ನಾಲ್ಕು ಹಣತೆಗಳು ನಿಧಾನವಾಗಿ ಉರಿಯುತ್ತಿದ್ದವು. ಹಣತೆಗಳು ಪರಸ್ಪರ ಮಾತಾಡಿಕೊಳ್ಳುತ್ತಿದ್ದುದು ನಮಗೆ ಕೇಳಿಸುವಷ್ಟು ಅಲ್ಲಿನ ವಾತಾವರಣ ಶಾಂತವಾಗಿತ್ತು. ಹೀಗಿರುವಾಗ ಮೊದಲನೆಯ ಹಣತೆ ಹೇಳಿತು, "ನನ್ನ ಹೆಸರು ’ಶಾಂತಿ’. ಆದರೂ ಕೂಡ ಜನ ನನ್ನನ್ನು ಹೆಚ್ಚು ಹೊತ್ತು ಉರಿಯುತ್ತಿರಲು ಬಿಡುವುದಿಲ್ಲ. ನಾನು ಬೇಗ ಆರಿಹೋಗುತ್ತೇನೆಂದು ನನಗೆ ಗೊತ್ತು". ಹಾಗೆ ಹೇಳಿದ ಕೂಡಲೇ ಅದರ ದೀಪ ಕ್ಷೀಣವಾಗಿ ಕೊನೆಗೆ ಆರಿಹೋಯಿತು.
ಎರಡನೆಯ ಹಣತೆ, "ನಾನು ’ನಂಬಿಕೆ’. ಆದರೆ ಹೆಚ್ಚಿನ ವಿಷಯಗಳಲ್ಲಿ ನಾನಿಂದು ಉಪಯೋಗಕ್ಕೆ ಇಲ್ಲದಂತಾಗಿದ್ದೇನೆ. ಹಾಗಾಗಿ ನಾನು ತುಂಬ ಹೆಚ್ಚು ಹೊತು ಉರಿಯಬೇಕೆಂದೇನೂ ಇಲ್ಲ" ಎಂದಿತು. ಇಷ್ಟು ಹೇಳಿದ್ದೇ ತಡ, ನಿಧಾನವಾಗಿ ಬಂದ ತಂಗಾಳಿಯೊಂದು ಆ ಹಣತೆಯನ್ನು ಆರಿಸಿಬಿಟ್ಟಿತು.
ಮೂರನೆಯ ಹಣತೆ ತುಂಬ ದುಃಖದಿಂದ ಹೇಳಿತು, "ನಾನು ’ಪ್ರೀತಿ’! ಆದರೂ ನನಗೆ ತುಂಬ ಹೊತ್ತು (ಮನುಷ್ಯರ ಹೃದಯದಲ್ಲಿ) ಉರಿಯುತ್ತಿರುವಷ್ಟು ಶಕ್ತಿಯಿಲ್ಲ. ಜನ ನನ್ನ ಪ್ರಾಮುಖ್ಯತೆಯನ್ನು ಅರ್ಥಮಾಡಿಕೊಳ್ಳುವುದೇ ಇಲ್ಲ. ನನ್ನನ್ನು ಯಾವತ್ತೂ ಬದಿಯಲ್ಲಿ ಇಟ್ಟುಬಿಡುತ್ತಾರೆ. ಇಷ್ಟೇ ಅಲ್ಲ ಈ ಜನ ಯಮಗೆ ಅತ್ಯಂತ ಹತ್ತಿರದವರನ್ನು, ತಮ್ಮನ್ನು ತುಂಬ ವಿಶ್ವಾಸದಿಂದ ’ಪ್ರೀತಿ’ಯಿಂದ ನೋಡುವುದಿಲ್ಲ". ತನ್ನ ಮಾತು ಮುಗಿಸಿದ ಹಣತೆ ಯಾರಿಗೂ ಕಾಯದೇ ಕೂಡಲೇ ಆರಿಹೋಯಿತು.
ಆ ಹೊತ್ತಿನಲ್ಲಿ ಒಂದು ಪುಟ್ಟ ಮಗು ಆ ಕೋಣೆಗೆ ಅಂಬೆಗಾಲಿಡುತ್ತಾ ಬಂದಿತು. ಕಂಡ ಕೂಡಲೇ ಅಪ್ಪಿ ಮುದ್ದಾಡಿ, ಅದರ ಕೆನ್ನೆಗೊಂದು ಸಿಹಿಮುತ್ತನ್ನು ನೀಡಬೇಕೆನಿಸುವಷ್ಟು ಮುಗ್ಧ, ಸುಂದರ ಮಗು ಅದು. ಕೋಣೆಗೆ ಬಂದ ಮಗು ಮೂರು ಹಣತೆಗಳು ಆರಿಹೋಗಿರುವುದನ್ನು ನೋಡಿತು. "ಯಾಕೆ ನೀವೆಲ್ಲಾ ಉರಿಯುತ್ತಿಲ್ಲ? ನಿಮಗೆಲ್ಲಾ ಕೊನೆಯವರೆಗೂ ಉರಿಯುತ್ತಲೇ ಇರಬೇಕೆಂದು ಗೊತ್ತಿಲ್ಲವೇ?" ಇಷ್ಟು ಹೇಳಿದ ಮಗು ದುಃಖದಿಂದ ಅಳಲಾರಂಬಿಸಿತು.
ಅಷ್ಟು ಹೊತ್ತು ಸುಮ್ಮನಿದ್ದ ನಾಲ್ಕನೆಯ ಹಣತೆ ಸಾವಧಾನದಿಂದ ಹೇಳಿತು, "ಪುಟ್ಟಾ, ಅಳಬೇಡ. ನಾನಿನ್ನೂ ಉರಿಯುತ್ತಿದ್ದೇನೆ. ಹೀಗಿರುವಾಗ ನೀನು ಉಳಿದ ಮೂರೂ ಹಣತೆಗಳನ್ನು ಹೊತ್ತಿಸಬಹುದು. ನಾನು ’ಭರವಸೆ!". ಈ ಮಾತನ್ನು ಕೇಳಿದ್ದೇ ತಡ ಮಗುವಿನ ಕಣ್ಣಲ್ಲಿ ಒಂದು ಸುಂದರ ಬೆಳಕು ಮೂಡಿತು. ಅದು ’ಭರವಸೆ’ಯನ್ನು ಎತ್ತಿಕೊಂಡು ಉಳಿದ ಹಣತೆಗಳನ್ನು ಹೊತ್ತಿಸಿತು.
ವಿಷಯ ಇಷ್ಟೆ, ಯಾವಾಗಲೂ ನಮ್ಮ ಮನಸ್ಸಿನಿಂದ ’ಭರವಸೆ’ ಎಂಬ ಹಣತೆಯನ್ನು ಆರಲು ಬಿಡಬಾರದು. ಹಾಗಿದ್ದರೆ ನಾವೆಲ್ಲರೂ ನಮ್ಮ ಜೀವನದಲ್ಲಿ ’ಭರವಸೆ’, ’ನಂಬಿಕೆ’, ’ಶಾಂತಿ’ ಮತ್ತು ’ಪ್ರೀತಿ’ಯೆಂಬ ನಾಲ್ಕು ಜೀವಜ್ಯೋತಿಗಳನ್ನು ಸದಾ ಆರದಂತೆ ಉಳಿಸಿಕೊಳ್ಳಬಹುದು.
ಮಗುವಿನ ಹಾಗೆ!
ಕಾಮೆಂಟ್‌ಗಳು
pokk blog nind... hadbi yella.
muchkond odko hadbi...