ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜೂನ್, 2009 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೀನದಯಾಳರ ನಿರಹಂಕಾರ

ಅದು ೧೯೬೦ರ ದಶಕ. ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರು ಭಾರತೀಯ ಜನ ಸಂಘದ ಕೆಲವು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದರು. ಹಾಗೆಯೇ ಪಕ್ಷದ ಮತ್ತು ಸಂಘದ ಕೆಲ ಹಿರಿಯರ ಸೂಚನೆಯ ಮೇರೆಗೆ ೧೯೬೦ರಲ್ಲಿ ’ಆರ್ಗನೈಸರ್’ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಕಾಲ ಅದು. ಆಡ್ವಾಣಿಯವರಿಗೆ ಜನಸಂಘದ ಮಾರ್ಗದರ್ಶಕರಲ್ಲೊಬ್ಬರಾಗಿದ್ದ, ಸಂತಸದೃಶ ಜೀವನ ನಡೆಸುತ್ತಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರೊಂದಿಗೆ ಆತ್ಮೀಯ ಸಂಬಂಧವಿತ್ತು. ತಮ್ಮ ಆತ್ಮಕಥೆಯಲ್ಲಿ ಆಡ್ವಾಣಿ ಪಂಡಿತ ದೀನದಯಾಳ ಉಪಾಧ್ಯಾಯರ ಬಗ್ಗೆ ಹೀಗೆ ಬರೆದಿದ್ದಾರೆ: "ಅವರು ತಮ್ಮ ಬಗ್ಗೆ ಮಾತಾಡುವುದನ್ನು ಮುಜುಗರ ಎಂದು ತಿಳಿದಿದ್ದರು. ಅವರು ಹೇಳಿದ್ದನ್ನು ನಡೆಯಲ್ಲಿ ತೋರಿಸಿದರು. ಅವರ ನಾಯಕತ್ವದ ಬೇರುಗಳಿದ್ದದ್ದೇ ಎಲ್ಲರನ್ನು ಅಪ್ಪಿಕೊಳ್ಳುವ ದಾರ್ಶನಿಕತೆಯಲ್ಲಿ. ಅವರು ಮಾನವೀಯತೆಯ ಸಾಕಾರಮೂರ್ತಿ. ಅಧಿಕಾರದ ಬಗ್ಗೆ ನಿಕೃಷ್ಟತೆ ಇದ್ದ ರಾಜಕಾರಣಿ ಅವರಾಗಿದ್ದರು. ಅವರೇ ಪಂಡಿತ ದೀನದಯಾಳ್‌ಜೀ" ಉಪಾಧ್ಯಾಯರೊಂದಿಗೆ ತಮಗಿದ್ದ ಆತ್ಮೀಯತೆಯನ್ನು ಬಳಸಿಕೊಂಡು ಆಡ್ವಾಣಿಯವರು ಒಮ್ಮೆ ಅವರಲ್ಲಿ ಆರ್ಗನೈಸರ್ ಪತ್ರಿಕೆಗೆ ಒಂದು ಅಂಕಣವನ್ನು ಬರೆಯಲಾರಂಭಿಸುವಂತೆ ಕೇಳಿಕೊಂಡರು. ಆಡ್ವಾಣಿಯವರ ಒತ್ತಾಯದ ಮೇರೆಗೆ ಉಪಾಧ್ಯಾಯರು ’ರಾಜಕೀಯ ಡೈರಿ’ ಎಂಬ ಅಂಕಣವನ್ನು ಆರ್ಗನೈಸರ್‌ಗೆ ಬರೆಯಲಾರಂಭಿಸಿದರು. ಆಯಾ ವಾರದ ವಿವಿಧ ರಾಜಕೀಯ ವ