಿಡದೆ ಇದ್ದರೆ ನಿನ್ನನ್ನು ಹೀಗೆಯೇ ಸಮುದ್ರಕ್ಕೆ ನೂಕಿಬಿಡುವೆ!" ಎಂದು ಗದರಿಸಿದರು. ಆಗ ಪಾದ್ರಿಯ ಕೈಕಾಲುಗಳು ಭಯದಿಂದ ಕಂಪಿಸತೊಡಗಿದವು. "ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಇನ್ನುಮುಂದೆ ನಾನು ಹಾಗೆ ಮಾಡುವುದಿಲ್ಲ" ಎಂದು ಆ ಪಾದ್ರಿಯು ಸ್ವಾಮೀಜಿಯವರಲ್ಲಿ ಬೇಡಿಕೊಂಡನು. ಆತನ ಬೇಡಿಕೆಯನ್ನು ಮನ್ನಿಸಿದ ಸ್ವಾಮೀಜಿ ಅವನನ್ನು ಬಿಟ್ಟರು. ಅನಂತರ ಅವನು ಸ್ವಾಮೀಜಿಗೆ ಗೌರವ ನೀಡಲು ಪ್ರಾರಂಭಿಸಿದನು. ನಿಜ, ಸ್ವಾಮಿ ವಿವೇಕಾನಂದರು ಸರ್ವಸ್ವವನ್ನೂ ತ್ಯಾಗ ಮಾಡಿದ ಸನ್ಯಾಸಿ. ಅವರು ಒಬ್ಬ ಪಾದ್ರಿಯ ಮೇಲೆ ಈ ಥರ ಕೋಪಗೊಂಡಿದ್ದು ಸರಿಯೇ ಅನ್ನುವ ಅನುಮಾನ ಬರಬ...