ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಪರಿಸರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಸುರಿಹೊಂಡ ಭರತಖಂಡ?

ನಾವು ಬಳಸುವ ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌ ಕಂಪ್ಯೂಟರ್‌, ಲ್ಯಾಪ್‌ ಟಾಪ್‌, ಡೆಸ್ಕ್‌ ಟಾಪ್‌ಗಳು ಅದೆಷ್ಟು ಅಂದವಾಗಿರುತ್ತೆ ಅಲ್ಲವೇ? ಸ್ಮಾರ್ಟ್‌ ಫೋನ್‌, ಟ್ಯಾಬ್‌ಗಳನ್ನು ಅಂಗೈಯಲ್ಲಿ ಹಿಡಿದು ನಮ್ಮ ಗೆಳೆಯರೆದುರು ಅದನ್ನು ತೋರಿಸಿದಾಗ, ಕಚೇರಿಯ ಕೆಲಸಗಳನ್ನು ಅವುಗಳ ಮೂಲವೇ ನಿರ್ವಹಿಸಿದಾಗ ಆಗುವ ಸಂತಸಕ್ಕೆ ಪಾರವೇ ಇಲ್ಲ. ಈ ವಸ್ತುಗಳು ನಮಗೆ ಹೊಸದಾಗಿ ದೊರೆತಾಗ ಮನಸ್ಸು ಕುಂತಲ್ಲಿ–ನಿಂತಲ್ಲಿ ಅವುಗಳ ಬಗ್ಗೆಯೇ ಧೇನಿಸುತ್ತಿರುತ್ತದೆ. ಆದರೆ ಆಯಸ್ಸು ಮುಗಿದ ನಂತರ ಅವುಗಳಿಂದ ಆಗುವ ಅಪಾಯದ ಬಗ್ಗೆ ನಾವು ಹೆಚ್ಚಿನ ಸಂದರ್ಭಗಳಲ್ಲಿ ಚಿಂತಿಸಿರುವುದಿಲ್ಲ. ಆರ್ಥಿಕ ಉದಾರೀಕರಣದ ನಂತರ ಭಾರತ, ಅದರಲ್ಲೂ ಬೆಂಗಳೂರು, ಮಾಹಿತಿ ತಂತ್ರಜ್ಞಾನ ಉದ್ಯಮದ ಮೂಲಕ ಅಪಾರ ಪ್ರಮಾಣದ ವಹಿವಾಟು ನಡೆಸಿದೆ. ದೊಡ್ಡ ಸಂಖ್ಯೆಯ ಜನರಿಗೆ ಕೈತುಂಬಾ ಸಂಬಳ ಬರುವ ನೌಕರಿ ನೀಡಿದೆ. ಇದರ ಜೊತೆಜೊತೆಗೇ ಅವರಿಗೆ ಬೇಕೆಂದ ಎಲೆಕ್ಟ್ರಾನಿಕ್‍ ವಸ್ತುಗಳನ್ನು ಖರೀದಿಸುವ ಆರ್ಥಿಕ ಶಕ್ತಿ ನೀಡಿದೆ. ಇದನ್ನು ಉದಾರೀಕರಣದ ವರ ಎನ್ನಿ ಅಥವಾ ಶಾಪ ಎನ್ನಿ – ಇ -ತ್ಯಾಜ್ಯದ ಉತ್ಪಾದನೆಯ ಪ್ರಮಾಣ ಕೂಡ ದೇಶದಲ್ಲಿ ತೀವ್ರವಾಗಿ ಏರುತ್ತಿದೆ. ಇದು, ಬೆಂಗಳೂರಿನಲ್ಲಂತೂ ಅಪಾಯದ ಮಟ್ಟ ತಲುಪಿದೆ. ಖಾಸಗಿ ಸಂಸ್ಥೆಯೊಂದು 2012ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ಮುಂಬೈ ಮಹಾನಗರಿಯಲ್ಲಿ ವರ್ಷಕ್ಕೆ ಅಂದಾಜು 61,500 ಮೆಟ್ರಿಕ್‍ ಟನ್‍ ಇ-–ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರ ನಂತರದ ಸ...

ಅಭಿವೃದ್ಧಿಯ ಜಪ: ಕೇಳಿಸದ ಪ್ರಕೃತಿಯ ಆಲಾಪ

ಅದು 1980-90ರ ದಶಕ. ಪ್ರಪಂಚದ ಅತಿಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟ ಸಾಲಿನ ಉತ್ತರ ಕನ್ನಡ ಜಿಲ್ಲೆಗೆ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ದಾಂಗುಡಿಯಿಡಲು ಸಿದ್ಧವಾಗಿ ನಿಂತಿದ್ದ ಕಾಲ.ಕೈಗಾದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಅಣುಸ್ಥಾವರದ, ಬೇಡ್ತಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದವು. 1981-82ರ ಸುಮಾರಿಗೆ ಉ.ಕ. ಜಿಲ್ಲೆಯ ಶಿರಸಿಯಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಸಭೆ ಸೇರಿ ಬೃಹತ್ ಜಲವಿದ್ಯುತ್ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದ್ದರು. ಶಿರಸಿ ತಾಲೂಕಿನ ಭೈರುಂಬೆಯ ಪ್ರಗತಿಪರ ಕೃಷಿಕ ಕೆ.ಎಂ. ಹೆಗಡೆ ಮತ್ತಿತರರು 1995-96ರ ಸಮಯದಲ್ಲಿ ಉ.ಕ. ಜಿಲ್ಲೆಗೆ ಪರ್ಯಾಯ ಅಭಿವೃದ್ಧಿ ಮಾದರಿಗಳ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಿದ್ದರು. 1993-94ರಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬೇಡ್ತಿ ಯೋಜನೆಯನ್ನು ವಿರೋಧಿಸಿ ತಾವೇ ಖುದ್ದಾಗಿ ಸೋಂದಾದಿಂದ ಯಲ್ಲಾಪುರ ತಾಲೂಕಿನ ಮಾಗೋಡಿನ ತನಕ ಪಾದಯಾತ್ರೆ ನಡೆಸಿದ್ದರು; ಬೇಡ್ತಿ ನದಿಗೆ ಅಣೆಕಟ್ಟು ನಿರ್ಮಿಸಲು ಬಿಡಲಾರೆವು ಎಂದು ಮಾಗೋಡಿನಲ್ಲಿ ಸುಮಾರು 40 ಸಾವಿರ ಮಂದಿ ಪ್ರತಿಜ್ಞೆ ಕೈಗೊಂಡಿದ್ದರು. ಹೀಗೆ ಇಡೀ ಉ.ಕ. ಜಿಲ್ಲೆಯೇ ಪರಿಸರ ಪರ ಹೋರಾಟವೊಂದರಲ್ಲಿ ಕುದಿಯುತ್ತಿತ್ತು. ಇಂಥ ಮಹತ್ವದ ಕಾಲಘಟ್ಟದಲ...

ಪರಿಸರ ಸಂರಕ್ಷಣೆಯೇ ಅಭಿವೃದ್ಧಿಯಾಗಬಾರದೇ?

ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರೈಲು ಮಾರ್ಗ ಕಾರ್ಯಗತಗೊಂಡರೆ ಆರ್ಥಿಕವಾಗಿ ಬಹಳ ಅನುಕೂಲವಾಗುತ್ತದೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಾಟದ ಅಮೂಲ್ಯ ವೇಳೆ ಮತ್ತು ಇಂಧನ ಉಳಿತಾಯವಾಗುತ್ತದೆ. ಆದರೆ ಈ ಯೋಜನೆ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಕ್ಕೆ ಅಪಾರ ಪ್ರಮಾಣದ ಪೆಟ್ಟು ನೀಡುತ್ತದೆ. ಸಾವಿರಾರು ಎಕರೆ ನೈಸರ್ಗಿಕ ಅರಣ್ಯ ಇನ್ನಿಲ್ಲದಂತೆ ನಾಶವಾಗುತ್ತದೆ. ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆಯ ಕಥೆಯೂ ಇದೇ ಆಗಿದೆ. ಒಂದು ವೇಳೆ ಈ ಯೋಜನೆ ಕಾರ್ಯಗತಗೊಂಡರೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುವುದು ನಿಜವಾದರೂ ಸುಮಾರು 700 ಹೆಕ್ಟೇರ್‌ನಷ್ಟು ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತದೆ. ಅಲ್ಲಿರುವ ವನ್ಯಜೀವಿಗಳು, ಮಳೆಯ ಕಾಡುಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ. ‘ಪರಿಸರ-ಅಭಿವೃದ್ಧಿ’ ಮೇಲಿನ ಚರ್ಚೆ ಇಂದು ನಿನ್ನೆಯದಲ್ಲ, ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾದದ್ದೂ ಅಲ್ಲ. ವಿಶ್ವದಾದ್ಯಂತ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗಿದ್ದು ನಿಜ. ಅದೇ ರೀತಿ ಭಾರತದ ಬಹುಪಾಲು ಅಭಿವೃದ್ಧಿ ಯೋಜನೆಗಳು ಇಲ್ಲಿನ ಅರಣ್ಯ ನಾಶಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಹಾಗಂತ ಅರಣ್ಯವನ್ನು ನಾಶಮಾಡಬೇಕೆಂಬುದೇ ಅಭಿವೃದ್ಧಿ ಯೋಜನೆಗಳ ಉದ್ದೇಶವಾಗಿರುವುದಿಲ್ಲ. ನಾವು ಕೈಗೊಂಡ ಎಲ್ಲ ಅಭಿವೃದ್ಧಿ ಯೋಜನೆಗಳ ಹಿಂದೆಯೂ ಆರ್ಥಿಕ ಲಾಭದ ಉದ್ದೇಶವಿರುತ್ತದೆ...