ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

“ಮಡಿಕ್ಕಳಿ ಸಾರ್!”

ಒಂದು ತಿಂಗಳಿಗೂ ಮಿಕ್ಕಿ ಮಾಡಿದ ಕೆಲಸವೊಂದು ಅಂತಿಮ ಹಂತಕ್ಕೆ ಬಂದಿದೆ. ಅದರ ಕೆಲಸದ ನಿಮಿತ್ತ ಮೊನ್ನೆ ಬೆಂಗಳೂರಿಗೆ ಹೋಗಿದ್ದೆ. ಮೂರು ದಿನ ಬೆಂಗಳೂರಲ್ಲಿದ್ದು ಮೊನ್ನೆ ಮಂಗಳವಾರ ಧರ್ಮಸ್ಥಳಕ್ಕೆ ಹೋಗುವ ಬಸ್ ಹತ್ತಿದೆ. ಬಸ್ ತನ್ನ ಪಯಣ ಆರಂಭಿಸಿತು. ಇನ್ನೂ ಬೆಂಗಳೂರನ್ನು ಬಸ್ಸು ಬಿಟ್ಟಿರಲಿಲ್ಲ. ಬಿಸಿಲು ತೀವ್ರವಾಗಿದ್ದ ಕಾರಣ ಬಾಯಾರಿಕೆ ಜೋರಾಗಿತ್ತು. ಬಸ್ಸು ಅದ್ಯಾವುದೋ ಸಿಗ್ನಲ್ಲಿನ ಬಳಿ ಬಂದು ನಿಂತಿತು. ಬಸ್ ನಿಂತ ಕೂಡಲೇ ಒಂದಿಷ್ಟು ಮಂದಿ ಹುಡುಗರು "ಮಜ್ಗೆ ಸಾರ್ ಮಜ್ಗೆ, ತಂಪು ಮಜ್ಗೆ" ಅಂತ ಕೂಗುತ್ತಾ ತಂಪಾದ ನಂದಿನಿ ಮಜ್ಜಿಗೆ ಪ್ಯಾಕೆಟ್ ಮಾರಲು ಬಸ್ಸನ್ನೇರಿದರು. ಅವರೆಲ್ಲರೂ ಹತ್ತರಿಂದ ಹದಿನಾಲ್ಕರ ನಡುವಿನ ವಯಸ್ಸಿನವರು. ನನಗೂ ಬಾಯಾರಿಕೆ ತೀವ್ರವಾಗಿದ್ದ ಕಾರಣ ಒಬ್ಬನನ್ನು ಕರೆದು "ಒಂದು ಪ್ಯಾಕ್ ಮಜ್ಜಿಗೆಗೆ ಎಷ್ಟು" ಅಂತ ಕೇಳಿದೆ. "ಏಳ್ರುಪಾಯ್ ಸಾರ್" ಅಂದ. "ಸರಿ, ಒಂದು ಪ್ಯಾಕ್ ಕೊಡು" ಅಂದೆ. ಒಂದು ಪ್ಯಾಕ್ ಮಜ್ಜಿಗೆಯನ್ನು ಅವನಿಂದ ಇಸಿದುಕೊಂಡು ಅವನಿಗೆ ಹತ್ತು ರೂಪಾಯಿ ನೋಟು ಕೊಟ್ಟೆ. ಆ ಹುಡುಗ "ಚಿಲ್ರೆ ಕೊಡಿ ಸಾರ್" ಎಂದ. ನನ್ನ ಬಳಿ ಏಳು ರೂಪಾಯಿ ಚಿಲ್ಲರೆ ಇರಲಿಲ್ಲ. "ಚಿಲ್ರೆ ಇಲ್ಲಪ್ಪಾ, ನೀನೇ ಕೊಡು" ಎಂದೆ. ಊಹೂಂ, ಆ ಹುಡುಗ ಎಷ್ಟೇ ತಡಕಾಡಿದರೂ ಅವನಿಗೆ ನನಗೆ ಕೊಡಲು ಬೇಕಾದ ಮೂರು ರೂಪಾಯಿ ಚಿಲ್ಲರೆ ಸಿಗಲಿಲ್ಲ. "ಏನ್ಮಾಡ್ಲಿ ಸಾರ್? ಚಿ...

Come, fall in love!

“We will not allow the youth to celebrate the Valentine’s Day this time” shouted an orthodox when I was having a discourse with him on the nature of Indian culture and its ethos. “But why? Who are you, after all, to curb the happiness of a large chunk of the community? What right do you have to stop the youth from falling in love?” I questioned him. Well, I got some expected answers to my question. “We are not against loving. But we do not allow celebrating Valentine’s Day as it is an alien culture. We would have rightly allowed celebrating the day had it been a part of Indian culture. Every Indian has to follow what Indian culture cherishes” he explained with a proud voice. I came back understanding that there was no use in having a discourse with the person. As we all know, youth – especially those who have fallen in love – celebrate Valentine’s Day on February 14 every year, throughout the world, except in some of the fundamental Islamic states. India, too, welcomed this fest with a...

ಸಾಹಿತ್ಯ ಎನ್ನುವುದು ಆತ್ಮ ಶುದ್ಧಿಯ ಸಾಧನ, ತಿಳ್ಕೊ!

(ಪರೀಕ್ಷೆ, ತಿರುಗಾಟ, ಅನಾರೋಗ್ಯ... ಹೀಗೆ ಹಲವಾರು ಕಾರಣಗಳಿಂದ ಬ್ಲಾಗಿನಲ್ಲಿ ಹಲವು ದಿನಗಳ ನಂತರ ಅಕ್ಷರಗಳನ್ನು ಕಟ್ಟುತ್ತಿದ್ದೇನೆ. ಇದೇನೂ ಲೇಖನವಲ್ಲ. ಸುಮ್ಮನೆ ಕುಳಿತುಕೊಂಡು ಬರೆದ - ಯಾರನ್ನೂ ನೇರವಾಗಿ ಉದ್ದೇಶಿಸಿರದ - ಒಂದು ಪುಟ್ಟ ಪತ್ರ. ಹೊಸ ಬರಹದೊಂದಿಗೆ ಮತ್ತೆ ಕೆಲವೇ ದಿನಗಳಲ್ಲಿ ಭೇಟಿಯಾಗೋಣ.) ಆತ್ಮೀಯ ಸ್ನೇಹಿತೆ... ಬರಹವನ್ನು ಮುಂದುವರೆಸುವದೋ ಬೇಡವೋ ಎನ್ನುವ ಪ್ರಶ್ನೆಯನ್ನಿಟ್ಟುಕೊಂಡು ನೀನು ನನಗೆ ಬರೆದ ಪತ್ರ ಓದಿದೆ. ಆ ಪತ್ರವನ್ನೇ ನಿನ್ನ ಬ್ಲಾಗಿನಲ್ಲಿ ಹಾಕಿದ್ದರೆ ಒಂದು ಒಳ್ಳೆಯ ಲೇಖನ ಆಗುತ್ತಿತ್ತು. ನಾನು ನಿನಗೆ support ಮಾಡ್ತಿ ಅಂತ ಬರೆದಿದ್ದೀಯಾ. ಧನ್ಯವಾದ ನೆನಪಿಟ್ಟುಕೊಂಡದ್ದಕ್ಕೆ! ಅದಿರಲಿ. ಒಂದು ವಿಷಯ ನೆನಪಿರಲಿ. ಯಾರೊಬ್ಬರ ಬರಹವೂ ಪರಿಪೂರ್ಣ ಅಲ್ಲ. ಪರಿಪಕ್ವವೂ ಅಲ್ಲ. ನನ್ನ ಬರಹ ಪರಿಪಕ್ವ ಅಂತ ಇವತ್ತಿನವರೆಗೆ ಯಾರೂ ಘೋಷಿಸಿಕೊಂಡಿಲ್ಲ. ಹಾಗೊಮ್ಮೆ ಯಾರಾದರೂ ಘೋಷಿಸಿಕೊಂಡರೆ ಅದು ಅಹಂಕಾರವಷ್ಟೆ. ನೀನು ಲಂಕೇಶ್, ಅಡಿಗರ ಉದಾಹರಣೆ ಕೊಟ್ಟಿದ್ದೀಯಾ. ಇದರರ್ಥ ನೀನು ಅವರ ಬರಹ ಓದುತ್ತಿದ್ದೀಯಾ ಎಂದಾಯಿತು. ಬಹಳ ಒಳ್ಳೆಯದು. ಅವರ ಬರಹಗಳಿಗೆ ದೊಡ್ಡ ಪ್ರಮಾಣದ ಓದುಗರಿದ್ದಾರೆ. ಹಾಗೆಯೇ ಲಂಕೇಶರ ಬರಹಗಳನ್ನು ಟೀಕಿಸುವ ಒಂದು ಬಣವೇ ಇದೆ. ಅಡಿಗರ ಬರಹವನ್ನೂ ಹಲವು ಮಂದಿ ಪ್ರಶ್ನಿಸಿದ್ದಾರೆ. ಇವರಿಬ್ಬರೇ ಅಲ್ಲ ಜಗತ್ತಿನ ಯಾವ ಬರಹಗಾರನ ಬರಹವೂ ಪ್ರಶ್ನಾತೀತವಲ್ಲ. ನನ್ನದು-ನಿನ್ನದೂ ಕೂಡ. ನೀನು ಬರೆದದ್ದನ್ನು ಹತ್ತು...

ಇತಿಹಾಸದ ಬಗ್ಗೆ ನಮ್ಮ ಹರಟೆ

ಮೊನ್ನೆ ವೈಯುಕ್ತಿಕ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಹಲವಾರು ಐತಿಹಾಸಿಕ ಸ್ಥಳಗಳನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿರುವ ಊರು ಶಿರಸಿ. ಕದಂಬರಾಳಿದ ಇತಿಹಾಸ ಪ್ರಸಿದ್ಧ ಬನವಾಸಿ, ಅರಸಪ್ಪ ನಾಯಕನ ಸೋದೆ (ಅಥವಾ ಸೋಂದಾ)ಯಂತಹ ಐತಿಹಾಸಿಕ ಪ್ರದೇಶಗಳಿರುವುದು ಶಿರಸಿ ತಾಲೂಕಿನಲ್ಲಿ. ಪಶ್ಚಿಮ ಘಟ್ಟಗಳ ಬೆಟ್ಟವೊಂದರ 'ಶಿರ' ಭಾಗದಲ್ಲಿ ಈ ಪಟ್ಟಣ ಬೆಳೆದಿರುವುದರಿಂದಲೇ ಇದಕ್ಕೆ 'ಶಿರಸಿ' ಎಂಬ ಹೆಸರು ಬಂತು. ಹಾಗೆ ಶಿರಸಿ ತಾಲೂಕಿನ ಸೋಂದಾ ಗ್ರಾಮಕ್ಕೆ ಹೋಗಿದ್ದಾಗ ಧಾರವಾಡ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿ ಈಗ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಯುವ ಮಿತ್ರರೊಬ್ಬರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತ್ತು. ಹಾಗೇ ಅವರ ಜೊತೆ ಅದು-ಇದು ಅಂತ ಮಾತನಾಡುತ್ತಿದ್ದಾಗ ನಮ್ಮ ಮಾತುಕತೆ ನಿಧಾನವಾಗಿ ಇತಿಹಾಸವನ್ನು ಶಾಸ್ತ್ರೀಯವಾಗಿ ಓದುವುದರ ಅಗತ್ಯತೆಯ ಬಗ್ಗೆ ಹೊರಳಿತು. ಪ್ರಾಥಮಿಕ ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳು, ಅವುಗಳಲ್ಲಿ ಬರುವ ಯುದ್ಧ ವಿವರಣೆಗಳು, ರಾಜರ ಜೀವನ ವಿಧಾನಗಳ ಬಗ್ಗೆಯೂ ನಾವು ಮಾತನಾಡಿದೆವು. ಇತಿಹಾಸವನ್ನು ಓದಲು ಇವತ್ತಿನ ಯುವ ಸಮುದಾಯ ತೋರಿಸುತ್ತಿರುವ ನಿರಾಸಕ್ತಿಯ ಬಗ್ಗೆ ನಮ್ಮಲ್ಲಿ ನಡೆದ ಮಾತುಕತೆಯ ಸಾರವನ್ನು ನಿಮಗೂ ಉಪಯೋಗವಾಗಬಹುದು ಎಂಬ ಕಾರಣದಿಂದ ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 'ಇತಿಹಾಸ ಪಠ್ಯಪುಸ್ತಕಗಳು' ಎ...

ದೇಶವುಳಿಸಲು ಇನ್ನೊಬ್ಬ ಸರ್ದಾರ್ ಪಟೇಲ್ ಬೇಕು!

ಪ್ರಾಮಾಣಿಕವಾಗಿ ಒಮ್ಮೆ ಪ್ರಶ್ನಿಸಿಕೊಳ್ಳಿ. ಭಾರತದ ರಾಜಧಾನಿ ದೆಹಲಿಯಲ್ಲಿ ನಿಜಕ್ಕೂ ಒಂದು ಚುನಾಯಿತ ಸರಕಾರ ಇದೆಯಾ? ಆ ಸರಕಾರದಲ್ಲಿ ರಕ್ಷಣಾ ಮಂತ್ರಿ ಮತ್ತು ಗೃಹ ಮಂತ್ರಿಗಳು ಇದ್ದಾರಾ? ಅವರೆಲ್ಲರ ಉಸ್ತುವಾರಿಯನ್ನು ನೋಡಿಕೊಳ್ಳಲು ಪ್ರಧಾನ ಮಂತ್ರಿ ಅಂತ ಒಬ್ಬ ವ್ಯಕ್ತಿ ನಿಜಕ್ಕೂ ಇದ್ದಾನಾ? ಒಂದು ವೇಳೆ ನಮ್ಮ ದೇಶಕ್ಕೆ ಒಬ್ಬ ಪ್ರಧಾನಿ, ಒಬ್ಬ ಗೃಹ ಮಂತ್ರಿ, ಮತ್ತೊಬ್ಬ ರಕ್ಷಣಾ ಮಂತ್ರಿ ಅಂತ ಇದ್ದಾರೆ ಅಂತಾದರೆ ನಿಜಕ್ಕೂ ಅವರು ಗಂಡಸರಾ?! ಮೇಲೆ ಕೇಳಿದ ಪ್ರಶ್ನೆಗಳು ಬಾಲಿಶ ಅನಿಸಬಹುದು. ಅತಿರೇಕದ್ದು ಅಂತಲೂ ಕೆಲವರಿಗೆ ಅನಿಸಿರಬಹುದು. ಕಾಂಗ್ರೆಸ್ ಎಂಬ ರಾಜಕೀಯ ಎದೆಗಾರಿಕೆಯೇ ಇಲ್ಲದ ಪಕ್ಷಕ್ಕೆ ೨೦೦೪ರ ಚುನಾವಣೆಯಲ್ಲಿ ಓಟು ಹಾಕಿದವರಿಗೆ ಕೋಪ ನೆತ್ತಿಗೇರಿರಬಹುದು. ಆದರೆ ಇಂಥ ಪ್ರಶೆಗಳನ್ನು ಕೇಳುವುದು ಅನಿವಾರ್ಯವಾಗಿದೆ. ಭಾರತದ ಪಾಲಿಗೆ ಮತೀಯ ಭಯೋತ್ಪಾದನೆಯೆಂಬುದು ಖಂಡಿತಾ ಹೊಸದಲ್ಲ. ಕೇಂದ್ರದಲ್ಲಿ ಯಾವ ಪಕ್ಷದ ಸರಕಾರವಿದ್ದರೂ ಭಾರತದ ಮೇಲೆ ನಡೆಯುತ್ತಿರುವ ಭಯೋತ್ಪಾದನಾ ದಾಳಿಗಳ ತೀವ್ರತೆಯೇನೂ ಕಡಿಮೆಯಾಗಿಲ್ಲ. ಆದರೆ ಒಮ್ಮೆ ಯೋಚಿಸಿ. ೨೦೦೪ರಲ್ಲಿ ಕೇಂದ್ರದಲ್ಲಿ ಅಧಿಕಾರ ಹಿಡಿದ ಸೋನಿಯಾ ಮೈನೋ ನೇತೃತ್ವದ ಮನಮೋಹನ್ ಸಿಂಗ್ ನೇತೃತ್ವದ ಸರಕಾರ ಭಯೋತ್ಪಾದನೆಯನ್ನು ತಡೆಗಟ್ಟುವಲ್ಲಿ ಒಂದಾದರೂ ಪ್ರಾಮಾಣಿಕ ಪ್ರಯತ್ನ ಮಾಡಿದೆಯಾ? ಇಲ್ಲ. ಏಕೆಂದರೆ ಇವತ್ತಿನವರೆಗೂ ಭಯೋತ್ಪಾದಕ ದಾಳಿಯಲ್ಲಿ ಕಾಂಗ್ರೆಸ್ ನಾಯಕರ ಮಕ್ಕಳು ಸತ್ತಿಲ್ಲ. ದೇಶದ ಆರ್ಥಿಕ ...

ಬಂದೂಕಿನಿಂದ ದೇಶದ ಸಮಸ್ಯೆಗೆ ಉತ್ತರ ಹುಡುಕಲು ಸಾಧ್ಯವಿಲ್ಲ

ಹೊರನಾಡಿನ ಸಮೀಪ ನಡೆದ ಪೋಲೀಸ್ ಎನ್‌ಕೌಂಟರಿನಲ್ಲಿ ಮೂವರು ನಕ್ಸಲರು ಹತ್ಯೆಯಾಗಿದ್ದು, ಶಾಂತ ಮಲೆನಾಡಿನ ಹಸಿರು ನೆಲ ಬಿಸಿ ರಕ್ತದಿಂದ ಕೆಂಪಾಗಿದ್ದು ಇಡೀ ರಾಜ್ಯಕ್ಕೇ ಗೊತ್ತಾಗಿದೆ. ಇದೇ ಎನ್‌ಕೌಂಟರಿನಲ್ಲಿ ರಾಜ್ಯ ನಕ್ಸಲ್ ನಿಗ್ರಹ ದಳದ ಗುರುಪ್ರಸಾದ್ ಕೂಡ ಮೃತರಾಗಿದ್ದಾರೆ. ಅವರ ಕುಟುಂಬದ ನೋವಿಗೆ ಸಾಂತ್ವನ ಹೇಳಲು ಪದಗಳಿಲ್ಲ. ಮೃತ ನಕ್ಸಲರ ಪೈಕಿ ಒಬ್ಬನಾದ ಮನೋಹರ ಹಿಂದೊಮ್ಮೆ ವೃತ್ತಿಯಿಂದ ಪತ್ರಕರ್ತನಾಗಿದ್ದ. ಸಾಕಷ್ಟು ಓದಿಕೊಂಡಿದ್ದ. ಇದಲ್ಲದೆ ನವಕರ್ನಾಟಕ ಪ್ರಕಾಶನದ ’ಹೊಸತು’ ಪತ್ರಿಕೆಗೆ ಆರ್ಥಿಕ ಸಂಕಷ್ಟ ಮತ್ತು ಜಾಗತೀಕರಣಗಳಂತಹ ಗಹನ ವಿಚಾರಗಳ ಬಗ್ಗೆ ಲೇಖನವನ್ನೂ ಬರೆದಿದ್ದ ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ಶಿವಮೊಗ್ಗದಲ್ಲಿ ಈತ ಬಿಎಸ್ಸಿ ಓದುತ್ತಿದ್ದ ದಿನಗಳಿಂದಲೇ ಅನೇಕ ಚಳವಳಿಗಳಲ್ಲಿ ಭಾಗವಹಿಸುತ್ತಿದ್ದ ಎಂದೂ ಪತ್ರಿಕೆಗಳಲ್ಲಿ ವರದಿಯಾಗಿದೆ. ಇನ್ನೊಬ್ಬ ಮೃತ ನಕ್ಸಲ ಮೂಡಿಗೆರೆ ತಾಲೂಕು ಉದಸೆ ಗ್ರಾಮದ ದೇವಯ್ಯ ಕೂಡ ಬಿಎ ಪದವಿ ಪಡೆದಿದ್ದ. ಉದಸೆ ಊರಿನಲ್ಲಿ ಆತನೇ ಹೆಚ್ಚು ವಿದ್ಯಾವಂತ ಎಂದು ಹೇಳಲಾಗಿದೆ. ಇನ್ನೊಬ್ಬ ಮೃತ ನಕ್ಸಲ ನಾಗಸಾಲ್ಮಕ್ಕಿಯ ರವಿ ಕೇವಲ ಹತ್ತೊಂಬತ್ತು ವರ್ಷದ ಎಳೆಯ. ಮೊನ್ನೆ ನಡೆದ ಎನ್‌ಕೌಂಟರಿನಲ್ಲಿ ಸಮಾಜಕ್ಕೆ ದೊಡ್ಡ ಆಸ್ತಿಯಾಗಬೇಕಿದ್ದ ಇಂಥ ಯುವಕರೇ ಹತ್ಯೆಯಾಗಿದ್ದನ್ನು ನೋಡಿದರೆ ಎಂಥವನಿಗಾದರೂ ಒಮ್ಮೆ ಕಣ್ಣೀರು ಬಂದೇ ಬರುತ್ತದೆ. ಅದರಲ್ಲೂ ಕೈಯಲ್ಲಿ ಪೆನ್ ಹಿಡಿದುಕೊಂಡು, ನೊಂದವರ ಪಾಲಿಗೆ ಧ್ವನಿಯಾಗಬ...

’ಹಿಂದೂ’ ಎನ್ನುವುದು ಕೇವಲ ಧರ್ಮವಲ್ಲ, ಅದೊಂದು ಜೀವನ ಪದ್ಧತಿ

ಮೊಟ್ಟಮೊದಲನೆಯದಾಗಿ ಮತಾಂತರವೆಂಬ ಪೀಡೆಯ ಬಗ್ಗೆ ಆರೋಗ್ಯಕರ ಚರ್ಚೆಯೊಂದನ್ನು ಆರಂಭಿಸಿದ್ದಕ್ಕಾಗಿ ವಿಜಯ ಕರ್ನಾಟಕದ ಹೆಮ್ಮೆಯ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಮತ್ತು ಅದರ ವಿ.ಕ ಬಳಗಕ್ಕೆ ಅಭಿನಂದನೆಗಳು. ಆ ದಿನ ವಿಜಯ ಕರ್ನಾಟಕದ ಮೊದಲ ಪುಟದಲ್ಲಿ ಭೈರಪ್ಪನವರ ಲೇಖನವನ್ನು ನೋಡಿದಾಗಲೇ ಇದು ಸಾಮಾನ್ಯ ವಿಷಯವಲ್ಲ, ಭೈರಪ್ಪನವರು ಎಂದಿನಂತೆ ವರ್ಷಗಳಕಾಲ ಅಧ್ಯಯನ ಮಾಡಿಯೇ ಇಂಥದ್ದೊಂದು ಸಾಹಸ ಮಾಡಿದ್ದಾರೆ ಅನಿಸಿತು. ವಿ.ಕ ಕೂಡ ತಾನು ಈ ವಿಷಯದ ಮೇಲಣ ಚರ್ಚೆಗೆ ವೇದಿಕೆಯೇ ಹೊರತು ವಕ್ತಾರ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಹಾಗಾಗಿ ಈ ವಿಚಾರದ ಬಗ್ಗೆ ಒಂದು ಆರೋಗ್ಯಕರ ಚರ್ಚೆ ನಡೆಯಬಹುದೆಂಬ ನಿರೀಕ್ಷೆ ಖಂಡಿತಾ ಎಲ್ಲರಿಗೂ ಇತ್ತು. ಅದು ಒಂದು ಹಂತದ ಮಟ್ಟಿಗೆ ನಿಜವಾಗಿದೆ ಕೂಡ. ಆದರೆ ವಿಷಯ ಅದಲ್ಲ. ಭೈರಪ್ಪನವರು ಬರೆದ ಲೇಖನ ಓದಿದರೇ ಗೊತ್ತಾಗುತ್ತದೆ; ಇದು ಒಂದೋ ಎರಡೋ ದಿನದಲ್ಲಿ ಕುಳಿತು ಬರೆದದ್ದಲ್ಲ. ಬದಲಿಗೆ ಭೈರಪ್ಪನವರು ಸಾಕಷ್ಟು ಪರಿಶ್ರಮ ಪಟ್ಟು, ಅಧ್ಯಯನ ಮಾಡಿ ಬರೆದಿದ್ದಾರೆ ಅನ್ನುವುದು ಯಾರಿಗೂ ತಿಳಿಯುತ್ತದೆ. ಅದಲ್ಲದೆ ಅವರು ತಮ್ಮ ಲೇಖನದ ಕೊನೆಯಲ್ಲಿ ಕೊಟ್ಟಿರುವ ಆಕರ ಗ್ರಂಥಗಳ ಪಟ್ಟಿಯಲ್ಲಿರುವುದೆಲ್ಲ ಅರುಣ್ ಶೌರಿ, ನವರತ್ನ. ಎಸ್. ರಾಜಾರಾಮ್, ಸೀತಾರಾಮ್ ಗೋಯೆಲ್‌ರಂಥ ಖ್ಯಾತ ಸಂಶೋಧಕರು ಬರೆದದ್ದೇ. ಅವುಗಳಲ್ಲಿ ಯಾವೊಂದೂ ನಿರ್ಲಕ್ಷಿಸುವಂಥದ್ದಲ್ಲ. ಅದಿರಲಿ. ಈಗ ನೀವೇ ಹೇಳಿ... ಭೈರಪ್ಪನವರ ತಾರ್ಕಿಕ ಲೇಖನಕ್ಕೆ ಬಂದಿರುವ ಕೆಲವ...