ಉತ್ತರದಲ್ಲಿ ಗುಜರಾತ್‌ನಿಂದ ದಕ್ಷಿಣದಲ್ಲಿ ಕೇರಳ ರಾಜ್ಯದವರೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮೂಲಕ ಹಾದುಹೋಗುವ ಶಿಖರ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಅಂತ ಹೆಸರು. ಇದನ್ನೇ ಪಶ್ಚಿಮ ಘಟ್ಟಗಳು ಅಂತಲೂ ಕರೆಯುತ್ತಾರೆ. ಇಲ್ಲಿ ದಟ್ಟ ಅರಣ್ಯವಿದೆ, ಹುಲ್ಲುಗಾವಲಿದೆ, ಜಗತ್ತಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂಥ ಜೀವವೈವಿಧ್ಯವಿದೆ. ಇದು ದಕ್ಷಿಣ ಭಾರತದ ಅನೇಕ ಜೀವನದಿಗಳ ಉಗಮಸ್ಥಾನವೂ ಹೌದು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸುಮಾರು ೨೫-೩೦ ವರ್ಷಗಳ ಕಾಲ ದೇಶ ತೀವ್ರಗತಿಯ ಕೈಗಾರಿಕೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡಿತು. ಈಗಲೂ ತೆರೆದುಕೊಳ್ಳುತ್ತಿದೆ, ಅದು ಬೇರೆ ಮಾತು. ಅಂದಿನ ಕೈಗಾರಿಕೀಕರಣದ ಭರಾಟೆ ಹೇಗಿತ್ತೆಂದರೆ ಅರಣ್ಯನಾಶ, ಜೀವವೈವಿಧ್ಯ ನಾಶ, ನದಿಮೂಲಗಳ ಬತ್ತುವಿಕೆಯಂತಹ ಸಮಸ್ಯೆಗಳು ನಮ್ಮನ್ನು ಆಳುವ ಸರಕಾರಗಳಿಗೆ ಅರ್ಥವೇ ಆಗುತ್ತಿರಲಿಲ್ಲ. ಅವರ ಉದ್ದೇಶ ಒಂದೇ, ಭಾರತ ಕೂಡ ಯುರೋಪಿಯನ್ ರಾಷ್ಟ್ರಗಳಂತೆ ಔದ್ಯಮೀಕರಣಗೊಳ್ಳಬೇಕು. ಇದರ ಪರಿಣಾಮವಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಯಿತು. ಪಶ್ಚಿಮ ಘಟ್ಟಗಳೂ ಇದರಿಂದ ಹೊರತಾಗಲಿಲ್ಲ. ಅಲ್ಲಿನ ಅಪಾರ ಪ್ರಮಾಣದ ಜೀವವೈವಿಧ್ಯಕ್ಕೆ ಕೊಡಲಿಪೆಟ್ಟು ಬಿತ್ತು. ನದಿಮೂಲಗಳು ಬತ್ತತೊಡಗಿದವು. ಜನರು ತೊಂದರೆ ಅನುಭವಿಸತೊಡಗಿದರು. ಕಾಡು ಕಡಿದು, ಪರಿಸರ ನಾಶಮಾಡಿ ದೇಶಕಟ್ಟಲು ಸಾಧ್ಯವಿಲ್ಲ ಎಂಬ ಸತ್ಯ ನಿಧಾನವಾಗಿಯಾದರೂ ಜನರ ಅರಿವಿಗೆ ಬರಲಾರಂಭಿಸಿತು. ಈ ನಡುವೆ ೧೯೭೫...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: