ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2010 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಅಭಿವೃದ್ಧಿಯ ಜಪ: ಕೇಳಿಸದ ಪ್ರಕೃತಿಯ ಆಲಾಪ

ಅದು 1980-90ರ ದಶಕ. ಪ್ರಪಂಚದ ಅತಿಸೂಕ್ಷ್ಮ ಜೀವವೈವಿಧ್ಯ ತಾಣಗಳಲ್ಲಿ ಒಂದಾದ ಪಶ್ಚಿಮ ಘಟ್ಟ ಸಾಲಿನ ಉತ್ತರ ಕನ್ನಡ ಜಿಲ್ಲೆಗೆ ಅಭಿವೃದ್ಧಿಯ ಹೆಸರಿನಲ್ಲಿ ಅನೇಕ ಯೋಜನೆಗಳು ದಾಂಗುಡಿಯಿಡಲು ಸಿದ್ಧವಾಗಿ ನಿಂತಿದ್ದ ಕಾಲ.ಕೈಗಾದಲ್ಲಿ ಕೇಂದ್ರ ಸರ್ಕಾರ ನಿರ್ಮಿಸಲು ಉದ್ದೇಶಿಸಿದ್ದ ಅಣುಸ್ಥಾವರದ, ಬೇಡ್ತಿ ಯೋಜನೆ ವಿರುದ್ಧ ರಾಜ್ಯದಾದ್ಯಂತ ವಿವಿಧ ರೀತಿಯ ಪ್ರತಿಭಟನೆಗಳು ನಡೆಯುತ್ತಿದ್ದವು. 1981-82ರ ಸುಮಾರಿಗೆ ಉ.ಕ. ಜಿಲ್ಲೆಯ ಶಿರಸಿಯಲ್ಲಿ ರಾಷ್ಟ್ರ, ಅಂತರರಾಷ್ಟ್ರೀಯ ಖ್ಯಾತಿಯ ವಿಜ್ಞಾನಿಗಳು ಸಭೆ ಸೇರಿ ಬೃಹತ್ ಜಲವಿದ್ಯುತ್ ಯೋಜನೆಗಳ ಬಗ್ಗೆ ಗಂಭೀರ ಚರ್ಚೆಯನ್ನು ಹುಟ್ಟುಹಾಕಿದ್ದರು. ಶಿರಸಿ ತಾಲೂಕಿನ ಭೈರುಂಬೆಯ ಪ್ರಗತಿಪರ ಕೃಷಿಕ ಕೆ.ಎಂ. ಹೆಗಡೆ ಮತ್ತಿತರರು 1995-96ರ ಸಮಯದಲ್ಲಿ ಉ.ಕ. ಜಿಲ್ಲೆಗೆ ಪರ್ಯಾಯ ಅಭಿವೃದ್ಧಿ ಮಾದರಿಗಳ ರೂಪುರೇಷೆಗಳ ಬಗ್ಗೆ ಚಿಂತನೆ ನಡೆಸಿದ್ದರು. 1993-94ರಲ್ಲಿ ಶಿರಸಿಯ ಸೋಂದಾ ಸ್ವರ್ಣವಲ್ಲಿ ಮಠದ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ ಬೇಡ್ತಿ ಯೋಜನೆಯನ್ನು ವಿರೋಧಿಸಿ ತಾವೇ ಖುದ್ದಾಗಿ ಸೋಂದಾದಿಂದ ಯಲ್ಲಾಪುರ ತಾಲೂಕಿನ ಮಾಗೋಡಿನ ತನಕ ಪಾದಯಾತ್ರೆ ನಡೆಸಿದ್ದರು; ಬೇಡ್ತಿ ನದಿಗೆ ಅಣೆಕಟ್ಟು ನಿರ್ಮಿಸಲು ಬಿಡಲಾರೆವು ಎಂದು ಮಾಗೋಡಿನಲ್ಲಿ ಸುಮಾರು 40 ಸಾವಿರ ಮಂದಿ ಪ್ರತಿಜ್ಞೆ ಕೈಗೊಂಡಿದ್ದರು. ಹೀಗೆ ಇಡೀ ಉ.ಕ. ಜಿಲ್ಲೆಯೇ ಪರಿಸರ ಪರ ಹೋರಾಟವೊಂದರಲ್ಲಿ ಕುದಿಯುತ್ತಿತ್ತು. ಇಂಥ ಮಹತ್ವದ ಕಾಲಘಟ್ಟದಲ