ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆ ಆಂದೋಲನ ಕರ್ನಾಟಕವನ್ನು ಪ್ರಭಾವಿಸಿದ್ದು ಹೀಗೆ

ಉತ್ತರದಲ್ಲಿ ಗುಜರಾತ್‌ನಿಂದ ದಕ್ಷಿಣದಲ್ಲಿ ಕೇರಳ ರಾಜ್ಯದವರೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮೂಲಕ ಹಾದುಹೋಗುವ ಶಿಖರ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಅಂತ ಹೆಸರು. ಇದನ್ನೇ ಪಶ್ಚಿಮ ಘಟ್ಟಗಳು ಅಂತಲೂ ಕರೆಯುತ್ತಾರೆ. ಇಲ್ಲಿ ದಟ್ಟ ಅರಣ್ಯವಿದೆ, ಹುಲ್ಲುಗಾವಲಿದೆ, ಜಗತ್ತಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂಥ ಜೀವವೈವಿಧ್ಯವಿದೆ. ಇದು ದಕ್ಷಿಣ ಭಾರತದ ಅನೇಕ ಜೀವನದಿಗಳ ಉಗಮಸ್ಥಾನವೂ ಹೌದು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸುಮಾರು ೨೫-೩೦ ವರ್ಷಗಳ ಕಾಲ ದೇಶ ತೀವ್ರಗತಿಯ ಕೈಗಾರಿಕೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡಿತು. ಈಗಲೂ ತೆರೆದುಕೊಳ್ಳುತ್ತಿದೆ, ಅದು ಬೇರೆ ಮಾತು. ಅಂದಿನ ಕೈಗಾರಿಕೀಕರಣದ ಭರಾಟೆ ಹೇಗಿತ್ತೆಂದರೆ ಅರಣ್ಯನಾಶ, ಜೀವವೈವಿಧ್ಯ ನಾಶ, ನದಿಮೂಲಗಳ ಬತ್ತುವಿಕೆಯಂತಹ ಸಮಸ್ಯೆಗಳು ನಮ್ಮನ್ನು ಆಳುವ ಸರಕಾರಗಳಿಗೆ ಅರ್ಥವೇ ಆಗುತ್ತಿರಲಿಲ್ಲ. ಅವರ ಉದ್ದೇಶ ಒಂದೇ, ಭಾರತ ಕೂಡ ಯುರೋಪಿಯನ್ ರಾಷ್ಟ್ರಗಳಂತೆ ಔದ್ಯಮೀಕರಣಗೊಳ್ಳಬೇಕು. ಇದರ ಪರಿಣಾಮವಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಯಿತು. ಪಶ್ಚಿಮ ಘಟ್ಟಗಳೂ ಇದರಿಂದ ಹೊರತಾಗಲಿಲ್ಲ. ಅಲ್ಲಿನ ಅಪಾರ ಪ್ರಮಾಣದ ಜೀವವೈವಿಧ್ಯಕ್ಕೆ ಕೊಡಲಿಪೆಟ್ಟು ಬಿತ್ತು. ನದಿಮೂಲಗಳು ಬತ್ತತೊಡಗಿದವು. ಜನರು ತೊಂದರೆ ಅನುಭವಿಸತೊಡಗಿದರು. ಕಾಡು ಕಡಿದು, ಪರಿಸರ ನಾಶಮಾಡಿ ದೇಶಕಟ್ಟಲು ಸಾಧ್ಯವಿಲ್ಲ ಎಂಬ ಸತ್ಯ ನಿಧಾನವಾಗಿಯಾದರೂ ಜನರ ಅರಿವಿಗೆ ಬರಲಾರಂಭಿಸಿತು. ಈ ನಡುವೆ ೧೯೭೫...

ವಿವೇಕ ವಾಣಿ ನೆನಪಿರಲಿ...

ಸ್ವಾಮಿ ವಿವೇಕಾನಂದರು ವಿದೇಶದಿಂದ ಭಾರತಕ್ಕೆ ಹಿಂದಿರುಗಿ ಬರುತ್ತಿದ್ದರು. ಸ್ವಾಮೀಜಿಯವರು ಬರುತ್ತಿದ್ದ ಹಡಗಿನಲ್ಲಿಯೇ ಒಬ್ಬ ಕ್ರೈಸ್ತ ಪಾದ್ರಿಯೂ ಇದ್ದ. ಸ್ವಾಮೀಜಿಯವರು ಆ ಪಾದ್ರಿಯ ಬಳಿ ಪ್ರತಿದಿನವೂ ಧರ್ಮ, ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಪ್ರತಿ ಬಾರಿಯೂ ಆ ಪಾದ್ರಿ ಸ್ವಾಮೀಜಿಯ ಎದುರು ವಾದದಲ್ಲಿ ಸೋಲುತ್ತಿದ್ದ. ನಂತರ ವಿನಾಕಾರಣ ಭಾರತೀಯ ಸಂಸ್ಕೃತಿಯನ್ನು, ಹಿಂದೂ ಧರ್ಮವನ್ನು ನಿಂದಿಸುತ್ತಿದ್ದ. ಸ್ವಾಮೀಜಿ ಮೊದಮೊದಲು ಸುಮ್ಮನಿದ್ದರಾದರೂ ನಂತರ ಒಂದು ದಿನ ಆ ಪಾದ್ರಿಯು ಹಡಗಿನ ಅಂಚಿನಲ್ಲಿ ಇದ್ದಾಗ ಅವನ ಸಮೀಪಕ್ಕೆ ಹೋಗಿ, ಅವನನ್ನು ಬಿಗಿಯಾಗಿ ಹಿಡಿದುಕೊಂಡು, "ನೋಡು, ನೀನು ನನ್ನ ಧರ್ಮವನ್ನು, ದೇಶವನ್ನು ಬಯ್ಯುವುದನ್ನು ಬಿಡದೆ ಇದ್ದರೆ ನಿನ್ನನ್ನು ಹೀಗೆಯೇ ಸಮುದ್ರಕ್ಕೆ ನೂಕಿಬಿಡುವೆ!" ಎಂದು ಗದರಿಸಿದರು. ಆಗ ಪಾದ್ರಿಯ ಕೈಕಾಲುಗಳು ಭಯದಿಂದ ಕಂಪಿಸತೊಡಗಿದವು. "ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಇನ್ನುಮುಂದೆ ನಾನು ಹಾಗೆ ಮಾಡುವುದಿಲ್ಲ" ಎಂದು ಆ ಪಾದ್ರಿಯು ಸ್ವಾಮೀಜಿಯವರಲ್ಲಿ ಬೇಡಿಕೊಂಡನು. ಆತನ ಬೇಡಿಕೆಯನ್ನು ಮನ್ನಿಸಿದ ಸ್ವಾಮೀಜಿ ಅವನನ್ನು ಬಿಟ್ಟರು. ಅನಂತರ ಅವನು ಸ್ವಾಮೀಜಿಗೆ ಗೌರವ ನೀಡಲು ಪ್ರಾರಂಭಿಸಿದನು. ನಿಜ, ಸ್ವಾಮಿ ವಿವೇಕಾನಂದರು ಸರ್ವಸ್ವವನ್ನೂ ತ್ಯಾಗ ಮಾಡಿದ ಸನ್ಯಾಸಿ. ಅವರು ಒಬ್ಬ ಪಾದ್ರಿಯ ಮೇಲೆ ಈ ಥರ ಕೋಪಗೊಂಡಿದ್ದು ಸರಿಯೇ ಅನ್ನುವ ಅನುಮಾನ ಬರಬ...

ಯಾರು ಒಳ್ಳೆಯವರು?

ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಕತೆ. ಆತನ ಹೆಸರು ಸೋಮಣ್ಣ, ಅವನ ನೆರೆಮನೆಯವನ ಹೆಸರು ರಾಮಣ್ಣ. ಇಬ್ಬರೂ ವಾಸಿಸುತ್ತಿದ್ದದ್ದು ಕಾನೂರು ಎಂಬ ಪುಟ್ಟ ಹಳ್ಳಿಯಲ್ಲಿ. ಇಬ್ಬರೂ ಬ್ರಾಹ್ಮಣರು. ರಾಮಣ್ಣ ಬಹಳ ಸಾಧು ಸ್ವಭಾವದವ. ಯಾವತ್ತೂ, ಯಾರ ಮೇಲೂ ಹರಿಹಾಯ್ದವನಲ್ಲ. ದಿನದ ಮೂರೂ ಹೊತ್ತು ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡುತ್ತಿದ್ದ. ಮೊಸ, ಕಪಟ, ಜೂಜು... ಇದ್ಯಾವುದೂ ರಾಮಣ್ಣನಿಗೆ ಗೊತ್ತಿಲ್ಲ. ಹೆಂಡ, ಮಾಂಸ, ಪರಸ್ತ್ರೀ ಸಹವಾಸಗಳಿಂದ ರಾಮಣ್ಣ ಮೈಲು ದೂರ. ಒಟ್ಟಿನಲ್ಲಿ ಒಬ್ಬ ಸಂಭಾವಿತ, ಸುಭಗ ನಾಗರಿಕ. ರಾಮಣ್ಣನ ವ್ಯಕ್ತಿತ್ವಕ್ಕೆ ಸ್ವಲ್ಪ ಮಟ್ಟಿಗೆ ವಿರುದ್ಧವಾದ ವ್ಯಕ್ತಿತ್ವ ಸೋಮಣ್ಣನದು. ಸೋಮಣ್ಣನಿಗೆ ಸುಳ್ಳು ಹೇಳಲು, ಸೋಗು ಹಾಕಲು, ಇನ್ನೊಬ್ಬರ ಮೇಲೆ ದ್ವೇಷ ಕಾರಲು ಬರುತ್ತಿರಲಿಲ್ಲವಾದರೂ ಸ್ವಲ್ಪ ಮುಂಗೋಪ. ಅದಲ್ಲದೆ ಸೋಮಣ್ಣನಿಗೆ ಹೆಂಡ, ಮಾಂಸಗಳ ಸಹವಾಸ ಸ್ವಲ್ಪ ಜೋರಾಗಿಯೇ ಇತ್ತು. ಇಸ್ಪೀಟು ಕೂಡಾ ಜನ್ಮಜಾತ ಕಲೆಯೆಂಬಂತೆ ಬಂದಿತ್ತು. ಅದೇ ಕಾರಣದಿಂದ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸೋಮಣ್ಣ ಒಬ್ಬ ಫಟಿಂಗನಾಗಿದ್ದ. ಆತ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸಂಭಾವಿತನೂ ಅಲ್ಲ, ಸುಭಗನೂ ಅಲ್ಲ. ಸಾಧು ಸ್ವಭಾವದ ರಾಮಣ್ಣ ತನ್ನ ಜೀವಿತಾವಧಿಯ ಕಟ್ಟಕಡೆಯ ದಿನದವರೆಗೂ ಸಾಧು ಪ್ರಾಣಿಯಾಗಿಯೇ ಉಳಿದ. ಅವನಿಂದ ಯಾರಿಗೂ ಹಾನಿಯಾಗಲಿಲ್ಲ, ಯಾರಿಗೂ ಉಪಕಾರವೂ ಆಗಲಿಲ್ಲ. ಆದರೆ ರಾಜಾರೋಷವಾಗಿ ಹೆಂಡ, ಮಾಂಸಗಳ ಸಹವಾಸ ಮಾಡಿದ ಸೋಮಣ್ಣ ತನ್ನ ಜೀವಿತಾವಧಿಯ...

ಕನ್ನಡ ಪುಸ್ತಕಗಳು ಹೇಗಿರಬೇಕು?

ನನಗೆ ಪತ್ರಿಕೋದ್ಯಮ ಮತ್ತು ಬರವಣಿಗೆಯ ಬಗ್ಗೆ ಅನುಮಾನಗಳು ಮೂಡಿದಾಗ, ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ನಾನು ಆಯ್ಕೆಮಾಡಿಕೊಳ್ಳುವ ವ್ಯಕ್ತಿಗಳ ಪೈಕಿ ನಮ್ಮ ಮನೆಯ ಸಮೀಪದಲ್ಲೇ ಇರುವ ಗಣಪತಿ ಎಂ. ಎಂ. ಅವರೂ ಒಬ್ಬರು. ವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ವಿದ್ಯಾರ್ಥಿ ದೆಸೆಯಿಂದಲೂ ಪ್ರಗತಿಪರ ಚಳವಳಿಯೊಂದಿಗೆ ಬೆಳೆದುಬಂದವರು. ನಾನೊಬ್ಬ ಪ್ರಗತಿವಾದಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರು. ಜೊತೆಗೆ ಕನ್ನಡ ಭಾಷೆ, ಕನ್ನಡ ಪುಸ್ತಕಗಳ ಬಗ್ಗೆ ಅಭಿಮಾನ ಇರುವವರು. ಒಮ್ಮೆ ಹೀಗೆ ಅವರ ಮನೆಗೆ ಹೋಗಿದ್ದಾಗ ಕನ್ನಡ ಪುಸ್ತಕಗಳ ಬಗ್ಗೆ ನನ್ನ ಮತ್ತು ಅವರ ನಡುವೆ ನಡೆದ ಸಣ್ಣ ಮಾತುಕತೆಯ ಬಗ್ಗೆ ನಿಮ್ಮ ಮುಂದೆ ಪ್ರಸ್ತಾಪ ಮಾಡಬೇಕೆನಿಸುತ್ತಿದೆ. ನಾನು ಗಣಪತಿಯವರ ಮನೆಗೆ ಹೋದಾಗ ಅವರು ಆಗತಾನೇ ಕೊಂಡುತಂದಿದ್ದ ಯಾವುದೋ ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಿದ್ದರು. ನನ್ನನ್ನು ಕಂಡೊಡನೆಯೇ ಒಮ್ಮೆ ಮುಗುಳ್ನಕ್ಕು ಒಂದೆರಡು ಪುಸ್ತಕಗಳನ್ನು ನನ್ನ ಮುಂದಿಟ್ಟರು. ಪುಸ್ತಕಗಳನ್ನು ಕಂಡೊಡನೆಯೇ ನಾನು ಕೆಲವೇ ದಿನಗಳ ಹಿಂದೆ ಕೊಂಡು ತಂದಿದ್ದ ಹೆಗ್ಗೋಡಿನ ಅಕ್ಷರ ಪ್ರಕಾಶನದ 'ಗೋಪಾಲಕೃಷ್ಣ ಅಡಿಗ ಅವರ ಆಯ್ದ ಕವಿತೆಗಳು' ಪುಸ್ತಕ ನೆನಪಿಗೆ ಬಂತು. ಈ ಪುಸ್ತಕದ ಮುದ್ರಣ, ಪುಟ ವಿನ್ಯಾಸ, ಕಾಗದದ ಗುಣಮಟ್ಟ ಇವೆಲ್ಲವೂ ಶ್ರೇಷ್ಠ ದರ್ಜೆಯಲ್ಲಿಯೇ ಇವೆಯಾದರೂ ಪುಸ್ತಕದ ಬೆಲೆ ತುಸು ಹೆಚ್ಚಾಯಿತು ಎಂಬ ಭಾವನೆ ನನ್ನಲ್ಲಿತ್ತು. ಇದೇ ವಿಚಾರವಾಗಿ ಗಣಪತಿಯ...

ಪತ್ರಿಕೆಗಳಿಂದ ಆದರ್ಶಗಳು ದೂರವಾದರೆ ನಮಗೇಕೆ ಆತಂಕವಾಗುತ್ತದೆ?

ನೀವೇ ಹೇಳಿ... ಯಾವ ರಾಜಕಾರಣಿ ಇವತ್ತು ಏನು ಹೇಳಿದ, ನಿನ್ನೆ ನಡೆದ ಪ್ರಾಕೃತಿಕ ವಿಕೋಪದಲ್ಲಿ ಎಷ್ಟು ಜನ ಮಡಿದರು, ಎಲ್ಲಿ ಯಾರು ಯಾರನ್ನ ಕೊಲೆ ಮಾಡಿದರು...? ಇಂಥ ಯಾರು, ಯಾವಾಗ, ಎಲ್ಲಿ, ಮತ್ತು ಹೇಗೆ ಎಂಬ ವಿಚಾರಗಳ ಸುತ್ತ ಗಿರಕಿ ಹೊಡೆಯುವುದೇ ಪತ್ರಿಕೋದ್ಯಮವಾ? ಕೇವಲ ಅಂಥ ವಿಚಾರಗಳನ್ನು ಬರೆಯುವವರೇ ಪತ್ರಕರ್ತರಾ? ಹೌದು ಎಂದಾದರೆ ಪತ್ರಿಕೋದ್ಯಮ ವೃತ್ತಿಗೆ ಬರಲು ಮೂರು ವರ್ಷದ ಡಿಗ್ರಿ, ಮತ್ತೆರಡು ವರ್ಷಗಳ ಮಾಸ್ಟರ್ ಡಿಗ್ರಿ ಪಡೆಯುವ ಅವಶ್ಯಕತೆಯೇನಿದೆ? ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಗಂಭೀರ ಅಧ್ಯಯನ ಮತ್ತು ಸಾಮಾಜಿಕ ಕಳಕಳಿಯ ಜರೂರತ್ತಾದರೂ ಏನು? ತಕ್ಕ ಮಟ್ಟಿಗಿನ ಭಾಷಾಜ್ಞಾನ ಹಾಗೂ ಘಟನಾಸ್ಥಳಕ್ಕೆ ಹೋಗಿ ಕಂಡಿದ್ದನ್ನು ಕಂಡಹಾಗೆ ವರದಿಮಾಡುವ ಸಾಮರ್ಥ್ಯವಿದ್ದರೆ ಸಾಕಲ್ಲವೇ? ತಪ್ಪು ತಿಳಿಯುವ ಅವಶ್ಯಕತೆಯಿಲ್ಲ. ಪತ್ರಿಕೋದ್ಯಮವೆಂಬ ಪವಿತ್ರ ವೃತ್ತಿಯ ಬಗ್ಗೆ ಲಘುವಾಗಿ ಮಾತನಾಡುವ ಉದ್ದೇಶ ಲೇಖನಕ್ಕಿಲ್ಲ. ಇಡೀ ಸಮಾಜದ ಹುಳುಕನ್ನು ಎತ್ತಿ ತೋರಿಸುವವರು ಪತ್ರಕರ್ತರು. ಆದರೆ ಪತ್ರಕರ್ತರಾದವರ ತಪ್ಪನ್ನು ಎತ್ತಿ ತೋರಿಸುವವರಾರು? ಅದು ಗಾಂಧೀಜಿಯವರ 'ಹರಿಜನ' ಅಥವಾ 'ಯಂಗ್ ಇಂಡಿಯಾ' ಇರಬಹುದು, ವಿವೇಕಾನಂದರ 'ಪ್ರಬುದ್ಧ ಭಾರತ'ವಿರಬಹುದು ಅಥವಾ ತಿಲಕರ 'ಕೇಸರಿ' ಪತ್ರಿಕೆಯಿರಬಹುದು. ಅವೆಲ್ಲಾ ಪತ್ರಿಕೆಗಳಿಗೆ ಮತ್ತು ಆ ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದವರಿಗೆ ಇದ್ದದ್ದು ರಾಷ್ಟ್ರ ಮತ್ತು ಸಮಾಜದೆ...

ಹೀಗೊಂದು ಗುರುವಂದನೆ...

ಬದುಕೊಂದು ಸುಂದರವಾಗಬೇಕಾದರೆ ಎಷ್ಟೆಲ್ಲ ಜನರು ನಮ್ಮ ಮೇಲೆ ಪ್ರಭಾವ ಬೀರುತ್ತಾರಲ್ಲ? ಹೆತ್ತವರು, ಬಂಧುಗಳು, ಸ್ನೇಹಿತರು, ಗುರುಗಳು ಹಾಗೂ ಪರಿಸರ - ಎಲ್ಲರೂ ಒಂದಲ್ಲ ಒಂದು ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲೆ ಇರುವುದು ಹೌದಾದರೂ, ಬಹುತೇಕ ಬಾರಿ ನಮ್ಮ ಹಿತೈಷಿಗಳ, ಆಪ್ತರ ಸಣ್ಣ ಪುಟ್ಟ ಸಲಹೆ ಸೂಚನೆ ನಮ್ಮ ಜೀವನಕ್ಕೊಂದು ತಿರುವು ನೀಡುತ್ತದೆ, ಬಾಳು ಬೆಳಗಿಸಲು ಸಹಕರಿಸುತ್ತದೆ. ನನಗೂ ಹೀಗೇ ಆಯ್ತು. ನಾನು ಎಂಟನೇ ತರಗತಿಯಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಅಲ್ಲಿನ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರಸನ್ನ ಕುಮಾರ ಐತಾಳರು ನನ್ನನ್ನು ತರಗತಿಯ ಆರಂಭದ ದಿನದಲ್ಲಿಯೇ ಕರೆದು ಹೇಳಿದ ಮಾತು ಇಂದಿಗೂ ನನ್ನಲ್ಲಿ ಅಚ್ಚಳಿಯದೇ ನಿಂತಿವೆ. ಹೆಚ್ಚೂ ಕಡಿಮೆ ಯಾವುದೇ ಹುಟ್ಟಾ ಫಟಿಂಗನೂ ಹುಬ್ಬೇರಿಸುವಂತೆ ವರ್ತಿಸುತ್ತಿದ್ದ ನನ್ನನ್ನು ತರಗತಿಯಲ್ಲಿ ನಿಲ್ಲಿಸಿ, "ನಿನಗೇನಾದರೂ ಮನುಷ್ಯನಾಗಬೇಕು ಎಂದಿದ್ದರೆ ಮೊದಲು ಈ ಉಢಾಳತನವನ್ನೆಲ್ಲಾ ಬಿಟ್ಟು ತರಗತಿಯ ಪಾಠಗಳತ್ತ ಹೆಚ್ಚಿನ ಗಮನಕೊಡು. ಅದಕ್ಕಿಂತಲೂ ಹೆಚ್ಚಾಗಿ ಮೊದಲು ಪುಸ್ತಕಗಳನ್ನು ಓದಲು ಆರಂಭಿಸು. ಪುಸ್ತಕಗಳನ್ನು ಓದದ ಮನುಷ್ಯ ಮನುಷ್ಯನೇ ಅಲ್ಲ" ಎಂದು ನನ್ನನ್ನು ಪುಸ್ತಕಗಳತ್ತ ಮುಖಮಾಡಿ ನಿಲ್ಲುವಂತೆ ಮಾಡಿದ್ದು ಐತಾಳರು. ತೇಜಸ್ವಿ, ಭೈರಪ್ಪ ಮುಂತಾದ ಖ್ಯಾತನಮರ ಕೃತಿಗಳನ್ನು ತೋರಿಸಿದ್ದು ಕೂಡಾ ಅವರೇ. ಇವ...

ಆಕೆಯನ್ನು ಏನಂತ ಕರೆಯಲಿ?

ಒಂದಾನೊಂದು ಕಾಲದಲ್ಲಿ ಇನ್ನೂ ಜನಿಸಿಲ್ಲದ ಆದರೆ ಇನ್ನೊಂದೆರಡು ದಿನಗಳಲ್ಲಿ ಜನಿಸಲಿಕ್ಕಿರುವ ಮಗುವೊಂದಿತ್ತು. ಆ ಮಗು ದೇವರನ್ನೊಮ್ಮೆ ಪ್ರಶ್ನಿಸಿತು. "ದೇವರೇ, ನೀನು ನನ್ನನ್ನು ನಾಳೆ ಭೂಮಿಗೆ ಕಳಿಸುತ್ತೀಯಾ ಎಂದು ಇಲ್ಲಿ (ಸ್ವರ್ಗ) ಇರುವವರೆಲ್ಲಾ ಮಾತಾಡಿಕೊಳ್ಳುತ್ತಿದ್ದಾರೆ. ನಾನು ಇನ್ನೂ ತುಂಬಾ ಚಿಕ್ಕವ. ಅದಕ್ಕಿಂತಲೂ ಹೆಚ್ಚಾಗಿ ನಾನೊಬ್ಬ ನಿಸ್ಸಹಾಯಕ ಮಗು. ಹೀಗಿರುವಾಗ ನಾನು ಇಲ್ಲಿಂದ ಭೂಮಿಗೆ ಹೋಗಿ ಹೇಗೆ ಜೀವಿಸಲಿ?" ದೇವರು ಪ್ರೀತಿಯಿಂದ "ಮಗೂ, ಭೂಮಿಯ ಮೇಲೆ ತುಂಬಾ ದೇವತೆಗಳಿದ್ದಾರೆ. ಅವರಲ್ಲಿ ಒಬ್ಬಳನ್ನು ನಾನು ನಿನಗಾಗಿ ಆರಿಸಿಟ್ಟಿದ್ದೇನೆ. ಅವಳು ನಿನಗಾಗಿ ಕಾಯುತ್ತಿರುತ್ತಾಳೆ. ಅವಳೇ ನಿನ್ನ ಯೋಗಕ್ಷೇಮ ನೋಡಿಕೊಳ್ಳುತ್ತಾಳೆ" ಎಂದ. "ಆದರೆ ನಾನಿಲ್ಲಿಯೇ ತುಂಬಾ ಸಂತೋಷದಿಂದಿದ್ದೇನೆ. ನಾನಿಲ್ಲಿ ನನ್ನಷ್ಟಕ್ಕೇ ಹಾಡಿಕೊಂಡು, ನಗಾಡಿಕೊಂಡು ಸಂತೋಷಪಡುತ್ತಿದ್ದೇನೆ. ನನಗೆ ಖುಷಿಯಿಂದಿರಲಿಕ್ಕೆ ಇಷ್ಟು ಸಾಕು. ನಾನು ಭೂಮಿಗೆ ಹೋದರೆ ಇವೆಲ್ಲವನ್ನೂ ಕಳೆದುಕೊಳ್ಳಬೇಕಾಗುವುದಿಲ್ಲವೇ?" ಎಂದಿತು ಮಗು. "ನಿನ್ನ ಪಾಲಿನ ದೇವತೆ ನಿನಗಾಗಿ ದಿನಾ ಹಾಡುತ್ತಾಳೆ. ಅದಕ್ಕಿಂತ ಹೆಚ್ಚಾಗಿ ಅವಳು ನಿಷ್ಕಾಮ ಪ್ರೇಮವನ್ನು ನೀಡುತ್ತಾಳೆ. ಅವಳ ಪ್ರೀತಿಯನ್ನು ಅನುಭವಿಸುತ್ತಾ ನೀನು ಸುಖವಾಗಿರಬಹುದಲ್ಲವೇ?" "ಅದು ಸರಿ. ಆದರೆ ಭೂಮಿಯಲ್ಲಿರುವ ಮನುಷ್ಯರು ನನ್ನ ಜೊತೆ ಮಾತನಾಡಲು ಬಂದರೆ ಅವರ ಭಾಷೆಯನ್ನು...