ನಾವು ಬಳಸುವ ಸ್ಮಾರ್ಟ್ ಫೋನ್, ಟ್ಯಾಬ್ಲೆಟ್ ಕಂಪ್ಯೂಟರ್, ಲ್ಯಾಪ್ ಟಾಪ್, ಡೆಸ್ಕ್ ಟಾಪ್‌ಗಳು ಅದೆಷ್ಟು ಅಂದವಾಗಿರುತ್ತೆ ಅಲ್ಲವೇ? ಸ್ಮಾರ್ಟ್ ಫೋನ್, ಟ್ಯಾಬ್‌ಗಳನ್ನು ಅಂಗೈಯಲ್ಲಿ ಹಿಡಿದು ನಮ್ಮ ಗೆಳೆಯರೆದುರು ಅದನ್ನು ತೋರಿಸಿದಾಗ, ಕಚೇರಿಯ ಕೆಲಸಗಳನ್ನು ಅವುಗಳ ಮೂಲವೇ ನಿರ್ವಹಿಸಿದಾಗ ಆಗುವ ಸಂತಸಕ್ಕೆ ಪಾರವೇ ಇಲ್ಲ. ಈ ವಸ್ತುಗಳು ನಮಗೆ ಹೊಸದಾಗಿ ದೊರೆತಾಗ ಮನಸ್ಸು ಕುಂತಲ್ಲಿ–ನಿಂತಲ್ಲಿ ಅವುಗಳ ಬಗ್ಗೆಯೇ ಧೇನಿಸುತ್ತಿರುತ್ತದೆ. ಆದರೆ ಆಯಸ್ಸು ಮುಗಿದ ನಂತರ ಅವುಗಳಿಂದ ಆಗುವ ಅಪಾಯದ ಬಗ್ಗೆ ನಾವು ಹೆಚ್ಚಿನ ಸಂದರ್ಭಗಳಲ್ಲಿ ಚಿಂತಿಸಿರುವುದಿಲ್ಲ. ಆರ್ಥಿಕ ಉದಾರೀಕರಣದ ನಂತರ ಭಾರತ, ಅದರಲ್ಲೂ ಬೆಂಗಳೂರು, ಮಾಹಿತಿ ತಂತ್ರಜ್ಞಾನ ಉದ್ಯಮದ ಮೂಲಕ ಅಪಾರ ಪ್ರಮಾಣದ ವಹಿವಾಟು ನಡೆಸಿದೆ. ದೊಡ್ಡ ಸಂಖ್ಯೆಯ ಜನರಿಗೆ ಕೈತುಂಬಾ ಸಂಬಳ ಬರುವ ನೌಕರಿ ನೀಡಿದೆ. ಇದರ ಜೊತೆಜೊತೆಗೇ ಅವರಿಗೆ ಬೇಕೆಂದ ಎಲೆಕ್ಟ್ರಾನಿಕ್ ವಸ್ತುಗಳನ್ನು ಖರೀದಿಸುವ ಆರ್ಥಿಕ ಶಕ್ತಿ ನೀಡಿದೆ. ಇದನ್ನು ಉದಾರೀಕರಣದ ವರ ಎನ್ನಿ ಅಥವಾ ಶಾಪ ಎನ್ನಿ – ಇ -ತ್ಯಾಜ್ಯದ ಉತ್ಪಾದನೆಯ ಪ್ರಮಾಣ ಕೂಡ ದೇಶದಲ್ಲಿ ತೀವ್ರವಾಗಿ ಏರುತ್ತಿದೆ. ಇದು, ಬೆಂಗಳೂರಿನಲ್ಲಂತೂ ಅಪಾಯದ ಮಟ್ಟ ತಲುಪಿದೆ. ಖಾಸಗಿ ಸಂಸ್ಥೆಯೊಂದು 2012ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ಮುಂಬೈ ಮಹಾನಗರಿಯಲ್ಲಿ ವರ್ಷಕ್ಕೆ ಅಂದಾಜು 61,500 ಮೆಟ್ರಿಕ್ ಟನ್ ಇ-–ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರ ನಂತರದ ಸ...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: