ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

Condemning the attack on The Hindu

Everyone may be aware of the fact that the Coimbatore office of The Hindu, India’s national newspaper, has been attacked by a faction of Tamil chauvinist group last week. The article titled ‘The dangers of Tamil chauvinism’ by Malini Parthasarathy, Senior Sub Editor of The Hindu, might have enraged the sentiments of the lesser known Tamil chauvinist group - Periyar Dravidar Kazhagam. Malini Parthasarathy, in her above mentioned article, has clearly stated that the LTTE which is active in Srilanka is nothing but a terrorist group and the path it has been following over the years to resolve the issue of Tamilians has no respect in any democratic society. Over the years the LTTE has been engaged in murdering Srilankan ministers and innocent civilians who have got nothing to do with the political affairs of the State. The Hindu in its editorial pages has condemned this inhuman and anti-democratic behaviour of the LTTE. The Hindu has never turned a blind eye towards the problems faced by Sr...

ನೀನಿದ್ದರೂ ಜಗತ್ತಿನಲ್ಲಿ ಅನ್ಯಾಯ ಏಕೆ ನಡೆಯುತ್ತಿದೆ?

ದೇವರೇ , ನಿನಗೊಂದು ನಮಸ್ಕಾರ. ನಾನು ಹುಟ್ಟಿದಾಗಿನಿಂದ ನಿನ್ನ ಬಗ್ಗೆ ಸಾಕಷ್ಟು ಬಾರಿ ಕೇಳಿದ್ದೇನೆ. ನನಗೆ ಹೊರಜಗತ್ತನ್ನು ತೋರಿಸುವುದಕ್ಕೆ ಮುಂಚೆಯೇ ನನ್ನ ತಂದೆ ತಾಯಿ ದೇವರ ಕೋಣೆಗೆ ಕರೆದುಕೊಂಡು ಹೋಗಿ ನಿನ್ನನ್ನು ತೋರಿಸಿದರು. ದೇವರನ್ನು ನಂಬು. ಆತನಲ್ಲಿ ವಿದ್ಯೆ, ಬುದ್ಧಿಯನ್ನು ದಯಪಾಲಿಸುವಂತೆ ಕೇಳಿಕೊ. ಆತ ಭಕ್ತರು ಕೇಳಿದ್ದೆಲ್ಲವನ್ನೂ ನೀಡುತ್ತಾನೆ ಎಂದರು. ನೆಲಮುಟ್ಟಿ ನಿನಗೆ ನಮಸ್ಕರಿಸುವುದನ್ನೂ ಹೇಳಿಕೊಟ್ಟರು. ದೇವರನ್ನು ತೋರಿಸಮ್ಮಾ ಅಂತ ಕೇಳಿದ್ದಕ್ಕೆ ಕಲ್ಲಿನ ವಿಗ್ರಹವನ್ನು ತೋರಿಸಿ ಅಲ್ಲಿ ದೇವರಿದ್ದಾನೆ ಅಂತ ಹೇಳಿದರು. ಆದರೆ ನನಗೆ ನೀನು ಕಾಣಲಿಲ್ಲ. ಕೊನೆಗೆ ಸ್ವಲ್ಪ ಬುದ್ಧಿ ಬಂದ ನಂತರ, ಪುಟ್ಟಾ, ದೇವರು ಕಲ್ಲಿನ ಮೂರ್ತಿಯಲ್ಲಿಲ್ಲಪ್ಪಾ. ಆತ ಈ ಸೃಷ್ಟಿಯ ಅಣು ಅಣುವಿನಲ್ಲೂ ಇದ್ದಾನೆ. ಆತ ಎಲ್ಲವನ್ನೂ, ಎಲ್ಲರನ್ನೂ ಗಮನಿಸುತ್ತಿದ್ದಾನೆ ಅಂತ ತಿಳಿಸಿದರು. ಅವರ ಮಾತನ್ನು ನಂಬಿದೆ. ಅಷ್ಟಕ್ಕೂ ಅವರ ಮಾತನ್ನು ನಂಬದೆ ಬೇರೆ ವಿಧಿಯಿರಲಿಲ್ಲ. ಆದರೂ ಈ ಜಗತ್ತನ್ನಿಡೀ ನೋಡಿಕೊಳ್ಳಲು ಅದೆಷ್ಟು ಮಂದಿ ದೇವರಿದ್ದಾರೆ ಎಂಬ ಅನುಮಾನ ಇದ್ದೇ ಇತ್ತು. ಬುದ್ಧಿ ಸ್ವಲ್ಪಮಟ್ಟಿಗೆ ಪಕ್ವವಾದ ನಂತರ ದೇವನೊಬ್ಬ, ನಾಮ ಹಲವು ಅಂತ ಕಲಿಸಿದರು. ಅದನ್ನೂ ಒಪ್ಪಿಕೊಂಡೆ. ದೇವರ ಇಚ್ಛೆಯಿಲ್ಲದೆ ಈ ಜಗತ್ತಿನಲ್ಲಿ ಒಂದು ಹುಲ್ಲು ಕಡ್ಡಿಯೂ ಅಲ್ಲಾಡುವುದಿಲ್ಲ. ಎಲ್ಲವೂ ದೇವರ ಇಚ್ಛೆಗೆ ಅನುಗುಣವಾಗಿಯೇ ನಡೆಯುತ್ತವೆ. ದೇವರನ್ನು ನಂಬುವವ ಜೀವನದಲ್ಲಿ ಕಷ್ಟ...

The great fiasco

The nation as a whole was shocked when it heard the news of Delhi, the capital of this country, being attacked by Pakistan sponsored terrorist after Bangalore and Ahmedabad were targeted by the terrorists. As soon as this news was aired by the country’s 24X7 news channels the country was under shock for a while and soon after Shivraj Patil, the Union Home Minister, came out with a statement condemning the attack the people had a sigh of relief for it was another round of the post-terrorist-attack protocol. And the very next day of the attack our media carried it on their front page along with some gruesome photos of the victims, as usual. Well, that is not a notable issue as for now as India becoming the target of Pak sponsored terrorists again and again has become a too common factor. But, certainly, the way our political leadership has been dealing with the international terrorism has to be questioned seriously. By far, more than fifty thousand innocents have lost their lives in the ...

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...

ಆ ಆಂದೋಲನ ಕರ್ನಾಟಕವನ್ನು ಪ್ರಭಾವಿಸಿದ್ದು ಹೀಗೆ

ಉತ್ತರದಲ್ಲಿ ಗುಜರಾತ್‌ನಿಂದ ದಕ್ಷಿಣದಲ್ಲಿ ಕೇರಳ ರಾಜ್ಯದವರೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮೂಲಕ ಹಾದುಹೋಗುವ ಶಿಖರ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಅಂತ ಹೆಸರು. ಇದನ್ನೇ ಪಶ್ಚಿಮ ಘಟ್ಟಗಳು ಅಂತಲೂ ಕರೆಯುತ್ತಾರೆ. ಇಲ್ಲಿ ದಟ್ಟ ಅರಣ್ಯವಿದೆ, ಹುಲ್ಲುಗಾವಲಿದೆ, ಜಗತ್ತಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂಥ ಜೀವವೈವಿಧ್ಯವಿದೆ. ಇದು ದಕ್ಷಿಣ ಭಾರತದ ಅನೇಕ ಜೀವನದಿಗಳ ಉಗಮಸ್ಥಾನವೂ ಹೌದು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸುಮಾರು ೨೫-೩೦ ವರ್ಷಗಳ ಕಾಲ ದೇಶ ತೀವ್ರಗತಿಯ ಕೈಗಾರಿಕೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡಿತು. ಈಗಲೂ ತೆರೆದುಕೊಳ್ಳುತ್ತಿದೆ, ಅದು ಬೇರೆ ಮಾತು. ಅಂದಿನ ಕೈಗಾರಿಕೀಕರಣದ ಭರಾಟೆ ಹೇಗಿತ್ತೆಂದರೆ ಅರಣ್ಯನಾಶ, ಜೀವವೈವಿಧ್ಯ ನಾಶ, ನದಿಮೂಲಗಳ ಬತ್ತುವಿಕೆಯಂತಹ ಸಮಸ್ಯೆಗಳು ನಮ್ಮನ್ನು ಆಳುವ ಸರಕಾರಗಳಿಗೆ ಅರ್ಥವೇ ಆಗುತ್ತಿರಲಿಲ್ಲ. ಅವರ ಉದ್ದೇಶ ಒಂದೇ, ಭಾರತ ಕೂಡ ಯುರೋಪಿಯನ್ ರಾಷ್ಟ್ರಗಳಂತೆ ಔದ್ಯಮೀಕರಣಗೊಳ್ಳಬೇಕು. ಇದರ ಪರಿಣಾಮವಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಯಿತು. ಪಶ್ಚಿಮ ಘಟ್ಟಗಳೂ ಇದರಿಂದ ಹೊರತಾಗಲಿಲ್ಲ. ಅಲ್ಲಿನ ಅಪಾರ ಪ್ರಮಾಣದ ಜೀವವೈವಿಧ್ಯಕ್ಕೆ ಕೊಡಲಿಪೆಟ್ಟು ಬಿತ್ತು. ನದಿಮೂಲಗಳು ಬತ್ತತೊಡಗಿದವು. ಜನರು ತೊಂದರೆ ಅನುಭವಿಸತೊಡಗಿದರು. ಕಾಡು ಕಡಿದು, ಪರಿಸರ ನಾಶಮಾಡಿ ದೇಶಕಟ್ಟಲು ಸಾಧ್ಯವಿಲ್ಲ ಎಂಬ ಸತ್ಯ ನಿಧಾನವಾಗಿಯಾದರೂ ಜನರ ಅರಿವಿಗೆ ಬರಲಾರಂಭಿಸಿತು. ಈ ನಡುವೆ ೧೯೭೫...

ವಿವೇಕ ವಾಣಿ ನೆನಪಿರಲಿ...

ಸ್ವಾಮಿ ವಿವೇಕಾನಂದರು ವಿದೇಶದಿಂದ ಭಾರತಕ್ಕೆ ಹಿಂದಿರುಗಿ ಬರುತ್ತಿದ್ದರು. ಸ್ವಾಮೀಜಿಯವರು ಬರುತ್ತಿದ್ದ ಹಡಗಿನಲ್ಲಿಯೇ ಒಬ್ಬ ಕ್ರೈಸ್ತ ಪಾದ್ರಿಯೂ ಇದ್ದ. ಸ್ವಾಮೀಜಿಯವರು ಆ ಪಾದ್ರಿಯ ಬಳಿ ಪ್ರತಿದಿನವೂ ಧರ್ಮ, ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಪ್ರತಿ ಬಾರಿಯೂ ಆ ಪಾದ್ರಿ ಸ್ವಾಮೀಜಿಯ ಎದುರು ವಾದದಲ್ಲಿ ಸೋಲುತ್ತಿದ್ದ. ನಂತರ ವಿನಾಕಾರಣ ಭಾರತೀಯ ಸಂಸ್ಕೃತಿಯನ್ನು, ಹಿಂದೂ ಧರ್ಮವನ್ನು ನಿಂದಿಸುತ್ತಿದ್ದ. ಸ್ವಾಮೀಜಿ ಮೊದಮೊದಲು ಸುಮ್ಮನಿದ್ದರಾದರೂ ನಂತರ ಒಂದು ದಿನ ಆ ಪಾದ್ರಿಯು ಹಡಗಿನ ಅಂಚಿನಲ್ಲಿ ಇದ್ದಾಗ ಅವನ ಸಮೀಪಕ್ಕೆ ಹೋಗಿ, ಅವನನ್ನು ಬಿಗಿಯಾಗಿ ಹಿಡಿದುಕೊಂಡು, "ನೋಡು, ನೀನು ನನ್ನ ಧರ್ಮವನ್ನು, ದೇಶವನ್ನು ಬಯ್ಯುವುದನ್ನು ಬಿಡದೆ ಇದ್ದರೆ ನಿನ್ನನ್ನು ಹೀಗೆಯೇ ಸಮುದ್ರಕ್ಕೆ ನೂಕಿಬಿಡುವೆ!" ಎಂದು ಗದರಿಸಿದರು. ಆಗ ಪಾದ್ರಿಯ ಕೈಕಾಲುಗಳು ಭಯದಿಂದ ಕಂಪಿಸತೊಡಗಿದವು. "ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಇನ್ನುಮುಂದೆ ನಾನು ಹಾಗೆ ಮಾಡುವುದಿಲ್ಲ" ಎಂದು ಆ ಪಾದ್ರಿಯು ಸ್ವಾಮೀಜಿಯವರಲ್ಲಿ ಬೇಡಿಕೊಂಡನು. ಆತನ ಬೇಡಿಕೆಯನ್ನು ಮನ್ನಿಸಿದ ಸ್ವಾಮೀಜಿ ಅವನನ್ನು ಬಿಟ್ಟರು. ಅನಂತರ ಅವನು ಸ್ವಾಮೀಜಿಗೆ ಗೌರವ ನೀಡಲು ಪ್ರಾರಂಭಿಸಿದನು. ನಿಜ, ಸ್ವಾಮಿ ವಿವೇಕಾನಂದರು ಸರ್ವಸ್ವವನ್ನೂ ತ್ಯಾಗ ಮಾಡಿದ ಸನ್ಯಾಸಿ. ಅವರು ಒಬ್ಬ ಪಾದ್ರಿಯ ಮೇಲೆ ಈ ಥರ ಕೋಪಗೊಂಡಿದ್ದು ಸರಿಯೇ ಅನ್ನುವ ಅನುಮಾನ ಬರಬ...

ಯಾರು ಒಳ್ಳೆಯವರು?

ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಕತೆ. ಆತನ ಹೆಸರು ಸೋಮಣ್ಣ, ಅವನ ನೆರೆಮನೆಯವನ ಹೆಸರು ರಾಮಣ್ಣ. ಇಬ್ಬರೂ ವಾಸಿಸುತ್ತಿದ್ದದ್ದು ಕಾನೂರು ಎಂಬ ಪುಟ್ಟ ಹಳ್ಳಿಯಲ್ಲಿ. ಇಬ್ಬರೂ ಬ್ರಾಹ್ಮಣರು. ರಾಮಣ್ಣ ಬಹಳ ಸಾಧು ಸ್ವಭಾವದವ. ಯಾವತ್ತೂ, ಯಾರ ಮೇಲೂ ಹರಿಹಾಯ್ದವನಲ್ಲ. ದಿನದ ಮೂರೂ ಹೊತ್ತು ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡುತ್ತಿದ್ದ. ಮೊಸ, ಕಪಟ, ಜೂಜು... ಇದ್ಯಾವುದೂ ರಾಮಣ್ಣನಿಗೆ ಗೊತ್ತಿಲ್ಲ. ಹೆಂಡ, ಮಾಂಸ, ಪರಸ್ತ್ರೀ ಸಹವಾಸಗಳಿಂದ ರಾಮಣ್ಣ ಮೈಲು ದೂರ. ಒಟ್ಟಿನಲ್ಲಿ ಒಬ್ಬ ಸಂಭಾವಿತ, ಸುಭಗ ನಾಗರಿಕ. ರಾಮಣ್ಣನ ವ್ಯಕ್ತಿತ್ವಕ್ಕೆ ಸ್ವಲ್ಪ ಮಟ್ಟಿಗೆ ವಿರುದ್ಧವಾದ ವ್ಯಕ್ತಿತ್ವ ಸೋಮಣ್ಣನದು. ಸೋಮಣ್ಣನಿಗೆ ಸುಳ್ಳು ಹೇಳಲು, ಸೋಗು ಹಾಕಲು, ಇನ್ನೊಬ್ಬರ ಮೇಲೆ ದ್ವೇಷ ಕಾರಲು ಬರುತ್ತಿರಲಿಲ್ಲವಾದರೂ ಸ್ವಲ್ಪ ಮುಂಗೋಪ. ಅದಲ್ಲದೆ ಸೋಮಣ್ಣನಿಗೆ ಹೆಂಡ, ಮಾಂಸಗಳ ಸಹವಾಸ ಸ್ವಲ್ಪ ಜೋರಾಗಿಯೇ ಇತ್ತು. ಇಸ್ಪೀಟು ಕೂಡಾ ಜನ್ಮಜಾತ ಕಲೆಯೆಂಬಂತೆ ಬಂದಿತ್ತು. ಅದೇ ಕಾರಣದಿಂದ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸೋಮಣ್ಣ ಒಬ್ಬ ಫಟಿಂಗನಾಗಿದ್ದ. ಆತ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸಂಭಾವಿತನೂ ಅಲ್ಲ, ಸುಭಗನೂ ಅಲ್ಲ. ಸಾಧು ಸ್ವಭಾವದ ರಾಮಣ್ಣ ತನ್ನ ಜೀವಿತಾವಧಿಯ ಕಟ್ಟಕಡೆಯ ದಿನದವರೆಗೂ ಸಾಧು ಪ್ರಾಣಿಯಾಗಿಯೇ ಉಳಿದ. ಅವನಿಂದ ಯಾರಿಗೂ ಹಾನಿಯಾಗಲಿಲ್ಲ, ಯಾರಿಗೂ ಉಪಕಾರವೂ ಆಗಲಿಲ್ಲ. ಆದರೆ ರಾಜಾರೋಷವಾಗಿ ಹೆಂಡ, ಮಾಂಸಗಳ ಸಹವಾಸ ಮಾಡಿದ ಸೋಮಣ್ಣ ತನ್ನ ಜೀವಿತಾವಧಿಯ...