ವಿಷಯಕ್ಕೆ ಹೋಗಿ

ಪಂಕ್ತಿಭೇದ ಮತ್ತು ಮುಸ್ಲಿಂ ವಿಶ್ವವಿದ್ಯಾಲಯ


ಒಂದೆರಡು ವಿಷಯಗಳ ಬಗ್ಗೆ ಮಾತನಾಡಬೇಕಿದೆ - ಪಂಕ್ತಿಭೇದ ಮತ್ತು ಮುಸ್ಲಿಂ ವಿಶ್ವವಿದ್ಯಾಲಯದ ಬಗ್ಗೆ.

ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಂಕ್ತಿಭೇದ ತಾಂಡವವಾಡಿದೆ. ಅಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಮತ್ತು ಇನ್ನುಳಿದ ಜಾತಿಯ ಭಕ್ತರಿಗೆ ಒಂದು ಪಂಕ್ತಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಾಲ್ಕು ವರ್ಣಗಳು (ಅಥವಾ ಜಾತಿಗಳು) ಜನ್ಮದಿಂದ ಬರುವುದಿಲ್ಲ. ಅದು ಮನುಷ್ಯ ಮಾಡುವ ಕಾರ್ಯಗಳಿಂದ, ಆತ ಪಡೆಯುವ ಸಂಸ್ಕಾರದಿಂದ ದೊರೆಯುವಂಥದ್ದು. ಬ್ರಾಹ್ಮಣ್ಯ ಎಂಬುದು ಶ್ರೇಷ್ಠ ಎಂಬ ಬಗ್ಗೆ ಸಹಮತವಿದೆ. ಆದರೆ ಅದು ಹುಟ್ಟಿನಿಂದ ಬರುವಂಥದ್ದಲ್ಲ. ಜ್ಞಾನಾರ್ಜನೆಯಿಂದ ಮತ್ತು ಒಳ್ಳೆಯ ಸಂಸ್ಕಾರದಿಂದ ಬರುವಂಥದ್ದು ಅದು. ಇವತ್ತು ಬ್ರಾಹ್ಮಣರು ಎಂದು ಹೇಳಿಕೊಂಡು, ಜಾತಿಯ ಅಹಮಿಕೆ ತೋರುತ್ತಿರುವ ಬಹುತೇಕರು ಸಂಸ್ಕಾರದಿಂದ ಬ್ರಾಹ್ಮಣರಲ್ಲ. ಅವರಿಗೆ ನಾಡಿನ ಯಾವುದೇ ದೇವಸ್ಥಾನದಲ್ಲೂ ಪ್ರತ್ಯೇಕ ಪಂಕ್ತಿಯಲ್ಲಿ ಊಟ ಬಡಿಸುವ ಸಂಪ್ರದಾಯ ಇರಕೂಡದು.

ತಮಗೆ ಪ್ರತ್ಯೇಕ ಪಂಕ್ತಿಯೇ ಬೇಕು, ಎಲ್ಲರ ಜೊತೆಗೂಡಿ ಊಟ ಮಾಡಲು ಸಾಧ್ಯವಿಲ್ಲ ಎನ್ನುವ ಸ್ವಯಂಘೋಷಿತ ಬ್ರಾಹ್ಮಣರು, ಮನೆಯಲ್ಲೇ ಅಡುಗೆ ಮಾಡಿಕೊಂಡು ಉಣ್ಣುವುದು ಒಳಿತು. ಹಿಂದೂ ಸಮಾಜದಿಂದ ಇಂಥದೊಂದು ಖಡಕ್ ಸಂದೇಶ ಹೋಗಲೇಬೇಕಿದೆ. ಇಲ್ಲವಾದರೆ, ಸಮಾಜದ ಸಾಮರಸ್ಯಕ್ಕೆ ಪಂಕ್ತಿಭೇದ ಎಂಬುದು ಮಾರಕವಾಗಿ ಪರಿಣಮಿಸುತ್ತದೆ. ದೇವಸ್ಥಾನದ ಪುನರ್‌ ನವೀಕರಣ ಕಾರ್ಯದಲ್ಲಿ ಎಲ್ಲ ಜಾತಿಯ ಜನ ಒಟ್ಟಾಗಿ ಸೇರಿ ದುಡಿದಿದ್ದಾರೆ. ಅಂಥದ್ದರಲ್ಲಿ ನಿರ್ದಿಷ್ಟ ಜಾತಿಯೊಂದರ ಜನರಿಗೆ ಪ್ರತ್ಯೇಕ ಪಂಕ್ತಿಯಲ್ಲಿ ಊಟ ಬಡಿಸುವುದು ಸರ್ವಥಾ ಸಲ್ಲದು.


ಶ್ರೀರಂಗಪಟ್ಟಣದಲ್ಲಿ ಟಿಪ್ಪು ಸುಲ್ತಾನನ ಹೆಸರಿನಲ್ಲಿ ಪ್ರತ್ಯೇಕ ಮುಸ್ಲಿಂ ವಿಶ್ವವಿದ್ಯಾಲಯ ಸ್ಥಾಪನೆಗೆ ಕೇಂದ್ರ ಸರ್ಕಾರ ಮುಂದಾಗಿದೆ. ಕರ್ನಾಟಕದಲ್ಲಿ ಹೊಸ ವಿ.ವಿ. ಸ್ಥಾಪನೆಗೆ ವಿರೋಧ ಇಲ್ಲ. ಆದರೆ ಟಿಪ್ಪು ಹೆಸರಿನ ಮುಸ್ಲಿಂ ವಿವಿ ಬೇಡ. ಒಂದು ಹೊಸ ವಿ.ವಿ. ಸ್ಥಾಪಿಸಿ ಅದಕ್ಕೆ ಮೌಲಾನಾ ಅಬುಲ್‌ ಕಲಾಂ ಆಜಾದ್‌ ಅಥವಾ ಶಿಷುನಾಳ ಷರೀಫರ ಹೆಸರನ್ನು ಇಡಲಿ. ಆದರೆ ಆ ವಿ.ವಿ.ಅಲ್ಪಸಂಖ್ಯಾತ ಸಮುದಾಯಕ್ಕೆ ಮೀಸಲಾದ ವಿ.ವಿ. ಆಗುವುದು ಬೇಡ. ಸೆಕ್ಯುಲರ್ ತತ್ವವನ್ನು ಒಪ್ಪಿಕೊಂಡಿರುವ ದೇಶದಲ್ಲಿ ಇರುವುದು ಭಾರತೀಯರು ಮಾತ್ರ. ಇಲ್ಲಿ ಮುಸ್ಲಿಮರನ್ನು ಅಲ್ಪಸಂಖ್ಯಾತರೆಂದು ಕಾಣಬೇಕಾದ ಅನಿವಾರ್ಯತೆಯೇ ಇಲ್ಲ. ಅವರನ್ನು ಎಲ್ಲ ಭಾರತೀಯರಂತೆ ಕಂಡರೆ ಸಾಕು.


ಮುಸ್ಲಿಮರಲ್ಲಿ ಶೈಕ್ಷಣಿಕ ಪ್ರಗತಿ ಮಂದಗತಿಯಲ್ಲಿದೆ ಎಂಬುದನ್ನು ಹಲವಾರು ವರದಿಗಳು ಖಚಿತಪಡಿಸಿವೆ. ಆಧರೆ ಅದಕ್ಕೆ ಕಾರಣ ಏನು ಮತ್ತು ಯಾರು ಎಂಬುದನ್ನು ಅಲ್ಪಸಂಖ್ಯಾತರ ಅಭಿವೃದ್ಧಿ ಸಚಿವ ಮಾನ್ಯ ರೆಹಮಾನ್ ಖಾನ್‌ ಅವರೇ ತಿಳಿಸಬೇಕು. ಅದು ಅವರಿಗೆ ಚೆನ್ನಾಗಿ ಗೊತ್ತಿದೆ. ಆದರೆ ರಾಜಕೀಯ ಕಾರಣಗಳಿಂದಾಗಿ, ಪಕ್ಷದ ವರಿಷ್ಠರ ಒತ್ತಡಗಳಿಂದಾಗಿ ಅವರು ಅದನ್ನು ಹೇಳದೆ ಇರಬಹುದು. ಮುಸ್ಲಿಮರು ವಿಶ್ವವಿದ್ಯಾಲಗಳಿಗೆ ಹೆಚ್ಚಿನ ಸಂಖ್ಯೆಯಲ್ಲಿ ಬರುವಂತೆ ಆಗಬೇಕಾದರೆ, ಪ್ರಾಥಮಿಕ ಶಿಕ್ಷಣದ ಹಂತದಲ್ಲಿ ಅವರ ಮೇಲೆ ಹೆಚ್ಚಿನ ಗಮನ ಕೇಂದ್ರೀಕರಿಸಬೇಕು. ಅವರಿಗೆ ಪ್ರತ್ಯೇಕ ಹಾಗೂ ವಿಶೇಷ ಗಮನ ನೀಡಬೇಕೇ ಹೊರತು, ಅವರು ಪ್ರತ್ಯೇಕವಾಗಿ ಕಾಣುವುದು ಒಳಿತಲ್ಲ. ಇದೂ ಖಾನ್‌ ಅವರಿಗೆ ಬಹಳ ಸ್ಪಷ್ಟವಾಗಿ ತಿಳಿದಿದೆ. ಆದರೆ ರಾಜಕೀಯ ಅನಿವಾರ್ಯತೆಗಳು ಬೇರೆಯೇ ಇರುತ್ತವಲ್ಲ!?

ಪ್ರಾತಮಿಕ ಹಂತದಿಂದಲೇ ಮುಸ್ಲಿಮರು ಹೆಚ್ಚಿನ ಪ್ರಮಾಣದಲ್ಲಿ ಶೀಕ್ಷಣ ಪಡೆಯುವಂಥ ಅವಕಾಶ ಸೃಷ್ಟಿಸಿ, ಸ್ನಾತಕೋತ್ತರ ಹಂತದಲ್ಲಿ ಅವರನ್ನು ಎಲ್ಲ ಸಮುದಾಯಗಳ ಜೊತೆ ಬೆರೆತು ಓದುವಂಥ ವಾತಾವರಣವನ್ನು ಸರ್ಕಾರ ಸೃಷ್ಟಿಸಬೇಕು. ಆಗ ಮಾತ್ರ ಸೌಹಾರ್ದ ಭಾವ ಮೂಡುವುದು. ಪ್ರತ್ಯೇಕ ವಿ.ವಿ. ಸ್ಥಾಪನೆಯಿಂದ ಯಾವ ಪುರುಷಾರ್ಥವೂ ಈಡೇರದು. ಅದು ಮುಸ್ಲಿಂ ವಿ.ವಿ ಅಲ್ಲ, ಅದು ಎಲ್ಲ ಅಲ್ಪಸಂಖ್ಯಾತ ಸಮುದಾಯಗಳಿಗೆ ಪ್ರಾತಿನಿಧ್ಯ ನೀಡುವ ವಿ.ವಿ. ಎಂದು ಕೇಂದ್ರ ಸರ್ಕಾರ ಈಗ ಸ್ಪಷ್ಟನೆ ನೀಡುತ್ತಿದೆ. ಆದರೆ ಮತ-ಧರ್ಮಗಳ ನೆಲೆಗಟ್ಟಿನಲ್ಲಿ ಪ್ರತ್ಯೇಕ ವಿ.ವಿ. ಸ್ಥಾಪನೆಗೆ ಅವಕಾಶ ಇದೆಯೇ?

ಇದೇ ಮಾದರಿಯಲ್ಲಿ, ಹಿಂದೂಗಳಲ್ಲೇ ಹಿಂದುಳಿದಿರುವ ಒಬಿಸಿ ವರ್ಗ, ದಲಿತರು, ಆದಿವಾಸಿಗಳು ಹಾಗೂ ಇನ್ನಿತರ ಸಮುದಾಯಗಳಿಗೆ ಪ್ರತ್ಯೇಕ ವಿ.ವಿ. ಅಥವಾ ಪ್ರತ್ಯೇಕ ಕಾಲೇಜುಗಳನ್ನು ಸ್ಥಾಪಿಸುವುದರಿಂದ ಸೌಹಾರ್ದ ಸ್ಥಾಪನೆಯೇನೂ ಆಗುವುದಿಲ್ಲವಲ್ಲ?

ಕಾಮೆಂಟ್‌ಗಳು

giri ಹೇಳಿದ್ದಾರೆ…
Good article Joshi :)
ಮಿಥುನ ಕೊಡೆತ್ತೂರು ಹೇಳಿದ್ದಾರೆ…
ಸಹಭೋಜನ ಸರಿಯಾದುದೇ. ಎಲ್ಲ ಜಾತಿಯವರೂ ಜೊತೆಗೆ ಕೂತು ಊಟ ಮಾಡುವುದು ಹಿಂದೂ ಐಕ್ಯತೆ ದ್ರಷ್ಟಿಯಿಂದ ಒಳಿತಾದುದೇ. ನಾನು ಜಾತಿಯಲ್ಲಿ ಬ್ರಾಹ್ಮಣನಾದರೂ ಹೊಟೇಲಿನಲ್ಲಿ ಊಟ ಮಾಡುತ್ತೇನೆ, ಉಡುಪಿ, ಕಟೀಲು, ಕೊಲ್ಲೂರು ಯಾವುದೇ ದೇವಸ್ಥಾನಕ್ಕೂ ಹೋದರೂ ಬ್ರಾಹ್ಮಣರಿಗಾಗಿಯೇ ಪ್ರತ್ಯೇಕವಾಗಿರುವ ಊಟದ ವ್ಯವಸ್ಥೆ ಬಿಟ್ಟು ಇತರೆಲ್ಲ ಜಾತಿಯವರಿಗಾಗಿ ಇರುವ ಭೋಜನ ಶಾಲೆಯಲ್ಲೇ ಊಟ ಮಾಡುತ್ತೇನೆ. ಯಾಕೆಂದರೆ ನಾನು ಜಪ, ತಪಗಳನ್ನು ಮಾಡುವ ನಿಷ್ಟಾವಂತ ಬ್ರಾಹ್ಮಣನಲ್ಲ. ಆದರೆ ಒಂದಿಷ್ಟು ನಿಷ್ಟೆಯಿಂದ ಇರುವ ಬ್ರಾಹ್ಮಣರು ಪ್ರತ್ಯೇಕವಾಗಿ ಊಟ ಮಾಡುತ್ತೇವೆ ಅಂದರೆ ವಿರೋಧಿಸುವುದೂ ಸರಿಯಲ್ಲ ಎಂಬುದು ನನ್ನ ಅಭಿಪ್ರಾಯ. ಒಂದು ವೇಳೆ ಸಹಭೋಜನದಿಂದ ಸಮಾನತೆ ಬಂದೇ ಬರುತ್ತದೆ ಅಂತಾದರೆ ಯಾಕೆ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಜೊತೆಗೆ ಅವರ ಮನೆ ಕಾಯುವ ಪೋಲೀಸ್ ಪೇದೆ ಊಟ ಮಾಡುವುದಿಲ್ಲ? ಅಥವಾ ಯಾಕೆ ಅದೇ ಪೇದೆ ಆತನ ಮೇಲಧಿಕಾರಿ ಅಂದರೆ ಎಸ್ಪಿ, ಕಮಿಷನರ್ ಜೊತೆಗೆ ಕೂತು ಊಟ ಮಾಡುವುದಿಲ್ಲ. ಎಸಿ, ಡಿಸಿ ಲೆವೆಲ್ಲಿನ ಅಧಿಕಾರಿಗಳು ಯಾಕೆ ಅವರ ಬಾಗಿಲು ಕಾಯುವ ಜವಾನರೊಡನೆ ಊಟ ಮಾಡುವುದಿಲ್ಲ. ಹಾಗಿದ್ದರೆ ಪ್ರಧಾನಿ ಮನಮೋಹನ ಸಿಂಗ್, ಸೋನಿಯಾ ಜೊತೆಗೆ ನಾನು ನೀವು ಊಟ ಮಾಡಲು ಸಾಧ್ಯವಾಗಬೇಕಲ್ಲ? ಸ್ವಾಮಿಜಿಗಳು ಕೂಡ ನಮ್ಮೊಡನೆ ಅಂದರೆ ಉಳಿದ ಜಾತಿ ಬಿಡಿ ಖುದ್ದು ಬ್ರಾಹ್ಮಣರೊಡನೆ ಸಹಭೋಜನ ಮಾಡಬೇಕು ಅಂತ ಬಯಸುವುದು ಕೂಡ ಸರಿಯಲ್ಲ. ಯಾಕೆಂದರೆ ಅವರು ಯತಿಗಳು. ಅವರಂತೆ ಉಪವಾಸ ಮಾಡಲು ಸಾಧ್ಯವಾಗದ ನಮಗೆ, ಅವರಂತೆ ಬೆಳ್ಳಂಬೆಳಿಗ್ಗೆ ಎದ್ದು ಜಪತಪಗಳನ್ನು ನಿಷ್ಟಯಿಂದ ಮಾಡಲು ಸಾಧ್ಯವಾಗದ ನಮಗೆ ಸಹಭೋಜನದಿಂದಲೇ ಸಮಾನತೆ ಬರುತ್ತದೆ ಎಂಬುದು ಮೂರ್ಖತನದ ವಾದ. ಸಮಾನತೆ ಊಟದಿಂದಲೇ ಬರುತ್ತದೆ ಅಂತಾದರೆ ಯಾಕೆ ಸಾಹಿತ್ಯ ಸಮ್ಮೇಳನ, ಸರಕಾರಿ ಕಾರ್ಯಕ್ರಮಗಳಲ್ಲಿ ವಿಐಪಿಗಳಿಗೆ ಪ್ರತ್ಯೇಕವಾಗಿ ಇರುವುದು? ಹಾಗಂತ ಬ್ರಾಹ್ಮಣ ಜಾತಿಯಲ್ಲಿ ಹುಟ್ಟಿದವರು ಎಲ್ಲರೂ ಪ್ರತ್ಯೇಕವಾಗಿಯೇ ಊಟ ಮಾಡಬೇಕು ಎಂಬುದನ್ನೂ ನಾನು ಒಪ್ಪುವುದಿಲ್ಲ. ಆ ವಾದವೂ ನನ್ನದಲ್ಲ. ಸಹಭೋಜನದಿಂದಲೇ ಒಗ್ಗಟ್ಟು ಅನ್ನುವುದಾದರೆ ಯಾಕೆ ಪಂಬದರು ಪರವರೊಡನೆ, ಬಂಟರು ಕೊರಗರೊಡನೆ, ಬಿಲ್ಲವರು ಪಂಬದರೊಡನೆ ಕುಳಿತು ಊಟ ಮಾಡುವುದಿಲ್ಲ? ಸಹಭೋಜನದ ವಾದ ಬ್ರಾಹ್ಮಣರ ವಿಚಾರದಲ್ಲಿ ಮಾತ್ರವೇ ಯಾಕೆ ಎಂಬುದಷ್ಟೇ ನನ್ನ ಅಭಿಪ್ರಾಯ

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಮರೆಯಲಾಗದ ಕಾಮತರು: ಮಾಧವರಾಯರ ಒಂದು ನೆನಪು!

ನಮ್ಮ ತಲೆಮಾರಿನ ಪತ್ರಕರ್ತರು ಕಂಡ 'ಪತ್ರಿಕಾ ರಂಗದ ಭೀಷ್ಮ'ನ ಬಗ್ಗೆ ಬರೆಯಬೇಕು ಅನಿಸುತ್ತಿದೆ. ಆ ಭೀಷ್ಮ ಯಾರು ಎಂಬ ಪ್ರಶ್ನೆ ಬೇಡ - ಅವರು ಮಾಧವ ವಿಠಲ ಕಾಮತ್ (ಎಂ.ವಿ. ಕಾಮತ್) ಅಲ್ಲದೆ ಬೇರೆ ಯಾರೂ ಅಲ್ಲ. ಅವರ ಬಗ್ಗೆಯೇ ಯಾಕೆ ಬರೆಯಬೇಕು ಅನಿಸುತ್ತಿದೆ ಎಂಬ ಪ್ರಶ್ನೆಗೆ ಉತ್ತರ ಇಲ್ಲ. ಆದರೆ ಎಂಬತ್ತು ವರ್ಷ ವಯಸ್ಸು ದಾಟಿದ ನಂತರವೂ ಎಳೆಯ ಯುವಕನಂತೆ ಕಾಣಿಸುತ್ತಿದ್ದ ಕಾಮತರ ಬಗ್ಗೆ ಬರೆಯಬೇಕು ಎಂದು ಹಲವು ದಿನಗಳಿಂದ ಅಂದುಕೊಳ್ಳುತ್ತಿದ್ದೆ ಎಂಬುದಂತೂ ನಿಜ. ನಾನು ಪದವಿ ವ್ಯಾಸಂಗ ಮಾಡುತ್ತಿದ್ದ ದಿನಗಳು ಅವು. ಒಂದು ದಿನ ದೂರವಾಣಿ ಕರೆ ಮಾಡಿದ ಹರೀಶ್ ಆದೂರು ಅವರು (ಆಗ ಹರೀಶ್ ಅವರು ಸಂಯುಕ್ತ ಕರ್ನಾಟಕ ದಿನಪತ್ರಿಕೆಯ ಮಂಗಳೂರು ಆವೃತ್ತಿಯಲ್ಲಿ ಕೆಲಸ ಮಾಡುತ್ತಿದ್ದರು), 'ಈ ವಾರದ ಅಂತ್ಯದಲ್ಲಿ ಮನೆಯಂಗಳದಲ್ಲಿ ಸಾಹಿತ್ಯ ಸಂಜೆ ಕಾರ್ಯಕ್ರಮ ಇದೆ. ನೀನೂ ಬಾ. ಅಲ್ಲಿ ನಿನಗೆ ನಾಲ್ಕು ಒಳ್ಳೆಯ ಮಾತುಗಳನ್ನು ಕೇಳುವ ಅವಕಾಶ ಸಿಗಬಹುದು' ಎಂದು ಆಹ್ವಾನ ನೀಡಿದರು. 'ಕಾರ್ಯಕ್ರಮದ ಅತಿಥಿ ಯಾರು' ಎಂದು ಪ್ರಶ್ನಿಸಿದೆ. 'ಎಂ.ವಿ. ಕಾಮತರು ಮಾರಾಯಾ' ಎಂದು ಉತ್ತರಿಸಿ ಫೋನ್ ಇಟ್ಟರು. ಶನಿವಾರ ಬಂತು. ಅಂದಿನ ತರಗತಿಗಳು ಮುಗಿದಿದ್ದವು. ಸರಿ, ಕಾಮತರ ಮಾತು ಕೇಳಿಸಿಕೊಳ್ಳುವ ಅವಕಾಶ ತಪ್ಪಿಸಿಕೊಳ್ಳಬಾರದು ಎಂಬ ಉದ್ದೇಶದಿಂದ ಮೂಡುಬಿದಿರೆ ಬಸ್‌ ಸ್ಟ್ಯಾಂಡ್‌ಗೆ ಹೋಗಿ, ಬೆಳ್ತಂಗಡಿ ಕಡೆ ಹೋಗುವ ಬಸ್ ಹತ್ತಿದೆ. ಜ

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸಿ ಕೊಠಾರಿ

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ