ದೇವರಾಣೆಗೂ ಹೌದು ನಾನು ಆತ್ಮಹತ್ಯೆಯ ಬಗ್ಗೆಯೇ ಯೋಚಿಸುತ್ತಿದ್ದೇನೆ. ಇದು ಭಾರತೀಯ ಕಾನೂನಿನ ಪ್ರಕಾರ ತಪ್ಪು ಅಂತ ಚೆನ್ನಾಗಿ ಗೊತ್ತು. ಆತ್ಮಹತ್ಯೆಗೆ ಯತ್ನಿಸಿ ಒಂದು ವೇಳೆ ಅದರಲ್ಲಿ ಸಫಲನಾಗದಿದ್ದರೆ ಭಾರತೀಯ ದಂಡಸಂಹಿತೆಯ ಪ್ರಕಾರ ಆತ್ಮಹತ್ಯೆಗೆ ಪ್ರಯತ್ನಿಸಿದ ವ್ಯಕ್ತಿಯ ಮೇಲೆ ಕೇಸು ಹಾಕಬಹುದು, ನ್ಯಾಯಾಲಯದಲ್ಲಿ ಪ್ರಕರಣ ಸಾಬೀತಾದರೆ ಆ ವ್ಯಕ್ತಿಗೆ ಶಿಕ್ಷೆಯನ್ನೂ ವಿಧಿಸಬಹುದು ಅಂತಲೂ ಗೊತ್ತಿದೆ. ಅದಲ್ಲದೆ, ಇನ್ನೊಬ್ಬ ವ್ಯಕ್ತಿಯನ್ನು ಆತ್ಮಹತ್ಯೆಗೆ ಪ್ರಚೋದಿಸುವುದು ಕೂಡ ಕಾನೂನಿನ ಪ್ರಕಾರ ಮತ್ತು ನೈತಿಕ ದೃಷ್ಟಿಯಿಂದಲೂ ಅಪರಾಧ ಎಂಬ ಅರಿವೂ ಇದೆ. ಆದರೂ 'ಆತ್ಮಹತ್ಯೆ'ಯ ಬಗ್ಗೆಯೇ ಯೋಚಿಸುತ್ತಿದ್ದೇನೆ! ಅನುಮಾನ ಬೇಡ. ದಿನಂಪ್ರತಿ ಪತ್ರಿಗಳಲ್ಲಿ ಮತ್ತು ವಾರ್ತಾ ವಾಹಿನಿಗಳಲ್ಲಿ ಆತ್ಮಹತ್ಯೆಯ ವರದಿಗಳನ್ನು ನೋಡಿ, ಕೇಳಿ, ಓದಿ ಬೇಸರ ಮೂಡಿದೆ. ರೈತರು ತಾವು ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗಲಿಲ್ಲ ಎಂಬ ಕಾರಣಕ್ಕೆ ಕೀಟನಾಶಕ ಸೇವಿಸಿಯೋ ಅಥವಾ ನೇಣು ಬಿಗಿದುಕೊಂಡೋ ಆತ್ಮಹತ್ಯೆ ಮಾಡಿಕೊಳ್ಳುತ್ತಾರೆ. ವಿದ್ಯಾರ್ಥಿಗಳು ತಮ್ಮ ನಿರೀಕ್ಷೆಗೆ ತಕ್ಕಂತೆ ಪರೀಕ್ಷೆಯಲ್ಲಿ ಅಂಕ ಬರಲಿಲ್ಲ ಅಂತಲೋ ಅಥವಾ ರ್ಯಾಂಕ್ ತಪ್ಪಿಹೋಯಿತು ಅಂತಲೋ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಇನ್ನು ಪ್ರೇಮಿಗಳ ಆತ್ಮಹತ್ಯೆಯ ಬಗ್ಗೆ ಬರೆದರೆ ಜಾಗ ಹಾಳು, ಹೇಳಿದರೆ ಬಾಯಿ ಹಾಳು. ಅವಳು ಬೈದಳು, ಅವನು ಕೈಕೊಟ್ಟ ಹೀಗೆ ನಾನಾ ಕಾರಣ ಒಡ್ಡಿ ಪ್ರೇಮಿಗಳು ಆತ್ಮಹತ್ಯೆ ಮಾ...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: