ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆಕೆಯನ್ನು ಏನಂತ ಕರೆಯಲಿ?

ಒಂದಾನೊಂದು ಕಾಲದಲ್ಲಿ ಇನ್ನೂ ಜನಿಸಿಲ್ಲದ ಆದರೆ ಇನ್ನೊಂದೆರಡು ದಿನಗಳಲ್ಲಿ ಜನಿಸಲಿಕ್ಕಿರುವ ಮಗುವೊಂದಿತ್ತು. ಆ ಮಗು ದೇವರನ್ನೊಮ್ಮೆ ಪ್ರಶ್ನಿಸಿತು. "ದೇವರೇ, ನೀನು ನನ್ನನ್ನು ನಾಳೆ ಭೂಮಿಗೆ ಕಳಿಸುತ್ತೀಯಾ ಎಂದು ಇಲ್ಲಿ (ಸ್ವರ್ಗ) ಇರುವವರೆಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ನಾನು ಇನ್ನೂ ತುಂಬಾ ಚಿಕ್ಕವ. ಅದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ನಿಸ್ಸಹಾಯಕ ಮಗು. ಹೀಗಿರುವಾಗ ನಾನು ಇಲ್ಲಿಂದ ಭೂಮಿಗೆ ಹೋಗಿ ಹೇಗೆ ಜೀವಿಸಲಿ?" ದೇವರು ಪ್ರೀತಿಯಿಂದ "ಮಗೂ, ಭೂಮಿಯ ಮೇಲೆ ತುಂಬಾ ದೇವತೆಗಳಿದ್ದಾರೆ. ಅವರಲ್ಲಿ ಒಬ್ಬಳನ್ನು ನಾನು ನಿನಗಾಗಿ ಆರಿಸಿಟ್ಟಿದ್ದೇನೆ. ಅವಳು ನಿನಗಾಗಿ ಕಾಯುತ್ತಿರುತ್ತಾಳೆ. ಅವಳೇ ನಿನ್ನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ" ಎಂದ. "ಆದರೆ ನಾನಿಲ್ಲಿಯೇ ತುಂಬಾ ಸಂತೋಷದಿಂದಿದ್ದೇನೆ. ನಾನಿಲ್ಲಿ ನನ್ನಷ್ಟಕ್ಕೇ ಹಾಡಿಕೊಂಡು, ನಗಾಡಿಕೊಂಡು ಸಂತೋಷಪಡುತ್ತಿದ್ದೇನೆ. ನನಗೆ ಖುಷಿಯಿಂದಿರಲಿಕ್ಕೆ ಇಷ್ಟು ಸಾಕು. ನಾನು ಭೂಮಿಗೆ ಹೋದರೆ ಇವೆಲ್ಲವನ್ನೂ ಕಳೆದುಕೊಳ್ಳಬೇಕಾಗುವುದಿಲ್ಲವೇ?" ಎಂದಿತು ಮಗು. "ನಿನ್ನ ಪಾಲಿನ ದೇವತೆ ನಿನಗಾಗಿ ದಿನಾ ಹಾಡುತ್ತಾಳೆ. ಅದಕ್ಕಿಂತ ಹೆಚ್ಚಾಗಿ ಅವಳು ನಿಷ್ಕಾಮ ಪ್ರೇಮವನ್ನು ನೀಡುತ್ತಾಳೆ. ಅವಳ ಪ್ರೀತಿಯನ್ನು ಅನುಭವಿಸುತ್ತಾ ನೀನು ಸುಖವಾಗಿರಬಹುದಲ್ಲವೇ?" "ಅದು ಸರಿ. ಆದರೆ ಭೂಮಿಯಲ್ಲಿರುವ ಮನುಷ್ಯರು ನನ್ನ ಜೊತೆ ಮಾತನಾಡಲು ಬಂದರೆ ಅವರ ಭಾಷೆಯನ್ನು