ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡದ ನೆಲದಿಂದಲೇ...

(ನುಡಿಸಿರಿ - ೨೦೦೭ ರ ಸಂದರ್ಭದಲ್ಲಿ ಕನ್ನಡದ ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನುಡಿಸಿರಿಯ ರೂವಾರಿ ಡಾ. ಮೋಹನ್ ಆಳ್ವರ ಸಂದರ್ಶನ. ’ನುಡಿಸಿರಿ - ೨೦೦೭’ ಮುಗಿದು ಹಲವು ತಿಂಗಳುಗಳೇ ಕಳೆದಿರಬಹುದು. ಆದರೆ ಆಳ್ವರು ಸಂದರ್ಶನದಲ್ಲಿ ತಿಳಿಸಿದ ವಿಚಾರಗಳು ಯಾವತ್ತಿಗೂ ವಿಚಾರಯೋಗ್ಯ.) ಕನ್ನಡ ನಾಡಿನಲ್ಲಿ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಪ್ರೀತಿ ಅಭಿಮಾನ ಇರುವವರಿಗೇನೂ ಕೊರತೆಯಿಲ್ಲ. ಪ್ರತಿ ಹಳ್ಳಿಯಲ್ಲೂ ಅಂಥವರಿದ್ದಾರೆ. ಆ ಬಗ್ಗೆ ಅನುಮಾನ ಬೇಡ. ಆದರೆ, ಸಾಮಾನ್ಯವಾಗಿ, ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿಯಿರುವ ಜನರ ಬಳಿ ಸಾಕಷ್ಟು ಹಣ ಇರುವುದಿಲ್ಲ. ಇನ್ನು ಸಾಕಷ್ಟು ಹಣ ಇರುವವರ ಬಳಿ ನುಡಿಸಿರಿಯಂತಹ ಭವ್ಯ ಕಾರ್ಯಕ್ರಮವನ್ನು ನಡೆಸುವ ಆಸಕ್ತಿಯಿರುವುದಿಲ್ಲ. ಆದರೆ ಆಳ್ವಾಸ್ ನುಡಿಸಿರಿಯ ರೂವಾರಿ ಡಾ. ಮೋಹನ್ ಆಳ್ವ ಮಾತ್ರ ಈ ಮಾತಿಗೆ ಅಪವಾದ. ಅವರಲ್ಲಿ ಕನ್ನಡ ನಾಡು-ನುಡಿಯ ಕುರಿತು ಅಪಾರವಾದ ಪ್ರೀತಿಯಿದೆ. ಕಳಕಳಿಯಿದೆ. ಜೊತೆಗೆ ನುಡಿಸಿರಿಯಂತಹ ಅನುಪಮ ಕಾರ್ಯಕ್ರಮವನ್ನು ನಡೆಸಲು ಬೇಕಾದ ಆರ್ಥಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವೂ ಇದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ತಪಸ್ಸಿನಂತೆ ನಡೆಸಿಕೊಂಡು ಬರುವ ಶ್ರದ್ಧೆಯಿದೆ. ಆಳ್ವಾಸ್ ನುಡಿಸಿರಿಯನ್ನು ವರ್ಷವರ್ಷವೂ ನಡೆಸುವುದರ ಹಿಂದಿರುವ ಪ್ರೇರಣೆಯ ಕುರಿತು ’ವಿರಾಟ್’ ಡಾ. ಆಳ್ವರನ್ನು ಪ್ರಶ್ನಿಸಿತು: ವಿರಾಟ್: ನಿಮಗೆ ನುಡಿಸಿರಿಯಂತಹ ಸಾ

ನಾಲ್ಕು ಹಣತೆಗಳ ಕಥೆ!

ನಾಲ್ಕು ಹಣತೆಗಳು ನಿಧಾನವಾಗಿ ಉರಿಯುತ್ತಿದ್ದವು. ಹಣತೆಗಳು ಪರಸ್ಪರ ಮಾತಾಡಿಕೊಳ್ಳುತ್ತಿದ್ದುದು ನಮಗೆ ಕೇಳಿಸುವಷ್ಟು ಅಲ್ಲಿನ ವಾತಾವರಣ ಶಾಂತವಾಗಿತ್ತು. ಹೀಗಿರುವಾಗ ಮೊದಲನೆಯ ಹಣತೆ ಹೇಳಿತು, "ನನ್ನ ಹೆಸರು ’ಶಾಂತಿ’. ಆದರೂ ಕೂಡ ಜನ ನನ್ನನ್ನು ಹೆಚ್ಚು ಹೊತ್ತು ಉರಿಯುತ್ತಿರಲು ಬಿಡುವುದಿಲ್ಲ. ನಾನು ಬೇಗ ಆರಿಹೋಗುತ್ತೇನೆಂದು ನನಗೆ ಗೊತ್ತು". ಹಾಗೆ ಹೇಳಿದ ಕೂಡಲೇ ಅದರ ದೀಪ ಕ್ಷೀಣವಾಗಿ ಕೊನೆಗೆ ಆರಿಹೋಯಿತು. ಎರಡನೆಯ ಹಣತೆ, "ನಾನು ’ನಂಬಿಕೆ’. ಆದರೆ ಹೆಚ್ಚಿನ ವಿಷಯಗಳಲ್ಲಿ ನಾನಿಂದು ಉಪಯೋಗಕ್ಕೆ ಇಲ್ಲದಂತಾಗಿದ್ದೇನೆ. ಹಾಗಾಗಿ ನಾನು ತುಂಬ ಹೆಚ್ಚು ಹೊತು ಉರಿಯಬೇಕೆಂದೇನೂ ಇಲ್ಲ" ಎಂದಿತು. ಇಷ್ಟು ಹೇಳಿದ್ದೇ ತಡ, ನಿಧಾನವಾಗಿ ಬಂದ ತಂಗಾಳಿಯೊಂದು ಆ ಹಣತೆಯನ್ನು ಆರಿಸಿಬಿಟ್ಟಿತು. ಮೂರನೆಯ ಹಣತೆ ತುಂಬ ದುಃಖದಿಂದ ಹೇಳಿತು, "ನಾನು ’ಪ್ರೀತಿ’! ಆದರೂ ನನಗೆ ತುಂಬ ಹೊತ್ತು (ಮನುಷ್ಯರ ಹೃದಯದಲ್ಲಿ) ಉರಿಯುತ್ತಿರುವಷ್ಟು ಶಕ್ತಿಯಿಲ್ಲ. ಜನ ನನ್ನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ನನ್ನನ್ನು ಯಾವತ್ತೂ ಬದಿಯಲ್ಲಿ ಇಟ್ಟುಬಿಡುತ್ತಾರೆ. ಇಷ್ಟೇ ಅಲ್ಲ ಈ ಜನ ಯಮಗೆ ಅತ್ಯಂತ ಹತ್ತಿರದವರನ್ನು, ತಮ್ಮನ್ನು ತುಂಬ ವಿಶ್ವಾಸದಿಂದ ’ಪ್ರೀತಿ’ಯಿಂದ ನೋಡುವುದಿಲ್ಲ". ತನ್ನ ಮಾತು ಮುಗಿಸಿದ ಹಣತೆ ಯಾರಿಗೂ ಕಾಯದೇ ಕೂಡಲೇ ಆರಿಹೋಯಿತು. ಆ ಹೊತ್ತಿನಲ್ಲಿ ಒಂದು ಪುಟ್ಟ ಮಗು ಆ ಕೋಣೆಗೆ ಅಂಬೆಗಾಲಿಡುತ್ತಾ ಬಂ