ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮಾರ್ಚ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪತ್ರಿಕೋದ್ಯಮವೆಂಬ ಮಾಯಾಮೃಗದ ಬೆನ್ನೇರಿ...

ಕಣ್ಣುಗಳಲ್ಲಿ ಬೆಟ್ಟದಷ್ಟು ಆಸೆಗಳು, ಮನಸ್ಸಿನಲ್ಲಿ ಸ್ಪಷ್ಟವಾದ ಗುರಿ, ತೀಕ್ಷ್ಣ ಬುದ್ಧಿ... ಎಲ್ಲಾ ಇತ್ತು ಅವನಿಗೆ. ಸುಂದರ ಭವಿಷ್ಯದ ಕನಸಿಟ್ಟುಕೊಂಡು ತುಂಬ ಪ್ರೀತಿಂದ ಪದವಿಯಲ್ಲಿ ಪತ್ರಿಕೋದ್ಯಮವನ್ನು ಆಯ್ದುಕೊಂಡ. ತರಗತಿಗಳನ್ನು ಎಂದೂ ತಪ್ಪಿಸಲಿಲ್ಲ. ಅವನ ಶಿಸ್ತಿಗೆ, ವಿನಯಕ್ಕೆ ಎಲ್ಲ ಅಧ್ಯಾಪಕರೂ ತಲೆದೂಗೊತ್ತಿದ್ದರು. ಪರೀಕ್ಷೆಯಲ್ಲೂ ಹಾಗೇ, ಸದಾ ಪ್ರಥಮ ಸ್ಥಾನ. ಸದಾ ಎಲ್ಲಾ ವಿಷಗಳಲ್ಲೂ ತೊಂಭತ್ತು ತೊಂಭತ್ತೈದು ಅಂಕಗಳು. ಯಾರೊಂದಿಗೂ, ಎಂದಿಗೂ ಅಸಭ್ಯವಾಗಿ ವರ್ತಿಸಲಿಲ್ಲ. ಒಬ್ಬ ಸಂಭಾವಿತ ವಿದ್ಯಾರ್ಥಿಗಿರಬೇಕಾದ ಎಲ್ಲಾ ಅರ್ಹತೆಗಳೂ ಅವನಲ್ಲಿದ್ದವು. ಪರೀಕ್ಷೆಯಲ್ಲೇನೋ ಸರಾಸರಿ ತೊಂಭತ್ತೈದು ಅಂಕಗಳಿಸಿ ತೇರ್ಗಡೆಯಾಗಿಬಿಟ್ಟ. ನಂತರ ಕೆಲಸಕ್ಕಾಗಿ ಅಲೆದೂ ಅಲೆದೂ ಸುಸ್ತಾದ. ಅವನಿಗೆ ಯಾರಿಂದಲೂ ಅನ್ಯಾಯವಾಗಲಿಲ್ಲ. ಆತ ಯಾರಿಂದಲೂ ಮೋಸಹೋಗಲಿಲ್ಲ. ಆದರೆ ಅವನಿಗೆ ಅವನೇ ವಂಚನೆ ಮಾಡಿಕೊಂಡ. ಪತ್ರಿಕೋದ್ಯಮ ಪದವಿಗೆ ಸೇರಿ ವಿನಯ, ಶಿಸ್ತು, ಪ್ರೀತಿ, ಗೌರವಾದರ, ಜ್ಞಾನ ಹೀಗೆ ಹಲವಾರು ನೈತಿಕ ಮೌಲ್ಯಗಳನ್ನು ತನ್ನದಾಗಿಸಿಕೊಂಡ. ಒಳ್ಳೆಯದೇ. ಆದರೆ ಪತ್ರಕರ್ತನಾಗಬೇಕಾದವನಿಗೆ, ಪತ್ರಿಕೋದ್ಯಮವನ್ನು ಆಯ್ದುಕೊಂಡವನಿಗೆ ಇರಲೇಬೇಕಾದ ಬರವಣಿಗೆಯನ್ನು ಆತ ಒಲಿಸಿಕೊಳ್ಳಲೇ ಇಲ್ಲ. ಸದಾ ಹೊಸ ವಿಷಯಗಳನ್ನು ಅರಸುತ್ತ, ಅರಗಿಸುತ್ತ ಕುಳಿತನೇ ಹೊರತು ಆ ಎಲ್ಲಾ ವಿಷಯಗಳನ್ನು ಒಪ್ಪವಾಗಿ ಬರೆಯುವ ಗೋಜಿಗೇ ಹೋಗಲಿಲ್ಲ. ಈಗ ಆತ ಒಂದು ಸ್ಥಳೀಯ ಪತ್ರಿಕಾ ಕಛೇರಿಯಲ್ಲಿ