ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅನ್ನ ಕೊಡುವ ಭಾಷೆಯಾಗಲಿ ಕನ್ನಡ

ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವ ಬರಲಿದೆ . ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕುರಿತು ಭರ್ಜರಿ ಚರ್ಚೆಗಳು ರಾಜ್ಯದಾದ್ಯಂತ ನಡೆಯಲಿವೆ . ಹಾಗೆಯೇ ಕೆಲವು ದಿನಗಳಲ್ಲಿ ಆ ಚರ್ಚೆಗಳು ಮನಸ್ಸಿನ ಮೂಲೆ ಸೇರಲಿವೆ . ಅದೇನೇ ಇರಲಿ , ಈ ಕೆಳಗಿನ ಒಂದಷ್ಟು ಸಂಗತಿಗಳನ್ನು ಗಮನಿಸಿ . ಕರ್ನಾಟಕದಲ್ಲಿ ಇಂಗ್ಲಿಷ್ ಗೆಂದೇ ಪ್ರತ್ಯೇಕ ವಿಶ್ವವಿದ್ಯಾಲಯ ಇಲ್ಲ . ಇಂಗ್ಲಿಷ್ ಪುಸ್ತಕ ಪ್ರಾಧಿಕಾರ , ಇಂಗ್ಲಿಷ್ ಸಾಹಿತ್ಯ ಪರಿಷತ್ತು , ಇಂಗ್ಲಿಷ್ ಕಾವಲು ಪಡೆ , ಇಂಗ್ಲಿಷ್ ಮತ್ತು ಸಂಸ್ಕೃತಿ ಇಲಾಖೆ ... ಇವ್ಯಾವುದೂ ಇಲ್ಲ . ಯಾವುದೇ ರೀತಿಯ ಸರಕಾರಿ ಕೃಪೆ ಮತ್ತು ಮೇಲೆ ತಿಳಿಸಿದ ಅನೇಕ ಇಲ್ಲಗಳ ಹೊರತಾಗಿಯೂ ಇವತ್ತು ಇಂಗ್ಲಿಷ್ ಭಾಷೆ ಕನ್ನಡ ಭಾಷೆಗೆ ಸಡ್ಡು ಹೊಡೆದು ನಿಂತಿದೆ . ರಾಜಧಾನಿಯಲ್ಲೇ ಇಬ್ಬರು ಅಪರಿಚಿತರು ಎದುರಾದರೆ ಮಾತನಾಡುವುದು ಇಂಗ್ಲಿಷ್ ನಲ್ಲಿ ಎಂಬಷ್ಟರ ಮಟ್ಟಿಗೆ ಈ ಭಾಷೆ ಬೆಳೆದಿದೆ . ಇದಕ್ಕೆ ಕಾರಣ ಹುಡುಕುವುದು ಕಷ್ಟದ ಸಂಗತಿಯೇನಲ್ಲ . ಕೆಲವೇ ವರ್ಷಗಳ ಹಿಂದಿನವರೆಗೆ ಒಂದು ರೀತಿಯಲ್ಲಿ ಫ್ಯಾಷನ್ ಮಾತ್ರ ಆಗಿದ್ದ ಇಂಗ್ಲಿಷ್ ಇವತ್ತು ತನ್ನ ಭಾಷಿಗನನ್ನು ಹೊಟ್ಟೆ ಹೊರೆಯುವ ಮಟ್ಟಕ್ಕೆ ಬೆಳೆದುನಿಂತಿದೆ . ಇವತ್ತು ಮುಗಿಬಿದ್ದು ಇಂಗ್ಲಿಷ್ ಕಲಿಯುತ್ತಿರುವವರೆಲ್ಲರೂ ಇಂಗ್ಲಿಷ್ ಸಾಹಿತ್ಯ , ಷೆಕ್ಸ್ ಪಿಯರ್ ಮೇಲಿನ ಪ್ರ