ಈ ಘಟನೆ ನಡೆದದ್ದು ಜನವರಿ 13, 2007 ರಂದು. ಬೆಂಗಳೂರಿನ ಕನಕಪುರ ರಸ್ತೆಯಲ್ಲಿರುವ ಆರ್ಟ್ ಆಫ್ ಲಿವಿಂಗ್ ಆಶ್ರಮದಲ್ಲಿ ಆಯೋಜಿಸಿದ್ದ ಮೂರು ದಿನಗಳ ಥಿಂಕ್ ಇಂಡಿಯಾ ಎಂಬ ಕಾರ್ಯಕ್ರಮದಲ್ಲಿ.
ಇಡೀ ಕಾರ್ಯಕ್ರಮ 'ಆಧ್ಯಾತ್ಮ ಮತ್ತು ರಾಷ್ಟ್ರದ ಪ್ರಗತಿ' ಎಂಬ ವಿಶಯದ ಮೇಲೆ ಕೇಂದ್ರಿತವಾಗಿತ್ತು. ಆ ದಿನ ಬೆಳಿಗ್ಗೆ ಕೇರಳದ ವಿಜಯ್ ಮೆನನ್ ಅವರ ಸ್ವಾಮಿ ವಿವೇಕಾನಂದರ ಜೀವನ ಮತ್ತು ಸಾದನೆಯ ಬಗ್ಗೆ ಭಾಷಣವನ್ನು ಕೇಳಿದ ಸುಮಾರು ಒಂದು ಸಾವಿರದಷ್ಠಿದ್ದ ಯುವಜನತೆ ರೋಮಾಂಚಿತಗೊಂಡಿತ್ತು.
ಅವರ ಭಾಷಣದಲ್ಲಿನ ಎರಡು ವಿಚಾರಗಳು ಮನಮುಟ್ಟುವಂತಿದ್ದವು: ವಿವೇಕಾನಂದರು ತಮ್ಮ ಚಿಕಾಗೋ ಉಪನ್ಯಾಸದಲ್ಲಿ "ನಾನು ಸ್ವಾಮಿ ವಿವೇಕಾನಂದ, ನಾನು ಭಾರತದಿಂದ ಬಂದಿದ್ದೇನೆ" ಅಂತ ಒಮ್ಮೆಯೂ ಹೇಳಿಕೊಳ್ಳಲಿಲ್ಲ. ಬಡಲಿಗೆ ಅವರು "ಜಗತ್ತಿಗೇ ವಿಶ್ವಭ್ರಾತ್ರ ತ್ವ ಮತ್ತು ವಿಶ್ವಶಾಂತಿಯ ಸಂದೇಶ ನೀಡಿದ ಮಹಾನ್ ಪರಂಪರೆಯ ಪ್ರತಿನಿಧಿಯಾಗಿ ನಿಮ್ಮ ಮುಂದೆ ನಿಂತಿದ್ದೇನೆ" ಅಂತ ಹೇಳಿದ್ದರು. ಇದು ವಿವೇಕಾನಂದರ ನಿರಹಂಕಾರ ಸ್ಥಿತಿಯನ್ನು ತೋರಿಸುತ್ತದೆ. ಇವತ್ತು ಬಹುತೇಕ ಭಾಷಣಕಾರರು ತಮ್ಮ ಭಾಷಣವನ್ನು 'ನನ್ನ ಸಹೋದರ ಸಹೋದರಿಯರೇ' ಅಂತಲೇ ಆರಂಭಿಸುತ್ತಾರೆ. ಆದರೆ ಅವರುಗಳ ಈ ರೀತಿಯ ಆರಂಭಕ್ಕೆ ಯಾರೂ ಚಪ್ಪಾಳೆ ತಟ್ಟುವುದಿಲ್ಲ.
ಆದರೆ ವಿವೇಕಾನಂದರು ಚಿಕಾಗೋ ಉಪನ್ಯಾಸದ ಆರಂಭದಲ್ಲಿ "ಅಮೆರಿಕದ ನನ್ನ ಸಹೋದರ ಸಹೋದರಿಯರೇ" ಅಂತ ಹೇಳಿದ್ದು ನೆರೆದಿದ್ದವರ ಮೈಮನವನ್ನು ತಟ್ಟಿತ್ತು. ಕಾರಣ ಇಷ್ಟೆ. ವಿವೇಕಾನಂದರಿಗೆ ಜಗತ್ತಿನ ಪ್ರತಿಯೊಬ್ಬರನ್ನೂ ಸಹೋದರ ಅಥವಾ ಸಹೋದರಿಯ ರೂಪದಲ್ಲಿ ನೋಡುವ ಶುದ್ಧ ಮನಸ್ಸಿತ್ತು. ಇಂದು ವಿವೇಕಾನಂದರ ಭಾಷಣದ ಸಾಲನ್ನು ನಕಲು ಮಾಡಿ ತಮ್ಮ ಭಾಷಣ ಆರಂಭಿಸುವ ಅನೇಕರಿಗೆ ಜಗತ್ತಿನ ಪ್ರತಿಯೊಬ್ಬರನ್ನೂ ತಮ್ಮ ಸಹೋದರ ಅಥವಾ ಸಹೋದರಿಯ ರೂಪದಲ್ಲಿ ನೋಡುವ ಮನಸ್ಸಿಲ್ಲ. ಸುಮ್ಮನೆ ಬಾಯುಪಚಾರಕ್ಕೆ 'ಸಹೋದರ ಸಹೋದರಿಯರೇ' ಅಂತ ಹೇಳಿದರೆ ಅದು ಯಾರಿಗೂ ಪ್ರಿಯವಾಗುವುಡಿಲ್ಲ ಅಂದಿದ್ದರು ವಿಜಯ್ ಮೆನನ್.
ಮೂರು ದಿನಗಳ ಕಾರ್ಯಕ್ರಮದ ಸಮಾರೋಪ ಸಮಾರಂಭದಲ್ಲಿ ಆರ್ಟ್ ಆಫ್ ಲಿವಿಂಗ್ ನ ಸ್ಥಾಪಕ ಶ್ರೀ ಶ್ರೀ ರವಿಶಂಕರ್ ಅವರು “ಇಂದಿನ ಯುವಕರು ದೇಶವಿರೋದಿ ಕಾರ್ಯವೆಸಗಿ ಪೋಲೀಸರ ಗುಂಡಿಗೆ ಬಲಿಯಾಗುವ ನಕ್ಸಲೀಯರ ಬಗ್ಗೆ ಅನುಕಂಪ ಸೂಚಿಸಬಲ್ಲರು. ಆದರೆ ಸೈನಿಕರ ಬಲಿದಾನದ ಬಗ್ಗೆ ಯುವಕರ ಕಣ್ಣಲ್ಲಿ ನೀರು ಜಿನುಗುವುದು ಅಪರೂಪ” ಎಂದು ವಿಷಾದ ವ್ಯಕ್ತಪಡಿಸಿದ್ದರು.
ರವಿಶಂಕರರ ಭಾಷಣ ಮುಗಿಯುತ್ತಿದ್ದಂತೆಯೇ ವೇದಿಕೆಯತ್ತ ನುಗ್ಗಿ ಬಂದ ಮಹಿಳೆಯೊಬ್ಬರು “ನನ್ನ ಪತಿ ಈಗ ಕೆಲವೇ ತಿಂಗಳ ಹಿಂದೆ ಕಾಶ್ಮೀರದಲ್ಲಿ ಉಗ್ರಗಾಮಿಗಳ ಗುಂಡಿಗೆ ಬಲಿಯಾದರು. ಆ ಹೊತ್ತಿನಲ್ಲಿ ನನ್ನ ಕುಟುಂಬದ ಕಣ್ಣೀರೊರೆಸಲು ಯಾರೂ ಇರಲಿಲ್ಲ. ಇವತ್ತು ನಾವೆಲ್ಲರೂ ನೆಮ್ಮದಿಯಿಂದಿರಲು ಕಾರಣ ನನ್ನ ಪತಿ ಮತ್ತು ಅವರಂಥ ಸಾವಿರಾರು ಮಂದಿಯ ಬಲಿದಾನವೇ ಕಾರಣವಲ್ಲವೇ” ಎಂದು ಪ್ರಶ್ನಿಸಿದ್ದರು. ಹಾಗೆ ಪ್ರಶ್ನಿಸಿದ ನಂತರ ಅವರು ದುಃಖಿಸುತ್ತ ಅಲ್ಲೇ ಕೆಲವು ಕಾಲ ನಿಂತಿದ್ದರು.
ಅವರ ನೋವಿಗೆ ಸ್ಪಂದಿಸಿದ ವಿದ್ಯಾರ್ಥಿ ಸಮೂಹ ಎದ್ದು ನಿಂತು ಒಂದು ನಿಮಿಷಗಳ ಕಾಲ ಮೌನವಾಗಿ ರೋದಿಸಿತ್ತು. ಈ ಘಟನೆ ನಡೆದು ಹಲವಾರು ತಿಂಗಳುಗಳು ಕಳೆದಿವೆ. ಆದರೆ ಅಂದು ಮೂಡಿದ ಪ್ರಶ್ನೆಗಳಿಗೆ ಮಾತ್ರ ಇಂದಿಗೂ ಉತ್ತರ ಸಿಕ್ಕಿಲ್ಲ.
ನಾವೇಕೆ ದೇಶ ಮತ್ತು ಸಮಾಜಕ್ಕಾಗಿ ಹೋರಾಡಿದವರಿಗೆ ಕನಿಕರ ತೋರಿಸದೆ ಸಿದ್ಧಾಂತಕ್ಕಾಗಿ ಇನ್ನೊಬ್ಬರನ್ನು ಕೊಲ್ಲಲೂ ಹೇಸದ ನಕ್ಸಲೀಯರ ಬಗ್ಗೆ ಕಣ್ಣೀರು ಸುರಿಸುತ್ತೇವೆ? ಬಂದೂಕಿನಿಂದ ಸಮಾಜವನ್ನು ತಿದ್ದುವುದು ಸಾಧ್ಯವಿದ್ದಿದ್ದರೆ ಗಾಂದೀಜಿಯವರ ಅಹಿಂಸಾ ಮಾರ್ಗ ಏಕೆ ಬೇಕಿತ್ತು? ‘ಮೇಲ್ವರ್ಗದವರಿಂದ ದಲಿತರಿಗೆ ಅನ್ಯಾಯವಾಗಿದೆ’ ಅಂತ ಡಾ. ಅಂಬೇಡ್ಕರ್ ದಲಿತರ ಕೈಗೆ ಬಂದೂಕು ಕೊಡಲಿಲ್ಲ. ಬದಲಿಗೆ ಶಿಕ್ಷಣ ನೀಡಿದರು. ಇದು ತತ್ವ, ಸಿದ್ಧಾಂತಗಳ ಅಮಲೇರಿಸಿಕೊಂಡವರಿಗೆ ತಿಳಿದಿಲ್ಲವೇ?
ನಮಗೆ ಸಮಾಜಕ್ಕಿಂತ ತತ್ವ, ಸಿದ್ಧಾಂತಗಳೇ ಮುಖ್ಯವೇ? ತತ್ವ, ಸಿದ್ಧಾಂತಗಳಿಗಿಂತಲೂ ಬದುಕು ಮತ್ತು ನಮ್ಮ ಸುತ್ತಲಿನ ಸಮಾಜವೇ ಮುಖ್ಯ ಅಂತ ಗೊತ್ತಿರುವ (?) ವಿದ್ಯಾವಂತ ಯುವಕ, ಯುವತಿಯರೇ ಏಕೆ ಇಂದು ನಕ್ಸಲ್ ಚಳವಳಿಯಲ್ಲಿ ಹೆಚ್ಚಾಗಿ ಕಂಡುಬರುತ್ತಿದ್ದಾರೆ? ಇವರು ನಕ್ಸಲ್ ಚಳವಳಿಯಲ್ಲಿ ಸೇರಿಕೊಳ್ಳಲು ಪ್ರೇರಣೆ ಯಾರು? ನಕ್ಸಲೀಯರ ಸಿದ್ಧಾಂತಗಳನ್ನು ಪರೋಕ್ಷವಾಗಿ ಬೆಂಬಲಿಸಿ ಪತ್ರಿಕೆಗಳಿಗೆ ಪುಟಗಟ್ಟಲೆ ಲೇಖನ ಬರೆಯುವವರು, ಭಾಷಣ ಮಾಡುವವರು ತಮ್ಮ ಮಕ್ಕಳನ್ನೇಕೆ ನಕ್ಸಲೀಯರನ್ನಾಗಿಸುವುದಿಲ್ಲ? ತಿಳಿದವರು ದಯವಿಟ್ಟು ಉತ್ತರಿಸಿ.

ಕಾಮೆಂಟ್‌ಗಳು
U. Mahesh Prabhu
I too hv felt this many a times...
ಚನ್ನಾಗಿದ್ದು.. ಲಾಸ್ಟ್ ಪ್ಯಾರ ತುಂಬ ಇಷ್ಟ ಆಯ್ತು
ಮಲ್ನಾಡ್ ಹುಡ್ಗಿ
ನಿಮ್ಮ ಬ್ಲಾಗನ್ನು ಓದಿದೆ. ಬಹಳ dynamic ಆಗಿವೆ ನಿಮ್ಮ ಬರಹಗಳು. ನಿಮ್ಮ ನೇರ, ದಿಟ್ಟ ದೃಷ್ಟಿ ಬಹಳ ಇಷ್ಟ ಆಯ್ತು. ಎಲ್ಲಾ ಲೇಖನಗಳೂ ಮಾಹಿತಿಪೂರ್ಣ ಹಾಗು thought provoking. Thank you.
Vijay Joshi