ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜಾತ್ಯತೀತತೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಏಕರೂಪ ನಾಗರಿಕ ಸಂಹಿತೆ ಎಂಬ ಜಾತ್ಯತೀತ ಬೇಡಿಕೆ

ಏಕರೂಪ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೆ ತರುವುದು ಸಂವಿಧಾನ ನಿರ್ಮಾತೃಗಳ ಕನಸು , ಆಶಯ . ಸಂವಿಧಾನ ಕರಡು ರಚನಾ ಸಭೆಯಲ್ಲಿ ಡಾ . ಬಿ . ಆರ್ . ಅಂಬೇಡ್ಕರ್ , ಕೆ . ಎಂ . ಮುನ್ಷಿ ಸೇರಿದಂತೆ ಹಲವರು ಆಡಿದ ಮಾತುಗಳು ಇದನ್ನು ದೃಢಪಡಿಸುತ್ತವೆ . ಆದರೆ , ಕರಡು ರಚನಾ ಸಮಿತಿಯ ಎಲ್ಲ ಸದಸ್ಯರಿಂದ ಇದಕ್ಕೆ ಬೆಂಬಲ ಸಿಗಲಿಲ್ಲ . ನಿರ್ದಿಷ್ಟ ವರ್ಗಗಳಿಂದ ವಿರೋಧ ವ್ಯಕ್ತವಾದರೂ , ಸಂವಿಧಾನದ 44 ನೇ ವಿಧಿಯಲ್ಲಿ , ‘ ಸರ್ಕಾರವು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಯತ್ನಿಸಬೇಕು’ ಎಂದು ಹೇಳಲಾಗಿದೆ . ಇಲ್ಲಿ ಒಂದು ವಿಚಾರ ಸ್ಪಷ್ಟ . ಸಮಾನತೆಯನ್ನು ಹೇಳುವ 14 ನೇ ವಿಧಿ , ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ 25 ನೇ ವಿಧಿಯನ್ನು ರಚಿಸಿದ ನಂತರವೇ , ಕರಡು ರಚನಾ ಸಮಿತಿಯು 44 ನೇ ವಿಧಿಯನ್ನು ರೂಪಿಸಿತು . ದೇಶದಲ್ಲಿ ವಿವಿಧ ಧರ್ಮ , ಜಾತಿ , ವರ್ಗಗಳನ್ನು ಪ್ರಭುತ್ವ ಸಮಾನವಾಗಿ ಕಾಣಬೇಕು (12 ನೇ ವಿಧಿ ), ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು (25 ನೇ ವಿಧಿ ) ಎಂದು ಹೇಳುವ ಸಂವಿಧಾನ , ಆಸ್ತಿ– ವಿವಾಹ– ದತ್ತು ಸ್ವೀಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೆ ಬರುವ ವಿಚಾರಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಸಮಾನ ಸಂಹಿತೆಯನ್ನು ರೂಪಿಸಬೇಕು ಎಂದಿದೆ . ಅಂದರೆ ಸಮಾನತೆ , ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಂಡೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯ ಎಂಬ ನಂಬಿಕೆ ಕ...

ಜಾತ್ಯತೀತತೆಯಲ್ಲಿ ಭಾರತೀಯತೆ

ನಾನು ಸಮಾಜಶಾಸ್ತ್ರವನ್ನಾಗಲಿ ಅಥವಾ ರಾಜನೀತಿಯನ್ನಾಗಲಿ ಶಾಸ್ತ್ರೀಯವಾಗಿ ಓದಿಲ್ಲ. ಬಹುಷ: ಅವುಗಳನ್ನು ಶಾಸ್ತ್ರೀಯವಾಗಿ ಓದುವುದು ನನ್ನಿಂದ ಸಾಧ್ಯವೂ ಇಲ್ಲ. ಆದರೆ ದಿನಂಪ್ರತಿ ಒಂದೆರಡು ಪತ್ರಿಕೆಗಳನ್ನು ಓದುವ ಕಾರಣದಿಂದ ಭಾರತೀಯ ಸಮಾಜ ಮತ್ತು ಭಾರತದ ರಾಜಕಾರಣದ ಬಗ್ಗೆ ಸ್ವಲ್ಪ ತಿಳುವಳಿಕೆ ಇದೆ. ("ಇದೆ" ಅಂತ ಗಟ್ಟಿ ಧ್ವನಿಯಲ್ಲಿ ಹೇಳಿಕೊಳ್ಳುವುದು ಅಹಂಕಾರವಾಗಬಹುದು.) ವಿದ್ವಾಂಸರು ರಾಜನೀತಿಯ ಬಗ್ಗೆಯಾಗಲಿ ಅಥವಾ ಸಮಾಜಶಾಸ್ತ್ರದ ಬಗ್ಗೆಯಾಗಲಿ ಬರೆದ ಯಾವ ಪುಸ್ತಕವನ್ನೂ ನಾನು ಓದಿಲ್ಲ. ಆದರೂ ಭಾರತದ ರಾಜಕಾರಣಿಯ ಮತ್ತು ಒಬ್ಬ ಸಾಮಾನ್ಯ ಭಾರತೀಯನ ಮನಸ್ಥಿತಿಯನ್ನು ತಕ್ಕ ಮಟ್ಟಿಗೆ ಅರ್ಥಮಾಡಿಕೊಳ್ಳಬಲ್ಲೆ. ಚುನಾವಣೆಗಳು ಎದುರಾದಾಗ ಬಿಜೆಪಿಯ ಪ್ರಧಾನ ಕಛೇರಿಯಿಂದ ಯಾವ ತರಹದ ಹೇಳಿಕೆಗಳು ಹೊರಡಬಹುದು ಮತ್ತು ಅದಕ್ಕೆ ಕಾಂಗ್ರೆಸ್ಸಿಗರ ಪ್ರತಿಕ್ರಿಯೆಗಳು ಹೇಗಿರಬಹುದು ಎನ್ನುವುದನ್ನೂ ತಕ್ಕಮಟ್ಟಿಗೆ ಊಹಿಸುವುದು ಸಾಧ್ಯ. ಭಾರತದ ಯಾವ ರಾಜಕಾರಣಿಯೇ ಇರಲಿ, ಮತ ಕೇಳುವ ಅವಕಾಶ ಸಿಕ್ಕಾಗಲೆಲ್ಲ 'ಜಾತ್ಯತೀತತೆ' ಎಂಬ ಅದ್ಭುತವಾದ ಪದವೊಂದನ್ನು ತನ್ನ ಚುನಾವಣಾ ಭಾಷಣದಲ್ಲಿ ಖಂಡಿತವಾಗಿಯೂ ಉಪಯೋಗಿಸುತ್ತಾನೆ. ರಾಜಕಾರಣಿಗಳು ಜಾತ್ಯತೀತತೆ ಎಂಬ ಪದವನ್ನು ಉಪಯೋಗಿಸಿಕೊಂಡು ಜನರ ಬಳಿ ಮತ ಕೇಳುವುದನ್ನು ನನ್ನ ಬಾಲ್ಯದಿಂದಲೂ ನೋಡುತ್ತಿದ್ದೇನೆ. ಭಾರತದ ಹೆಚ್ಚಿನ ರಾಜಕಾರಣಿಗಳು ಅವಕಾಶ ಸಿಕ್ಕಾಗಲೆಲ್ಲ ತಾವೊಬ್ಬರೇ ಜಾತ್ಯತೀತತೆಯ ನಿಜವಾದ ರ...