ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಕಥೆ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಒಂದು ಪುಟಾಣಿ ಕತೆ

ಒಂದಾನೊಂದು ಕಾಲದಲ್ಲಿ ಒಂದೂರಲ್ಲಿ ರಾಮ, ಭೀಮ ಮತ್ತು ಸೋಮ ಎಂಬ ಮೂವರು ಚಡ್ಡಿ ದೋಸ್ತಿಗಳು ಇದ್ದರು. ಅವರದ್ದು ಎಂದಿಗೂ ಮುರಿಯಲಾರದಂತಹ ಸ್ನೇಹ. ಅವರಲ್ಲಿ ಪ್ರತಿಯೊಬ್ಬರೂ ಒಂದೊಂದು ವಿಷಯದಲ್ಲಿ ಅಸಾಮಾನ್ಯ ಬುದ್ಧಿವಂತರು. ಹೀಗೆ ಒಂದು ದಿನ ಆ ಮೂವರು ಸ್ನೇಹಿತರು ಒಟ್ಟಿಗೆ ಅದು ಇದು ಅಂತ ಹರಟೆ ಹೊಡೆಯುತ್ತ ಚಹ ಕುಡಿಯುತ್ತ ಕುಳಿತಿದ್ದರು. ಆಗ ಅವರಲ್ಲಿ ಸೋಮನಿಗೆ ಜಗತ್ತಿನಲ್ಲಿ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳಲ್ಲಿ ಸರ್ವಕಾಲಗಳಲ್ಲಿಯೂ ಸತ್ಯವಾಗಿರುವ ಸಿದ್ಧಾಂತ ಯಾವುದು ಎಂಬ ಅನುಮಾನ ಮೂಡಿತು. ಸರಿ, ತನ್ನ ಅನುಮಾನ ಬಗೆಹರಿಸಿಕೊಳ್ಳಲು ಸೋಮ ತನ್ನ ಮನಸಿನಲ್ಲಿ ಮೂಡಿದ ಪ್ರಶ್ನೆಯನ್ನು ರಾಮ ಮತ್ತು ಭೀಮನ ಮುಂದೆ ಕೇಳುವ ನಿರ್ಧಾರಕ್ಕೆ ಬಂದ. "ನಿಮ್ಮ ಪ್ರಕಾರ ಜಗತ್ತಿನ ಪರಮ ಸತ್ಯ ಯಾವುದು ಮತ್ತು ಜಗತ್ತಿನಲ್ಲಿ ಇರುವ ಸಿದ್ಧಾಂತಗಳ ಪೈಕಿ ಸಾರ್ವಕಾಲಿಕ ಸತ್ಯವಾದ ಸಿದ್ಧಾಂತ ಯಾವುದು?" ಅಂತ ಸೋಮ ತನ್ನ ಪ್ರಶ್ನೆಯನ್ನು ಉಳಿದಿಬ್ಬರ ಮುಂದೆ ಇಟ್ಟ. ರಾಮ ಮತ್ತು ಭೀಮನ ಪೈಕಿ ರಾಮನಿಗೆ ಈ ಪ್ರಶ್ನೆಗೆ ಉತ್ತರಿಸುವುದು ಹೇಗೆ ಅನ್ನುವುದು ತಿಳಿಯಲಿಲ್ಲ. ಆದರೆ ಭೀಮ ಒಮ್ಮೆ ನಸುನಕ್ಕ. ಬಳಿಕ ಪ್ರಶ್ನೆ ಕೇಳಿದ ಸೋಮನ ಕಡೆಗೆ ತಿರುಗಿ "ನಿನ್ನ ಊಟ ಆಯಿತಾ?" ಎಂದು ಮರು ಪ್ರಶ್ನಿಸಿದ. "ಆಯಿತು" ಎಂಬ ಉತ್ತರ ಸೋಮನ ಕಡೆಯಿಂದ ಬಂತು. "ಹೊಟ್ಟೆ ತುಂಬಾ ಊಟ ಮಾಡಿದೆಯಾ? ಊಟ ತಕ್ಕಮಟ್ಟಿಗೆ ರುಚಿಯಾಗಿತ್...

ಯಾರು ಒಳ್ಳೆಯವರು?

ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಕತೆ. ಆತನ ಹೆಸರು ಸೋಮಣ್ಣ, ಅವನ ನೆರೆಮನೆಯವನ ಹೆಸರು ರಾಮಣ್ಣ. ಇಬ್ಬರೂ ವಾಸಿಸುತ್ತಿದ್ದದ್ದು ಕಾನೂರು ಎಂಬ ಪುಟ್ಟ ಹಳ್ಳಿಯಲ್ಲಿ. ಇಬ್ಬರೂ ಬ್ರಾಹ್ಮಣರು. ರಾಮಣ್ಣ ಬಹಳ ಸಾಧು ಸ್ವಭಾವದವ. ಯಾವತ್ತೂ, ಯಾರ ಮೇಲೂ ಹರಿಹಾಯ್ದವನಲ್ಲ. ದಿನದ ಮೂರೂ ಹೊತ್ತು ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡುತ್ತಿದ್ದ. ಮೊಸ, ಕಪಟ, ಜೂಜು... ಇದ್ಯಾವುದೂ ರಾಮಣ್ಣನಿಗೆ ಗೊತ್ತಿಲ್ಲ. ಹೆಂಡ, ಮಾಂಸ, ಪರಸ್ತ್ರೀ ಸಹವಾಸಗಳಿಂದ ರಾಮಣ್ಣ ಮೈಲು ದೂರ. ಒಟ್ಟಿನಲ್ಲಿ ಒಬ್ಬ ಸಂಭಾವಿತ, ಸುಭಗ ನಾಗರಿಕ. ರಾಮಣ್ಣನ ವ್ಯಕ್ತಿತ್ವಕ್ಕೆ ಸ್ವಲ್ಪ ಮಟ್ಟಿಗೆ ವಿರುದ್ಧವಾದ ವ್ಯಕ್ತಿತ್ವ ಸೋಮಣ್ಣನದು. ಸೋಮಣ್ಣನಿಗೆ ಸುಳ್ಳು ಹೇಳಲು, ಸೋಗು ಹಾಕಲು, ಇನ್ನೊಬ್ಬರ ಮೇಲೆ ದ್ವೇಷ ಕಾರಲು ಬರುತ್ತಿರಲಿಲ್ಲವಾದರೂ ಸ್ವಲ್ಪ ಮುಂಗೋಪ. ಅದಲ್ಲದೆ ಸೋಮಣ್ಣನಿಗೆ ಹೆಂಡ, ಮಾಂಸಗಳ ಸಹವಾಸ ಸ್ವಲ್ಪ ಜೋರಾಗಿಯೇ ಇತ್ತು. ಇಸ್ಪೀಟು ಕೂಡಾ ಜನ್ಮಜಾತ ಕಲೆಯೆಂಬಂತೆ ಬಂದಿತ್ತು. ಅದೇ ಕಾರಣದಿಂದ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸೋಮಣ್ಣ ಒಬ್ಬ ಫಟಿಂಗನಾಗಿದ್ದ. ಆತ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸಂಭಾವಿತನೂ ಅಲ್ಲ, ಸುಭಗನೂ ಅಲ್ಲ. ಸಾಧು ಸ್ವಭಾವದ ರಾಮಣ್ಣ ತನ್ನ ಜೀವಿತಾವಧಿಯ ಕಟ್ಟಕಡೆಯ ದಿನದವರೆಗೂ ಸಾಧು ಪ್ರಾಣಿಯಾಗಿಯೇ ಉಳಿದ. ಅವನಿಂದ ಯಾರಿಗೂ ಹಾನಿಯಾಗಲಿಲ್ಲ, ಯಾರಿಗೂ ಉಪಕಾರವೂ ಆಗಲಿಲ್ಲ. ಆದರೆ ರಾಜಾರೋಷವಾಗಿ ಹೆಂಡ, ಮಾಂಸಗಳ ಸಹವಾಸ ಮಾಡಿದ ಸೋಮಣ್ಣ ತನ್ನ ಜೀವಿತಾವಧಿಯ...

ಆಕೆಯನ್ನು ಏನಂತ ಕರೆಯಲಿ?

ಒಂದಾನೊಂದು ಕಾಲದಲ್ಲಿ ಇನ್ನೂ ಜನಿಸಿಲ್ಲದ ಆದರೆ ಇನ್ನೊಂದೆರಡು ದಿನಗಳಲ್ಲಿ ಜನಿಸಲಿಕ್ಕಿರುವ ಮಗುವೊಂದಿತ್ತು. ಆ ಮಗು ದೇವರನ್ನೊಮ್ಮೆ ಪ್ರಶ್ನಿಸಿತು. "ದೇವರೇ, ನೀನು ನನ್ನನ್ನು ನಾಳೆ ಭೂಮಿಗೆ ಕಳಿಸುತ್ತೀಯಾ ಎಂದು ಇಲ್ಲಿ (ಸ್ವರ್ಗ) ಇರುವವರೆಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ನಾನು ಇನ್ನೂ ತುಂಬಾ ಚಿಕ್ಕವ. ಅದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ನಿಸ್ಸಹಾಯಕ ಮಗು. ಹೀಗಿರುವಾಗ ನಾನು ಇಲ್ಲಿಂದ ಭೂಮಿಗೆ ಹೋಗಿ ಹೇಗೆ ಜೀವಿಸಲಿ?" ದೇವರು ಪ್ರೀತಿಯಿಂದ "ಮಗೂ, ಭೂಮಿಯ ಮೇಲೆ ತುಂಬಾ ದೇವತೆಗಳಿದ್ದಾರೆ. ಅವರಲ್ಲಿ ಒಬ್ಬಳನ್ನು ನಾನು ನಿನಗಾಗಿ ಆರಿಸಿಟ್ಟಿದ್ದೇನೆ. ಅವಳು ನಿನಗಾಗಿ ಕಾಯುತ್ತಿರುತ್ತಾಳೆ. ಅವಳೇ ನಿನ್ನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ" ಎಂದ. "ಆದರೆ ನಾನಿಲ್ಲಿಯೇ ತುಂಬಾ ಸಂತೋಷದಿಂದಿದ್ದೇನೆ. ನಾನಿಲ್ಲಿ ನನ್ನಷ್ಟಕ್ಕೇ ಹಾಡಿಕೊಂಡು, ನಗಾಡಿಕೊಂಡು ಸಂತೋಷಪಡುತ್ತಿದ್ದೇನೆ. ನನಗೆ ಖುಷಿಯಿಂದಿರಲಿಕ್ಕೆ ಇಷ್ಟು ಸಾಕು. ನಾನು ಭೂಮಿಗೆ ಹೋದರೆ ಇವೆಲ್ಲವನ್ನೂ ಕಳೆದುಕೊಳ್ಳಬೇಕಾಗುವುದಿಲ್ಲವೇ?" ಎಂದಿತು ಮಗು. "ನಿನ್ನ ಪಾಲಿನ ದೇವತೆ ನಿನಗಾಗಿ ದಿನಾ ಹಾಡುತ್ತಾಳೆ. ಅದಕ್ಕಿಂತ ಹೆಚ್ಚಾಗಿ ಅವಳು ನಿಷ್ಕಾಮ ಪ್ರೇಮವನ್ನು ನೀಡುತ್ತಾಳೆ. ಅವಳ ಪ್ರೀತಿಯನ್ನು ಅನುಭವಿಸುತ್ತಾ ನೀನು ಸುಖವಾಗಿರಬಹುದಲ್ಲವೇ?" "ಅದು ಸರಿ. ಆದರೆ ಭೂಮಿಯಲ್ಲಿರುವ ಮನುಷ್ಯರು ನನ್ನ ಜೊತೆ ಮಾತನಾಡಲು ಬಂದರೆ ಅವರ ಭಾಷೆಯನ್ನು...

ನಾಲ್ಕು ಹಣತೆಗಳ ಕಥೆ!

ನಾಲ್ಕು ಹಣತೆಗಳು ನಿಧಾನವಾಗಿ ಉರಿಯುತ್ತಿದ್ದವು. ಹಣತೆಗಳು ಪರಸ್ಪರ ಮಾತಾಡಿಕೊಳ್ಳುತ್ತಿದ್ದುದು ನಮಗೆ ಕೇಳಿಸುವಷ್ಟು ಅಲ್ಲಿನ ವಾತಾವರಣ ಶಾಂತವಾಗಿತ್ತು. ಹೀಗಿರುವಾಗ ಮೊದಲನೆಯ ಹಣತೆ ಹೇಳಿತು, "ನನ್ನ ಹೆಸರು ’ಶಾಂತಿ’. ಆದರೂ ಕೂಡ ಜನ ನನ್ನನ್ನು ಹೆಚ್ಚು ಹೊತ್ತು ಉರಿಯುತ್ತಿರಲು ಬಿಡುವುದಿಲ್ಲ. ನಾನು ಬೇಗ ಆರಿಹೋಗುತ್ತೇನೆಂದು ನನಗೆ ಗೊತ್ತು". ಹಾಗೆ ಹೇಳಿದ ಕೂಡಲೇ ಅದರ ದೀಪ ಕ್ಷೀಣವಾಗಿ ಕೊನೆಗೆ ಆರಿಹೋಯಿತು. ಎರಡನೆಯ ಹಣತೆ, "ನಾನು ’ನಂಬಿಕೆ’. ಆದರೆ ಹೆಚ್ಚಿನ ವಿಷಯಗಳಲ್ಲಿ ನಾನಿಂದು ಉಪಯೋಗಕ್ಕೆ ಇಲ್ಲದಂತಾಗಿದ್ದೇನೆ. ಹಾಗಾಗಿ ನಾನು ತುಂಬ ಹೆಚ್ಚು ಹೊತು ಉರಿಯಬೇಕೆಂದೇನೂ ಇಲ್ಲ" ಎಂದಿತು. ಇಷ್ಟು ಹೇಳಿದ್ದೇ ತಡ, ನಿಧಾನವಾಗಿ ಬಂದ ತಂಗಾಳಿಯೊಂದು ಆ ಹಣತೆಯನ್ನು ಆರಿಸಿಬಿಟ್ಟಿತು. ಮೂರನೆಯ ಹಣತೆ ತುಂಬ ದುಃಖದಿಂದ ಹೇಳಿತು, "ನಾನು ’ಪ್ರೀತಿ’! ಆದರೂ ನನಗೆ ತುಂಬ ಹೊತ್ತು (ಮನುಷ್ಯರ ಹೃದಯದಲ್ಲಿ) ಉರಿಯುತ್ತಿರುವಷ್ಟು ಶಕ್ತಿಯಿಲ್ಲ. ಜನ ನನ್ನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ನನ್ನನ್ನು ಯಾವತ್ತೂ ಬದಿಯಲ್ಲಿ ಇಟ್ಟುಬಿಡುತ್ತಾರೆ. ಇಷ್ಟೇ ಅಲ್ಲ ಈ ಜನ ಯಮಗೆ ಅತ್ಯಂತ ಹತ್ತಿರದವರನ್ನು, ತಮ್ಮನ್ನು ತುಂಬ ವಿಶ್ವಾಸದಿಂದ ’ಪ್ರೀತಿ’ಯಿಂದ ನೋಡುವುದಿಲ್ಲ". ತನ್ನ ಮಾತು ಮುಗಿಸಿದ ಹಣತೆ ಯಾರಿಗೂ ಕಾಯದೇ ಕೂಡಲೇ ಆರಿಹೋಯಿತು. ಆ ಹೊತ್ತಿನಲ್ಲಿ ಒಂದು ಪುಟ್ಟ ಮಗು ಆ ಕೋಣೆಗೆ ಅಂಬೆಗಾಲಿಡುತ್ತಾ ಬಂ...