ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜುಲೈ, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಕನ್ನಡ ಪುಸ್ತಕಗಳು ಹೇಗಿರಬೇಕು?

ನನಗೆ ಪತ್ರಿಕೋದ್ಯಮ ಮತ್ತು ಬರವಣಿಗೆಯ ಬಗ್ಗೆ ಅನುಮಾನಗಳು ಮೂಡಿದಾಗ, ಸೂಕ್ತ ಸಲಹೆ ಸೂಚನೆಗಳನ್ನು ಪಡೆಯಲು ನಾನು ಆಯ್ಕೆಮಾಡಿಕೊಳ್ಳುವ ವ್ಯಕ್ತಿಗಳ ಪೈಕಿ ನಮ್ಮ ಮನೆಯ ಸಮೀಪದಲ್ಲೇ ಇರುವ ಗಣಪತಿ ಎಂ. ಎಂ. ಅವರೂ ಒಬ್ಬರು. ವೃತ್ತಿಯಲ್ಲಿ ಸಾಮಾಜಿಕ ಕಾರ್ಯಕರ್ತರಾಗಿರುವ ಇವರು ವಿದ್ಯಾರ್ಥಿ ದೆಸೆಯಿಂದಲೂ ಪ್ರಗತಿಪರ ಚಳವಳಿಯೊಂದಿಗೆ ಬೆಳೆದುಬಂದವರು. ನಾನೊಬ್ಬ ಪ್ರಗತಿವಾದಿ ಅಂತ ಹೆಮ್ಮೆಯಿಂದ ಹೇಳಿಕೊಳ್ಳುವವರು. ಜೊತೆಗೆ ಕನ್ನಡ ಭಾಷೆ, ಕನ್ನಡ ಪುಸ್ತಕಗಳ ಬಗ್ಗೆ ಅಭಿಮಾನ ಇರುವವರು. ಒಮ್ಮೆ ಹೀಗೆ ಅವರ ಮನೆಗೆ ಹೋಗಿದ್ದಾಗ ಕನ್ನಡ ಪುಸ್ತಕಗಳ ಬಗ್ಗೆ ನನ್ನ ಮತ್ತು ಅವರ ನಡುವೆ ನಡೆದ ಸಣ್ಣ ಮಾತುಕತೆಯ ಬಗ್ಗೆ ನಿಮ್ಮ ಮುಂದೆ ಪ್ರಸ್ತಾಪ ಮಾಡಬೇಕೆನಿಸುತ್ತಿದೆ. ನಾನು ಗಣಪತಿಯವರ ಮನೆಗೆ ಹೋದಾಗ ಅವರು ಆಗತಾನೇ ಕೊಂಡುತಂದಿದ್ದ ಯಾವುದೋ ಪುಸ್ತಕದ ಪುಟಗಳನ್ನು ತಿರುವಿ ಹಾಕುತ್ತಿದ್ದರು. ನನ್ನನ್ನು ಕಂಡೊಡನೆಯೇ ಒಮ್ಮೆ ಮುಗುಳ್ನಕ್ಕು ಒಂದೆರಡು ಪುಸ್ತಕಗಳನ್ನು ನನ್ನ ಮುಂದಿಟ್ಟರು. ಪುಸ್ತಕಗಳನ್ನು ಕಂಡೊಡನೆಯೇ ನಾನು ಕೆಲವೇ ದಿನಗಳ ಹಿಂದೆ ಕೊಂಡು ತಂದಿದ್ದ ಹೆಗ್ಗೋಡಿನ ಅಕ್ಷರ ಪ್ರಕಾಶನದ 'ಗೋಪಾಲಕೃಷ್ಣ ಅಡಿಗ ಅವರ ಆಯ್ದ ಕವಿತೆಗಳು' ಪುಸ್ತಕ ನೆನಪಿಗೆ ಬಂತು. ಈ ಪುಸ್ತಕದ ಮುದ್ರಣ, ಪುಟ ವಿನ್ಯಾಸ, ಕಾಗದದ ಗುಣಮಟ್ಟ ಇವೆಲ್ಲವೂ ಶ್ರೇಷ್ಠ ದರ್ಜೆಯಲ್ಲಿಯೇ ಇವೆಯಾದರೂ ಪುಸ್ತಕದ ಬೆಲೆ ತುಸು ಹೆಚ್ಚಾಯಿತು ಎಂಬ ಭಾವನೆ ನನ್ನಲ್ಲಿತ್ತು. ಇದೇ ವಿಚಾರವಾಗಿ ಗಣಪತಿಯ...

ಪತ್ರಿಕೆಗಳಿಂದ ಆದರ್ಶಗಳು ದೂರವಾದರೆ ನಮಗೇಕೆ ಆತಂಕವಾಗುತ್ತದೆ?

ನೀವೇ ಹೇಳಿ... ಯಾವ ರಾಜಕಾರಣಿ ಇವತ್ತು ಏನು ಹೇಳಿದ, ನಿನ್ನೆ ನಡೆದ ಪ್ರಾಕೃತಿಕ ವಿಕೋಪದಲ್ಲಿ ಎಷ್ಟು ಜನ ಮಡಿದರು, ಎಲ್ಲಿ ಯಾರು ಯಾರನ್ನ ಕೊಲೆ ಮಾಡಿದರು...? ಇಂಥ ಯಾರು, ಯಾವಾಗ, ಎಲ್ಲಿ, ಮತ್ತು ಹೇಗೆ ಎಂಬ ವಿಚಾರಗಳ ಸುತ್ತ ಗಿರಕಿ ಹೊಡೆಯುವುದೇ ಪತ್ರಿಕೋದ್ಯಮವಾ? ಕೇವಲ ಅಂಥ ವಿಚಾರಗಳನ್ನು ಬರೆಯುವವರೇ ಪತ್ರಕರ್ತರಾ? ಹೌದು ಎಂದಾದರೆ ಪತ್ರಿಕೋದ್ಯಮ ವೃತ್ತಿಗೆ ಬರಲು ಮೂರು ವರ್ಷದ ಡಿಗ್ರಿ, ಮತ್ತೆರಡು ವರ್ಷಗಳ ಮಾಸ್ಟರ್ ಡಿಗ್ರಿ ಪಡೆಯುವ ಅವಶ್ಯಕತೆಯೇನಿದೆ? ಸಾಹಿತ್ಯ ಮತ್ತು ಸಾಮಾಜಿಕ ಚಳವಳಿಗಳ ಗಂಭೀರ ಅಧ್ಯಯನ ಮತ್ತು ಸಾಮಾಜಿಕ ಕಳಕಳಿಯ ಜರೂರತ್ತಾದರೂ ಏನು? ತಕ್ಕ ಮಟ್ಟಿಗಿನ ಭಾಷಾಜ್ಞಾನ ಹಾಗೂ ಘಟನಾಸ್ಥಳಕ್ಕೆ ಹೋಗಿ ಕಂಡಿದ್ದನ್ನು ಕಂಡಹಾಗೆ ವರದಿಮಾಡುವ ಸಾಮರ್ಥ್ಯವಿದ್ದರೆ ಸಾಕಲ್ಲವೇ? ತಪ್ಪು ತಿಳಿಯುವ ಅವಶ್ಯಕತೆಯಿಲ್ಲ. ಪತ್ರಿಕೋದ್ಯಮವೆಂಬ ಪವಿತ್ರ ವೃತ್ತಿಯ ಬಗ್ಗೆ ಲಘುವಾಗಿ ಮಾತನಾಡುವ ಉದ್ದೇಶ ಲೇಖನಕ್ಕಿಲ್ಲ. ಇಡೀ ಸಮಾಜದ ಹುಳುಕನ್ನು ಎತ್ತಿ ತೋರಿಸುವವರು ಪತ್ರಕರ್ತರು. ಆದರೆ ಪತ್ರಕರ್ತರಾದವರ ತಪ್ಪನ್ನು ಎತ್ತಿ ತೋರಿಸುವವರಾರು? ಅದು ಗಾಂಧೀಜಿಯವರ 'ಹರಿಜನ' ಅಥವಾ 'ಯಂಗ್ ಇಂಡಿಯಾ' ಇರಬಹುದು, ವಿವೇಕಾನಂದರ 'ಪ್ರಬುದ್ಧ ಭಾರತ'ವಿರಬಹುದು ಅಥವಾ ತಿಲಕರ 'ಕೇಸರಿ' ಪತ್ರಿಕೆಯಿರಬಹುದು. ಅವೆಲ್ಲಾ ಪತ್ರಿಕೆಗಳಿಗೆ ಮತ್ತು ಆ ಪತ್ರಿಕೆಗಳಲ್ಲಿ ಕೆಲಸಮಾಡುತ್ತಿದ್ದವರಿಗೆ ಇದ್ದದ್ದು ರಾಷ್ಟ್ರ ಮತ್ತು ಸಮಾಜದೆ...

ಹೀಗೊಂದು ಗುರುವಂದನೆ...

ಬದುಕೊಂದು ಸುಂದರವಾಗಬೇಕಾದರೆ ಎಷ್ಟೆಲ್ಲ ಜನರು ನಮ್ಮ ಮೇಲೆ ಪ್ರಭಾವ ಬೀರುತ್ತಾರಲ್ಲ? ಹೆತ್ತವರು, ಬಂಧುಗಳು, ಸ್ನೇಹಿತರು, ಗುರುಗಳು ಹಾಗೂ ಪರಿಸರ - ಎಲ್ಲರೂ ಒಂದಲ್ಲ ಒಂದು ರೀತಿ ನಮ್ಮ ಮೇಲೆ ಪ್ರಭಾವ ಬೀರುತ್ತಲೇ ಇರುತ್ತಾರೆ. ನಮ್ಮ ಭವಿಷ್ಯ ನಮ್ಮ ಕೈಯಲ್ಲೆ ಇರುವುದು ಹೌದಾದರೂ, ಬಹುತೇಕ ಬಾರಿ ನಮ್ಮ ಹಿತೈಷಿಗಳ, ಆಪ್ತರ ಸಣ್ಣ ಪುಟ್ಟ ಸಲಹೆ ಸೂಚನೆ ನಮ್ಮ ಜೀವನಕ್ಕೊಂದು ತಿರುವು ನೀಡುತ್ತದೆ, ಬಾಳು ಬೆಳಗಿಸಲು ಸಹಕರಿಸುತ್ತದೆ. ನನಗೂ ಹೀಗೇ ಆಯ್ತು. ನಾನು ಎಂಟನೇ ತರಗತಿಯಲ್ಲಿ ಸಂಸ್ಕೃತವನ್ನು ಐಚ್ಛಿಕ ವಿಷಯವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ಅಲ್ಲಿನ ಸಂಸ್ಕೃತ ಪ್ರಾಧ್ಯಾಪಕರಾಗಿದ್ದ ಪ್ರಸನ್ನ ಕುಮಾರ ಐತಾಳರು ನನ್ನನ್ನು ತರಗತಿಯ ಆರಂಭದ ದಿನದಲ್ಲಿಯೇ ಕರೆದು ಹೇಳಿದ ಮಾತು ಇಂದಿಗೂ ನನ್ನಲ್ಲಿ ಅಚ್ಚಳಿಯದೇ ನಿಂತಿವೆ. ಹೆಚ್ಚೂ ಕಡಿಮೆ ಯಾವುದೇ ಹುಟ್ಟಾ ಫಟಿಂಗನೂ ಹುಬ್ಬೇರಿಸುವಂತೆ ವರ್ತಿಸುತ್ತಿದ್ದ ನನ್ನನ್ನು ತರಗತಿಯಲ್ಲಿ ನಿಲ್ಲಿಸಿ, "ನಿನಗೇನಾದರೂ ಮನುಷ್ಯನಾಗಬೇಕು ಎಂದಿದ್ದರೆ ಮೊದಲು ಈ ಉಢಾಳತನವನ್ನೆಲ್ಲಾ ಬಿಟ್ಟು ತರಗತಿಯ ಪಾಠಗಳತ್ತ ಹೆಚ್ಚಿನ ಗಮನಕೊಡು. ಅದಕ್ಕಿಂತಲೂ ಹೆಚ್ಚಾಗಿ ಮೊದಲು ಪುಸ್ತಕಗಳನ್ನು ಓದಲು ಆರಂಭಿಸು. ಪುಸ್ತಕಗಳನ್ನು ಓದದ ಮನುಷ್ಯ ಮನುಷ್ಯನೇ ಅಲ್ಲ" ಎಂದು ನನ್ನನ್ನು ಪುಸ್ತಕಗಳತ್ತ ಮುಖಮಾಡಿ ನಿಲ್ಲುವಂತೆ ಮಾಡಿದ್ದು ಐತಾಳರು. ತೇಜಸ್ವಿ, ಭೈರಪ್ಪ ಮುಂತಾದ ಖ್ಯಾತನಮರ ಕೃತಿಗಳನ್ನು ತೋರಿಸಿದ್ದು ಕೂಡಾ ಅವರೇ. ಇವ...