ಮೇ ೨೭, ೧೯೬೪ ರಂದು ಭಾರತದ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ತೀರಿಕೊಂಡಾಗ ದೇಶವಾಸಿಗಳೆಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ: 'ನೆಹರೂ ನಂತರ ಭಾರತದ ನಾಯಕ ಯಾರು?' ನಿಜ, ನೆಹರೂ ನಂತರ ಭಾರತದ ರಾಜಕೀಯ ವಲಯದಲ್ಲಿ ಅಂತಹ ಒಂದು ನಿರ್ವಾತ ಸ್ಥಿತಿ ನಿರ್ಮಾಣವಾಗಿತ್ತು. ನೆಹರೂ ಪ್ರಧಾನಿಯಾಗಿದ್ದಷ್ಟು ದಿನ ತಮ್ಮ ನಂತರ ದೇಶದ ಚುಕ್ಕಾಣಿ ಹಿಡಿಯಬೇಕಾದವರು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಕೂಡ ನೆಹರೂ ಉತ್ತರಾಧಿಕಾರಿಯಾಗಿ ಯಾರನ್ನು ನೇಮಕ ಮಾಡಬೇಕು ಎಂಬುದು ತೋಚಲಿಲ್ಲ. ಆಗ ಮೂರಾರ್ಜಿ ದೇಸಾಯವರ ಹೆಸರು ಕೇಳಿಬಂತಾದರೂ, ದೇಸಾಯವರಿಗೆ ಬಹುಪಾಲು ಕಾಂಗ್ರೆಸ್ ನಾಯಕರು ಒಲವು ವ್ಯಕ್ತಪಡಿಸಲಿಲ್ಲ. ನಂತರ ಕೊನೆ ಕ್ಷಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ನೆಹರೂ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಶಾಸ್ತ್ರಿ ಯವರು ಮೂಲತಃ ಸಮಾಜವಾದಿಯಾಗಿದ್ದು, ಸ್ವಾತಂತ್ರ ಪೂರ್ವದಿಂದಲೂ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರಿಂದ ಅವರ ಆಯ್ಕೆಗೆ ಅಷ್ಟಾಗಿ ವಿರೋಧ ಬರಲಿಲ್ಲ. ಜೂನ್ ೧೧, ೧೯೬೪ರಂದು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಶಾಸ್ತ್ರಿ, ಪ್ರಧಾನಿ ಹುದ್ದೆಂದ ಮಾಡಿದ ಪ್ರಥಮ ಭಾಷಣದಲ್ಲಿ ತಮ್ಮ ಕಾರ್ಯ-ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದರು. "ಪ್ರತಿಯೊಂದು ದೇಶವೂ ತನ್ನ ಜೀವಿತಾವಧಿಯಲ್ಲಿ ಎರಡು ದಾರಿಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದಂತಹ ಸಂದರ್ಭವನ್ನು ಎದ
ಆನೋ ಭದ್ರಾಃ ಕೃತವೋ ಯಂತು ವಿಶ್ವತ: