ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇಶವುಳಿಸಲು ಇನ್ನೊಬ್ಬ ಸರ್ದಾರ್ ಪಟೇಲ್ ಬೇಕು!

ಪ್ರಾಮಾಣಿಕವಾಗಿ ಒಮ್ಮೆ ಪ್ರಶ್ನಿಸಿಕೊಳ್ಳಿ. ಭಾರತದ ರಾಜಧಾನಿ ದೆಹಲಿಯಲ್ಲಿ ನಿಜಕ್ಕೂ ಒಂದು ಚುನಾಯಿತ ಸರಕಾರ ಇದೆಯಾ? ಆ ಸರಕಾರದಲ್ಲಿ ರಕ್ಷಣಾ ಮಂತ್ರಿ ಮತ್ತು ಗೃಹ ಮಂತ್ರಿಗಳು ಇದ್ದಾರಾ? ಅವರೆಲ್ಲರ ಉಸ್ತುವಾರಿಯನ್ನು ನೋಡಿಕೊಳ್ಳಲು ಪ್ರಧಾನ ಮಂತ್ರಿ ಅಂತ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾನಾ? ಒಂದು ವೇಳೆ ನಮ್ಮ ದೇಶಕ್ಕೆ ಒಬ್ಬ ಪ್ರಧಾನಿ, ಒಬ್ಬ ಗೃಹ ಮಂತ್ರಿ, ಮತ್ತೊಬ್ಬ ರಕ್ಷಣಾ ಮಂತ್ರಿ ಅಂತ ಇದ್ದಾರೆ ಅಂತಾದರೆ ನಿಜಕ್ಕೂ ಅವರು ಗಂಡಸರಾ?! ಮೇಲೆ ಕೇಳಿದ ಪ್ರಶ್ನೆಗಳು ಬಾಲಿಶ ಅನಿಸಬಹುದು. ಅತಿರೇಕದ್ದು ಅಂತಲೂ ಕೆಲವರಿಗೆ ಅನಿಸಿರಬಹುದು. ಕಾಂಗ್ರೆಸ್ ಎಂಬ ರಾಜಕೀಯ ಎದೆಗಾರಿಕೆಯೇ ಇಲ್ಲದ ಪಕ್ಷಕ್ಕೆ ೨೦೦೪ರ ಚುನಾವಣೆಯಲ್ಲಿ ಓಟು ಹಾಕಿದವರಿಗೆ ಕೋಪ ನೆತ್ತಿಗೇರಿರಬಹುದು. ಆದರೆ ಇಂಥ ಪ್ರಶೆಗಳನ್ನು ಕೇಳುವುದು ಅನಿವಾರ್ಯವಾಗಿದೆ. ಭಾರತದ ಪಾಲಿಗೆ ಮತೀಯ ಭಯೋತ್ಪಾದನೆಯೆಂಬುದು ಖಂಡಿತಾ ಹೊಸದಲ್ಲ. ಕೇಂದ್ರದಲ್ಲಿ ಯಾವ ಪಕ್ಷದ ಸರಕಾರವಿದ್ದರೂ ಭಾರತದ ಮೇಲೆ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ತೀವ್ರತೆಯೇನೂ ಕಡಿಮೆಯಾಗಿಲ್ಲ. ಆದರೆ ಒಮ್ಮೆ ಯೋಚಿಸಿ. ೨೦೦೪ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಸೋನಿಯಾ ಮೈನೋ ನೇತೃತ್ವದ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಂದಾದರೂ ಪ್ರಾಮಾಣಿಕ ಪ್ರಯತ್ನ ಮಾಡಿದೆಯಾ? ಇಲ್ಲ. ಏಕೆಂದರೆ ಇವತ್ತಿನವರೆಗೂ ಭಯೋತ್ಪಾದಕ ದಾಳಿಯಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಸತ್ತಿಲ್ಲ. ದೇಶದ ಆರ್ಥಿಕ

ಬಂದೂಕಿನಿಂದ ದೇಶದ ಸಮಸ್ಯೆಗೆ ಉತ್ತರ ಹುಡುಕಲು ಸಾಧ್ಯವಿಲ್ಲ

ಹೊರನಾಡಿನ ಸಮೀಪ ನಡೆದ ಪೋಲೀಸ್ ಎನ್‌ಕೌಂಟರಿನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದು, ಶಾಂತ ಮಲೆನಾಡಿನ ಹಸಿರು ನೆಲ ಬಿಸಿ ರಕ್ತದಿಂದ ಕೆಂಪಾಗಿದ್ದು ಇಡೀ ರಾಜ್ಯಕ್ಕೇ ಗೊತ್ತಾಗಿದೆ. ಇದೇ ಎನ್‌ಕೌಂಟರಿನಲ್ಲಿ ರಾಜ್ಯ ನಕ್ಸಲ್ ನಿಗ್ರಹ ದಳದ ಗುರುಪ್ರಸಾದ್ ಕೂಡ ಮೃತರಾಗಿದ್ದಾರೆ. ಅವರ ಕುಟುಂಬದ ನೋವಿಗೆ ಸಾಂತ್ವನ ಹೇಳಲು ಪದಗಳಿಲ್ಲ. ಮೃತ ನಕ್ಸಲರ ಪೈಕಿ ಒಬ್ಬನಾದ ಮನೋಹರ ಹಿಂದೊಮ್ಮೆ ವೃತ್ತಿಯಿಂದ ಪತ್ರಕರ್ತನಾಗಿದ್ದ. ಸಾಕಷ್ಟು ಓದಿಕೊಂಡಿದ್ದ. ಇದಲ್ಲದೆ ನವಕರ್ನಾಟಕ ಪ್ರಕಾಶನದ ’ಹೊಸತು’ ಪತ್ರಿಕೆಗೆ ಆರ್ಥಿಕ ಸಂಕಷ್ಟ ಮತ್ತು ಜಾಗತೀಕರಣಗಳಂತಹ ಗಹನ ವಿಚಾರಗಳ ಬಗ್ಗೆ ಲೇಖನವನ್ನೂ ಬರೆದಿದ್ದ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಶಿವಮೊಗ್ಗದಲ್ಲಿ ಈತ ಬಿಎಸ್ಸಿ ಓದುತ್ತಿದ್ದ ದಿನಗಳಿಂದಲೇ ಅನೇಕ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಎಂದೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಇನ್ನೊಬ್ಬ ಮೃತ ನಕ್ಸಲ ಮೂಡಿಗೆರೆ ತಾಲೂಕು ಉದಸೆ ಗ್ರಾಮದ ದೇವಯ್ಯ ಕೂಡ ಬಿಎ ಪದವಿ ಪಡೆದಿದ್ದ. ಉದಸೆ ಊರಿನಲ್ಲಿ ಆತನೇ ಹೆಚ್ಚು ವಿದ್ಯಾವಂತ ಎಂದು ಹೇಳಲಾಗಿದೆ. ಇನ್ನೊಬ್ಬ ಮೃತ ನಕ್ಸಲ ನಾಗಸಾಲ್ಮಕ್ಕಿಯ ರವಿ ಕೇವಲ ಹತ್ತೊಂಬತ್ತು ವರ್ಷದ ಎಳೆಯ. ಮೊನ್ನೆ ನಡೆದ ಎನ್‌ಕೌಂಟರಿನಲ್ಲಿ ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕಿದ್ದ ಇಂಥ ಯುವಕರೇ ಹತ್ಯೆಯಾಗಿದ್ದನ್ನು ನೋಡಿದರೆ ಎಂಥವನಿಗಾದರೂ ಒಮ್ಮೆ ಕಣ್ಣೀರು ಬಂದೇ ಬರುತ್ತದೆ. ಅದರಲ್ಲೂ ಕೈಯಲ್ಲಿ ಪೆನ್ ಹಿಡಿದುಕೊಂಡು, ನೊಂದವರ ಪಾಲಿಗೆ ಧ್ವನಿಯಾಗಬ

’ಹಿಂದೂ’ ಎನ್ನುವುದು ಕೇವಲ ಧರ್ಮವಲ್ಲ, ಅದೊಂದು ಜೀವನ ಪದ್ಧತಿ

ಮೊಟ್ಟಮೊದಲನೆಯದಾಗಿ ಮತಾಂತರವೆಂಬ ಪೀಡೆಯ ಬಗ್ಗೆ ಆರೋಗ್ಯಕರ ಚರ್ಚೆಯೊಂದನ್ನು ಆರಂಭಿಸಿದ್ದಕ್ಕಾಗಿ ವಿಜಯ ಕರ್ನಾಟಕದ ಹೆಮ್ಮೆಯ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಮತ್ತು ಅದರ ವಿ.ಕ ಬಳಗಕ್ಕೆ ಅಭಿನಂದನೆಗಳು. ಆ ದಿನ ವಿಜಯ ಕರ್ನಾಟಕದ ಮೊದಲ ಪುಟದಲ್ಲಿ ಭೈರಪ್ಪನವರ ಲೇಖನವನ್ನು ನೋಡಿದಾಗಲೇ ಇದು ಸಾಮಾನ್ಯ ವಿಷಯವಲ್ಲ, ಭೈರಪ್ಪನವರು ಎಂದಿನಂತೆ ವರ್ಷಗಳಕಾಲ ಅಧ್ಯಯನ ಮಾಡಿಯೇ ಇಂಥದ್ದೊಂದು ಸಾಹಸ ಮಾಡಿದ್ದಾರೆ ಅನಿಸಿತು. ವಿ.ಕ ಕೂಡ ತಾನು ಈ ವಿಷಯದ ಮೇಲಣ ಚರ್ಚೆಗೆ ವೇದಿಕೆಯೇ ಹೊರತು ವಕ್ತಾರ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಹಾಗಾಗಿ ಈ ವಿಚಾರದ ಬಗ್ಗೆ ಒಂದು ಆರೋಗ್ಯಕರ ಚರ್ಚೆ ನಡೆಯಬಹುದೆಂಬ ನಿರೀಕ್ಷೆ ಖಂಡಿತಾ ಎಲ್ಲರಿಗೂ ಇತ್ತು. ಅದು ಒಂದು ಹಂತದ ಮಟ್ಟಿಗೆ ನಿಜವಾಗಿದೆ ಕೂಡ. ಆದರೆ ವಿಷಯ ಅದಲ್ಲ. ಭೈರಪ್ಪನವರು ಬರೆದ ಲೇಖನ ಓದಿದರೇ ಗೊತ್ತಾಗುತ್ತದೆ; ಇದು ಒಂದೋ ಎರಡೋ ದಿನದಲ್ಲಿ ಕುಳಿತು ಬರೆದದ್ದಲ್ಲ. ಬದಲಿಗೆ ಭೈರಪ್ಪನವರು ಸಾಕಷ್ಟು ಪರಿಶ್ರಮ ಪಟ್ಟು, ಅಧ್ಯಯನ ಮಾಡಿ ಬರೆದಿದ್ದಾರೆ ಅನ್ನುವುದು ಯಾರಿಗೂ ತಿಳಿಯುತ್ತದೆ. ಅದಲ್ಲದೆ ಅವರು ತಮ್ಮ ಲೇಖನದ ಕೊನೆಯಲ್ಲಿ ಕೊಟ್ಟಿರುವ ಆಕರ ಗ್ರಂಥಗಳ ಪಟ್ಟಿಯಲ್ಲಿರುವುದೆಲ್ಲ ಅರುಣ್ ಶೌರಿ, ನವರತ್ನ. ಎಸ್. ರಾಜಾರಾಮ್, ಸೀತಾರಾಮ್ ಗೋಯೆಲ್‌ರಂಥ ಖ್ಯಾತ ಸಂಶೋಧಕರು ಬರೆದದ್ದೇ. ಅವುಗಳಲ್ಲಿ ಯಾವೊಂದೂ ನಿರ್ಲಕ್ಷಿಸುವಂಥದ್ದಲ್ಲ. ಅದಿರಲಿ. ಈಗ ನೀವೇ ಹೇಳಿ... ಭೈರಪ್ಪನವರ ತಾರ್ಕಿಕ ಲೇಖನಕ್ಕೆ ಬಂದಿರುವ ಕೆಲವ