ವಿದ್ಯಾಧರ ಎಸ್. ನೈಪಾಲ್ ಅವರ ಬಗ್ಗೆ ಇತ್ತೀಚೆಗೆ ಗಿರೀಶ ಕಾರ್ನಾಡರು ಒಂದು ಹೇಳಿಕೆ ನೀಡಿದ್ದರು. ಅದು ವಿವಾದಕ್ಕೂ ಕಾರಣವಾಗಿತ್ತು. (ಅಂದಹಾಗೆ ನಮ್ಮಲ್ಲಿ ಎಲ್ಲವೂ ವಿವಾದಕ್ಕೆ ಹೇತುವಾಗುತ್ತಿದೆಯಲ್ಲ?!) ಈ ಸಂದರ್ಭದಲ್ಲಿ ನೈಪಾಲರನ್ನು ನಿಮ್ಮ ಅಭಿಪ್ರಾಯದಲ್ಲಿ ಸೆಕ್ಯುಲರಿಸಂ ಅಂದರೆ ಏನು ಎಂದು ಒಬ್ಬರು ಪ್ರಶ್ನಿಸಿದ್ದರು. “ಭಾರತದ ಮಟ್ಟಿಗೆ ಸೆಕ್ಯುಲರಿಸಂ ಅಂದರೆ ಯಾವುದೋ ಒಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಅಥವಾ ಗುರುತಿಸಿಕೊಳ್ಳದೇ ಇರುವುದು. ಅದಕ್ಕಿಂತ ಹೆಚ್ಚಿನ ಯಾವುದೇ ಅರ್ಥ ಇಲ್ಲ” ಎಂದು ನೈಪಾಲರು ಉತ್ತರಿಸಿದ್ದರು. ಹೌದು ನಮ್ಮಲ್ಲಿ ಸೆಕ್ಯುಲರಿಸಂ ಅಂದರೆ ಏನರ್ಥ? ಈ ಬಗ್ಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಮೂರು ಪುಟ್ಟ ಪುಟ್ಟ ಬರಹಗಳು ಇಲ್ಲಿವೆ. ನೋಡಿ. ಓದಿದ ನಂತರ ನಿಮಗೆ ಏನನ್ನಿಸಿತು ಎಂಬುದನ್ನು ಬರೆಯಿರಿ. *** ನಾನು ಭಾರತೀಯ . ನಾನು ಯಾವುದೇ ಮತದ ಅನುಯಾಯಿ ಅಲ್ಲ . ಅಂದರೆ ಯಾವುದೇ ಒಂದು ನಿರ್ದಿಷ್ಟ ಗ್ರಂಥ ಹಾಗೂ ನಿರ್ದಿಷ್ಟ ಮತಸ್ಥಾಪಕನ ಅನುಯಾಯಿ ನಾನಲ್ಲ . ಭಾರತದಲ್ಲಿರುವ ಬಹುಪಾಲು ಮಂದಿ ನನ್ನಂಥವರೇ . ಅವರಿಗೆ ಒಂದೇ ದೇವರು , ಒಂದೇ ಗ್ರಂಥ , ಒಬ್ಬನೇ ಗುರು ಇಲ್ಲ . ಹಿಂದೂ ಎಂಬ ರಿಲಿಜನ್ ನನಗೆ ಇನ್ನೂ ಅರ್ಥವಾಗುತ್ತಿಲ್ಲ . ನಾನು ಯಾವುದೇ ರಿಲಿಜನ್ ನ ಅನುಯಾಯಿ ಅಲ್ಲದ ಕಾರಣ , ರಿಲಿಜನ್ ಇರುವ ದೇಶಗಳಿಗೆ ಬೇಕಾದ ಸೆಕ್ಯುಲರಿಸಂ
ಆನೋ ಭದ್ರಾಃ ಕೃತವೋ ಯಂತು ವಿಶ್ವತ: