ಕಣ್ಣುಗಳಲ್ಲಿ ಬೆಟ್ಟದಷ್ಟು ಆಸೆಗಳು, ಮನಸ್ಸಿನಲ್ಲಿ ಸ್ಪಷ್ಟವಾದ ಗುರಿ, ತೀಕ್ಷ್ಣ ಬುದ್ಧಿ... ಎಲ್ಲಾ ಇತ್ತು ಅವನಿಗೆ. ಸುಂದರ ಭವಿಷ್ಯದ ಕನಸಿಟ್ಟುಕೊಂಡು ತುಂಬ ಪ್ರೀತಿಂದ ಪದವಿಯಲ್ಲಿ ಪತ್ರಿಕೋದ್ಯಮವನ್ನು ಆಯ್ದುಕೊಂಡ. ತರಗತಿಗಳನ್ನು ಎಂದೂ ತಪ್ಪಿಸಲಿಲ್ಲ. ಅವನ ಶಿಸ್ತಿಗೆ, ವಿನಯಕ್ಕೆ ಎಲ್ಲ ಅಧ್ಯಾಪಕರೂ ತಲೆದೂಗೊತ್ತಿದ್ದರು. ಪರೀಕ್ಷೆಯಲ್ಲೂ ಹಾಗೇ, ಸದಾ ಪ್ರಥಮ ಸ್ಥಾನ. ಸದಾ ಎಲ್ಲಾ ವಿಷಗಳಲ್ಲೂ ತೊಂಭತ್ತು ತೊಂಭತ್ತೈದು ಅಂಕಗಳು. ಯಾರೊಂದಿಗೂ, ಎಂದಿಗೂ ಅಸಭ್ಯವಾಗಿ ವರ್ತಿಸಲಿಲ್ಲ. ಒಬ್ಬ ಸಂಭಾವಿತ ವಿದ್ಯಾರ್ಥಿಗಿರಬೇಕಾದ ಎಲ್ಲಾ ಅರ್ಹತೆಗಳೂ ಅವನಲ್ಲಿದ್ದವು.
ಪರೀಕ್ಷೆಯಲ್ಲೇನೋ ಸರಾಸರಿ ತೊಂಭತ್ತೈದು ಅಂಕಗಳಿಸಿ ತೇರ್ಗಡೆಯಾಗಿಬಿಟ್ಟ. ನಂತರ ಕೆಲಸಕ್ಕಾಗಿ ಅಲೆದೂ ಅಲೆದೂ ಸುಸ್ತಾದ. ಅವನಿಗೆ ಯಾರಿಂದಲೂ ಅನ್ಯಾಯವಾಗಲಿಲ್ಲ. ಆತ ಯಾರಿಂದಲೂ ಮೋಸಹೋಗಲಿಲ್ಲ. ಆದರೆ ಅವನಿಗೆ ಅವನೇ ವಂಚನೆ ಮಾಡಿಕೊಂಡ. ಪತ್ರಿಕೋದ್ಯಮ ಪದವಿಗೆ ಸೇರಿ ವಿನಯ, ಶಿಸ್ತು, ಪ್ರೀತಿ, ಗೌರವಾದರ, ಜ್ಞಾನ ಹೀಗೆ ಹಲವಾರು ನೈತಿಕ ಮೌಲ್ಯಗಳನ್ನು ತನ್ನದಾಗಿಸಿಕೊಂಡ. ಒಳ್ಳೆಯದೇ. ಆದರೆ ಪತ್ರಕರ್ತನಾಗಬೇಕಾದವನಿಗೆ, ಪತ್ರಿಕೋದ್ಯಮವನ್ನು ಆಯ್ದುಕೊಂಡವನಿಗೆ ಇರಲೇಬೇಕಾದ ಬರವಣಿಗೆಯನ್ನು ಆತ ಒಲಿಸಿಕೊಳ್ಳಲೇ ಇಲ್ಲ. ಸದಾ ಹೊಸ ವಿಷಯಗಳನ್ನು ಅರಸುತ್ತ, ಅರಗಿಸುತ್ತ ಕುಳಿತನೇ ಹೊರತು ಆ ಎಲ್ಲಾ ವಿಷಯಗಳನ್ನು ಒಪ್ಪವಾಗಿ ಬರೆಯುವ ಗೋಜಿಗೇ ಹೋಗಲಿಲ್ಲ. ಈಗ ಆತ ಒಂದು ಸ್ಥಳೀಯ ಪತ್ರಿಕಾ ಕಛೇರಿಯಲ್ಲಿ ತಿಂಗಳಿಗೆ ಎರಡು ಸಾವಿರ ರೂಪಾ ಸಂಬಳಕ್ಕೆ ಕೆಲಸಮಾಡುತ್ತಿದ್ದಾನೆ. ಆದರೆ ಅವನ ಜ್ಞಾನಕ್ಕೆ ಆತ ಯಾವುದಾದರೂ ರಾಜ್ಯಮಟ್ಟದ ಪತ್ರಿಕೆ ಸೇರಿ ಕೈತುಂಬಾ ಸಂಬಳ ಪಡೆಯಬೇಕಿತ್ತು.
ಇದೇನೂ ಸತ್ಯ ಘಟನೆ ಆಧಾರಿತ ಕಥೆಯಲ್ಲ. ಏಕ್ತಾ ಕಪೂರ್ ಅವರ ಧಾರಾವಾಹಿಯ ಕಥೆಯೂ ಇದಲ್ಲ. ಆದರೆ ಇಂಥ ಘಟನೆಗಳು ಅಥವಾ ಇಂಥ ಘಟನೆಗೆ ಹೋಲಿಕೆರುವಂಥವು ನಮ್ಮಲ್ಲಿ ನಡೆದಿರಬಹುದು ಮತ್ತು ಮುಂದೆಯೂ ನಡೆಯಬಹುದು.
ಏಕೋ ಏನೋ ಗೊತ್ತಿಲ್ಲ ಈ ಹೊತ್ತಿನಲ್ಲಿ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕರಾಗಿದ್ದ 'ದಿ ಗ್ರೇಟ್' ಅರುಣ್ ಶೌರಿ ನೆನಪಿಗೆ ಬರುತ್ತಿದ್ದಾರೆ. ಅಸಲಿಗೆ ಅರುಣ್ ಶೌರಿ ಪತ್ರಿಕೋದ್ಯಮ ಓದಿಕೊಂಡು ಬಂದವರೇ ಅಲ್ಲ. ಶೌರಿ ಮೂಲತಃ ಒಬ್ಬ ಅರ್ಥಶಾಸ್ತ್ರದ ವಿದ್ಯಾರ್ಥಿ. ಆದರೆ ಅವರು ರಾಮನಾಥ್ ಗೋಯಂಕಾರ ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯ ಸಂಪಾದಕರಾಗಿ ಇಡೀ ಸರಕಾರವನ್ನು ಎದುರುಹಾಕಿಕೊಂಡು ಕೂತರಲ್ಲಾ ಅದು ನಿಜಕ್ಕೂ ಅದ್ಭುತ. ಬಹುಶಃ ಶೌರಿ ಮಾತ್ರ ಹಾಗೆ ಮಾಡಬಲ್ಲರಾಗಿದ್ದರು. ಕಾರಣ ಇಷ್ಟೆ, ಅವರ ಬರವಣಿಗೆ ಅಷ್ಟು ಹರಿತವಾಗಿತ್ತು. ತಮ್ಮ ಆಲೋಚನೆಯಲ್ಲಿ ಬಂದ ಒಂದೊಂದು ವಿಚಾರವನ್ನೂ ಕಾಗದದ ಮೇಲೆ ಇಳಿಸುವುದು ಹೇಗೆಂದು ಅವರಿಗೆ ಗೊತ್ತಿತ್ತು. ಅದಕ್ಕೇ ಅವರು ಯಶಸ್ವಿ ಪತ್ರಕರ್ತರಾಗಿದ್ದು. ಇಂಡಿಯನ್ ಎಕ್ಸ್ಪ್ರೆಸ್ ಪತ್ರಿಕೆಯನ್ನು ತನಿಖಾ ವರದಿಗೆ ಹೆಸರುವಾಸಿಯಾಗುವಂತೆ ಮಾಡಿದ್ದು. ಎಕ್ಸ್ಪ್ರೆಸ್ ಪತ್ರಿಕೆಯನ್ನು ಓದಲು ರಾಜಕಾರಣಿಗಳು ಹೆದರುವಂತೆ ಮಾಡಿದ್ದು.
ಶೌರಿಯವರು ಮಾತ್ರವಲ್ಲ, ಇಂಡಿಯನ್ ಎಕ್ಸ್ಪ್ರೆಸ್ ಸಾಮ್ರಾಜ್ಯದ ದೊರೆಯಾಗಿದ್ದ ರಾಮನಾಥ್ ಗೋಯೆಂಕಾ ಕೂಡ ಪತ್ರಿಕೋದ್ಯಮ ಓದಿದವರಲ್ಲ. ಆದರೆ ಇಂದಿರಾ ಗಾಂಧಿ ದೇಶದ ಮೇಲೆ ತುರ್ತುಪರಿಸ್ಥಿತಿಯನ್ನು ಹೇರಿ ಸರ್ವಾಧಿಕಾರಿಯಂತೆ ವರ್ತಿಸಿದಾಗ ಪತ್ರಿಕಾ ಧರ್ಮ ಮತ್ತು ದೇಶಹಿತಕ್ಕಾಗಿ ಸ್ವಂತ ಜೇಬಿನಿಂದ ಹಣ ಖರ್ಚುಮಾಡಿಕೊಂಡು ಪ್ರಭುತ್ವದ ವಿರುದ್ಧ ಹೋರಾಡಿದ ಗೋಯೆಂಕಾ ಇಂದಿಗೂ ಪತ್ರಕರ್ತರ ಪಾಲಿಗೆ ಆದರ್ಶ.
ಫ್ರೀ ಪ್ರೆಸ್ ಜರ್ನಲ್ನ ಸ್ವಾಮಿನಾಥನ್ ಸದಾನಂದ್ ಮತ್ತು ಅಂತರಾಷ್ಟ್ರೀಯ ಖ್ಯಾತಿಯ ಪತ್ರಕರ್ತ ಮಾಧವ ವಿಠ್ಠಲ ಕಾಮತ್ (ಎಮ್.ವಿ.ಕಾಮತ್) ಪತ್ರಿಕೋದ್ಯಮವನ್ನು ಶಾಸ್ತ್ರೀಯವಾಗಿ ಓದದೇ ಇದ್ದರೂ ಕಾಮತ್-ಸದಾನಂದ್ ಜೋಡಿ ಪತ್ರಿಕೋದ್ಯಮದಲ್ಲಿ ಮಾಡಿದ ಸಾಹಸಗಳು ಅವಿಸ್ಮರಣೀಯ.
ಇವರು ಮಾತ್ರವಲ್ಲ. ಕನ್ನಡದ ಹಿರಿಯ, ಹೆಸರಾಂತ ಪತ್ರಕರ್ತರ ಹಿನ್ನಲೆಯನ್ನೊಮ್ಮೆ ಗಮನಿಸಿ. ಪಿ.ಲಂಕೇಶ್ ಮೂಲತಃ ಒಬ್ಬ ಕನ್ನಡ ಹೇಳಿಕೊಡುವ ಮೇಷ್ಟ್ರು. ಪತ್ರಿಕಾರಂಗದ 'ಭೀಷ್ಮ' ಎಂದೇ ಹೆಸರಾಗಿರುವ ಸಂಯುಕ್ತ ಕರ್ನಾಟಕ ಪತ್ರಿಕೆಯ ಸಂಪಾದಕರಾಗಿದ್ದ ಕೆ. ಶ್ಯಾಮರಾವ್ ಖಂಡಿತ 'ಜರ್ನಲಿಸಮ್' ಎಂಬ ಮಾಯಾಮೃಗದ ಬೆನ್ನೇರಿ ಬಂದವರಲ್ಲ. ಒಂದೇ ಒಂದು ರಾತ್ರಿಯಲ್ಲಿ ಇಡೀ 'ಹಾಯ್ ಬೆಂಗಳೂರ್' ಪತ್ರಿಕೆಯ ಪುಟಗಳನ್ನು ಭರ್ತಿಮಾಡುವ ಸಾಮರ್ಥ್ಯವಿರುವ ರವಿ ಬೆಳಗೆರೆ ಓದಿದ್ದು ಇತಿಹಾಸದಲ್ಲಿ ಎಮ್.ಎ.
ಇವರು ಮಾತ್ರವಲ್ಲ, 'ವಂದೇ ಮಾತರಮ್' ಪತ್ರಿಕೆಯ ಮೂಲಕ ಸ್ವಾತಂತ್ರದ ಕಿಚ್ಚು ಹತ್ತಿಸಿದ ಅರವಿಂದರು, 'ಕೇಸರಿ' ಪತ್ರಿಕೆ ಆರಂಭಿಸಿ ಭಾರತೀಯರಿಗೆ ಆತ್ಮಾಭಿಮಾನದ ಪಾಠ ಹೇಳಿಕೊಟ್ಟ ಬಾಲಗಂಗಾಧರ ತಿಲಕ್, 'ಪ್ರಬುದ್ಧ ಭಾರತ' ಆರಂಭಿಸಿದ ಸ್ವಾಮಿ ವಿವೇಕಾನಂದರು, 'ನ್ಯಾಶನಲ್ ಹೆರಾಲ್ಡ್' ಪತ್ರಿಕೆಯನ್ನು ನಡೆಸುತ್ತಿದ್ದ ಜವಾಹರಲಾಲ್ ನೆಹರೂ, 'ತರುಣ್ ಭಾರತ್' ಮತ್ತು 'ಹರಿಜನ್'ದಂತಹ ಯಶಸ್ವಿ ಪತ್ರಿಕೆಗಳ ಸಂಪಾದಕರಾಗಿದ್ದ ಗಾಂಧೀಜಿ... ಇವರೆಲ್ಲರ ಬಳಿದ್ದಿದ್ದು ಪತ್ರಿಕೋದ್ಯಮದ ಪದವಿಯಲ್ಲ, ಬದಲಿಗೆ ತಮಗೆ ಬದುಕು ನೀಡಿದ ದೇಶಕ್ಕೆ ತಾವೂ ಏನಾದರೂ ನೀಡಬೇಕೆಂಬ ಅಪ್ಪಟ ಆದರ್ಶ!
ವಿಷಯ ಇಷ್ಟೆ, ಪತ್ರಿಕೋದ್ಯಮ ಪದವಿಗೆ ಬಂದ ನಂತರ ನಾವು ಅಗತ್ಯವಾಗಿ ಬೆಳೆಸಿಕೊಳ್ಳಬೇಕಾಗಿದ್ದು ಒಂದು ವಿಷಯ ಬರವಣಿಗೆ. ಉಳಿದೆಲ್ಲಾ ವಿಷಯಗಳು ಪತ್ರಿಕೋದ್ಯಮದ ಉಸಿರಾದ ಬರವಣಿಗೆಗೆ ಪೂರಕವಾಗಿ ಬೆಳೆಯಬೇಕು. 'ಪತ್ರಕರ್ತನಾದವ ತನ್ನೆಲ್ಲಾ ಇಂದ್ರಿಯಗಳಿಂದಲೂ ಹೊಸ ಆಸಕ್ತಿದಾಯಕ ವಿಷಯಗಳನ್ನು ಸಂಗ್ರಹಿಸಿ ಅದಕ್ಕೊಂದು ಚಂದದ ರೂಪಕೊಟ್ಟು ಆಕರ್ಷಕವಾಗಿ ಬರೆಯಬೇಕು' ಎಂದು ಎಲ್ಲೋ ಓದಿದ ನೆನಪು.
ಪತ್ರಿಕೋದ್ಯಮ ಒಂದು ಪದವಿ ಎಂದರೆ ಪದವಿ, ಪದವಿಯಲ್ಲ ಎಂದರೆ ಅಲ್ಲ. ಪತ್ರಿಕೋದ್ಯಮದ ವಿದ್ಯಾರ್ಥಿಗೆ ಜ್ಞಾನದ ಪರಿಮಿತಿಯಾಗಲಿ, ವಿಷಯ ಸಂಗ್ರಹಣೆಗೆ ಇತಿಮಿತಿಯಾಗಲೀ ಇಲ್ಲವೇ ಇಲ್ಲ. ಆತ ಸರ್ವಜ್ಞನ ಸ್ಥಾನಕ್ಕೇರಲು ಸದಾ ಪ್ರಯತ್ನಿಸುತ್ತಿರಬೇಕು. ತನಗೆ ತಿಳಿದ ವಿಷಯಗಳನ್ನು ತಾಳ್ಮೆಂದ ಹೆಕ್ಕಿ ಚೆಂದಗೆ ಮುತ್ತು ಪೋಣಿಸಿದಂತೆ ಬರೆದು ಓದುಗ ಮಹಾರಾಜನ ಮುಂದಿಡಬೇಕು. ಓದುಗ ದೊರೆಯ ಮುಂದೆ ವಿಷಯಮಂಡನೆಯಲ್ಲಿ ಪತ್ರಕರ್ತನಾದವ ಅಸಮರ್ಥನಾದರೆ ಆತ ಯಶಸ್ವಿ ಪತ್ರಕರ್ತನಾಗಲಾರ. "ನಮ್ಮಲ್ಲಿಗೆ ಕೆಲಸ ಕೇಳಿಕೊಂಡು ಹಲವಾರು ಯುವ ಪತ್ರಿಕೋದ್ಯಮ ಪದವಿಧರರು ಬರುತ್ತಾರೆ. ನೀನು ಬರೆದದ್ದನ್ನು ಒಮ್ಮೆ ತೋರಿಸಪ್ಪಾ ಎಂದರೆ 'ಒಂದು ಛಾನ್ಸ್ ಕೊಡಿ ಸಾರ್, ಎಷ್ಟು ಚೆಂದಗೆ ಬರೆಯುತ್ತೇನೆಂದು ತೋರಿಸುತ್ತೇನೆ' ಎನ್ನುವವರೇ ಇಂದು ಹೆಚ್ಚಾಗುತ್ತಿದ್ದಾರೆ" ಎಂದು ಪತ್ರಕರ್ತ, ವಿಜಯ ಕರ್ನಾಟಕ ಪತ್ರಿಕೆಯ ಹೆಮ್ಮೆಯ ಸಂಪಾದಕರಾದ ವಿಶ್ವೇಶ್ವರ ಭಟ್ ತಮ್ಮ ಸಾಪ್ತಾಹಿಕ ಅಂಕಣವೊಂದರಲ್ಲಿ ಬರೆದಿದ್ದರು.
ಪತ್ರಿಕೋದ್ಯಮ ಇಂದು ಕೇವಲ ಸುದ್ದಿಯನ್ನು ಕಲೆಹಾಕಿ ಅದನ್ನು ಹಾಗೂ ಹೀಗೂ ಮುದ್ರಿಸಿ ಓದುಗರಿಗೆ ಕೊಡುವ ದಂಧೆಯಾಗಿ ಉಳಿದಿಲ್ಲ. ಬದಲಿಗೆ ವಿಷಯಗಳನ್ನು ಮನೊರಂಜನಾತ್ಮಕವಾಗಿ ಜನರ ಮುಂದಿಡುವ ಉದ್ಯಮವಾಗಿ ಬೆಳೆದುನಿಂತಿದೆ. ನಾವೂ ಅಷ್ಟೆ, ಬದಲಾಗುತ್ತಿರುವ ಜಗತ್ತಿಗೆ ತಕ್ಕಂತೆ ನಮ್ಮ ಆಲೋಚನಾ ಲಹರಿಯನ್ನೂ ಬದಲಾಸಿಕೊಳ್ಳಬೇಕು. ಪತ್ರಿಕೋದ್ಯಮದಂತಹ ಪದವಿಗೆ ಸೇರಿದ ತಕ್ಷಣದಿಂದಲೇ ನಮ್ಮ ವಿಚಾರವನ್ನು ಸಮರ್ಥವಾಗಿ ಓದುಗರ ಎದುರು ಮಂಡಿಸಲು ಪ್ರಾರಂಭಿಸಬೇಕು. ಈ ಕ್ಷೇತ್ರದಲ್ಲಿ ನಮ್ಮ ಸಂಪೂರ್ಣ ನಿಷ್ಠೆಯನ್ನು, ಬದ್ಧತೆಯನ್ನು ಬಿತ್ತಬೇಕು. ಇಂದಿನ ಜನಮಾನಸದ ಒಳಹೊರಗನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬೇಕು. ಅವರಿಗೇನು ಬೇಕೋ ಅದನ್ನೇ ಬರೆಯಬೇಕು, ಆದರೆ ಸತ್ಯವನ್ನೇ ಬರೆಯಬೇಕು ಆಗ ಮಾತ್ರ ನಾವು ಈ ರಂಗದಲ್ಲಿ ಬಾಳಬಲ್ಲೆವು. ಸಾಮರ್ಥ್ಯವಿರುವಷ್ಟು ಕಾಲ ಚಲಾವಣೆಯಲ್ಲಿರಬಲ್ಲೆವು.
ಪತ್ರಿಕೋದ್ಯಮವೇ ಹಾಗೆ. ಅದು ಯಾವ್ಯಾವುದೋ ರಂಗದ ಅತಿರಥ ಮಹಾರಥರನ್ನೆಲ್ಲ ಅವರ ಬರಹಕ್ಕೆ ಮನಸೋತು ಕೈಬೀಸಿ ಕರೆದಿದೆ. ಅದೇ ಸಮಯದಲ್ಲಿ ಆಸೆಪಟ್ಟು ಪತ್ರಿಕಾರಂಗಕ್ಕೆ ಬಂದವರನ್ನು ಬರವಣಿಗೆ ಬರುವುದಿಲ್ಲವೆಂಬ ಒಂದೇ ಕಾರಣಕ್ಕೆ 'get out' ಎಂದು ಹೊರತಳ್ಳಿದೆ. ಬಹುಷಃ ಅದು ಪತ್ರಿಕೋದ್ಯಮದ ಅನಿವಾರ್ಯ ಕ್ರೌರ್ಯವಿರಬೇಕು.

ಕಾಮೆಂಟ್ಗಳು
ನಮಸ್ಕಾರ. ಹೇಗಿದ್ದೀರಿ?
ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!
ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ 'ಪ್ರಣತಿ', ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.
ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್, ಬಸವನಗುಡಿ, ಬೆಂಗಳೂರು
ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, 'ದಟ್ಸ್ ಕನ್ನಡ'ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, 'ಸಂಪದ'ದ ಹರಿಪ್ರಸಾದ್ ನಾಡಿಗ್, 'ಕೆಂಡಸಂಪಿಗೆ'ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.
ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, 'ಪ್ರಣತಿ'ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.
ಅಲ್ಲಿ ಸಿಗೋಣ,
ಇಂತಿ,
ಸುಶ್ರುತ ದೊಡ್ಡೇರಿ
- XYZ
Journalism has not completely turned itself to a mere business. I'm a student of journalism and an ardent fan of many legendary journalists. In spite of great pressure from the corporate world, the contemporary journalism and journalists have maintained the values and commitments of the journalism. It’s is a great field wherein one can offer his best to the service of nation and mankind.
Thanks for your comment. Be in touch with my blog – VIRAT.
- Anonymous
ಚಿತ್ರಾ
@ಅಪರಿಚಿತ- ನಿಮ್ಮ ಪ್ರತಿಕ್ರಿಯೆಗೆ ಧನ್ಯವಾದಗಳು. ನಿಮ್ಮ ಹೆಸರನ್ನು ತಿಳಿಸಿದ್ದರೆ ಚೆನ್ನಾಗಿತ್ತು. ಪತ್ರಿಕೋದ್ಯಮ ಇವತ್ತು ಮೊದಲಿನ ಪಾವಿತ್ರ್ಯತೆಯನ್ನು ಕಳೆದುಕೊಂಡಿರಬಹುದು. ಆದರೆ ಇವತ್ತಿಗೂ ಪತ್ರಿಕಾಧರ್ಮವನ್ನು ಪಾಲಿಸುವ ಸಾಕಷ್ಟು ಮಂದಿ ಪತ್ರಕರ್ತರಿದ್ದಾರೆ ಅಂತ ನನ್ನ ಭಾವನೆ.
ಅದೇನೇ ಇರಲಿ, ಹೀಗೇ ಆಗಾಗ ಬ್ಲಾಗನ್ನು ನೋಡುತ್ತಿರಿ, ನಿಮಗೆ ತಪ್ಪು ಅನಿಸಿದ್ದನ್ನು ಹೇಳಿ.