ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನ್ಯಾಯಾಂಗ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಏಕರೂಪ ನಾಗರಿಕ ಸಂಹಿತೆ ಎಂಬ ಜಾತ್ಯತೀತ ಬೇಡಿಕೆ

ಏಕರೂಪ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೆ ತರುವುದು ಸಂವಿಧಾನ ನಿರ್ಮಾತೃಗಳ ಕನಸು , ಆಶಯ . ಸಂವಿಧಾನ ಕರಡು ರಚನಾ ಸಭೆಯಲ್ಲಿ ಡಾ . ಬಿ . ಆರ್ . ಅಂಬೇಡ್ಕರ್ , ಕೆ . ಎಂ . ಮುನ್ಷಿ ಸೇರಿದಂತೆ ಹಲವರು ಆಡಿದ ಮಾತುಗಳು ಇದನ್ನು ದೃಢಪಡಿಸುತ್ತವೆ . ಆದರೆ , ಕರಡು ರಚನಾ ಸಮಿತಿಯ ಎಲ್ಲ ಸದಸ್ಯರಿಂದ ಇದಕ್ಕೆ ಬೆಂಬಲ ಸಿಗಲಿಲ್ಲ . ನಿರ್ದಿಷ್ಟ ವರ್ಗಗಳಿಂದ ವಿರೋಧ ವ್ಯಕ್ತವಾದರೂ , ಸಂವಿಧಾನದ 44 ನೇ ವಿಧಿಯಲ್ಲಿ , ‘ ಸರ್ಕಾರವು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಯತ್ನಿಸಬೇಕು’ ಎಂದು ಹೇಳಲಾಗಿದೆ . ಇಲ್ಲಿ ಒಂದು ವಿಚಾರ ಸ್ಪಷ್ಟ . ಸಮಾನತೆಯನ್ನು ಹೇಳುವ 14 ನೇ ವಿಧಿ , ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ 25 ನೇ ವಿಧಿಯನ್ನು ರಚಿಸಿದ ನಂತರವೇ , ಕರಡು ರಚನಾ ಸಮಿತಿಯು 44 ನೇ ವಿಧಿಯನ್ನು ರೂಪಿಸಿತು . ದೇಶದಲ್ಲಿ ವಿವಿಧ ಧರ್ಮ , ಜಾತಿ , ವರ್ಗಗಳನ್ನು ಪ್ರಭುತ್ವ ಸಮಾನವಾಗಿ ಕಾಣಬೇಕು (12 ನೇ ವಿಧಿ ), ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು (25 ನೇ ವಿಧಿ ) ಎಂದು ಹೇಳುವ ಸಂವಿಧಾನ , ಆಸ್ತಿ– ವಿವಾಹ– ದತ್ತು ಸ್ವೀಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೆ ಬರುವ ವಿಚಾರಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಸಮಾನ ಸಂಹಿತೆಯನ್ನು ರೂಪಿಸಬೇಕು ಎಂದಿದೆ . ಅಂದರೆ ಸಮಾನತೆ , ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಂಡೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯ ಎಂಬ ನಂಬಿಕೆ ಕ...

ಮೂರು ತೀರ್ಪುಗಳ ಕತೆ

ಸುಪ್ರೀಂ ಕೋರ್ಟ್‌ ಮತ್ತು ಹೈ­ಕೋರ್ಟ್‌­­­ಗಳಿಗೆ ನ್ಯಾಯ­ಮೂರ್ತಿಗಳನ್ನು ‘ಕೊಲಿ­ಜಿಯಂ’ ಮೂಲಕ ನೇಮಕ ಮಾಡ­ಬೇಕು ಎಂದು ಸಂವಿಧಾನ ಹೇಳುವುದಿಲ್ಲ. ಆದರೆ 1993ರಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ‘ಕೊಲಿಜಿಯಂ’ ಮೂಲಕ ಆಗಬೇಕು ಎಂದು ಹೇಳಿತು. ಭಾರತದ ನ್ಯಾಯಾಂಗಕ್ಕೆ ನಡೆಯುವ ನೇಮಕಾತಿಗಳು ಕೊಲಿಜಿಯಂ ಮೂಲಕ ಆಗಬೇಕು ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು ಹಂತಹಂತವಾಗಿ. ಇದೊಂದು ವಿಕಸನದ ಕತೆ. ಕಾರ್ಯಾಂ­ಗವು ನ್ಯಾಯಾಂ­ಗದ ಜೊತೆ ಸಂಘರ್ಷಕ್ಕೆ ಮುಂದಾ­ದಾಗ ರಕ್ಷಣಾತ್ಮಕ ಕ್ರಮವಾಗಿ ‘ಕೊಲಿಜಿಯಂ’ ವ್ಯವಸ್ಥೆ ಜನ್ಮತಾಳಿತು ಎಂಬ ವಾದ ಇದೆ. ಕೊಲಿಜಿಯಂ ವ್ಯವಸ್ಥೆ ವಿಕಸನ ಹೊಂದಲು ಮೂಲ, ಕೇಂದ್ರ ಕಾನೂನು ಸಚಿವರು ಹೊರಡಿ­ಸಿದ ಒಂದು ಸುತ್ತೋಲೆ ಎಂದು ತಜ್ಞರು ಹೇಳುತ್ತಾರೆ. ‘ಯಾವುದೇ ರಾಜ್ಯದ ಹೈಕೋರ್ಟ್‌ನ ಶೇಕಡ 33ರಷ್ಟು ನ್ಯಾಯಮೂರ್ತಿಗಳು ಹೊರ ರಾಜ್ಯ­ಗಳಿಗೆ ಸೇರಿದವರಾಗಿದ್ದರೆ ಉತ್ತಮ. ದೇಶದಲ್ಲಿ ಏಕತೆ ಮೂಡಿಸಲು ಇದು ನೆರವಾಗುತ್ತದೆ’ ಎಂಬ ಮಾತಿ­ನೊಂದಿಗೆ 1981ರಲ್ಲಿ ಹೊರಡಿಸಿದ್ದ ಸುತ್ತೋಲೆ ಆರಂಭವಾಗುತ್ತದೆ. ಪಂಜಾಬ್‌ನ ರಾಜ್ಯಪಾಲರು ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ (ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ) ರವಾನಿಸಿದ ಸುತ್ತೋಲೆ ಇದು. ನಂತರ ಈ ಸುತ್ತೋಲೆಯಲ್ಲಿ ಒಂದು ಮಾತು ಬರುತ್ತದೆ. ‘ನಿಮ್ಮ ರಾಜ್ಯಗಳ ಹೈಕೋರ್ಟ್‌ನಲ್ಲಿ ಹೆಚ್ಚು­ವರಿ ನ್ಯಾಯಮೂರ್ತಿ ಯಾಗಿ ಕೆ...