ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಪ್ರಚಲಿತ ಲೇಬಲ್ ಜೊತೆಗೆ ಪೋಸ್ಟ್‌ಗಳನ್ನು ತೋರಿಸಲಾಗುತ್ತಿದೆ

ಇದು ಸಂವಾದದ ಹೊತ್ತು ಆಗಬೇಕಲ್ಲವೇ?

ನಾವು ಬದುಕುತ್ತಿರುವ ಸಂದರ್ಭವನ್ನು ‘ಫೇಸ್‌ಬುಕ್‌ ಮೂಲಕ ವಿಕಾರಗಳನ್ನು ತೋರಿಸಿಕೊಳ್ಳುವ ಹೊತ್ತು’ ಎಂದು ಕರೆಯಲು ಅಡ್ಡಿಯಿಲ್ಲ ಅನಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಕೆಲವು ಚರ್ಚೆಗಳ ಮಟ್ಟವನ್ನು ಗಮನಿಸಿದರೆ ನಿಮಗೂ ಹಾಗೆ ಅನಿಸಬಹುದು. ಅದರಲ್ಲೂ ಎಡ–ಬಲ ಪಂಥಗಳ ಚರ್ಚೆಗಳಿಗೆ ತಲೆ ಹಾಕಿದರೆ ಮುಗಿದೇ ಹೋಯಿತು. ಅಲ್ಲಿ ಏನಾಗುತ್ತದೆ ಎಂಬುದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು ಎಂಬುದು ನನ್ನ ಭಾವನೆ. ಮೂಡುಬಿದಿರೆಯಲ್ಲಿ ಇದ್ದುಕೊಂಡು, ಮಕ್ಕಳಿಗೆ ಪಾಠ ಹೇಳಿಕೊಡುತ್ತ, ಸಾಹಿತ್ಯ, ಸಮಾಜ, ಅರ್ಥವ್ಯವಸ್ಥೆ ಬಗ್ಗೆ ಮಾತನಾಡುವ, ನಾನು ಅವರ ಮನೆಗೆ ಹೋದಾಗಲೆಲ್ಲ ಒಳ್ಳೆಯ ಎಲೆ ಅಡಿಕೆ ಕೊಡುವ ಅರವಿಂದ ಚೊಕ್ಕಾಡಿಯವರು ಎಡ–ಬಲ ಪಂಥಗಳ ಬಗ್ಗೆ, ಅವೆರಡರ ನಡುವೆ ಸಂವಾದ ಆಗಬೇಕಿರುವ ಅಗತ್ಯದ ಬಗ್ಗೆ ಪುಟ್ಟ ಬರಹ ಬರೆದಿದ್ದಾರೆ. ಆ ಬರಹವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅವರ ಬರಹಕ್ಕೆ ನಾನು ಬರೆದ ಪ್ರತಿಕ್ರಿಯೆ ಕೂಡ ಇಲ್ಲಿದೆ. ದಯವಿಟ್ಟು ಎರಡನ್ನೂ ಓದಿ. ನಿಮ್ಮ ಅನಿಸಿಕೆ ತಿಳಿಸಿ. =========== ಚೊಕ್ಕಾಡಿಯವರಿಗೆ ಬರೆದ ಪ್ರತಿಕ್ರಿಯೆ... ಸರ್, ನಿಮ್ಮ ಬರಹ ಓದಿದ ನಂತರ ಹಳೆಯ ಕೆಲವು ಪ್ರಯತ್ನಗಳು ನೆನಪಿಗೆ ಬಂದವು. ಆ ಪ್ರಯತ್ನಗಳು ನಡೆದಿದ್ದ ಹೊತ್ತಿನಲ್ಲಿ ನೀವೂ ಜೊತೆಯಲ್ಲಿ ಇದ್ದಿದ್ದು ಅಥವಾ ನಾವು ನಿಮ್ಮ ಜೊತೆಯಲ್ಲಿ ಇದ್ದಿದ್ದು ನಿಮ್ಮ ನೆನಪಿನಲ್ಲಿ ಇದೆ ಎಂದು ಭಾವಿಸುವೆ. ಎಡಪಂಥೀಯರು ಮತ್ತು ಬಲಪಂಥೀಯರಲ್ಲಿ ಇರುವ, ಸಂವಾದಿ...

ಅನ್ನ ಕೊಡುವ ಭಾಷೆಯಾಗಲಿ ಕನ್ನಡ

ಇನ್ನೇನು ಕೆಲವೇ ದಿನಗಳಲ್ಲಿ ಮತ್ತೆ ಕನ್ನಡ ರಾಜ್ಯೋತ್ಸವ ಬರಲಿದೆ . ಕನ್ನಡ ಭಾಷೆಯನ್ನು ಗಟ್ಟಿಗೊಳಿಸುವ ಕುರಿತು ಭರ್ಜರಿ ಚರ್ಚೆಗಳು ರಾಜ್ಯದಾದ್ಯಂತ ನಡೆಯಲಿವೆ . ಹಾಗೆಯೇ ಕೆಲವು ದಿನಗಳಲ್ಲಿ ಆ ಚರ್ಚೆಗಳು ಮನಸ್ಸಿನ ಮೂಲೆ ಸೇರಲಿವೆ . ಅದೇನೇ ಇರಲಿ , ಈ ಕೆಳಗಿನ ಒಂದಷ್ಟು ಸಂಗತಿಗಳನ್ನು ಗಮನಿಸಿ . ಕರ್ನಾಟಕದಲ್ಲಿ ಇಂಗ್ಲಿಷ್ ಗೆಂದೇ ಪ್ರತ್ಯೇಕ ವಿಶ್ವವಿದ್ಯಾಲಯ ಇಲ್ಲ . ಇಂಗ್ಲಿಷ್ ಪುಸ್ತಕ ಪ್ರಾಧಿಕಾರ , ಇಂಗ್ಲಿಷ್ ಸಾಹಿತ್ಯ ಪರಿಷತ್ತು , ಇಂಗ್ಲಿಷ್ ಕಾವಲು ಪಡೆ , ಇಂಗ್ಲಿಷ್ ಮತ್ತು ಸಂಸ್ಕೃತಿ ಇಲಾಖೆ ... ಇವ್ಯಾವುದೂ ಇಲ್ಲ . ಯಾವುದೇ ರೀತಿಯ ಸರಕಾರಿ ಕೃಪೆ ಮತ್ತು ಮೇಲೆ ತಿಳಿಸಿದ ಅನೇಕ ಇಲ್ಲಗಳ ಹೊರತಾಗಿಯೂ ಇವತ್ತು ಇಂಗ್ಲಿಷ್ ಭಾಷೆ ಕನ್ನಡ ಭಾಷೆಗೆ ಸಡ್ಡು ಹೊಡೆದು ನಿಂತಿದೆ . ರಾಜಧಾನಿಯಲ್ಲೇ ಇಬ್ಬರು ಅಪರಿಚಿತರು ಎದುರಾದರೆ ಮಾತನಾಡುವುದು ಇಂಗ್ಲಿಷ್ ನಲ್ಲಿ ಎಂಬಷ್ಟರ ಮಟ್ಟಿಗೆ ಈ ಭಾಷೆ ಬೆಳೆದಿದೆ . ಇದಕ್ಕೆ ಕಾರಣ ಹುಡುಕುವುದು ಕಷ್ಟದ ಸಂಗತಿಯೇನಲ್ಲ . ಕೆಲವೇ ವರ್ಷಗಳ ಹಿಂದಿನವರೆಗೆ ಒಂದು ರೀತಿಯಲ್ಲಿ ಫ್ಯಾಷನ್ ಮಾತ್ರ ಆಗಿದ್ದ ಇಂಗ್ಲಿಷ್ ಇವತ್ತು ತನ್ನ ಭಾಷಿಗನನ್ನು ಹೊಟ್ಟೆ ಹೊರೆಯುವ ಮಟ್ಟಕ್ಕೆ ಬೆಳೆದುನಿಂತಿದೆ . ಇವತ್ತು ಮುಗಿಬಿದ್ದು ಇಂಗ್ಲಿಷ್ ಕಲಿಯುತ್ತಿರುವವರೆಲ್ಲರೂ ಇಂಗ್ಲಿಷ್ ಸಾಹಿತ್ಯ , ಷೆಕ್ಸ್ ಪಿಯರ್ ಮೇಲಿನ ಪ್ರ...

ನಮ್ಮೊಳಗಿನ ಅಂಬೇಡ್ಕರ್...

"ನಮ್ಮ ಮನಸ್ಸಿನಲ್ಲಿರುವುದನ್ನು ಬೇರೆಯವರಿಗೆ ಸ್ಪಷ್ಟವಾಗಿ ಹೇಳಬೇಕೆಂದರೆ ಅದು ಸಂಸ್ಕೃತದಲ್ಲಿ ಮಾತ್ರ ಸಾಧ್ಯ - ಡಾ. ಬಿ ಆರ್ ಅಂಬೇಡ್ಕರ್" ಈ ಮೇಲಿನ ಅರ್ಥ ಬರುವ ಎಸ್ಸೆಮ್ಮೆಸ್ ಅನ್ನು ಕೆಲ ತಿಂಗಳುಗಳ ಹಿಂದೆ ಸ್ನೇಹಿತರಿಗೆಲ್ಲ ಕಳುಹಿಸುತ್ತಿದ್ದೆ. ಹಾಗೆ ಮಾಡುತ್ತಿದ್ದಾಗ ಸ್ನಾತಕೋತ್ತರ ಪದವಿ ಓದುತ್ತಿರುವ ಸ್ನೇಹಿತರೊಬ್ಬರಿಂದ ಪ್ರತಿಕ್ರಿಯೆ ಬಂತು; "ಅಂಬೇಡ್ಕರ್ ನಿಜಕ್ಕೂ ಹಾಗಂದಿದ್ದರಾ?" ಎಂಬ ಪ್ರಶ್ನೆಯನ್ನು ಅವರ ಪ್ರತಿಕ್ರಿಯೆ ಹೊತ್ತು ತಂದಿತ್ತು. "ಹೌದು, ನನಗೆ ತಿಳೀದಿರುವಂತೆ ಅಂಥ ದೊಂದು ಮಾತನ್ನು ಡಾ. ಅಂಬೇಡ್ಕರ್ ೧೯೪೯ರ ಸುಮಾರಿಗೆ ಆಡಿದ್ದರು. ಅದಲ್ಲದೆ ಸೆಪ್ಟೆಂಬರ್ ೧೦, ೧೯೪೯ ರಂದು ಸಂಸ್ಕೃತವನ್ನೇ ಅಧಿಕೃತ ಭಾಷೆಯನ್ನಾಗಿ ಸ್ವೀಕರಿಸುವಂತೆ ಸಂಸತ್ತಿನಲ್ಲಿ ವಿಧೇಯಕವೊಂದನ್ನು ಮುಂದಿಟ್ಟವರೂ ಸ್ವತಃ ಅಂಬೇಡ್ಕರ್" ಎಂದು ನನ್ನ ಉತ್ತರ ಕಳಿಸಿದೆ. ನನ್ನ ಸ್ನೇಹಿತರಿಗೆ ಸಮಾಧಾನವಾಯಿತಿರಬೇಕು. ಆದರೂ ಕೊನೆಗೊಂದು ಮಾತು ಹೇಳಿದರು; "ಈ ಅಂಬೇಡ್ಕರ್ ತಂದ ಮೀಸಲಾತಿಯೆಂಬ ನೀತಿಯಿಂದಾಗಿ ನಾವೆಲ್ಲರೂ ಇವತ್ತು ಪಡಿಪಾಟಲು ಅನುಭವಿಸುವಂತಾಗಿದೆ." ಇವತ್ತು ನಾಡಿನ ಉದ್ದಗಲಕ್ಕೂ ಅಂಬೇಡ್ಕರ್ ಹೆಸರನ್ನು ಕೇಳದವರು ಇಲ್ಲ. ಅವರ ಬಗ್ಗೆ ಓದದವರು ಇಲ್ಲ. ಪ್ರಾಥಮಿಕ ಶಾಲಾ ಪಠ್ಯಪುಸ್ತಕಗಳಿಂದ ಹಿಡಿದು ಸ್ನಾತಕೋತ್ತರ ಪದವಿಯವರೆಗೂ ಅಂಬೇಡ್ಕರ್ ಚಿಂತನೆಗಳ ಮಾತು ಬರುತ್ತಿರುತ್ತದೆ. ಇಷ್ಟೆಲ್ಲ ಆದರೂ ಅಂಬೇಡ...

ಕೃಷಿ ತಾತ್ಸಾರಕ್ಕೆ ಶಿಕ್ಷಣ ವ್ಯವಸ್ಥೆಯೂ ಕಾರಣವಲ್ಲವೇ?

" ಹಳ್ಳಿಯ ಬಗ್ಗೆ ನಿಮಗೇನ್ರಯ್ಯಾ ಗೊತ್ತು ? ನಿಮ್ಮ ಪ್ರಕಾರ ಹಳ್ಳಿಗಳು ಎಂದರೆ ಒಂಥರಾ ವಾರಾಂತ್ಯದ ರಜಾ ತಾಣಗಳಿದ್ದಂತೆ . ನಿಮಗೆ ಇಲ್ಲಿನ ತಂಪಾದ ಹವೆ ಇಷ್ಟ , ಇಲ್ಲಿನ ಪರಿಸರ ಇಷ್ಟ ಮತ್ತು ಇಲ್ಲಿನ ಹಸಿರು ಇಷ್ಟ ..." ಮೊನ್ನೆ ವಯಕ್ತಿಕ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಅಲ್ಲಿನ ಹಳ್ಳಿಯೊಂದರಲ್ಲಿ ಸ್ವಂತ ತೋಟ, ಗದ್ದೆ ನೋಡಿಕೊಂಡಿರುವ ಸ್ನೇಹಿತನ ಜೊತೆ ಮಾತಾಡುತ್ತಿದ್ದಾಗ ಹಳ್ಳಿಯ ಜೀವನದ ಬಗ್ಗೆ ನಾನು ವ್ಯಕ್ತಪಡಿಸಿದ ಅಭಿಮಾನಕ್ಕೆ ಆತನ ಪ್ರತಿಕ್ರಿಯೆ ಈ ಮೇಲಿನಂತಿತ್ತು. "...ಆದರೆ ನಮ್ಮ ಹಳ್ಳಿಗಳಿಗೆ ಭವಿಷ್ಯವಿದೆ ಅಂತ ನನಗಂತೂ ಅನಿಸುತ್ತಿಲ್ಲ. ಬೆಳೆಗೆ ಬೆಲೆಯಿಲ್ಲ. ನಾವು ಮಾಡುವ ಕೆಲಸಕ್ಕೆ ಗೌರವವಿಲ್ಲ. ಒಬ್ಬ ವ್ಯಕ್ತಿ ಅಲ್ಪ ಸ್ವಲ್ಪ ಓದಿಕೊಂಡು ಯಾವುದೋ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂದರೆ ಹೆಣ್ಣು ಹೆತ್ತವರು ಸ್ಪರ್ದೆಗೆ ಬಿದ್ದವರಂತೆ ಅವನ ಬೆನ್ನು ಬೀಳುತ್ತಾರೆ. ಅದೇ ಹಳ್ಳಿಯ ಕೃಷಿಕನೊಬ್ಬನಿಗೆ ಹೆಣ್ಣು ಕೊಡುವವರು ಇಲ್ಲ. ಆತ ತನ್ನ ಕೃಷಿ ಅಗತ್ಯತೆಗಾಗಿ ಏನೇ ಸಂಶೋಧನೆ ಮಾಡಿದರೂ ಅವನ ಬೌದ್ಧಿಕ ಕೆಲಸಕ್ಕೆ ಮರ್ಯಾದೆ ಇಲ್ಲ. ಅಲ್ಲ ಮಾರಾಯಾ, ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಶ್ರೀಮಂತವಾಗಿರಬಹುದು ಆದರೆ ಅವುಗಳ ಹಿತ್ತಿಲಿನಲ್ಲಿ ತರಕಾರಿ ಬೆಳೆಯಲು ಸಾಧ್ಯವಾ ಹೇಳು. ಇನ್‌ಫೋಸಿಸ್‌ನವರು ಎಲ್ಲಾದರೂ ಅಕ್ಕಿ ಬೆಳೆದು ಅವರ ನೌಕರರ ಹೊಟ್ಟೆ ತುಂಬಿಸಲ...

Come, fall in love!

“We will not allow the youth to celebrate the Valentine’s Day this time” shouted an orthodox when I was having a discourse with him on the nature of Indian culture and its ethos. “But why? Who are you, after all, to curb the happiness of a large chunk of the community? What right do you have to stop the youth from falling in love?” I questioned him. Well, I got some expected answers to my question. “We are not against loving. But we do not allow celebrating Valentine’s Day as it is an alien culture. We would have rightly allowed celebrating the day had it been a part of Indian culture. Every Indian has to follow what Indian culture cherishes” he explained with a proud voice. I came back understanding that there was no use in having a discourse with the person. As we all know, youth – especially those who have fallen in love – celebrate Valentine’s Day on February 14 every year, throughout the world, except in some of the fundamental Islamic states. India, too, welcomed this fest with a...

Condemning the attack on The Hindu

Everyone may be aware of the fact that the Coimbatore office of The Hindu, India’s national newspaper, has been attacked by a faction of Tamil chauvinist group last week. The article titled ‘The dangers of Tamil chauvinism’ by Malini Parthasarathy, Senior Sub Editor of The Hindu, might have enraged the sentiments of the lesser known Tamil chauvinist group - Periyar Dravidar Kazhagam. Malini Parthasarathy, in her above mentioned article, has clearly stated that the LTTE which is active in Srilanka is nothing but a terrorist group and the path it has been following over the years to resolve the issue of Tamilians has no respect in any democratic society. Over the years the LTTE has been engaged in murdering Srilankan ministers and innocent civilians who have got nothing to do with the political affairs of the State. The Hindu in its editorial pages has condemned this inhuman and anti-democratic behaviour of the LTTE. The Hindu has never turned a blind eye towards the problems faced by Sr...
ಈ ವಿರೋಧ ಯಾವ ಪುರುಷಾರ್ಥದ ಸಾಧನೆಗಾಗಿ? ನಿಜಕ್ಕೂ ಆಶ್ಚರ್ಯವಾಗುತ್ತಿದೆ! ಆಶ್ಚರ್ಯಪಡಬೇಕಾದ ಕಾರಣವೂ ಇದೆ. ೧೯೬೨ರಲ್ಲಿ ಭಾರತದ ಮೇಲೆ ಚೀನಾ ಮೋಸದಿಂದ ದಾಳಿ ಮಾಡಿದಾಗ, ಭಾರತದ ಅಖಂಡತೆ ಆಪತ್ತಿನಲ್ಲಿದ್ದಾಗ ಸಿದ್ಧಾಂತಕ್ಕೆ ಜೋತುಬಿದ್ದು ಚೀನಾದ ವಿರುದ್ಧ ಮಾತನಾಡದೆ ತೆಪ್ಪಗಿದ್ದ ಕಮ್ಯುನಿಸ್ಟರು ಭಾರತ ಮತ್ತು ಅಮೆರಿಕಾ ನಡುವೆ ಏರ್ಪಟ್ಟಿರುವ ನಾಗರಿಕ ಅಣು ಒಪ್ಪಂದದ ನಂತರ "ಭಾರತದ ಸಾರ್ವಭೌಮತೆ ಅಪಾಯದಲ್ಲಿದೆ" ಎಂದು ಕೂಗೆಬ್ಬಿಸುತ್ತಿರುವುದನ್ನು ನೋಡಿದರೆ ಎಂಥವರಿಗೂ ಆಶ್ಚರ್ಯವಾಗದೆ ಇರದು. ೨೦೦೫ರಲ್ಲಿ ಭಾರತ ಮತ್ತು ಅಮೆರಿಕದ ನಡುವೆ ಏರ್ಪಟ್ಟ ನಾಗರಿಕ ಅಣುಶಕ್ತಿ ಒಪ್ಪಂದದ ನಂತರ ಎಡಪಂಥೀಯರು ಮತ್ತು ವಿರೋಧಪಕ್ಷಗಳ ದೇಶದ ಬಗೆಗಿನ ಕಾಳಜಿ ಇದ್ದಕ್ಕಿದ್ದಂತೆ ಹೆಚ್ಚಾದ ಹಾಗಿದೆ. ಅಮೆರಿಕ ತಾನು ಅಣ್ವಸ್ತ್ರಶಕ್ತ ರಾಷ್ಟ್ರವಾದಾಗಿನಿಂದ ಭಾರತಕ್ಕೆ ಈಗ ಕೊಡಲು ಯೋಚಿಸಿರುವ ಅಣುಶಕ್ತಿ ತಂತ್ರಜ್ಞಾನವನ್ನು ಜಗತ್ತಿನ ಬೇರಾವ ರಾಷ್ಟ್ರಕ್ಕೂ ಕೊಟ್ಟ ಉದಾಹರಣೆ ಇಲ್ಲ. ಆದರೆ ಕಳೆದ ವರ್ಷ ಅಮೆರಿಕದ ಕಾಂಗ್ರೆಸ್ ತನ್ನ ನಿಲುವನ್ನು ಸಡಿಲಿಸಿ ಭಾರತಕ್ಕೆ ಅಣುಶಕ್ತಿ ತಂತ್ರಜ್ಞಾನವನ್ನು ಪಡೆದುಕೊಳ್ಳುವ ಅವಕಾಶ ಮಾಡಿಕೊಟ್ಟಿದೆ. ಇದಕ್ಕೆ ಸಾಕಷ್ಟು ಕಾರಣಗಳೂ ಇವೆ. ಅಮೆರಿಕದೊಂದಿಗೆ ಮಾಡಿಕೊಳ್ಳಲಾದ ನಾಗರಿಕ ಅಣುಶಕ್ತಿ ಒಪ್ಪಂದವು ಜಾರಿಗೆ ಬಂದರೆ ಭಾರತ ಮತ್ತು ಅಮೆರಿಕ ನಡುವಿನ ಸಂಬಂಧ ಇನ್ನೂ ಹೆಚ್ಚಾಗುತ್ತದೆ. ಅಲ್ಲದೆ ಈ ಒಪ್ಪಂದವನ್ನು ಪ್ರತಿವರ್ಷ ನವೀಕರ...

Get up Indians, hang him!

Do you think that whatever the Indian government and its ministers do are according to the secular principle? If your answer is ‘YES’, then you need not read this article! You might be well aware of the case of S.S.Sandhu, Superintendent of Police, Taran Taaran, who himself protected the people of Panjab from the brutal hands of terrorists in the 80s decade. He and his fellowmen had conducted many military operations against Sikh terrorists throughout Panjab and had strived hard to restore normalcy in the Panjab state. Later the National Human Right Commission of India filed many cases against him for he had, allegedly, violated the ‘human rights’ of terrorists! At that time no secularists, no human rights activists were present to advocate on behalf of Sandhu. Later Sandhu surrendered to death as he was unable to prove that he had not violated the ‘human rights’ of terrorists! It is strange but true that many a times Indian ‘secularists’ and ‘human right’ activists advocate on behalf ...