ಅಕ್ಟೋಬರ್ ೯ ರಿಂದ ೧೧ರವರೆಗೆ ಬಳ್ಳಾರಿಯ ರಾಘವ ಕಲಾಮಂದಿರಲ್ಲಿ ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್ ಆಯೋಜಿಸಿದ್ದ ’ರಂಗತೋರಣ’ ವಿದ್ಯಾರ್ಥಿ ನಾಟಕೋತ್ಸವ ಬಹಳ ಅದ್ದೂರಿಯಾಗಿ ನಡೆಯಿತು. ನಾಟಕೋತ್ಸವದಲ್ಲಿ ಸ್ಪರ್ಧಿಸಿದ್ದ ಸುಮಾರು ೨೭ ನಾಟಕಗಳ ಪೈಕಿ ಮಂಗಳೂರಿನ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಎಮ್‌ಬಿಅ ಕಾಲೇಜಿನ ವಿದ್ಯಾರ್ಥಿಗಳು ಆಡಿದ ’ನಾನು ಮತ್ತು ನಾಳೆ’ ನಾಟಕ ಪ್ರಥಮ ಬಹುಮಾನ ಪಡೆದುಕೊಂಡಿತು.
೨೦೦೩ನೆಯ ಇಸವಿಯಲ್ಲಿ ಪ್ರಾರಂಭಗೊಂಡ ಈ ನಾಟಕೋತ್ಸವಕ್ಕೆ ಈ ಬಾರಿ ಐದರ ಹರೆಯ. ಇಡೀ ನಾಟಕೋತ್ಸವದ ರೂವಾರಿ, ನಾಟಕೋತ್ಸವದುದ್ದಕ್ಕೂ ಪಾದರಸದಂತೆ ಓಡಾಡುತ್ತಾ ವಿದ್ಯಾರ್ಥಿ ಪರಿಷತ್ತಿನ ಕಾರ್ಯಕರ್ತರನ್ನು ಪ್ರತಿ ನಿಮಿಷವೂ ಹುರಿದುಂಬಿಸುತ್ತಿದ್ದ ಪ್ರೊ. ಭೀಮಸೇನ್ ಅವರ ಜೊತೆ ಆಡಿದ ಎರಡು ಮಾತುಗಳು ಇಲ್ಲಿವೆ.
ಎಬಿವಿಪಿಯವರು ಎಂದರೆ ಕೇವಲ ಬಂದ್ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ನಕಾರಾತ್ಮಕ ಹಣೆಪಟ್ಟಿಗಳಿದ್ದರೂ ವಿದ್ಯಾರ್ಥಿ ಪರಿಷತ್ತಿನವರು ವಿದ್ಯಾರ್ಥಿಗಳಲ್ಲಿ ಸುಪ್ತವಾಗಿರುವ ಪ್ರತಿಭೆಯನ್ನು ಹೊರತೆಗೆಯುವತ್ತ ಮಾಡುತ್ತಿರುವ ಕೆಲಸದ ಕೆಲವು ಝಲಕ್ ಕೂಡ ಇಲ್ಲಿದೆ.
"ಇದು ನಮ್ಮ ಐದನೆಯ ವರ್ಷದ ರಂಗತೋರಣ. ಈ ನಾಟಕೋತ್ಸವವನ್ನು ಆರಂಭಸಲು ಸಾಕಷ್ಟು ಕಾರಣಗಳಿವೆ. ಸಾಮಾನ್ಯವಾಗಿ ಎಬಿವಿಪಿಯ ಹುಡುಗರು ಎಂದರೆ ಬಂದ್ ಮಾಡುವವರು, ಗಲಾಟೆ ಮಾಡುವವರು, ಪ್ರತಿಭಟನೆ ಮಾಡುವವರು ಎಂಬೆಲ್ಲಾ ಹಣೆಪಟ್ಟಿಗಳಿವೆ. ಆದರೆ ಬಂದ್, ಪ್ರತಿಭಟನೆ ಮತ್ತು ಗಲಾಟೆಯ ಆಚೆಗೂ ಎಬಿವಿಪಿಯ ಹುಡುಗರು ಕೆಲಸ ಮಾಡುತ್ತಾರೆ. ಅವರ ಪ್ರತಿಭೆ ಅನೇಕ ಕ್ಷೇತ್ರಗಳಲ್ಲಿ ವ್ಯಾಪಿಸಿದೆ."
"ರಜಾ ದಿನಗಳಲ್ಲಿ ಎಬಿವಿಪಿಯ ಹುಡುಗರಿಗೆ ಸಮಯ ನಿರ್ವಹಣೆ, ನಾಯಕತ್ವದ ಕೌಶಗಳು, ಪರಿಣಾಮಕಾರಿ ಸಂವಹನ ಕಲೆ, ವಿಜ್ಞಾನ ಹೀಗೆ ಅನೇಕ ವಿಷಯಗಳ ಬಗ್ಗೆ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತದೆ. ನಮಗೆ ಇಂಥ ಎಲ್ಲ ಕಲೆ-ಕೌಶಲಗಳನ್ನು ಒಂದೇ ಮಾಧ್ಯಮದ ಮೂಲಕ ಪರಿಣಾಮಕಾರಿಯಾಗಿ ಕಲಿಸುವ ಆಸೆಯಿತ್ತು."
"ಇಂಥ ಸಂದರ್ಭದಲ್ಲಿಯೇ ಕನ್ನಡ ಹಿರಿಯ ನಾಟಕಕಾರ ಡಾ ಚಂದ್ರಶೇಖರ ಕಂಬಾರರಿಗೆ ನಾಡೋಜ ಪ್ರಶಸ್ತಿ ಬಂತು. ಆಗ ನಾವೂ ನಾಟಕಗಳ ಬಗ್ಗೆ ಏನಾದರೂ ಮಾಡಬೇಕು. ನಾಟಕಕ್ಕಾಗಿ ಕೆಲಸ ಮಾಡಬೇಕು ಎಂಬ ಆಸೆ ಮನಸ್ಸಿನಲ್ಲಿ ಮೂಡಿತು."
"ನಾಯಕತ್ವದ ಕಲೆ, ಪರಿಣಾಮಕಾರಿ ಸಂವಹನ, ಸಮಯ ನಿರ್ವಹಣೆ ಇಂಥಹ ಅನೇಕ ಕೌಶಲಗಳನ್ನು ವ್ಯವಸ್ಥಿತವಾಗಿ ಮೈಗೂಡಿಸಿಕೊಳ್ಳಬೇಕಾದದ್ದು ಒಬ್ಬ ನಾಟಕಕಾರನ ಮತ್ತು ನಟನ ಅಗತ್ಯ ಗುಣ. ಎಬಿವಿಪಿಯವರು ಹೇಗಿದ್ದರೂ ಇಂಥ ಕೌಶಲಗಳನ್ನು ಅನೇಕ ಕಾರ್ಯಕ್ರಮಗಳ ಮೂಲಕ ತಮ್ಮ ಹುಡುಗರಿಗೆ ಕಲಿಸುತ್ತಾರೆ. ಹಾಗೆ ಕಲಿತ ವಿಚಾರಗಳ ಅಭಿವ್ಯಕ್ತಿ ಹೇಗಾಗುತ್ತದೆ ಎಂದು ನೋಡಬೇಕು. ಅದಕ್ಕೆ ನಾಟಕಕ್ಕಿಂತ ಪರಿಣಾಮಕಾರಿ ಮಾಧ್ಯಮ ಯಾವುದಿದೆ?"
"ಈ ಒಂದು ಅಂಶವನ್ನು ಮನಸ್ಸಿನಲ್ಲಿಟ್ಟುಕೊಂಡು ನಾವು ೨೦೦೩ ರಲ್ಲಿ ಬಳ್ಳಾರಿಯಲ್ಲಿ ಜಿಲ್ಲಾ ಮಟ್ಟದ ನಾಟಕೋತ್ಸವವನ್ನು ’ರಂಗತೋರಣ’ ಎಂಬ ಹೆಸರಿನಲ್ಲಿ ಆರಂಭಿಸಿದೆವು. ಜಿಲ್ಲಾ ಮಟ್ಟದಲ್ಲಿ ನಡೆದ ಮೊದಲ ನಾಟಕೋತ್ಸವದಲ್ಲಿ ಏಳು ತಂಡಗಳು ಭಾಗವಹಿಸಿದ್ದವು."
"ನಂತರ ೨೦೦೪ರಲ್ಲಿ ಎರಡನೆಯ ರಂಗತೋರಣ ವಿಭಾಗ ಮಟ್ಟದಲ್ಲಿ ನಡೆಯಿತು. ಗುಲ್ಬರ್ಗಾ ವಿಶ್ವವಿದ್ಯಾಲಯದ ವ್ಯಾಪ್ತಿಯಲ್ಲಿ ಬರುವ ಜಿಲ್ಲೆಗಳಾದ ಗುಲ್ಬರ್ಗ, ಬಳ್ಳಾರಿ, ರಾಯಚೂರು, ಕೊಪ್ಪಳ ಮತ್ತು ಬೀದರ್ ಜಿಲ್ಲೆಗಳ ಕಾಲೇಜು ವಿದ್ಯಾರ್ಥಿ ನಾಟಕ ತಂಡಗಳು ಈ ಉತ್ಸವದಲ್ಲಿ ಭಾಗವಹಿಸಿದ್ದವು. ೨೦೦೭ನೆಯ ಇಸವಿಯಿಂದ ಈ ಉತ್ಸವ ರಾಜ್ಯಮಟ್ಟದ್ದಾಯಿತು."
"ಪಿಯುಸಿಯಿಂದ ಹಿಡಿದು ಪಿಎಚ್‌ಡಿ ಮಾಡುತ್ತಿರುವ ವಿದ್ಯಾರ್ಥಿಗಳವರೆಗೆ ಈ ನಾಟಕೋತ್ಸವದಲ್ಲಿ ಭಾಗವಹಿಸುತ್ತಾರೆ. ಇಲ್ಲಿ ಸಿದ್ಧಾಂತ ಬೇಧಗಳನ್ನು ಮರೆತು ಎಲ್ಲ ರೀತಿಯ ನಾಟಕಗಳನ್ನು ಪ್ರದರ್ಶಿಸಲಾಗುತ್ತದೆ."
"ಈ ನಾಟಕೋತ್ಸವವನ್ನು ಪ್ರತಿ ವರ್ಷವೂ ಬಳ್ಳಾರಿಯಲ್ಲೇ ನಡೆಸುವುದಕ್ಕೆ ಕಾರಣವಿದೆ. ಬಳ್ಳಾರಿಯ ರಾಘವ ಅವರು ಮತ್ತು ಬೀಚಿಯವರು ನಾಟಕ ಮತ್ತು ಸಾಹಿತ್ಯ ಕ್ಷೇತ್ರದಲ್ಲಿ ಬಹುದೊಡ್ಡ ಹೆಸರು ಸಂಪಾದಿಸಿದ್ದವರು. ಅದು ನಿಮಗೂ ಗೊತ್ತು. ಬಳ್ಳಾರಿಯ ರಾಘವರಂತೂ ಷೇಕ್ಸ್‌ಪಿಯರ್‌ನ ನಾಟಕಗಳನ್ನು ಜಾರ್ಜ್ ಬರ್ನಾರ್ಡ್ ಷಾ ಎದುರಿಗೆ ಆಡಿತೋರಿಸಿದ್ದರಂತೆ. ಷೇಕ್ಸ್‌ಪಿಯರ್‌ಗೂ ಬರ್ನಾರ್ಡ್ ಷಾಗೂ ಆಗಿಬರುತ್ತಿರಲಿಲ್ಲ. ಆದರೂ ಬರ್ನಾರ್ಡ್ ಷಾ ರಾಘವರು ಆ ನಾಟಕಗಳನ್ನು ಆಡುತ್ತಿದ್ದಾರೆ ಎಂಬ ಕಾರಣಕ್ಕಾಗಿಯೇ ಅದನ್ನು ನೋಡುತ್ತಿದ್ದರಂತೆ."
"ಒಮ್ಮೆ ಗಾಂಧೀಜಿಯವರು ಇಲ್ಲಿಗೆ ಬಂದಿದ್ದಾಗ ಅವರೆದುರಿಗೆ ಒಂದು ನಾಟಕ ತೋರಿಸುವ ಆಸೆಯಾಯಿತಂತೆ. ಗಾಂಧೀಜಿಯವರಿಗೆ ಬಹಳ ಕೆಲಸವಿತ್ತು. ಆದರೂ ಇಪ್ಪತ್ತು ನಿಮಿಷಗಳ ಮಟ್ಟಿಗೆ ನಾಟಕ ನೋಡಲು ಕುಳಿತರು. ನಾಟಕ ನೋಡುವುದರಲ್ಲಿ ತಲ್ಲೀನರಾಗಿಬಿಟ್ಟ ಗಾಂಧೀಜಿ ತಮ್ಮ ಪ್ರಾರ್ಥನೆಯ ಸಮಯವನ್ನೂ ಮರೆತು ನಾಟಕ ನೋಡಿದರಂತೆ. ನಂತರ ರಾಘವರ ಬೆನ್ನು ತಟ್ಟಿ ಹೋದರಂತೆ. ಅಷ್ಟೇ ಅಲ್ಲದೆ, ತಿಲಕರೆದುರು ಮಹಾತ್ಮಾ ಕಬೀರ್ ನಾಟಕವನ್ನು ಆಡಿ ತೋರಿಸಿದ್ದರಂತೆ ನಮ್ಮ ರಾಘವರು."
"ಅಂಥ ನಾಟಕಕಾರರು ಮತ್ತು ಸಾಹಿತಿಗಳು ಜನಿಸಿದ ಈ ನಾಡಿನಲ್ಲಿ ನಾಟಕ ಕಾರ್ಯಕ್ರಮಗಳಿಗೆ ಬಹುವಾದ ಬೆಂಬಲವಿದೆ. ಇಲ್ಲಿ ವೃತ್ತಿ ರಂಗಭೂಮಿ ಕಲಾವಿದರ ಬಹುದೊಡ್ಡ ದಂಡೇ ಇದೆ. ಇದು ಒಂದರ್ಥದಲ್ಲಿ ವೃತ್ತಿ ರಂಗಭೂಮಿ ಕಲಾವಿದರ ತವರೂರು."
"ಹಾಗಾಗಿ ಬಳ್ಳಾರಿಯ ಸಾಂಸ್ಕೃತಿಕ ಮುಖವನ್ನು ಜನರಿಗೆ ತೋರಿಸುವುದಕ್ಕೋಸ್ಕರ ಮತ್ತು ರಾಜಕೀಯದಾಚೆಗೂ ಬಳ್ಳಾರಿಗೆ ಒಂದು ಒಳ್ಳೆಯ ಹೆಸರಿದೆ ಎಂಬುದನ್ನು ಜನರಿಗೆ ತೋರಿಸಲು ಈ ಉತ್ಸವವನ್ನು ಬಳ್ಳಾರಿಯಲ್ಲೇ ನಡೆಸುತ್ತೇವೆ."

*****

ಕಾಮೆಂಟ್‌ಗಳು