ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೇ, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಜಾತ್ಯತೀತತೆಯಲ್ಲಿ ಭಾರತೀಯತೆ

ನಾನು ಸಮಾಜಶಾಸ್ತ್ರವನ್ನಾಗಲಿ ಅಥವಾ ರಾಜನೀತಿಯನ್ನಾಗಲಿ ಶಾಸ್ತ್ರೀಯವಾಗಿ ಓದಿಲ್ಲ. ಬಹುಷ: ಅವುಗಳನ್ನು ಶಾಸ್ತ್ರೀಯವಾಗಿ ಓದುವುದು ನನ್ನಿಂದ ಸಾಧ್ಯವೂ ಇಲ್ಲ. ಆದರೆ ದಿನಂಪ್ರತಿ ಒಂದೆರಡು ಪತ್ರಿಕೆಗಳನ್ನು ಓದುವ ಕಾರಣದಿಂದ ಭಾರತೀಯ ಸಮಾಜ ಮತ್ತು ಭಾರತದ ರಾಜಕಾರಣದ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ("ಇದೆ" ಅಂತ ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳುವುದು ಅಹಂಕಾರವಾಗಬಹುದು.) ವಿದ್ವಾಂಸರು ರಾಜನೀತಿಯ ಬಗ್ಗೆಯಾಗಲಿ ಅಥವಾ ಸಮಾಜಶಾಸ್ತ್ರದ ಬಗ್ಗೆಯಾಗಲಿ ಬರೆದ ಯಾವ ಪುಸ್ತಕವನ್ನೂ ನಾನು ಓದಿಲ್ಲ. ಆದರೂ ಭಾರತದ ರಾಜಕಾರಣಿಯ ಮತ್ತು ಒಬ್ಬ ಸಾಮಾನ್ಯ ಭಾರತೀಯನ ಮನಸ್ಥಿತಿಯನ್ನು ತಕ್ಕ ಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ. ಚುನಾವಣೆಗಳು ಎದುರಾದಾಗ ಬಿಜೆಪಿಯ ಪ್ರಧಾನ ಕಛೇರಿಯಿಂದ ಯಾವ ತರಹದ ಹೇಳಿಕೆಗಳು ಹೊರಡಬಹುದು ಮತ್ತು ಅದಕ್ಕೆ ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳು ಹೇಗಿರಬಹುದು ಎನ್ನುವುದನ್ನೂ ತಕ್ಕಮಟ್ಟಿಗೆ ಊಹಿಸುವುದು ಸಾಧ್ಯ. ಭಾರತದ ಯಾವ ರಾಜಕಾರಣಿಯೇ ಇರಲಿ, ಮತ ಕೇಳುವ ಅವಕಾಶ ಸಿಕ್ಕಾಗಲೆಲ್ಲ 'ಜಾತ್ಯತೀತತೆ' ಎಂಬ ಅದ್ಭುತವಾದ ಪದವೊಂದನ್ನು ತನ್ನ ಚುನಾವಣಾ ಭಾಷಣದಲ್ಲಿ ಖಂಡಿತವಾಗಿಯೂ ಉಪಯೋಗಿಸುತ್ತಾನೆ. ರಾಜಕಾರಣಿಗಳು ಜಾತ್ಯತೀತತೆ ಎಂಬ ಪದವನ್ನು ಉಪಯೋಗಿಸಿಕೊಂಡು ಜನರ ಬಳಿ ಮತ ಕೇಳುವುದನ್ನು ನನ್ನ ಬಾಲ್ಯದಿಂದಲೂ ನೋಡುತ್ತಿದ್ದೇನೆ. ಭಾರತದ ಹೆಚ್ಚಿನ ರಾಜಕಾರಣಿಗಳು ಅವಕಾಶ ಸಿಕ್ಕಾಗಲೆಲ್ಲ ತಾವೊಬ್ಬರೇ ಜಾತ್ಯತೀತತೆಯ ನಿಜವಾದ ರ