ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ರಾಜಕೀಯದಲ್ಲಿ ಹದಿಹರಯ!

ಆಕಾಶದಲ್ಲಿ ಹಾರುವ ಏರೋಪ್ಲೇನು! ಕಣ್ಣಿನ ನೇರಕ್ಕೇ ರೆಕ್ಕೆ ಬಿಚ್ಚಿ ಹಾರುವ ಕೀಟ ಏರೋಪ್ಲೇನು! ಇವೆರಡು ಚಿತ್ರಗಳು ಬೆಂಗಳೂರು ಮತ್ತು ಉತ್ತರ ಕನ್ನಡದ ಪರಿಸರವನ್ನು ಕಟ್ಟಿಕೊಡುವಂತಿವೆ. ಅಷ್ಟು ಮಾತ್ರವಲ್ಲ, ಎರಡು ಪ್ರದೇಶಗಳಲ್ಲಿನ ರಾಜಕೀಯ ಪರಿಸರವನ್ನೂ ಈ ರೂಪಕಗಳನ್ನು ಹಿಡಿದಿಡುವಂತಿವೆ. ಬೆಂಗಳೂರು, ಮಂಡ್ಯ, ತುಮಕೂರುಗಳಲ್ಲಿ ಚಲಾವಣೆಯಾಗುಷ್ಟು ಹಣ, ಚುನಾವಣೆಯ ಸಂದರ್ಭದಲ್ಲಿ ಉತ್ತರ ಕನ್ನಡ ಜಿಲ್ಲೆಯಲ್ಲಿ ಆಗುವುದಿಲ್ಲ. ನಾಡಿನ ಎರಡು ಪ್ರಮುಖ ಸಮುದಾಯಗಳು ಈ ಭಾಗದ ಚುನಾವಣೆಯ ಫಲಿತಾಂಶ ನಿರ್ಧರಿಸಿದರೆ, ಉತ್ತರ ಕನ್ನಡ ಜಿಲ್ಲೆಯ ಚುನಾವಣೆಗಳ ಫಲಿತಾಂಶ ನಿರ್ಧರಿಸುವ ಸಮುದಾಯಗಳ ಸಂಖ್ಯೆ ಬಹುವಾಗಿದೆ. ಅಷ್ಟರ ಮಟ್ಟಿಗೆ ಅಲ್ಲಿ ಹಣ ಮತ್ತು ಜಾತಿಯ ಪ್ರಭಾವ ಕಡಿಮೆ. ಇಂತಿಪ್ಪ ಉತ್ತರ ಕನ್ನಡ ಜಿಲ್ಲೆಯ ಪಟ್ಟಣ ಪಂಚಾಯಿತಿಯೊಂದರ ಚುನಾವಣೆಗೆ ಕೆಲವು ವರ್ಷಗಳ ಹಿಂದೆ ಪರಿಚಯದ ವ್ಯಕ್ತಿಯೊಬ್ಬರು ಸ್ಪರ್ಧಿಸಿದ್ದರು. ಅವರು ಯುವಕರು, ಒಳ್ಳೆಯ ಹೆಸರು ಸಂಪಾದಿಸಿರುವ ಕುಟುಂಬದ ಹಿನ್ನೆಲೆ ಉಳ್ಳವರು, ಊರಿನಲ್ಲಿ ಒಂದಷ್ಟು ಕೆಲಸಗಳನ್ನು ಮಾಡಿದವರು. ರಾಜಕಾರಣಕ್ಕೆ ಯುವಕರು ಬರಬೇಕು, ಯುವಕರು ರಾಜಕೀಯ ಪ್ರವೇಶ ಮಾಡಿ ಅಲ್ಲಿನ ದೋಷಗಳನ್ನು ನಿವಾರಿಸಬೇಕು (ಹೇಗೆ ನಿವಾರಿಸಬೇಕು? ಪವಾಡ ಮಾಡಬೇಕೆ?) ಎಂಬೆಲ್ಲ ಮಾತುಗಳನ್ನು ಕೇಳುತ್ತಿದ್ದೇವಲ್ಲ? ಇದೇ ರೀತಿಯ ಮಾತುಗಳು ಆಗಲೂ ಕೇಳಿಬರುತ್ತಿದ್ದವು. ಸಾಕಷ್ಟು ಧನಾತ್ಮಕ ಅಂಶಗಳು ಇದ್ದರೂ ಅವರು ಚುನಾವಣೆಯಲ್ಲಿ ಸೋ