ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಅಭಿವೃದ್ಧಿ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಪರಿಸರ ಸಂರಕ್ಷಣೆಯೇ ಅಭಿವೃದ್ಧಿಯಾಗಬಾರದೇ?

ಅಂಕೋಲಾ ಮತ್ತು ಹುಬ್ಬಳ್ಳಿ ನಡುವಿನ ರೈಲು ಮಾರ್ಗ ಕಾರ್ಯಗತಗೊಂಡರೆ ಆರ್ಥಿಕವಾಗಿ ಬಹಳ ಅನುಕೂಲವಾಗುತ್ತದೆ. ಸರಕು ಸಾಗಣೆ ಮತ್ತು ಪ್ರಯಾಣಿಕರ ಸಾಗಾಟದ ಅಮೂಲ್ಯ ವೇಳೆ ಮತ್ತು ಇಂಧನ ಉಳಿತಾಯವಾಗುತ್ತದೆ. ಆದರೆ ಈ ಯೋಜನೆ ಜಗತ್ತಿನ ಅತಿ ಸೂಕ್ಷ್ಮ ಜೀವ ವೈವಿಧ್ಯ ತಾಣಗಳಲ್ಲಿ ಒಂದಾಗಿರುವ ಪಶ್ಚಿಮ ಘಟ್ಟಕ್ಕೆ ಅಪಾರ ಪ್ರಮಾಣದ ಪೆಟ್ಟು ನೀಡುತ್ತದೆ. ಸಾವಿರಾರು ಎಕರೆ ನೈಸರ್ಗಿಕ ಅರಣ್ಯ ಇನ್ನಿಲ್ಲದಂತೆ ನಾಶವಾಗುತ್ತದೆ. ಉದ್ದೇಶಿತ ಗುಂಡ್ಯ ಜಲವಿದ್ಯುತ್ ಯೋಜನೆಯ ಕಥೆಯೂ ಇದೇ ಆಗಿದೆ. ಒಂದು ವೇಳೆ ಈ ಯೋಜನೆ ಕಾರ್ಯಗತಗೊಂಡರೆ 400 ಮೆಗಾವಾಟ್‌ನಷ್ಟು ವಿದ್ಯುತ್ ಉತ್ಪಾದನೆಯಾಗುವುದು ನಿಜವಾದರೂ ಸುಮಾರು 700 ಹೆಕ್ಟೇರ್‌ನಷ್ಟು ಅಮೂಲ್ಯ ಅರಣ್ಯ ಸಂಪತ್ತು ನಾಶವಾಗುತ್ತದೆ. ಅಲ್ಲಿರುವ ವನ್ಯಜೀವಿಗಳು, ಮಳೆಯ ಕಾಡುಗಳು ಶಾಶ್ವತವಾಗಿ ಕಣ್ಮರೆಯಾಗಲಿವೆ. ‘ಪರಿಸರ-ಅಭಿವೃದ್ಧಿ’ ಮೇಲಿನ ಚರ್ಚೆ ಇಂದು ನಿನ್ನೆಯದಲ್ಲ, ಯಾವುದೋ ಒಂದು ಪ್ರದೇಶಕ್ಕೆ ಸೀಮಿತವಾದದ್ದೂ ಅಲ್ಲ. ವಿಶ್ವದಾದ್ಯಂತ ಅಭಿವೃದ್ಧಿ ಯೋಜನೆಗಳ ಹೆಸರಿನಲ್ಲಿ ಅರಣ್ಯ ಸಂಪತ್ತು ನಾಶವಾಗಿದ್ದು ನಿಜ. ಅದೇ ರೀತಿ ಭಾರತದ ಬಹುಪಾಲು ಅಭಿವೃದ್ಧಿ ಯೋಜನೆಗಳು ಇಲ್ಲಿನ ಅರಣ್ಯ ನಾಶಕ್ಕೆ ಸಾಕಷ್ಟು ಕೊಡುಗೆ ನೀಡಿವೆ. ಹಾಗಂತ ಅರಣ್ಯವನ್ನು ನಾಶಮಾಡಬೇಕೆಂಬುದೇ ಅಭಿವೃದ್ಧಿ ಯೋಜನೆಗಳ ಉದ್ದೇಶವಾಗಿರುವುದಿಲ್ಲ. ನಾವು ಕೈಗೊಂಡ ಎಲ್ಲ ಅಭಿವೃದ್ಧಿ ಯೋಜನೆಗಳ ಹಿಂದೆಯೂ ಆರ್ಥಿಕ ಲಾಭದ ಉದ್ದೇಶವಿರುತ್ತದೆ...

ನೇಗಿಲು ಹೊತ್ತ ರೈತನಿಗೆ ಲೇಖನಿ ನೀಡಿದ ಆಂದೋಲನ

ಸಮಸ್ಯೆ ಯಾವುದೂ ಇರಬಹುದು , ಯಾರಿಗೂ ಬರಬಹುದು. ಒಂದು ಮಾಧ್ಯವಾಗಿ ಸಮಸ್ಯೆಗೆ ಎರಡು ರೀತಿಯಲ್ಲಿ ಸ್ಪಂದಿಸಲು ಸಾಧ್ಯ. ಒಂದು: ಆ ಸಮಸ್ಯೆಯಿಂದ ಬಾಧಿತರಾಗಿರುವವರ ನೋವಿಗೆ ದನಿಯಾಗಿ , ಅವರ ಬಗ್ಗೆ ಒಂದಿಷ್ಟು ಅನುಕಂಪ ತೋರಿಸಿ ನಂತರ ಸುಮ್ಮನಾಗುವುದು. ಇನ್ನೊಂದು: ನೋವಿಗೆ ದನಿಯಾಗುವುದು ಮತ್ತು ಅನುಕಂಪತೋರುವುದಕ್ಕಿಂತ ಮಿಗಿಲಾಗಿ , ಸಮಸ್ಯೆಗೆ ಸ್ಪಷ್ಟ ಪರಿಹಾರ ಸೂಚಿಸುವುದು. ಎರಡನೆಯ ಮಾದರಿಗೆ ಒಂದು ಅನನ್ಯ ಉದಾಹರಣೆ ಎಂದರೆ ಪುತ್ತೂರಿನ ಫಾರ್ಮರ್ ಫಸ್ಟ್ ಟ್ರಸ್ಟ್‌ನ ಅಡಿಕೆ ಪತ್ರಿಕೆ ಮತ್ತು ಅದರ ಕೃಷಿಕರ ಕೈಗೆ ಲೇಖನಿ ಕಾರ್ಯಕ್ರಮ. ಪತ್ರಿಕೆ ಆರಂಭವಾದದ್ದು ಹೀಗೆ: ಅದು ಎಂಭತ್ತರ ದಶಕದ ಮಧ್ಯಭಾಗ. ದಕ್ಷಿಣ ಕನ್ನಡ , ಉತ್ತರ ಕನ್ನಡ , ಶಿವಮೊಗ್ಗ ಜಿಲ್ಲೆಗಳ ಪ್ರಮುಖ ವಾಣಿಜ್ಯ ಬೆಳೆ ಅಡಿಕೆಯ ಮಾರುಕಟ್ಟ ಧಾರಣೆ ತೀವ್ರವಾಗಿ ಕುಸಿದಿತ್ತು. ಅಸಂಖ್ಯ ಅಡಿಕೆ ಬೆಳೆಗಾರರ ಕುಟುಂಬಗಳು ತೀವ್ರ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕಾಲ ಅದು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲಿ ಪುತ್ತೂರಿನಲ್ಲಿ ಕೇಂದ್ರ ಕಛೇರಿ ಹೊಂದಿರುವ ಅಖಿಲ ಭಾರತ ಅಡಿಕೆ ಬೆಳೆಗಾರರ ಸಂಘ ಅಡಿಕೆ ಕೃಷಿಕರನ್ನು ಸಂಕಷ್ಟದಿಂದ ಪಾರುಮಾಡಲು ಮತ್ತು ಅಡಿಕೆ ಕೃಷಿಯಲ್ಲಿ ಸುಧಾರಣೆಗಳನ್ನು ತರುವ ನಿಟ್ಟಿನಲ್ಲಿ ಯೋಚಿಸಲಾರಂಭಿಸಿತು. ಇದೇ ಸಂದರ್ಭದಲ್ಲಿ (ಅಂದರೆ ೧೯೮೫-೮೬ರಲ್ಲಿ) ಅಡಿಕೆ ಬೆಳೆಗಾರರ ಸಂಘದ ಅಧ್ಯಕ್ಷ ಸ್ಥಾನವನ್ನು ವಾರಣಾಶಿ ಸುಬ್ರಾಯ ಭಟ್ಟರಿಂದ ಡಾ. ಪಿ ಕೆ ಎಸ್ ಭಟ್ ಪಾಣಾಜೆ ಇವ...

ಚೇರ್ಕಾಡಿ ರಾಮಚಂದ್ರ ರಾಯರ ನೆವದಲ್ಲಿ...

"ಚೇರ್ಕಾಡಿ ರಾಮಚಂದ್ರ ರಾಯರು ತೀರಿಕೊಂಡರಂತೆ." ಭಾರತದ ಫುಕುವೋಕಾ ಎಂಬ ಬಿರುದನ್ನು ಅರ್ಹವಾಗಿಯೇ ಹೊತ್ತಿದ್ದ ಚೇರ್ಕಾಡಿ ರಾಯರು ತೀರಿಕೊಂಡ ಸುದ್ದಿಯನ್ನು ಕೇಳಿದ ತಕ್ಷಣ "ಅವರ ಸಾವಿನ ಸುದ್ದಿಯನ್ನು ನಂಬಲಾಗಲಿಲ್ಲ, ಅವರ ಸಾವು ಬಹಳ ದುಃಖ ತಂದಿತು ಅಂತ ಹೇಳುವುದು" ತೀರಾ ಕೃತಕವಾಗುತ್ತದೆ. ಆದರೆ ಅವರ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣ ಮನಸ್ಸು ನೆನಪಿಸಿಕೊಂಡಿದ್ದು ಸುಮಾರು ಎರಡು ತಿಂಗಳುಗಳ ಹಿಂದೆ ಪುತ್ತೂರಿನ ಅಡಿಕೆ ಪತ್ರಿಕೆ ಕಛೇರಿಯಲ್ಲಿ ಪತ್ರಕರ್ತ ಶ್ರೀ ಪಡ್ರೆಯವರೊಂದಿಗೆ ಕಳೆದ ಕ್ಷಣಗಳು. ಸ್ನಾತಕೋತ್ತರ ಪದವಿಯ ಅನಿವಾರ್ಯ ಭಾಗವಾದ ಕಿರು ಸಂಶೋಧನಾ ಪ್ರಬಂಧಕ್ಕೆ ಅಗತ್ಯ ಮಾಹಿತಿ ಕಲೆಹಾಕಲು ಶ್ರೀ ಪಡ್ರೆಯವರ ಸಹಾಯ ಕೋರಿ ಅವರ ಅಡಿಕೆ ಪತ್ರಿಕೆಯ ಕಛೇರಿಗೆ ಹೋಗಿದ್ದೆ. ಆಗ ಅವರು ಆಡಿದ್ದ ಒಂದೊಂದೂ ಮಾತುಗಳು ಚೇರ್ಕಾಡಿ ರಾಯರ ಸಾವಿನ ಸುದ್ದಿಯ ಹಿಂದೆಯೇ ಮೆರವಣಿಗೆಯಲ್ಲಿ ತೇಲಿ ಬಂದವು. "ನಮ್ಮ ದೇಶವನ್ನು ಕೃಷಿ ಪ್ರಧಾನ ದೇಶ ಅಂತ ನಮಗೇ ಬೇಸರವಾಗುವಷ್ಟು ಹೇಳುತ್ತೇವೆ. ರೈತನೇ ದೇಶದ ಬೆನ್ನೆಲುಬು ಅಂತ ಹಾಡಿಹೊಗಳುತ್ತೇವೆ. ನಮ್ಮ ಸರಕಾರ ಕೂಡ ಸಮಯ ಸಿಕ್ಕಾಗಲೆಲ್ಲ ಇದೇ ಮಾತನ್ನು ಹೇಳುತ್ತದೆ. ಆದರೆ ತನ್ನ ನೀತಿಗಳ ಮೂಲಕ ವ್ಯವಸ್ಥಿತವಾಗಿ ರೈತನ ಬೆನ್ನೆಲುಬನ್ನೇ ಮುರಿಯುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ರೈತರ ಜಪವನ್ನೇ ಉರುಹೊಡೆಸುತ್ತೇವೆ. ಅವರು ಪರೀಕ್ಷೆಗಳಲ್ಲಿ ಇದನ್ನೇ ಬರೆಯುತ್ತಾರೆ. ತೊಂಭತ್ತು ತೊಂಭತ್ತೈದು...