ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕನ್ನಡನಾಡು ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಕನ್ನಡದ ಸಮಸ್ತ ಬರಹಗಾರರಿಗೆ...

ಆದರಪೂರ್ವಕ ನಮನಗಳು. ಕನ್ನಡ ಬರಹಗಾರರು ಅಂತ ನಾನು ಸಂಬೋಧಿಸಿದ್ದು ಪತ್ರಿಕೆ-ನಿಯತಕಾಲಿಕೆಗಳ ಮೂಲಕ, ಬ್ಲಾಗು/ವೆಬ್‌ಸೈಟುಗಳ ಮೂಲಕ, ಪುಸ್ತಕಗಳ ಮೂಲಕ ಕನ್ನಡದಲ್ಲಿ ಬರೆಯುತ್ತಿರುವ ಪ್ರತಿಯೊಬ್ಬ ಹಿರಿಕಿರಿಯ ಬರಹಗಾರರನ್ನು. ಒಂದು ಘಟನೆ ನೆನಪಿಗೆ ಬರುತ್ತಿದೆ. ಕನ್ನಡದ ಹೆಮ್ಮೆಯ ಬರಹಗಾರ ಪೂರ್ಣಚಂದ್ರ ತೇಜಸ್ವಿ ಅವರಿಗೆ ಸಂಬಂಧಿಸಿದ್ದು. ಹೊಸ ಸಹಸ್ರಮಾನವನ್ನು ವಿಭಿನ್ನ ರೀತಿಯಲ್ಲಿ ಸ್ವಾಗತಿಸಲೆಂದು ತೇಜಸ್ವಿ ‘ಮಿಲೆನಿಯಮ್’ ಸರಣಿ ಪುಸ್ತಕಗಳನ್ನು ಬರೆದರಷ್ಟೇ. ವಿಶ್ವದ ಅಸಂಖ್ಯ ಕೌತುಕಗಳನ್ನು, ವಿವಿಧ ನಾಗರೀಕತೆಗಳು ನಡೆಸಿದ ‘ಜೀವನ ಸಂಗ್ರಾಮ’ಗಳನ್ನು, ಪ್ರಪಂಚ ಕಂಡ ಮಹಾಯುದ್ಧಗಳನ್ನು ಕನ್ನಡದ ಮೂಲಕವೇ ಓದುಗರಿಗೆ ಪರಿಚಯಿಸುವ ವಿನೂತನ ಪ್ರಯತ್ನವದು. ಕನ್ನಡ ಪುಸ್ತಕಲೋಕ ಕಂಡ ಬಹಳ ವಿಶಿಷ್ಟ ಕೈಂಕರ್ಯ ತೇಜಸ್ವಿ ಮತ್ತು ಅವರ ಸಂಗಡಿಗರು ಹೊರತಂದ ಮಿಲೆನಿಯಮ್ ಸರಣಿ ಪುಸ್ತಕಗಳು. ತೇಜಸ್ವಿಯವರ ಈ ಪುಸ್ತಕ ಸರಣಿಯ ಪ್ರಕಟಣೆ ಆರಂಭವಾಗುತ್ತಿದ್ದಂತೆಯೇ ಒಂದು ವರ್ಗದಿಂದ ಕೂಗು ಆರಂಭವಾಯಿತು. ‘ತೇಜಸ್ವಿಯವರ ಸೃಜನಶೀಲ ಬರವಣಿಗೆ ಸತ್ತುಹೋಗುತ್ತಿದೆ’ ಎಂದು ಕೆಲವರು ವಾದಿಸತೊಡಗಿದರು. ಆದರೆ ಟೀಕೆಟಿಪ್ಪಣಿಗಳಿಗೆ ಸೊಪ್ಪು ಹಾಕದ ತೇಜಸ್ವಿ ತಮ್ಮ ಕಾಯಕ ಮುಂದುವರೆಸಿದರು; ಮಿಲೆನಿಯಮ್ ಸರಣಿಯ 16 ಪುಸ್ತಕಗಳನ್ನು ಕನ್ನಡಿಗರಿಗೆ ಕೊಟ್ಟರು. ಕನ್ನಡಿಗರಿಗೆ ವಿಶ್ವದರ್ಶನ ಮಾಡಿಸಿದ ಪುಣ್ಯ ಅವರದ್ದು. ಅಂದಹಾಗೆ, ಯಾವುದು ಸೃಜನಶೀಲ ಸಾಹಿತ್...

ಅನ್ನ ಕೊಡುವ ಭಾಷೆಯಾಗಲಿ ಕನ್ನಡ

ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವ ಬರಲಿದೆ . ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕುರಿತು ಭರ್ಜರಿ ಚರ್ಚೆಗಳು ರಾಜ್ಯದಾದ್ಯಂತ ನಡೆಯಲಿವೆ . ಹಾಗೆಯೇ ಕೆಲವು ದಿನಗಳಲ್ಲಿ ಆ ಚರ್ಚೆಗಳು ಮನಸ್ಸಿನ ಮೂಲೆ ಸೇರಲಿವೆ . ಅದೇನೇ ಇರಲಿ , ಈ ಕೆಳಗಿನ ಒಂದಷ್ಟು ಸಂಗತಿಗಳನ್ನು ಗಮನಿಸಿ . ಕರ್ನಾಟಕದಲ್ಲಿ ಇಂಗ್ಲಿಷ್ ಗೆಂದೇ ಪ್ರತ್ಯೇಕ ವಿಶ್ವವಿದ್ಯಾಲಯ ಇಲ್ಲ . ಇಂಗ್ಲಿಷ್ ಪುಸ್ತಕ ಪ್ರಾಧಿಕಾರ , ಇಂಗ್ಲಿಷ್ ಸಾಹಿತ್ಯ ಪರಿಷತ್ತು , ಇಂಗ್ಲಿಷ್ ಕಾವಲು ಪಡೆ , ಇಂಗ್ಲಿಷ್ ಮತ್ತು ಸಂಸ್ಕೃತಿ ಇಲಾಖೆ ... ಇವ್ಯಾವುದೂ ಇಲ್ಲ . ಯಾವುದೇ ರೀತಿಯ ಸರಕಾರಿ ಕೃಪೆ ಮತ್ತು ಮೇಲೆ ತಿಳಿಸಿದ ಅನೇಕ ಇಲ್ಲಗಳ ಹೊರತಾಗಿಯೂ ಇವತ್ತು ಇಂಗ್ಲಿಷ್ ಭಾಷೆ ಕನ್ನಡ ಭಾಷೆಗೆ ಸಡ್ಡು ಹೊಡೆದು ನಿಂತಿದೆ . ರಾಜಧಾನಿಯಲ್ಲೇ ಇಬ್ಬರು ಅಪರಿಚಿತರು ಎದುರಾದರೆ ಮಾತನಾಡುವುದು ಇಂಗ್ಲಿಷ್ ನಲ್ಲಿ ಎಂಬಷ್ಟರ ಮಟ್ಟಿಗೆ ಈ ಭಾಷೆ ಬೆಳೆದಿದೆ . ಇದಕ್ಕೆ ಕಾರಣ ಹುಡುಕುವುದು ಕಷ್ಟದ ಸಂಗತಿಯೇನಲ್ಲ . ಕೆಲವೇ ವರ್ಷಗಳ ಹಿಂದಿನವರೆಗೆ ಒಂದು ರೀತಿಯಲ್ಲಿ ಫ್ಯಾಷನ್ ಮಾತ್ರ ಆಗಿದ್ದ ಇಂಗ್ಲಿಷ್ ಇವತ್ತು ತನ್ನ ಭಾಷಿಗನನ್ನು ಹೊಟ್ಟೆ ಹೊರೆಯುವ ಮಟ್ಟಕ್ಕೆ ಬೆಳೆದುನಿಂತಿದೆ . ಇವತ್ತು ಮುಗಿಬಿದ್ದು ಇಂಗ್ಲಿಷ್ ಕಲಿಯುತ್ತಿರುವವರೆಲ್ಲರೂ ಇಂಗ್ಲಿಷ್ ಸಾಹಿತ್ಯ , ಷೆಕ್ಸ್ ಪಿಯರ್ ಮೇಲಿನ ಪ್ರ...

ಕನ್ನಡದ ನೆಲದಿಂದಲೇ...

(ನುಡಿಸಿರಿ - ೨೦೦೭ ರ ಸಂದರ್ಭದಲ್ಲಿ ಕನ್ನಡದ ವಾರಪತ್ರಿಕೆಯೊಂದರಲ್ಲಿ ಪ್ರಕಟವಾಗಿದ್ದ ನುಡಿಸಿರಿಯ ರೂವಾರಿ ಡಾ. ಮೋಹನ್ ಆಳ್ವರ ಸಂದರ್ಶನ. ’ನುಡಿಸಿರಿ - ೨೦೦೭’ ಮುಗಿದು ಹಲವು ತಿಂಗಳುಗಳೇ ಕಳೆದಿರಬಹುದು. ಆದರೆ ಆಳ್ವರು ಸಂದರ್ಶನದಲ್ಲಿ ತಿಳಿಸಿದ ವಿಚಾರಗಳು ಯಾವತ್ತಿಗೂ ವಿಚಾರಯೋಗ್ಯ.) ಕನ್ನಡ ನಾಡಿನಲ್ಲಿ ಸಾಹಿತ್ಯ, ಸಂಸ್ಕೃತಿಗಳ ಬಗ್ಗೆ ಪ್ರೀತಿ ಅಭಿಮಾನ ಇರುವವರಿಗೇನೂ ಕೊರತೆಯಿಲ್ಲ. ಪ್ರತಿ ಹಳ್ಳಿಯಲ್ಲೂ ಅಂಥವರಿದ್ದಾರೆ. ಆ ಬಗ್ಗೆ ಅನುಮಾನ ಬೇಡ. ಆದರೆ, ಸಾಮಾನ್ಯವಾಗಿ, ಸಾಹಿತ್ಯದ ಬಗ್ಗೆ ಅಪಾರವಾದ ಆಸಕ್ತಿಯಿರುವ ಜನರ ಬಳಿ ಸಾಕಷ್ಟು ಹಣ ಇರುವುದಿಲ್ಲ. ಇನ್ನು ಸಾಕಷ್ಟು ಹಣ ಇರುವವರ ಬಳಿ ನುಡಿಸಿರಿಯಂತಹ ಭವ್ಯ ಕಾರ್ಯಕ್ರಮವನ್ನು ನಡೆಸುವ ಆಸಕ್ತಿಯಿರುವುದಿಲ್ಲ. ಆದರೆ ಆಳ್ವಾಸ್ ನುಡಿಸಿರಿಯ ರೂವಾರಿ ಡಾ. ಮೋಹನ್ ಆಳ್ವ ಮಾತ್ರ ಈ ಮಾತಿಗೆ ಅಪವಾದ. ಅವರಲ್ಲಿ ಕನ್ನಡ ನಾಡು-ನುಡಿಯ ಕುರಿತು ಅಪಾರವಾದ ಪ್ರೀತಿಯಿದೆ. ಕಳಕಳಿಯಿದೆ. ಜೊತೆಗೆ ನುಡಿಸಿರಿಯಂತಹ ಅನುಪಮ ಕಾರ್ಯಕ್ರಮವನ್ನು ನಡೆಸಲು ಬೇಕಾದ ಆರ್ಥಿಕ ಸಂಪನ್ಮೂಲ ಮತ್ತು ಮಾನವ ಸಂಪನ್ಮೂಲವೂ ಇದೆ. ಇವೆಲ್ಲದಕ್ಕಿಂತ ಮಿಗಿಲಾಗಿ ಸಾಂಸ್ಕೃತಿಕ ಮತ್ತು ಸಾಹಿತ್ಯಿಕ ಕಾರ್ಯಕ್ರಮಗಳನ್ನು ತಪಸ್ಸಿನಂತೆ ನಡೆಸಿಕೊಂಡು ಬರುವ ಶ್ರದ್ಧೆಯಿದೆ. ಆಳ್ವಾಸ್ ನುಡಿಸಿರಿಯನ್ನು ವರ್ಷವರ್ಷವೂ ನಡೆಸುವುದರ ಹಿಂದಿರುವ ಪ್ರೇರಣೆಯ ಕುರಿತು ’ವಿರಾಟ್’ ಡಾ. ಆಳ್ವರನ್ನು ಪ್ರಶ್ನಿಸಿತು: ವಿರಾಟ್: ನಿಮಗೆ ನುಡಿಸಿರಿಯಂತಹ ಸಾ...