ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ವ್ಯಕ್ತಿಚಿತ್ರ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ...

ನಮ್ಮೊಳಗಿನ ಅಂಬೇಡ್ಕರ್...

"ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ - ಡಾ. ಬಿ ಆರ್ ಅಂಬೇಡ್ಕರ್" ಈ ಮೇಲಿನ ಅರ್ಥ ಬರುವ ಎಸ್ಸೆಮ್ಮೆಸ್ ಅನ್ನು ಕೆಲ ತಿಂಗಳುಗಳ ಹಿಂದೆ ಸ್ನೇಹಿತರಿಗೆಲ್ಲ ಕಳುಹಿಸುತ್ತಿದ್ದೆ. ಹಾಗೆ ಮಾಡುತ್ತಿದ್ದಾಗ ಸ್ನಾತಕೋತ್ತರ ಪದವಿ ಓದುತ್ತಿರುವ ಸ್ನೇಹಿತರೊಬ್ಬರಿಂದ ಪ್ರತಿಕ್ರಿಯೆ ಬಂತು; "ಅಂಬೇಡ್ಕರ್ ನಿಜಕ್ಕೂ ಹಾಗಂದಿದ್ದರಾ?" ಎಂಬ ಪ್ರಶ್ನೆಯನ್ನು ಅವರ ಪ್ರತಿಕ್ರಿಯೆ ಹೊತ್ತು ತಂದಿತ್ತು. "ಹೌದು, ನನಗೆ ತಿಳೀದಿರುವಂತೆ ಅಂಥ ದೊಂದು ಮಾತನ್ನು ಡಾ. ಅಂಬೇಡ್ಕರ್ ೧೯೪೯ರ ಸುಮಾರಿಗೆ ಆಡಿದ್ದರು. ಅದಲ್ಲದೆ ಸೆಪ್ಟೆಂಬರ್ ೧೦, ೧೯೪೯ ರಂದು ಸಂಸ್ಕೃತವನ್ನೇ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವಂತೆ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮುಂದಿಟ್ಟವರೂ ಸ್ವತಃ ಅಂಬೇಡ್ಕರ್" ಎಂದು ನನ್ನ ಉತ್ತರ ಕಳಿಸಿದೆ. ನನ್ನ ಸ್ನೇಹಿತರಿಗೆ ಸಮಾಧಾನವಾಯಿತಿರಬೇಕು. ಆದರೂ ಕೊನೆಗೊಂದು ಮಾತು ಹೇಳಿದರು; "ಈ ಅಂಬೇಡ್ಕರ್ ತಂದ ಮೀಸಲಾತಿಯೆಂಬ ನೀತಿಯಿಂದಾಗಿ ನಾವೆಲ್ಲರೂ ಇವತ್ತು ಪಡಿಪಾಟಲು ಅನುಭವಿಸುವಂತಾಗಿದೆ." ಇವತ್ತು ನಾಡಿನ ಉದ್ದಗಲಕ್ಕೂ ಅಂಬೇಡ್ಕರ್ ಹೆಸರನ್ನು ಕೇಳದವರು ಇಲ್ಲ. ಅವರ ಬಗ್ಗೆ ಓದದವರು ಇಲ್ಲ. ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಅಂಬೇಡ್ಕರ್ ಚಿಂತನೆಗಳ ಮಾತು ಬರುತ್ತಿರುತ್ತದೆ. ಇಷ್ಟೆಲ್ಲ ಆದರೂ ಅಂಬೇಡ...

ಚೇರ್ಕಾಡಿ ರಾಮಚಂದ್ರ ರಾಯರ ನೆವದಲ್ಲಿ...

"ಚೇರ್ಕಾಡಿ ರಾಮಚಂದ್ರ ರಾಯರು ತೀರಿಕೊಂಡರಂತೆ." ಭಾರತದ ಫುಕುವೋಕಾ ಎಂಬ ಬಿರುದನ್ನು ಅರ್ಹವಾಗಿಯೇ ಹೊತ್ತಿದ್ದ ಚೇರ್ಕಾಡಿ ರಾಯರು ತೀರಿಕೊಂಡ ಸುದ್ದಿಯನ್ನು ಕೇಳಿದ ತಕ್ಷಣ "ಅವರ ಸಾವಿನ ಸುದ್ದಿಯನ್ನು ನಂಬಲಾಗಲಿಲ್ಲ, ಅವರ ಸಾವು ಬಹಳ ದುಃಖ ತಂದಿತು ಅಂತ ಹೇಳುವುದು" ತೀರಾ ಕೃತಕವಾಗುತ್ತದೆ. ಆದರೆ ಅವರ ಸಾವಿನ ಸುದ್ದಿಯನ್ನು ಕೇಳಿದ ತಕ್ಷಣ ಮನಸ್ಸು ನೆನಪಿಸಿಕೊಂಡಿದ್ದು ಸುಮಾರು ಎರಡು ತಿಂಗಳುಗಳ ಹಿಂದೆ ಪುತ್ತೂರಿನ ಅಡಿಕೆ ಪತ್ರಿಕೆ ಕಛೇರಿಯಲ್ಲಿ ಪತ್ರಕರ್ತ ಶ್ರೀ ಪಡ್ರೆಯವರೊಂದಿಗೆ ಕಳೆದ ಕ್ಷಣಗಳು. ಸ್ನಾತಕೋತ್ತರ ಪದವಿಯ ಅನಿವಾರ್ಯ ಭಾಗವಾದ ಕಿರು ಸಂಶೋಧನಾ ಪ್ರಬಂಧಕ್ಕೆ ಅಗತ್ಯ ಮಾಹಿತಿ ಕಲೆಹಾಕಲು ಶ್ರೀ ಪಡ್ರೆಯವರ ಸಹಾಯ ಕೋರಿ ಅವರ ಅಡಿಕೆ ಪತ್ರಿಕೆಯ ಕಛೇರಿಗೆ ಹೋಗಿದ್ದೆ. ಆಗ ಅವರು ಆಡಿದ್ದ ಒಂದೊಂದೂ ಮಾತುಗಳು ಚೇರ್ಕಾಡಿ ರಾಯರ ಸಾವಿನ ಸುದ್ದಿಯ ಹಿಂದೆಯೇ ಮೆರವಣಿಗೆಯಲ್ಲಿ ತೇಲಿ ಬಂದವು. "ನಮ್ಮ ದೇಶವನ್ನು ಕೃಷಿ ಪ್ರಧಾನ ದೇಶ ಅಂತ ನಮಗೇ ಬೇಸರವಾಗುವಷ್ಟು ಹೇಳುತ್ತೇವೆ. ರೈತನೇ ದೇಶದ ಬೆನ್ನೆಲುಬು ಅಂತ ಹಾಡಿಹೊಗಳುತ್ತೇವೆ. ನಮ್ಮ ಸರಕಾರ ಕೂಡ ಸಮಯ ಸಿಕ್ಕಾಗಲೆಲ್ಲ ಇದೇ ಮಾತನ್ನು ಹೇಳುತ್ತದೆ. ಆದರೆ ತನ್ನ ನೀತಿಗಳ ಮೂಲಕ ವ್ಯವಸ್ಥಿತವಾಗಿ ರೈತನ ಬೆನ್ನೆಲುಬನ್ನೇ ಮುರಿಯುತ್ತದೆ. ಶಾಲೆಗಳಲ್ಲಿ ಮಕ್ಕಳಿಗೆ ರೈತರ ಜಪವನ್ನೇ ಉರುಹೊಡೆಸುತ್ತೇವೆ. ಅವರು ಪರೀಕ್ಷೆಗಳಲ್ಲಿ ಇದನ್ನೇ ಬರೆಯುತ್ತಾರೆ. ತೊಂಭತ್ತು ತೊಂಭತ್ತೈದು...

ದೀನದಯಾಳರ ನಿರಹಂಕಾರ

ಅದು ೧೯೬೦ರ ದಶಕ. ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರು ಭಾರತೀಯ ಜನ ಸಂಘದ ಕೆಲವು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದರು. ಹಾಗೆಯೇ ಪಕ್ಷದ ಮತ್ತು ಸಂಘದ ಕೆಲ ಹಿರಿಯರ ಸೂಚನೆಯ ಮೇರೆಗೆ ೧೯೬೦ರಲ್ಲಿ ’ಆರ್ಗನೈಸರ್’ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಕಾಲ ಅದು. ಆಡ್ವಾಣಿಯವರಿಗೆ ಜನಸಂಘದ ಮಾರ್ಗದರ್ಶಕರಲ್ಲೊಬ್ಬರಾಗಿದ್ದ, ಸಂತಸದೃಶ ಜೀವನ ನಡೆಸುತ್ತಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರೊಂದಿಗೆ ಆತ್ಮೀಯ ಸಂಬಂಧವಿತ್ತು. ತಮ್ಮ ಆತ್ಮಕಥೆಯಲ್ಲಿ ಆಡ್ವಾಣಿ ಪಂಡಿತ ದೀನದಯಾಳ ಉಪಾಧ್ಯಾಯರ ಬಗ್ಗೆ ಹೀಗೆ ಬರೆದಿದ್ದಾರೆ: "ಅವರು ತಮ್ಮ ಬಗ್ಗೆ ಮಾತಾಡುವುದನ್ನು ಮುಜುಗರ ಎಂದು ತಿಳಿದಿದ್ದರು. ಅವರು ಹೇಳಿದ್ದನ್ನು ನಡೆಯಲ್ಲಿ ತೋರಿಸಿದರು. ಅವರ ನಾಯಕತ್ವದ ಬೇರುಗಳಿದ್ದದ್ದೇ ಎಲ್ಲರನ್ನು ಅಪ್ಪಿಕೊಳ್ಳುವ ದಾರ್ಶನಿಕತೆಯಲ್ಲಿ. ಅವರು ಮಾನವೀಯತೆಯ ಸಾಕಾರಮೂರ್ತಿ. ಅಧಿಕಾರದ ಬಗ್ಗೆ ನಿಕೃಷ್ಟತೆ ಇದ್ದ ರಾಜಕಾರಣಿ ಅವರಾಗಿದ್ದರು. ಅವರೇ ಪಂಡಿತ ದೀನದಯಾಳ್‌ಜೀ" ಉಪಾಧ್ಯಾಯರೊಂದಿಗೆ ತಮಗಿದ್ದ ಆತ್ಮೀಯತೆಯನ್ನು ಬಳಸಿಕೊಂಡು ಆಡ್ವಾಣಿಯವರು ಒಮ್ಮೆ ಅವರಲ್ಲಿ ಆರ್ಗನೈಸರ್ ಪತ್ರಿಕೆಗೆ ಒಂದು ಅಂಕಣವನ್ನು ಬರೆಯಲಾರಂಭಿಸುವಂತೆ ಕೇಳಿಕೊಂಡರು. ಆಡ್ವಾಣಿಯವರ ಒತ್ತಾಯದ ಮೇರೆಗೆ ಉಪಾಧ್ಯಾಯರು ’ರಾಜಕೀಯ ಡೈರಿ’ ಎಂಬ ಅಂಕಣವನ್ನು ಆರ್ಗನೈಸರ್‌ಗೆ ಬರೆಯಲಾರಂಭಿಸಿದರು. ಆಯಾ ವಾರದ ವಿವಿಧ ರಾಜಕೀಯ ವ...

'ಶ್ರೀಮಂತಿಕೆಯನ್ನು ಬಿಡಬಲ್ಲೆವು, ಆದರೆ ಸ್ವಾತಂತ್ರವನ್ನಲ್ಲ' ಎಂದ ಧೀಮಂತನ ಕುರಿತು...

ಮೇ ೨೭, ೧೯೬೪ ರಂದು ಭಾರತದ ಪ್ರಧಾನಿಯಾಗಿದ್ದ ಪಂಡಿತ್ ಜವಾಹರಲಾಲ್ ನೆಹರೂ ತೀರಿಕೊಂಡಾಗ ದೇಶವಾಸಿಗಳೆಲ್ಲರೂ ಕೇಳುತ್ತಿದ್ದ ಪ್ರಶ್ನೆ ಒಂದೇ: 'ನೆಹರೂ ನಂತರ ಭಾರತದ ನಾಯಕ ಯಾರು?' ನಿಜ, ನೆಹರೂ ನಂತರ ಭಾರತದ ರಾಜಕೀಯ ವಲಯದಲ್ಲಿ ಅಂತಹ ಒಂದು ನಿರ್ವಾತ ಸ್ಥಿತಿ ನಿರ್ಮಾಣವಾಗಿತ್ತು. ನೆಹರೂ ಪ್ರಧಾನಿಯಾಗಿದ್ದಷ್ಟು ದಿನ ತಮ್ಮ ನಂತರ ದೇಶದ ಚುಕ್ಕಾಣಿ ಹಿಡಿಯಬೇಕಾದವರು ಯಾರು ಎಂಬ ಪ್ರಶ್ನೆಗೆ ಉತ್ತರ ನೀಡಿರಲಿಲ್ಲ. ಇಂತಹ ಸಂದರ್ಭದಲ್ಲಿ ಕಾಂಗ್ರೆಸ್ಸಿನ ಹಿರಿಯ ನಾಯಕರಿಗೆ ಕೂಡ ನೆಹರೂ ಉತ್ತರಾಧಿಕಾರಿಯಾಗಿ ಯಾರನ್ನು ನೇಮಕ ಮಾಡಬೇಕು ಎಂಬುದು ತೋಚಲಿಲ್ಲ. ಆಗ ಮೂರಾರ್ಜಿ ದೇಸಾಯವರ ಹೆಸರು ಕೇಳಿಬಂತಾದರೂ, ದೇಸಾಯವರಿಗೆ ಬಹುಪಾಲು ಕಾಂಗ್ರೆಸ್ ನಾಯಕರು ಒಲವು ವ್ಯಕ್ತಪಡಿಸಲಿಲ್ಲ. ನಂತರ ಕೊನೆ ಕ್ಷಣದಲ್ಲಿ ಲಾಲ್ ಬಹದ್ದೂರ್ ಶಾಸ್ತ್ರಿ ನೆಹರೂ ಉತ್ತರಾಧಿಕಾರಿಯಾಗಿ ಆಯ್ಕೆಯಾದರು. ಶಾಸ್ತ್ರಿ ಯವರು ಮೂಲತಃ ಸಮಾಜವಾದಿಯಾಗಿದ್ದು, ಸ್ವಾತಂತ್ರ ಪೂರ್ವದಿಂದಲೂ ಕಾಂಗ್ರೆಸ್‌ಗೆ ನಿಷ್ಠರಾಗಿದ್ದರಿಂದ ಅವರ ಆಯ್ಕೆಗೆ ಅಷ್ಟಾಗಿ ವಿರೋಧ ಬರಲಿಲ್ಲ. ಜೂನ್ ೧೧, ೧೯೬೪ರಂದು ಪ್ರಧಾನಿ ಹುದ್ದೆಯನ್ನು ಅಲಂಕರಿಸಿದ ಶಾಸ್ತ್ರಿ, ಪ್ರಧಾನಿ ಹುದ್ದೆಂದ ಮಾಡಿದ ಪ್ರಥಮ ಭಾಷಣದಲ್ಲಿ ತಮ್ಮ ಕಾರ್ಯ-ಉದ್ದೇಶಗಳನ್ನು ಸ್ಪಷ್ಟಪಡಿಸಿದ್ದರು. "ಪ್ರತಿಯೊಂದು ದೇಶವೂ ತನ್ನ ಜೀವಿತಾವಧಿಯಲ್ಲಿ ಎರಡು ದಾರಿಗಳಲ್ಲಿ ಯಾವುದಾದರೂ ಒಂದನ್ನು ಆಯ್ಕೆ ಮಾಡಿಕೊಳ್ಳಬೇಕಾದಂತಹ ಸಂದರ್ಭವನ್ನು ಎದ...