ಹೊರನಾಡಿನ ಸಮೀಪ ನಡೆದ ಪೋಲೀಸ್ ಎನ್‌ಕೌಂಟರಿನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದು, ಶಾಂತ ಮಲೆನಾಡಿನ ಹಸಿರು ನೆಲ ಬಿಸಿ ರಕ್ತದಿಂದ ಕೆಂಪಾಗಿದ್ದು ಇಡೀ ರಾಜ್ಯಕ್ಕೇ ಗೊತ್ತಾಗಿದೆ. ಇದೇ ಎನ್‌ಕೌಂಟರಿನಲ್ಲಿ ರಾಜ್ಯ ನಕ್ಸಲ್ ನಿಗ್ರಹ ದಳದ ಗುರುಪ್ರಸಾದ್ ಕೂಡ ಮೃತರಾಗಿದ್ದಾರೆ. ಅವರ ಕುಟುಂಬದ ನೋವಿಗೆ ಸಾಂತ್ವನ ಹೇಳಲು ಪದಗಳಿಲ್ಲ. ಮೃತ ನಕ್ಸಲರ ಪೈಕಿ ಒಬ್ಬನಾದ ಮನೋಹರ ಹಿಂದೊಮ್ಮೆ ವೃತ್ತಿಯಿಂದ ಪತ್ರಕರ್ತನಾಗಿದ್ದ. ಸಾಕಷ್ಟು ಓದಿಕೊಂಡಿದ್ದ. ಇದಲ್ಲದೆ ನವಕರ್ನಾಟಕ ಪ್ರಕಾಶನದ ’ಹೊಸತು’ ಪತ್ರಿಕೆಗೆ ಆರ್ಥಿಕ ಸಂಕಷ್ಟ ಮತ್ತು ಜಾಗತೀಕರಣಗಳಂತಹ ಗಹನ ವಿಚಾರಗಳ ಬಗ್ಗೆ ಲೇಖನವನ್ನೂ ಬರೆದಿದ್ದ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಶಿವಮೊಗ್ಗದಲ್ಲಿ ಈತ ಬಿಎಸ್ಸಿ ಓದುತ್ತಿದ್ದ ದಿನಗಳಿಂದಲೇ ಅನೇಕ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಎಂದೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಇನ್ನೊಬ್ಬ ಮೃತ ನಕ್ಸಲ ಮೂಡಿಗೆರೆ ತಾಲೂಕು ಉದಸೆ ಗ್ರಾಮದ ದೇವಯ್ಯ ಕೂಡ ಬಿಎ ಪದವಿ ಪಡೆದಿದ್ದ. ಉದಸೆ ಊರಿನಲ್ಲಿ ಆತನೇ ಹೆಚ್ಚು ವಿದ್ಯಾವಂತ ಎಂದು ಹೇಳಲಾಗಿದೆ. ಇನ್ನೊಬ್ಬ ಮೃತ ನಕ್ಸಲ ನಾಗಸಾಲ್ಮಕ್ಕಿಯ ರವಿ ಕೇವಲ ಹತ್ತೊಂಬತ್ತು ವರ್ಷದ ಎಳೆಯ. ಮೊನ್ನೆ ನಡೆದ ಎನ್‌ಕೌಂಟರಿನಲ್ಲಿ ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕಿದ್ದ ಇಂಥ ಯುವಕರೇ ಹತ್ಯೆಯಾಗಿದ್ದನ್ನು ನೋಡಿದರೆ ಎಂಥವನಿಗಾದರೂ ಒಮ್ಮೆ ಕಣ್ಣೀರು ಬಂದೇ ಬರುತ್ತದೆ. ಅದರಲ್ಲೂ ಕೈಯಲ್ಲಿ ಪೆನ್ ಹಿಡಿದುಕೊಂಡು, ನೊಂದವರ ಪಾಲಿಗೆ ಧ್ವನಿಯಾಗಬ...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: