ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ನಮ್ಮೊಳಗಿನ ಅಂಬೇಡ್ಕರ್...

"ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ - ಡಾ. ಬಿ ಆರ್ ಅಂಬೇಡ್ಕರ್" ಈ ಮೇಲಿನ ಅರ್ಥ ಬರುವ ಎಸ್ಸೆಮ್ಮೆಸ್ ಅನ್ನು ಕೆಲ ತಿಂಗಳುಗಳ ಹಿಂದೆ ಸ್ನೇಹಿತರಿಗೆಲ್ಲ ಕಳುಹಿಸುತ್ತಿದ್ದೆ. ಹಾಗೆ ಮಾಡುತ್ತಿದ್ದಾಗ ಸ್ನಾತಕೋತ್ತರ ಪದವಿ ಓದುತ್ತಿರುವ ಸ್ನೇಹಿತರೊಬ್ಬರಿಂದ ಪ್ರತಿಕ್ರಿಯೆ ಬಂತು; "ಅಂಬೇಡ್ಕರ್ ನಿಜಕ್ಕೂ ಹಾಗಂದಿದ್ದರಾ?" ಎಂಬ ಪ್ರಶ್ನೆಯನ್ನು ಅವರ ಪ್ರತಿಕ್ರಿಯೆ ಹೊತ್ತು ತಂದಿತ್ತು. "ಹೌದು, ನನಗೆ ತಿಳೀದಿರುವಂತೆ ಅಂಥ ದೊಂದು ಮಾತನ್ನು ಡಾ. ಅಂಬೇಡ್ಕರ್ ೧೯೪೯ರ ಸುಮಾರಿಗೆ ಆಡಿದ್ದರು. ಅದಲ್ಲದೆ ಸೆಪ್ಟೆಂಬರ್ ೧೦, ೧೯೪೯ ರಂದು ಸಂಸ್ಕೃತವನ್ನೇ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವಂತೆ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮುಂದಿಟ್ಟವರೂ ಸ್ವತಃ ಅಂಬೇಡ್ಕರ್" ಎಂದು ನನ್ನ ಉತ್ತರ ಕಳಿಸಿದೆ. ನನ್ನ ಸ್ನೇಹಿತರಿಗೆ ಸಮಾಧಾನವಾಯಿತಿರಬೇಕು. ಆದರೂ ಕೊನೆಗೊಂದು ಮಾತು ಹೇಳಿದರು; "ಈ ಅಂಬೇಡ್ಕರ್ ತಂದ ಮೀಸಲಾತಿಯೆಂಬ ನೀತಿಯಿಂದಾಗಿ ನಾವೆಲ್ಲರೂ ಇವತ್ತು ಪಡಿಪಾಟಲು ಅನುಭವಿಸುವಂತಾಗಿದೆ." ಇವತ್ತು ನಾಡಿನ ಉದ್ದಗಲಕ್ಕೂ ಅಂಬೇಡ್ಕರ್ ಹೆಸರನ್ನು ಕೇಳದವರು ಇಲ್ಲ. ಅವರ ಬಗ್ಗೆ ಓದದವರು ಇಲ್ಲ. ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಅಂಬೇಡ್ಕರ್ ಚಿಂತನೆಗಳ ಮಾತು ಬರುತ್ತಿರುತ್ತದೆ. ಇಷ್ಟೆಲ್ಲ ಆದರೂ ಅಂಬೇಡ

ಚೇರ್ಕಾಡಿ ರಾಮಚಂದ್ರ ರಾಯರ ನೆವದಲ್ಲಿ...

"ಚೇರ್ಕಾಡಿ ರಾಮಚಂದ್ರ ರಾಯರು ತೀರಿಕೊಂಡರಂತೆ." ಭಾರತದ ಫುಕುವೋಕಾ ಎಂಬ ಬಿರುದನ್ನು ಅರ್ಹವಾಗಿಯೇ ಹೊತ್ತಿದ್ದ ಚೇರ್ಕಾಡಿ ರಾಯರು ತೀರಿಕೊಂಡ ಸುದ್ದಿಯನ್ನು ಕೇಳಿದ ತಕ್ಷಣ "ಅವರ ಸಾವಿನ ಸುದ್ದಿಯನ್ನು ನಂಬಲಾಗಲಿಲ್ಲ, ಅವರ ಸಾವು ಬಹಳ ದುಃಖ ತಂದಿತು ಅಂತ ಹೇಳುವುದು" ತೀರಾ ಕೃತಕವಾಗುತ್ತದೆ. ಆದರೆ ಅವರ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣ ಮನಸ್ಸು ನೆನಪಿಸಿಕೊಂಡಿದ್ದು ಸುಮಾರು ಎರಡು ತಿಂಗಳುಗಳ ಹಿಂದೆ ಪುತ್ತೂರಿನ ಅಡಿಕೆ ಪತ್ರಿಕೆ ಕಛೇರಿಯಲ್ಲಿ ಪತ್ರಕರ್ತ ಶ್ರೀ ಪಡ್ರೆಯವರೊಂದಿಗೆ ಕಳೆದ ಕ್ಷಣಗಳು. ಸ್ನಾತಕೋತ್ತರ ಪದವಿಯ ಅನಿವಾರ್ಯ ಭಾಗವಾದ ಕಿರು ಸಂಶೋಧನಾ ಪ್ರಬಂಧಕ್ಕೆ ಅಗತ್ಯ ಮಾಹಿತಿ ಕಲೆಹಾಕಲು ಶ್ರೀ ಪಡ್ರೆಯವರ ಸಹಾಯ ಕೋರಿ ಅವರ ಅಡಿಕೆ ಪತ್ರಿಕೆಯ ಕಛೇರಿಗೆ ಹೋಗಿದ್ದೆ. ಆಗ ಅವರು ಆಡಿದ್ದ ಒಂದೊಂದೂ ಮಾತುಗಳು ಚೇರ್ಕಾಡಿ ರಾಯರ ಸಾವಿನ ಸುದ್ದಿಯ ಹಿಂದೆಯೇ ಮೆರವಣಿಗೆಯಲ್ಲಿ ತೇಲಿ ಬಂದವು. "ನಮ್ಮ ದೇಶವನ್ನು ಕೃಷಿ ಪ್ರಧಾನ ದೇಶ ಅಂತ ನಮಗೇ ಬೇಸರವಾಗುವಷ್ಟು ಹೇಳುತ್ತೇವೆ. ರೈತನೇ ದೇಶದ ಬೆನ್ನೆಲುಬು ಅಂತ ಹಾಡಿಹೊಗಳುತ್ತೇವೆ. ನಮ್ಮ ಸರಕಾರ ಕೂಡ ಸಮಯ ಸಿಕ್ಕಾಗಲೆಲ್ಲ ಇದೇ ಮಾತನ್ನು ಹೇಳುತ್ತದೆ. ಆದರೆ ತನ್ನ ನೀತಿಗಳ ಮೂಲಕ ವ್ಯವಸ್ಥಿತವಾಗಿ ರೈತನ ಬೆನ್ನೆಲುಬನ್ನೇ ಮುರಿಯುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ರೈತರ ಜಪವನ್ನೇ ಉರುಹೊಡೆಸುತ್ತೇವೆ. ಅವರು ಪರೀಕ್ಷೆಗಳಲ್ಲಿ ಇದನ್ನೇ ಬರೆಯುತ್ತಾರೆ. ತೊಂಭತ್ತು ತೊಂಭತ್ತೈದು

ಅನ್ವಯಿಕ ಸಿದ್ಧಾಂತಗಳು, ಮಾಧ್ಯಮ ಯಶೋಗಾಥೆ ಮತ್ತು ಸಮರ್ಥ ಗುರುವಿನ ನಿರೀಕ್ಷೆ...

ಡೆಕ್ಕನ್ ಹೆರಾಲ್ಡ್ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಒಂದು ತಿಂಗಳ ಇಂಟನರ್್ಶಿಪ್ಗಾಗಿ ಸೇರಿದ್ದ ದಿನಗಳು. ಪತ್ರಿಕೋದ್ಯಮದಲ್ಲಿ ಮೂರು ವರ್ಷದ ಡಿಗ್ರಿ ಹಾಗೂ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಸ್ನಾತಕೋತ್ತರ ಕೋಸರ್ಿನ ಒಂದು ವರ್ಷದ ಅವಧಿ ಪೂರ್ಣಗೊಂಡಿತ್ತು. ಇನ್ನೊಂದು ವರ್ಷದ ಅಧ್ಯಯನ ಬಾಕಿಯಿತ್ತು. ಮಂಗಳೂರು ಡೆಕ್ಕನ್ ಹೆರಾಲ್ಡ್ನ ಮುಖ್ಯಸ್ಥ ರೊನಾಲ್ಡ್ ಫನರ್ಾಂಡೀಸ್ ನನ್ನನ್ನು ಕರೆದು ಒಂದು ಉದ್ದದ ಪತ್ರಿಕಾ ಹೇಳಿಕೆಯನ್ನು ಕೊಟ್ಟು ಅದರ ಆಧಾರದಲ್ಲಿ ಚುಟುಕು ಸುದ್ದಿಯೊಂದನ್ನು ಬರೆಯಲು ಹೇಳಿದರು. ಪತ್ರಿಕಾ ಹೇಳಿಕೆಯನ್ನು ಆಮೂಲಾಗ್ರವಾಗಿ ಓದಿದ ನನಗೆ ಆ ಪತ್ರಿಕಾ ಹೇಳಿಕೆಯಲ್ಲಿ ಸುದ್ದಿ ಯಾವುದು, ಸುದ್ದಿಯಲ್ಲದ್ದು ಯಾವುದು ಎಂಬುದರ ವ್ಯತ್ಯಾಸ ಫಕ್ಕನೆ ಹೊಳೆಯಲಿಲ್ಲ. ಪತ್ರಿಕೋದ್ಯಮ ತರಗತಿಗಳಲ್ಲಿ ಆರಂಭದಲ್ಲಿಯೇ ಬೋಧಿಸುವ "5 ಡಬ್ಲ್ಯೂ 1 ಎಚ್ "ಪಾಠಗಳು ಆ ಹೊತ್ತಿಗೆ ನನಗೆ ಸಾಕಷ್ಟು ಬಾರಿ ಆಗಿದ್ದವು. "ನಾಯಿ ಮನುಷ್ಯನಿಗೆ ಕಚ್ಚಿದರೆ ಸುದ್ದಿಯಲ್ಲ, ಆದರೆ ಮನುಷ್ಯ ನಾಯಿಗೆ ಕಚ್ಚಿದರೆ ಸುದ್ದಿ "ಎಂಬ ಪಾಠಗಳಂತೂ ಬೋರು ಹೊಡೆಸುವಷ್ಟು ಆಗಿದ್ದವು. ಹೀಗಿದ್ದರೂ ರೊನಾಲ್ಡ್ ಅವರು ಕೊಟ್ಟ ಪತ್ರಿಕಾ ಹೇಳಿಕೆಯಲ್ಲಿ "5ಡಬ್ಲ್ಯೂ "ಯಾವುದು "1ಎಚ್" ಯಾವುದು ಎಂಬ ಗೊಂದಲ ಬಗೆಹರಿಯುತ್ತಿರಲಿಲ್ಲ. ಅಷ್ಟೊಂದು ದೊಡ್ಡ ಪತ್ರಿಕಾ ಹೇಳಿಕೆಯನ್ನು ನೂರಿನ್ನೂರು ಪದಗಳಲ್ಲಿ ಬರೆಯುವುದು ಹೇಗೆಂಬುದೂ