ವಿಷಯಕ್ಕೆ ಹೋಗಿ

ಕನ್ನಡದ ನೆಲದಿಂದಲೇ...

(ನುಡಿಸಿರಿ - ೨೦೦೭ ರ ಸಂದರ್ಭದಲ್ಲಿ ಕನ್ನಡದ ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನುಡಿಸಿರಿಯ ರೂವಾರಿ ಡಾ. ಮೋಹನ್ ಆಳ್ವರ ಸಂದರ್ಶನ. ’ನುಡಿಸಿರಿ - ೨೦೦೭’ ಮುಗಿದು ಹಲವು ತಿಂಗಳುಗಳೇ ಕಳೆದಿರಬಹುದು. ಆದರೆ ಆಳ್ವರು ಸಂದರ್ಶನದಲ್ಲಿ ತಿಳಿಸಿದ ವಿಚಾರಗಳು ಯಾವತ್ತಿಗೂ ವಿಚಾರಯೋಗ್ಯ.)

ಕನ್ನಡ ನಾಡಿನಲ್ಲಿ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಪ್ರೀತಿ ಅಭಿಮಾನ ಇರುವವರಿಗೇನೂ ಕೊರತೆಯಿಲ್ಲ. ಪ್ರತಿ ಹಳ್ಳಿಯಲ್ಲೂ ಅಂಥವರಿದ್ದಾರೆ. ಆ ಬಗ್ಗೆ ಅನುಮಾನ ಬೇಡ. ಆದರೆ, ಸಾಮಾನ್ಯವಾಗಿ, ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿಯಿರುವ ಜನರ ಬಳಿ ಸಾಕಷ್ಟು ಹಣ ಇರುವುದಿಲ್ಲ. ಇನ್ನು ಸಾಕಷ್ಟು ಹಣ ಇರುವವರ ಬಳಿ ನುಡಿಸಿರಿಯಂತಹ ಭವ್ಯ ಕಾರ್ಯಕ್ರಮವನ್ನು ನಡೆಸುವ ಆಸಕ್ತಿಯಿರುವುದಿಲ್ಲ. ಆದರೆ ಆಳ್ವಾಸ್ ನುಡಿಸಿರಿಯ ರೂವಾರಿ ಡಾ. ಮೋಹನ್ ಆಳ್ವ ಮಾತ್ರ ಈ ಮಾತಿಗೆ ಅಪವಾದ. ಅವರಲ್ಲಿ ಕನ್ನಡ ನಾಡು-ನುಡಿಯ ಕುರಿತು ಅಪಾರವಾದ ಪ್ರೀತಿಯಿದೆ. ಕಳಕಳಿಯಿದೆ. ಜೊತೆಗೆ ನುಡಿಸಿರಿಯಂತಹ ಅನುಪಮ ಕಾರ್ಯಕ್ರಮವನ್ನು ನಡೆಸಲು ಬೇಕಾದ ಆರ್ಥಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವೂ ಇದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ತಪಸ್ಸಿನಂತೆ ನಡೆಸಿಕೊಂಡು ಬರುವ ಶ್ರದ್ಧೆಯಿದೆ. ಆಳ್ವಾಸ್ ನುಡಿಸಿರಿಯನ್ನು ವರ್ಷವರ್ಷವೂ ನಡೆಸುವುದರ ಹಿಂದಿರುವ ಪ್ರೇರಣೆಯ ಕುರಿತು ’ವಿರಾಟ್’ ಡಾ. ಆಳ್ವರನ್ನು ಪ್ರಶ್ನಿಸಿತು:

ವಿರಾಟ್: ನಿಮಗೆ ನುಡಿಸಿರಿಯಂತಹ ಸಾಹಿತ್ಯಿಕ ಕಾರ್ಯಕ್ರಮಗಳನ್ನು ನಡೆಸಲು ಪ್ರೇರಣೆ..?

ಡಾ. ಆಳ್ವ: ನಿಮಗೆಲ್ಲಾ ಗೊತ್ತಿರುವಂತೆ ೨೦೦೩ರಲ್ಲಿ ಮೂಡುಬಿದಿರೆಯಲ್ಲಿ ೭೧ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯಿತು. ಈ ಮಹಾ ಸಮ್ಮೇಳನವು ೨೦೦೩ನೇ ಇಸವಿಯ ಡಿಸೆಂಬರ್ ೧೭, ೧೮ ಮತ್ತು ೧೯ರಂದು ಬಹಳ ಶಿಸ್ತಿನಿಂದ ವೈಭವಯುತವಾಗಿ ನಡೆಯಿತು. ಅದನು ಸಂಘಟಿಸಿದ ನನಗೆ ಮತ್ತು ನನ್ನಂಥ ಸಮಾನ ಮನಸ್ಕರಿಗೆ ಇಂಥ ಕಾರ್ಯಕ್ರಮಗಳು ಸರಕಾರೀ ಕಾರ್ಯಕ್ರಮಗಳಾಗದೆ ಸಾರ್ವಜನಿಕರ ಕಾರ್ಯಕ್ರಮಗಳಾಗಬೇಕು, ಈ ಬಗೆಯ ಕಾರ್ಯಕ್ರಮಗಳಿಗೂ ಅವುಗಳದ್ದೇ ಆದ ಸಾಂಸ್ಕೃತಿಕ ಮಹತ್ವವಿದೆ. ಇದನ್ನು ಒಂದು ಅನಗತ್ಯ ವೆಚ್ಚದ ಕಾರ್ಯಕ್ರಮ ಎಂದು ಎಷ್ಟೇ ಆಕ್ಷೇಪಿಸಿದರೂ ಇದಕ್ಕೂ ಇದರದ್ದೇ ಆದ ಒಂದು ತೂಕವಿದೆ. ಹಬ್ಬ ಮಾಡುವುದು, ಸಂಭ್ರಮ ಪಡುವುದೂ ನಮ್ಮ ಸಂಸ್ಕೃತಿಯ ಲಕ್ಷಣಗಳಲ್ಲಿ ಒಂದು. ಆದರೆ ಇದನ್ನು ಸ್ವಲ್ಪ ವ್ಯವಸ್ಥಿತವಾಗಿ ಮಾಡಬೇಕು. ನಮ್ಮ ವೈಚಾರಿಕತೆಯನ್ನು, ಯೋಚನೆಯನ್ನು ಖಚಿತಪಡಿಸುವ ಜಿಜ್ಞಾಸೆಯೂ ಈ ಸಂದರ್ಭದಲ್ಲಿ ನಡೆಯಬೇಕು ಎಂದುಕೊಂಡು ನಮ್ಮ ಆತ್ಮೀಯ ಗೆಳೆಯರು, ಹಿರಿಯರು, ಊರಿನ ಪ್ರಮುಖರು ಸೇರಿಕೊಂಡುಇಅದಕ್ಕೊಂದು ರೂಪ ಕೊಟ್ಟೆವು. ಈ ರೂಪದ ಹೆಸರೇ ’ಆಳ್ವಾಸ್ ನುಡಿಸಿರಿ’.

ವಿರಾಟ್: ಸರಕಾರ ನಡೆಸಬೇಕಾಗಿರುವ ಕಾರ್ಯಕ್ರಮವನ್ನು ನೀವು ಕೈಗೆತ್ತಿಕೊಳ್ಳಲು ಕಾರಣ?

ಡಾ. ಆಳ್ವ: ಕನ್ನಡದ ಕೆಲಸವನ್ನು ಇಂದು ಸರಕಾರೀ ಸಂಸ್ಥೆಗಳು, ಅಕಾಡೆಮಿಗಳು, ಪರಿಷತ್ತುಗಳು ಮಾತ್ರ ಮಾಡಬೇಕಿಲ್ಲ. ಅದನ್ನು ಈ ನಾಡಿನ ಜನರು ಮಾಡಬೇಕು. ಭಾಷೆ, ಸಂಸ್ಕೃತಿಯನ್ನು ರೂಪಿಸುವ, ನಿರ್ವಚಿಸುವ, ನಿರ್ಧರಿಸುವ ಕೆಲಸವನ್ನು ಯಾವತ್ತೂ ಪ್ರಭುತ್ವ ನಿರ್ವಹಿಸುವುದಕ್ಕೆ ಕೊಡಬಾರದು. ಅದನ್ನು ಜನರೇ ಪ್ರಜಾಪ್ರಭುತ್ವಾತ್ಮಕವಾದ ಚೌಕಟ್ಟಿನಲ್ಲಿ ನಿಭಾಯಿಸಬೇಕು. ನಮ್ಮಲ್ಲಿಂದು ಇಂಥ ಅವಕಾಶಗಳು ಖಾಲಿ ಬಿದ್ದಿವೆ. ಅದನ್ನು ಭರ್ತಿ ಮಾಡುವುದಕ್ಕೆಂದು ನಿಂತಿರುವ ಸಂಸ್ಕೃತಿ ಪ್ರತಿಪಾದಕರು ಈ ದೇಶದ ಸಂಸ್ಕೃತಿಯನ್ನು ಅರ್ಥ ಮಾಡಿಕೊಂಡು ಸಂಸ್ಕೃತಿ ಚಿಂತಕರಾಗಿ ಪರಿವರ್ತನೆಯಾಗಬೇಕಿದೆ.

ವಿರಾಟ್: ನಿಮ್ಮ ಕಾರ್ಯಕ್ರಮದಲ್ಲಿ ಯುವಜನರನ್ನೇ ಮುಖ್ಯ ಗುರಿಯಾಗಿಟ್ಟುಕೊಂಡಿರಲು ಕಾರಣ?

ಡಾ. ಆಳ್ವ: ಯುವಜನತೆ ದಾರಿ ತಪ್ಪುತ್ತಿದೆ ಎಂದು ಹೇಳುವವರು ನಮ್ಮ ನಡುವೆ ಸಾಕಷ್ಟು ಜನ ಇದ್ದಾರೆ. ಆದರೆ ಸರಿಯಾದ ದಾರಿ ಯಾವುದು? ಈ ದೇಶದ ನೈಜ ಪರಂಪರೆ ಯಾವುದು? ಎನ್ನುವುದನ್ನು ಅವರಿಗೆ ತಿಳಿಸಿಕೊಡುವ ಸರಿಯಾದ ಜನರು ನಮ್ಮ ನಡುವೆ ಎಷ್ಟು ಜನರಿದ್ದಾರೆ? ಈ ದೇಶವನ್ನು ಅರ್ಥ ಮಾಡಿಕೊಳ್ಳುವ ಉದ್ದೇಶದಿಂದ, ಇಲ್ಲಿನ ಜನ-ಸಮುದಾಯವನ್ನು ಅರ್ಥಮಾಡಿಕೊಳ್ಳುವ ಉದ್ದೇಶದಿಂದ ಇಲ್ಲಿಯ ಸಾಹಿತ್ಯ, ಸಂಸ್ಕೃತಿ, ನಾಡು, ನುಡಿಯ ಕುರಿತು ಪ್ರೀತಿಯೋ - ಜಿಜ್ಞಾಸೆಯೋ ಹುಟ್ಟುವ ಪ್ರಯತ್ನವನ್ನು ನಾವು ಈ ಸಮ್ಮೇಳನದ ಮೂಲಕ ವಿದ್ಯಾರ್ಥಿ - ವಿದ್ಯಾರ್ಥಿನಿಯರನ್ನು ಉದ್ದೇಶಿಸಿಯೇ ಮಾಡುತ್ತೇವೆ.

ವಿರಾಟ್: ಇಡೀ ಸಮ್ಮೇಳನ ಇಷ್ಟೊಂದು ಅಚ್ಚುಕಟ್ಟಾಗಿ ನಡೆಯುವ ಗುಟ್ಟು ಏನು?

ಡಾ. ಆಳ್ವ: ಇಡೀ ಸಮ್ಮೇಳನದ ಯಶಸ್ಸಿಗೆ ನಾವು ಕಟ್ಟುನಿಟ್ಟಾಗಿ ಅಳವಡಿಸಿಕೊಂಡು ಬರುತ್ತಿರುವ ಸಮಯ ಪ್ರಜ್ಞೆಯೇ ಕಾರಣವೆಂದು ನನಗೆ ಅನ್ನಿಸಿದೆ. ಸ್ಮಾರಂಭ ಕ್ಲಪ್ತ ಸಮಯಕ್ಕೆ ಆರಂಭಗೊಳ್ಳಬೇಕು ಎಂಬ ಉದ್ದೇಶದಿಂದ ನಮ್ಮ ಶಿಕ್ಷಣ ಪ್ರತಿಷ್ಠಾನದಿಂದ ನಡೆವ ಯಾವ ಕಾರ್ಯಕ್ರಮವೇ ಇರಲಿ ಸರಿಯಾದ ಸಮಯಕ್ಕೆ ಆರಂಭ, ಮುಕ್ತಾಯ. ಕಾಯುವ ಪ್ರಶ್ನೆಯೇ ಇಲ್ಲ. ಸಮ್ಮೇಳನಕ್ಕೆ ಬಂದ, ಅತಿಥಿಗಳು, ಹಿರಿಯರು, ನಾಗರೀಕರು ಇದಕ್ಕಾಗಿ ನಮ್ಮನ್ನು ಬೆಂಬಲಿಸಿದ್ದಾರೆ. ಸಮಯಪಾಲನೆಯ ಈ ಶಿಸ್ತಿನಿಂದಾಗಿ ಯಾವುದೇ ಗೊಂದಲವಿಲ್ಲದೇ ಸಮ್ಮೇಳನ ಆಯೋಜಿಸುವುದು ನಮಗೆ ಸಾಧ್ಯವಾಗಿದೆ.

ವಿರಾಟ್: ಇದು ಸರಕಾರಿ ಪ್ರಾಯೋಜಿತ ಕನಾಡ ಸಾಹಿತ್ಯ ಸಮ್ಮೇಳನಕ್ಕೆ ಪರ್ಯಾಯವಾ?!

ಡಾ. ಆಳ್ವ: ಆಳ್ವಾಸ್ ನುಡಿಸಿರಿ ಯಾವುದಕ್ಕೂ ಪರ್ಯಾಯ ಅಲ್ಲ. ಕನ್ನಡ ಸಾಹಿತ್ಯ ಪರಿಷತ್ತಿನ ಸಮ್ಮೇಳನ ಮತ್ತು ನಾಡಿನೆಲ್ಲೆಡೆ ನಡೆಯುತ್ತಿರುವ ಸಾಹಿತ್ಯ ಸಮ್ಮೇಳನಗಳು ಯಾವ ಉದ್ದೇಶಕ್ಕಾಗಿ ನಡೆಯುತ್ತಿವೆಯೋ ಅದೇ ಉದ್ದೇಶವನ್ನು ಗಟ್ಟಿಗೊಳಿಸುವುದಕ್ಕಾಗಿ ನುಡಿಸಿರಿಯು ಅಡೆಯುತ್ತಿದೆ. ಕನ್ನಡ ಮನಸ್ಸನ್ನು ಜಾಗೃತಗೊಳಿಸುವ ಚಿರಂತನ ಚಳವಳಿಯ ಪೂರಕ ಸಮ್ಮೇಳನವಿದು. ಕನ್ನಡದ ನೆಲದಿಂದಲೇ ವಿಶ್ವಪ್ರಜ್ಞೆಗೆ ಸ್ಪಂದಿಸಬೇಕಾದ ಅಗತ್ಯವನ್ನು ಒತ್ತಿ ಹೇಳುವ ಸಮ್ಮೇಳನವಿದು.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
these words are really said by Mr.Alva??
or u editted the interview?!!??
ಅನಾಮಧೇಯಹೇಳಿದ್ದಾರೆ…
these words are really said by Mr.Alva??
or u editted the interview?!!??

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ