ವಿಷಯಕ್ಕೆ ಹೋಗಿ

ವಚನಭ್ರಷ್ಟತೆ ಮತ್ತು ಸಮಾಜ

ಕೆಲವರಿರುತ್ತಾರೆ. ಅವರಿಗೆ ರಾಜಕಾರಣಿಗಳನ್ನು ತೆಗಳುವುದೆಂದರೆ ಎಲ್ಲಿಲ್ಲದ ಸಂತೋಷ. ರಾಜಕಾರಣಿಗಳೆಲ್ಲಾ ಭ್ರಷ್ಟರು, ಅಯೋಗ್ಯರು, ಪಾಪಿಗಳು... ಹೀಗೆ ಸಾಧ್ಯವಾದ ಎಲ್ಲ ಪದವಿಶೇಷಣಗಳನ್ನೂ ಉಪಯೋಗಿಸಿ ರಾಜಕಾರಣಿಗಳನ್ನು ಬಯ್ಯುತ್ತಾರೆ. ಅಂದಹಾಗೆ, ರಾಜಕಾರಣಿಗಳನ್ನು ಆ ಪಾಟಿ ಬಯ್ಯುವುದರಲ್ಲಿ ತಪ್ಪೇನೂ ಇಲ್ಲ ಬಿಡಿ. ನಮ್ಮ ರಾಜಕಾರಣಿಗಳು ಜನರಿಂದ ತೆಗಳಿಸಿಕೊಳ್ಳಲು ಯೋಗ್ಯರೇ. ಅದಲ್ಲದೆ, ಜನರಿಂದ ಹೇಲಿಸಿಕೊಳ್ಳದ ರಾಜಕಾರಣಿ ಜಗತ್ತಿನಲ್ಲಿ ಒಬ್ಬನೂ ಇರಲಿಕ್ಕಿಲ್ಲ.

ಕೆಲವು ವರ್ಷಗಳ ಹಿಂದೆ ಕಾಂಗ್ರೆಸ್ ಪಕ್ಷದೊಂದಿಗಿನ ಮೈತ್ರಿಯನ್ನು ಮುರಿದುಕೊಂಡು ತಮ್ಮ ಪಕ್ಷ ಉಳಿಸುವ ನೆಪ ಒಡ್ಡಿ ಬಿಜೆಪಿ ಜೊತೆ ಸೇರಿ ಕುಮಾರಸ್ವಾಮಿ ಸರಕಾರ ರಚಿಸಿದಾಗ ಕರ್ನಾಟಕದಲ್ಲಿ ವಚನಭ್ರಷ್ಟತೆಯ ಬಗ್ಗೆ ಅಷ್ಟೇನೂ ಚರ್ಚೆಯಾಗಲಿಲ್ಲ. ಆದರೆ ಯಾವಾಗ ಇಪ್ಪತ್ತು ತಿಂಗಳ ತನ್ನ ಅವಧಿ ಮುಗಿದ ನಂತರ ಬಿಜೆಪಿಗೆ ಅಧಿಕಾರ ಹಸ್ತಾಂತರಿಸಲು ಕುಮಾರಸ್ವಾಮಿ ನಿರಾಕರಿಸಿದರೋ ಆವಾಗ ವಚನಭ್ರಷ್ಟತೆಯ ಬಗ್ಗೆ ನಾಡಿನಾದ್ಯಂತ ಚರ್ಚೆ ಆರಂಭವಾಯಿತು. ಅದರಲ್ಲೂ ಬಿಜೆಪಿಗೆ ಅಧಿಕಾರ ಹಸ್ತಾಂತರಿಸದಿರಲು ಕುಮಾರಸ್ವಾಮಿ ನೀಡಿದ ಕಾರಣಗಳು ಜನರಲ್ಲಿ ಪ್ರಸ್ತುತ ರಾಜಕಾರಣದ ಬಗ್ಗೆ ಹೇಸಿಗೆ ಮೂಡಲು ಕಾರಣವಾಯಿತು.

ಇವತ್ತು ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹ ಎನ್ನುವುದು ನಮ್ಮ ಜೀವನದಲ್ಲಿ ಹಾಸುಹೊಕ್ಕಾಗಿದೆ. ದೇವರ ಕೆಲಸವೇ ಆಗಿರುವ ಸರಕಾರದ ಕೆಲಸದಲ್ಲಂತೂ ಭ್ರಷ್ಟತೆ ಎಂಬುದು ಸಾಂಸ್ಥಿಕ ರೂಪವನ್ನೇ ಪಡೆದುಕೊಂಡಿದೆ. ಹಾಗಂತ ಮನುಷ್ಯನ ವಯುಕ್ತಿಕ ಜೀವನದಲ್ಲಿ ವಚನಭ್ರಷ್ಟತೆ, ವಿಶ್ವಾಸದ್ರೋಹ ಎಂಬುದು ಚಾಲ್ತಿಯಲ್ಲಿ ಇಲ್ಲ ಅಂತಲ್ಲ. ಅಪ್ಪ ಕಾಲೇಜಿನ ಶುಲ್ಕ ಕಟ್ಟಲು ನೀಡಿದ ಹಣದಿಂದ ಇನ್ನೇನೋಮಾಡಿ, ಅಪ್ಪ ಮಗನ ಮೇಲಿಟ್ಟಿರುವ ವಿಶ್ವಾಸವನ್ನು ಕೊಂದುಹಾಕುವ ಮಕ್ಕಳಿಂದ ಹಿಡಿದು ರೈತನ ಬೆವರಿನ ಪ್ರತೀಕವಾದ ಬೆಳೆಯನ್ನು ಆತನ ಶ್ರಮಕ್ಕಿಂತ ಕಡಿಮೆ ಬೆಲೆಗೆ ಖರೀದಿಸಿ ಅದನ್ನು ಮತ್ತೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುವ ಮಧ್ಯವರ್ತಿಯವರೆಗೆ ಭ್ರಷ್ಟಾಚಾರವೆಂಬುದು ವ್ಯಾಪಿಸಿದೆ. ನಮ್ಮಲ್ಲಿ ಕೆಲವರಿಗೆ ನ್ಯಾಯವಾಗಿ ತೆರಿಗೆ ಕಟ್ಟಲು ಮನಸ್ಸಿಲ್ಲ. ಕೆಲವೇ ಕೆಲವರು ನ್ಯಾಯವಾಗಿ ಕಟ್ಟುವ ತೆರಿಗೆಯನ್ನು ನಾಡಿನ ಅಭ್ಯುದಯಕ್ಕೆ ವಿನಿಯೋಗಿಸಲು ನಮ್ಮ ಅಧಿಕಾರಶಾಹಿಗೆ ಮತ್ತು ಆಡಳಿತಶಾಹಿಗೆ ಆಗಿಬರುವಂಥದ್ದಲ್ಲ. ಇನ್ನು ಕೆಲವರಿಗೆ ತಾವು ಅಕ್ರಮವಾಗಿ ಒತ್ತುವರಿ ಮಾಡಿಕೊಂದ ಜಮೀನು ಹೇಗಾದರೂ ಸಕ್ರಮವಾದರೆ ಸಾಕು ಎಂಬ ಮನಸ್ಥಿತಿ.

ವಸ್ತುಸ್ಥಿತಿ ಹೀಗಿರುವಾಗ ಜನಸಾಮಾನ್ಯರ ಭ್ರಷ್ಟಾಚಾರ ಮತ್ತು ವಿಶ್ವಾಸದ್ರೋಹದ ವರ್ತನೆಯನ್ನು ಗಣನೆಗೆ ತೆಗೆದುಕೊಳ್ಳದೆ, ಕೇವಲ ರಾಜಕಾರಣಿಗಳು ಮಾಡಿದ ಭ್ರಷ್ಟಾಚಾರ ಮತ್ತು ವಚನಭ್ರಷ್ಟತೆಯನ್ನು ನಾವು ವೈಭವೀಕರಿಸುವುದು ಎಷ್ಟು ಸರಿ? ನಿಜ, ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಉನ್ನತ ವಿಚಾರಗಳನ್ನು ಮೈಗೂಡಿಸಿಕೊಂಡಿರಬೇಕು ಎಂಬ ನಿರೀಕ್ಷೆ ಖಂಡಿತಾ ತಪ್ಪಲ್ಲ. ಆದರೆ ಸಾರ್ವಜನಿಕ ಜೀವನದಲ್ಲಿರುವ ರಾಜಕಾರಣಿಗಳು ಕೂಡ ನಾವು-ನೀವು ಜೀವಿಸುತ್ತಿರುವ ಸಮಾಜದ ಒಂದು ಭಾಗವೇ ಆಗಿದ್ದಾರೆ. ಅವರೇನೂ ದೇವಲೋಕದಿಂದ ಇಳಿದುಬಂದವರಲ್ಲ. ಸಮಾಜವೇ ಇಡಿಯಾಗಿ ಭ್ರಷ್ಟವಾಗಿರುವಾಗ ರಾಜಕಾರಣಿಯೊಬ್ಬ ಪ್ರಾಮಾಣಿಕನಾಗಿರಲು ಹೇಗೆ ಸಾಧ್ಯ.

ಅದಲ್ಲದೆ ಪ್ರತಿಯೊಬ್ಬ ರಾಜಕಾರಣಿಯೂ ನಮ್ಮಿಂದಲೇ ಆರಿಸಿಬಂದವನಾಗಿರುತ್ತಾನೆ. ಅವನ ಪೂರ್ವಾಪರಗಳು ಚುನಾವಣೆಗೆ ಮೊದಲೇ ಸ್ವಲ್ಪಮಟ್ಟಿಗಾದರು ಆತ ಪ್ರತಿನಿಧಿಸಲಿರುವ ಕ್ಷೇತ್ರದ ಜನತೆಗೆ ತಿಳಿದಿರುತ್ತದೆ.

ಇವತ್ತಿನ ರಾಜಕಾರಣ ಮತ್ತು ರಾಜಕಾರಣಿಗಳು ದಾರಿತಪ್ಪಿದ್ದಾರೆ ಎನ್ನುವುದಾದರೆ ಇವತ್ತಿನ ಸಮಾಜ ಕೂಡ ದಾgತಪ್ಪಿದೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಸಮಾಜದಲ್ಲಿ ರಾಜಕಾರಣಿಗಳೂ ನಾಚುವಷ್ಟರಮಟ್ಟಿಗೆ ವಿಶ್ವಾಸಘಾತುಕತನ ಎಸಗಿದವರು ಇದ್ದಾರೆ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗುತ್ತದೆ. ಹಾಗಾಗಿ ನಮ್ಮದೇ ಸಮಾಜವನ್ನು ಪ್ರತಿನಿಧಿಸುವ ರಾಜಕೀಯ ನಾಯಕರನ್ನು ಮಾತ್ರ ದೂರಿ ನಾವು ನಮ್ಮ ಸಮಾಜದ ತಪ್ಪನ್ನು ತಿದ್ದಿಕೊಳ್ಳದೇ ಹೋದಲ್ಲಿ ರಾಜಕೀಯ ಎನ್ನುವುದು ಶುಚಿಯಾಗಲು ಸಾಧ್ಯವಿಲ್ಲ.

ಕಾಮೆಂಟ್‌ಗಳು

prasca ಹೇಳಿದ್ದಾರೆ…
ಹೌದು ನೀವು ಬರೆದಿರುವುದು ಅಕ್ಷರಸಹ ಸತ್ಯ. ಭ್ರಷ್ಟತೆಯ ಬೇರಿರುವುದು ನಮ್ಮ ಮನಗಳಲ್ಲಿ. ಬೆಳೆದು ಹೂವಾಗಿ ಫಲ ತಿನ್ನುವವರನ್ನು ಹೀಯಾಳಿಸಿ, ನಿಂದಿಸಿ ನಮ್ಮ ವಿಕೃತ ಸಂತೋಷ ಪಡುತ್ತೇವೆ. ನಂತರ ಅವರಿಂದಲೇ ಸಹಾಯ ಹಸ್ತ ಬಯಸುತ್ತೇವೆ. ಸಿಗದಿದ್ದಾಗ ಮತ್ತವರನ್ನೆ ಹೀಯಾಳಿಸುತ್ತೇವೆ.
Kannan ಹೇಳಿದ್ದಾರೆ…
Good blog.
Jagadeesh Balehadda ಹೇಳಿದ್ದಾರೆ…
ಎಂದಿನಂತೆ ಬರವಣಿಗೆಯ ಚಾಟಿ ಚನ್ನಾಗಿಯೇ ಬೀಸಿದ್ದಿರಿ. ಹೀಗೆಯೇ ಬ್ಲಾಗ್ ಮುಂದುವರಿಯಲಿ.
Jagadeesh Balehadda ಹೇಳಿದ್ದಾರೆ…
ಲೇಖಕರು ಈ ಕಾಮೆಂಟ್‌ ಅನ್ನು ತೆಗೆದು ಹಾಕಿದ್ದಾರೆ.
Unknown ಹೇಳಿದ್ದಾರೆ…
ಮೊದಲು ನಿನ್ನ ಪ್ರೋಫೈಲ್ ಬದಲಾಯಿಸು ನೀನು ಇನ್ನು
ವಿದ್ಯಾರ್ಥಿ ಅಲ್ಲ ನೀನು ಒಂದು ಪತ್ರಿಕೆಯಲ್ಲಿ ಕೆಲಸ ಮಾಡುವ ನೌಕರ okna
ಲೇಖನ ಚೆನ್ನಾಗಿದೆ ಹೀಗೆ ಮುಂದುವರೆಸು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಇದು ಸಂವಾದದ ಹೊತ್ತು ಆಗಬೇಕಲ್ಲವೇ?

ನಾವು ಬದುಕುತ್ತಿರುವ ಸಂದರ್ಭವನ್ನು ‘ಫೇಸ್‌ಬುಕ್‌ ಮೂಲಕ ವಿಕಾರಗಳನ್ನು ತೋರಿಸಿಕೊಳ್ಳುವ ಹೊತ್ತು’ ಎಂದು ಕರೆಯಲು ಅಡ್ಡಿಯಿಲ್ಲ ಅನಿಸುತ್ತದೆ. ಸಾಮಾಜಿಕ ಮಾಧ್ಯಮಗಳಲ್ಲಿ ನಡೆಯುವ ಕೆಲವು ಚರ್ಚೆಗಳ ಮಟ್ಟವನ್ನು ಗಮನಿಸಿದರೆ ನಿಮಗೂ ಹಾಗೆ ಅನಿಸಬಹುದು. ಅದರಲ್ಲೂ ಎಡ–ಬಲ ಪಂಥಗಳ ಚರ್ಚೆಗಳಿಗೆ ತಲೆ ಹಾಕಿದರೆ ಮುಗಿದೇ ಹೋಯಿತು. ಅಲ್ಲಿ ಏನಾಗುತ್ತದೆ ಎಂಬುದು ನಿಮ್ಮೆಲ್ಲರ ಗಮನಕ್ಕೂ ಬಂದಿರಬಹುದು ಎಂಬುದು ನನ್ನ ಭಾವನೆ. ಮೂಡುಬಿದಿರೆಯಲ್ಲಿ ಇದ್ದುಕೊಂಡು, ಮಕ್ಕಳಿಗೆ ಪಾಠ ಹೇಳಿಕೊಡುತ್ತ, ಸಾಹಿತ್ಯ, ಸಮಾಜ, ಅರ್ಥವ್ಯವಸ್ಥೆ ಬಗ್ಗೆ ಮಾತನಾಡುವ, ನಾನು ಅವರ ಮನೆಗೆ ಹೋದಾಗಲೆಲ್ಲ ಒಳ್ಳೆಯ ಎಲೆ ಅಡಿಕೆ ಕೊಡುವ ಅರವಿಂದ ಚೊಕ್ಕಾಡಿಯವರು ಎಡ–ಬಲ ಪಂಥಗಳ ಬಗ್ಗೆ, ಅವೆರಡರ ನಡುವೆ ಸಂವಾದ ಆಗಬೇಕಿರುವ ಅಗತ್ಯದ ಬಗ್ಗೆ ಪುಟ್ಟ ಬರಹ ಬರೆದಿದ್ದಾರೆ. ಆ ಬರಹವನ್ನು ಇಲ್ಲಿ ಹಂಚಿಕೊಂಡಿದ್ದೇನೆ. ಅವರ ಬರಹಕ್ಕೆ ನಾನು ಬರೆದ ಪ್ರತಿಕ್ರಿಯೆ ಕೂಡ ಇಲ್ಲಿದೆ. ದಯವಿಟ್ಟು ಎರಡನ್ನೂ ಓದಿ. ನಿಮ್ಮ ಅನಿಸಿಕೆ ತಿಳಿಸಿ. =========== ಚೊಕ್ಕಾಡಿಯವರಿಗೆ ಬರೆದ ಪ್ರತಿಕ್ರಿಯೆ... ಸರ್, ನಿಮ್ಮ ಬರಹ ಓದಿದ ನಂತರ ಹಳೆಯ ಕೆಲವು ಪ್ರಯತ್ನಗಳು ನೆನಪಿಗೆ ಬಂದವು. ಆ ಪ್ರಯತ್ನಗಳು ನಡೆದಿದ್ದ ಹೊತ್ತಿನಲ್ಲಿ ನೀವೂ ಜೊತೆಯಲ್ಲಿ ಇದ್ದಿದ್ದು ಅಥವಾ ನಾವು ನಿಮ್ಮ ಜೊತೆಯಲ್ಲಿ ಇದ್ದಿದ್ದು ನಿಮ್ಮ ನೆನಪಿನಲ್ಲಿ ಇದೆ ಎಂದು ಭಾವಿಸುವೆ. ಎಡಪಂಥೀಯರು ಮತ್ತು ಬಲಪಂಥೀಯರಲ್ಲಿ ಇರುವ, ಸಂವಾದಿ...

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...

ಒಂದು ಖಾಸಗಿ ಪತ್ರ

ಅರವಿಂದ ಚೊಕ್ಕಾಡಿಯವರು ಮೂಡುಬಿದಿರೆಯಲ್ಲಿ ವಾಸಿಸುತ್ತಾರೆ. ದಕ್ಷಿಣ ಕನ್ನಡ ಜಿಲ್ಲೆಯ ಸಾಂಸ್ಕೃತಿಕ ರಾಜಧಾನಿಯಂತಿರುವ ಮೂಡುಬಿದಿರೆಯಲ್ಲಿ ಇದ್ದುಕೊಂಡು ಇವರಷ್ಟು ಬರೆಯುತ್ತಿರುವವರು ಬಹುಷಃ ಮತ್ತಾರೂ ಇರಲಿಕ್ಕಿಲ್ಲ. ಚೊಕ್ಕಾಡಿಯವರು ನನ್ನಂತಹ ಸಾಮಾನ್ಯ ಓದುಗನೊಬ್ಬ ಒಂದು ವಾರಕ್ಕೆ ಓದಬಹುದಾದಷ್ಟನ್ನು ಒಂದು ವಾರದಲ್ಲಿ ತಾವು ಖುದ್ದು ಬರೆಯುತ್ತಾರೆ. ಅವರ ಓದಿನ ಮತ್ತು ಅರಿವಿನ ವ್ಯಾಪ್ತಿ ಅಷ್ಟಿದೆ. ಅದಿರಲಿ, ಈ ಬರಹದ ವಿಷಯ ಬೇರೆಯೇ ಇದೆ. ಪ್ರಜಾವಾಣಿ ಪತ್ರಿಕೆ ಕನ್ನಡ ಕರಾವಳಿಯಲ್ಲಿ ಸುಮಾರು ಹತ್ತು ವರ್ಷಗಳ ಹಿಂದೆಯೇ ತನ್ನ ಆವೃತ್ತಿಯನ್ನು ಆರಂಭಿಸಿದೆ. ೧೯೪೮ರಲ್ಲೇ ಆರಂಭವಾದ ಪ್ರಜಾವಾಣಿ ಕರಾವಳಿಯಲ್ಲಿ ಸ್ವತಂತ್ರ ಆವೃತ್ತಿಯನ್ನು ಆರಂಭಿಸಿದ್ದು ಸ್ವಲ್ಪ ತಡವಾಯಿತು ಅಂತಲೇ ಹೇಳಬಹುದು. ಹಾಗೆ ತಡವಾಗಿಯಾದರೂ ತನ್ನ ಆವೃತ್ತಿಯನ್ನು ಕರಾವಳಿಯಲ್ಲಿ ಆರಂಭಿಸಿದ ಪ್ರಜಾವಾಣಿ ತನ್ನ ಓದುಗರಿಗೆ ಕಳೆದ ಒಂದೂವರೆ ವರ್ಷಗಳಿಂದ ಕರಾವಳಿಯ ಜಿಲ್ಲೆಗಳಾದ ಕಾಸರಗೋಡು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆಂದೇ ಮೀಸಲಾದ ’ಕರಾವಳಿ’ ಎಂಬ ಸುದ್ದಿ ಪುರವಣಿಯೊಂದ ವಾರದಲ್ಲಿ ಆರು ದಿನ ಕೊಡುತ್ತಿದೆ. ನಾಲ್ಕು ಪುಟದ ಈ ಪುರವಣಿಯಲ್ಲಿ ಕಡಲ ತಡಿಯ ಸಮೃದ್ಧ ಸುದ್ದಿ, ಸುದ್ದಿ ವಿಶ್ಲೇಷಣೆ ಇರುತ್ತದೆ. ಒಟ್ಟಿನಲ್ಲಿ ಓದಲು ಖುಷಿಕೊಡುವ ದೈನಿಕ ಪುರವಣಿ ಇದು. ಇದೇ ಪುರವಣಿಯಲ್ಲಿ ಪ್ರತಿ ಬುಧವಾರ ಅರವಿಂದ ಚೊಕ್ಕಾಡಿಯವರು ’ತೀರದ ತಲ್ಲಣ’ ಎಂಬ ಅಂಕಣವೊಂದನ್ನು ಕಳೆದೊಂದು...