" ಹಳ್ಳಿಯ ಬಗ್ಗೆ ನಿಮಗೇನ್ರಯ್ಯಾ ಗೊತ್ತು ? ನಿಮ್ಮ ಪ್ರಕಾರ ಹಳ್ಳಿಗಳು ಎಂದರೆ ಒಂಥರಾ ವಾರಾಂತ್ಯದ ರಜಾ ತಾಣಗಳಿದ್ದಂತೆ . ನಿಮಗೆ ಇಲ್ಲಿನ ತಂಪಾದ ಹವೆ ಇಷ್ಟ , ಇಲ್ಲಿನ ಪರಿಸರ ಇಷ್ಟ ಮತ್ತು ಇಲ್ಲಿನ ಹಸಿರು ಇಷ್ಟ ..." ಮೊನ್ನೆ ವಯಕ್ತಿಕ ಕಾರ್ಯನಿಮಿತ್ತ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಅಲ್ಲಿನ ಹಳ್ಳಿಯೊಂದರಲ್ಲಿ ಸ್ವಂತ ತೋಟ, ಗದ್ದೆ ನೋಡಿಕೊಂಡಿರುವ ಸ್ನೇಹಿತನ ಜೊತೆ ಮಾತಾಡುತ್ತಿದ್ದಾಗ ಹಳ್ಳಿಯ ಜೀವನದ ಬಗ್ಗೆ ನಾನು ವ್ಯಕ್ತಪಡಿಸಿದ ಅಭಿಮಾನಕ್ಕೆ ಆತನ ಪ್ರತಿಕ್ರಿಯೆ ಈ ಮೇಲಿನಂತಿತ್ತು. "...ಆದರೆ ನಮ್ಮ ಹಳ್ಳಿಗಳಿಗೆ ಭವಿಷ್ಯವಿದೆ ಅಂತ ನನಗಂತೂ ಅನಿಸುತ್ತಿಲ್ಲ. ಬೆಳೆಗೆ ಬೆಲೆಯಿಲ್ಲ. ನಾವು ಮಾಡುವ ಕೆಲಸಕ್ಕೆ ಗೌರವವಿಲ್ಲ. ಒಬ್ಬ ವ್ಯಕ್ತಿ ಅಲ್ಪ ಸ್ವಲ್ಪ ಓದಿಕೊಂಡು ಯಾವುದೋ ಸಾಫ್ಟ್‌ವೇರ್ ಕಂಪನಿಯಲ್ಲಿ ಕೆಲಸ ಗಿಟ್ಟಿಸಿಕೊಂಡ ಅಂದರೆ ಹೆಣ್ಣು ಹೆತ್ತವರು ಸ್ಪರ್ದೆಗೆ ಬಿದ್ದವರಂತೆ ಅವನ ಬೆನ್ನು ಬೀಳುತ್ತಾರೆ. ಅದೇ ಹಳ್ಳಿಯ ಕೃಷಿಕನೊಬ್ಬನಿಗೆ ಹೆಣ್ಣು ಕೊಡುವವರು ಇಲ್ಲ. ಆತ ತನ್ನ ಕೃಷಿ ಅಗತ್ಯತೆಗಾಗಿ ಏನೇ ಸಂಶೋಧನೆ ಮಾಡಿದರೂ ಅವನ ಬೌದ್ಧಿಕ ಕೆಲಸಕ್ಕೆ ಮರ್ಯಾದೆ ಇಲ್ಲ. ಅಲ್ಲ ಮಾರಾಯಾ, ಸಾಫ್ಟ್‌ವೇರ್ ಕಂಪನಿಗಳು ಎಷ್ಟೇ ಶ್ರೀಮಂತವಾಗಿರಬಹುದು ಆದರೆ ಅವುಗಳ ಹಿತ್ತಿಲಿನಲ್ಲಿ ತರಕಾರಿ ಬೆಳೆಯಲು ಸಾಧ್ಯವಾ ಹೇಳು. ಇನ್‌ಫೋಸಿಸ್‌ನವರು ಎಲ್ಲಾದರೂ ಅಕ್ಕಿ ಬೆಳೆದು ಅವರ ನೌಕರರ ಹೊಟ್ಟೆ ತುಂಬಿಸಲ...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: