ಅದು ೧೯೬೦ರ ದಶಕ. ಹಿಂದೆ ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರಕರಾಗಿದ್ದ ಲಾಲ್ ಕೃಷ್ಣ ಆಡ್ವಾಣಿಯವರು ಭಾರತೀಯ ಜನ ಸಂಘದ ಕೆಲವು ಜವಾಬ್ದಾರಿಗಳನ್ನೂ ವಹಿಸಿಕೊಂಡಿದ್ದರು. ಹಾಗೆಯೇ ಪಕ್ಷದ ಮತ್ತು ಸಂಘದ ಕೆಲ ಹಿರಿಯರ ಸೂಚನೆಯ ಮೇರೆಗೆ ೧೯೬೦ರಲ್ಲಿ ’ಆರ್ಗನೈಸರ್’ ಪತ್ರಿಕೆಯ ಸಹಾಯಕ ಸಂಪಾದಕರಾಗಿ ಜವಾಬ್ದಾರಿ ವಹಿಸಿಕೊಂಡಿದ್ದ ಕಾಲ ಅದು.
ಆಡ್ವಾಣಿಯವರಿಗೆ ಜನಸಂಘದ ಮಾರ್ಗದರ್ಶಕರಲ್ಲೊಬ್ಬರಾಗಿದ್ದ, ಸಂತಸದೃಶ ಜೀವನ ನಡೆಸುತ್ತಿದ್ದ ಪಂಡಿತ್ ದೀನ್ ದಯಾಳ್ ಉಪಾಧ್ಯಾಯರೊಂದಿಗೆ ಆತ್ಮೀಯ ಸಂಬಂಧವಿತ್ತು. ತಮ್ಮ ಆತ್ಮಕಥೆಯಲ್ಲಿ ಆಡ್ವಾಣಿ ಪಂಡಿತ ದೀನದಯಾಳ ಉಪಾಧ್ಯಾಯರ ಬಗ್ಗೆ ಹೀಗೆ ಬರೆದಿದ್ದಾರೆ:
"ಅವರು ತಮ್ಮ ಬಗ್ಗೆ ಮಾತಾಡುವುದನ್ನು ಮುಜುಗರ ಎಂದು ತಿಳಿದಿದ್ದರು. ಅವರು ಹೇಳಿದ್ದನ್ನು ನಡೆಯಲ್ಲಿ ತೋರಿಸಿದರು. ಅವರ ನಾಯಕತ್ವದ ಬೇರುಗಳಿದ್ದದ್ದೇ ಎಲ್ಲರನ್ನು ಅಪ್ಪಿಕೊಳ್ಳುವ ದಾರ್ಶನಿಕತೆಯಲ್ಲಿ. ಅವರು ಮಾನವೀಯತೆಯ ಸಾಕಾರಮೂರ್ತಿ. ಅಧಿಕಾರದ ಬಗ್ಗೆ ನಿಕೃಷ್ಟತೆ ಇದ್ದ ರಾಜಕಾರಣಿ ಅವರಾಗಿದ್ದರು. ಅವರೇ ಪಂಡಿತ ದೀನದಯಾಳ್ಜೀ"
ಉಪಾಧ್ಯಾಯರೊಂದಿಗೆ ತಮಗಿದ್ದ ಆತ್ಮೀಯತೆಯನ್ನು ಬಳಸಿಕೊಂಡು ಆಡ್ವಾಣಿಯವರು ಒಮ್ಮೆ ಅವರಲ್ಲಿ ಆರ್ಗನೈಸರ್ ಪತ್ರಿಕೆಗೆ ಒಂದು ಅಂಕಣವನ್ನು ಬರೆಯಲಾರಂಭಿಸುವಂತೆ ಕೇಳಿಕೊಂಡರು.
ಆಡ್ವಾಣಿಯವರ ಒತ್ತಾಯದ ಮೇರೆಗೆ ಉಪಾಧ್ಯಾಯರು ’ರಾಜಕೀಯ ಡೈರಿ’ ಎಂಬ ಅಂಕಣವನ್ನು ಆರ್ಗನೈಸರ್ಗೆ ಬರೆಯಲಾರಂಭಿಸಿದರು. ಆಯಾ ವಾರದ ವಿವಿಧ ರಾಜಕೀಯ ವಿದ್ಯಮಾನಗಳನ್ನು ಉಪಾಧ್ಯಾಯರು ತಮ್ಮದೇ ಆದ ದೃಷ್ಟಿಕೋನದಿಂದ ಆ ಅಂಕಣದಲ್ಲಿ ವಿಮರ್ಶಿಸುತ್ತಿದ್ದರು. ಅವರ ಅನನ್ಯ ಒಳನೋಟಗಳ ಕಾರಣ ಆ ಅಂಕಣ ಬಹುಬೇಗ ಜನಪ್ರಿಯವಾಯಿತು. ಮುಂದೆ ಇದೇ ಅಂಕಣ ಬರಹಗಳ ಸಂಕಲನ ’ರಾಜಕೀಯ ಡೈರಿ’ ಎಂಬ ಹೆಸರಿನಲ್ಲಿಯೇ ಪುಸ್ತಕ ರೂಪದಲ್ಲಿ ಹೊರಬಂತು.
ಇದೆಲ್ಲವನ್ನು ಗಮನಿಸಿದ ಆಡ್ವಾಣಿ, ಉಪಾಧ್ಯಾಯರಲ್ಲಿ ತಮ್ಮ ಅಪಾರ ಅನುಭವ, ಪ್ರವಾಸ, ಒಳನೋಟಗಳಿಂದ ಕೂಡಿದ ವೈಯುಕ್ತಿಕ ಸ್ಪರ್ಷವಿರುವ ಅಂಕಣವೊಂದನ್ನು ಬರೆಯಿರಿ ಎಂದು ಕೇಳಿಕೊಂಡರು. ಆದರೆ ಉಪಾಧ್ಯಾಯರು ಇದಕ್ಕೆ ಖಡಾಖಂಡಿತವಾಗಿ ಒಲ್ಲೆ ಎಂದರು! ಕಾರಣ ಕೇಳಿದಾಗ: "ಈ ರೀತಿಯ ಅಂಕಣ ಆರಂಭಿಸಿದರೆ ಅನಗತ್ಯವಾಗಿ ’ನಾನು’ ಎಂಬ ಪದವನ್ನು ಅಂಕಣದುದ್ದಕ್ಕೂ ಉಲ್ಲೇಖಿಸಬೇಕಾದ ಪ್ರಮೇಯ ಬರುತ್ತದೆ. ನನಗದು ಇಷ್ಟವಿಲ್ಲದ ಸಂಗತಿ ಎಂದು ಹೇಳಿದರು!"
ಆದರೂ ಆಡ್ವಾಣಿಯವರು ನಿಮ್ಮ ಬರಹ ಓದುಗರಿಗೆ ಇಷ್ಟವಾಗುತ್ತದೆ ಎಂದು ತುಂಬ ಒತ್ತಾಯ ಮಾಡಿದಾಗ ಉಪಾಧ್ಯಾಯರು ಬರೆಯಲು ಒಪ್ಪಿದರು. ಆದರೆ ಎರಡು ಅಂಕಣ ಬರೆದು, ಅದು ಪ್ರಕಟವಾದ ನಂತರ ಆಡ್ವಾಣಿಯವರಲ್ಲಿಗೆ ಬಂದ ಉಪಾಧ್ಯಾಯರು ನಾನು ಇನ್ನು ಈ ಅಂಕಣವನ್ನು ಮುಂದುವರೆಸುವುದಿಲ್ಲ ಎಂದುಬಿಟ್ಟರಂತೆ.
"ನಾನು ಯಾವುದೇ ವಿಷಯದ ಬಗ್ಗೆ ಬೇಕಾದರೂ ಬರೆಯುತ್ತೇನೆ. ಆದರೆ ನನ್ನ ಬಗೆಗಲ್ಲ. ಅದು ನನಗೆ ಆಗಿಬರುವುದಿಲ್ಲ" ಎಂದು ಉಪಾಧ್ಯಾಯರು ಕಾರಣ ನೀಡಿದ್ದರು.
ಉಪಾಧ್ಯಾಯರ ಈ ನಿರಹಂಕಾರದ ಮನಸ್ಥಿತಿಗೊಂದು ಪ್ರಣಾಮಗಳು.
ಕಾಮೆಂಟ್ಗಳು
haage idda jana iddaru e0du na0buvudu kaShTa Igina jana vannu noDidare !!! !!! nanni0daagi pakSha ide. nanna biTTare yaaru illa ??? ennuva janara madhye !!!!!