ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಮೂರು ತೀರ್ಪುಗಳ ಕತೆ

ಸುಪ್ರೀಂ ಕೋರ್ಟ್‌ ಮತ್ತು ಹೈ­ಕೋರ್ಟ್‌­­­ಗಳಿಗೆ ನ್ಯಾಯ­ಮೂರ್ತಿಗಳನ್ನು ‘ಕೊಲಿ­ಜಿಯಂ’ ಮೂಲಕ ನೇಮಕ ಮಾಡ­ಬೇಕು ಎಂದು ಸಂವಿಧಾನ ಹೇಳುವುದಿಲ್ಲ. ಆದರೆ 1993ರಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ‘ಕೊಲಿಜಿಯಂ’ ಮೂಲಕ ಆಗಬೇಕು ಎಂದು ಹೇಳಿತು. ಭಾರತದ ನ್ಯಾಯಾಂಗಕ್ಕೆ ನಡೆಯುವ ನೇಮಕಾತಿಗಳು ಕೊಲಿಜಿಯಂ ಮೂಲಕ ಆಗಬೇಕು ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು ಹಂತಹಂತವಾಗಿ. ಇದೊಂದು ವಿಕಸನದ ಕತೆ. ಕಾರ್ಯಾಂ­ಗವು ನ್ಯಾಯಾಂ­ಗದ ಜೊತೆ ಸಂಘರ್ಷಕ್ಕೆ ಮುಂದಾ­ದಾಗ ರಕ್ಷಣಾತ್ಮಕ ಕ್ರಮವಾಗಿ ‘ಕೊಲಿಜಿಯಂ’ ವ್ಯವಸ್ಥೆ ಜನ್ಮತಾಳಿತು ಎಂಬ ವಾದ ಇದೆ. ಕೊಲಿಜಿಯಂ ವ್ಯವಸ್ಥೆ ವಿಕಸನ ಹೊಂದಲು ಮೂಲ, ಕೇಂದ್ರ ಕಾನೂನು ಸಚಿವರು ಹೊರಡಿ­ಸಿದ ಒಂದು ಸುತ್ತೋಲೆ ಎಂದು ತಜ್ಞರು ಹೇಳುತ್ತಾರೆ. ‘ಯಾವುದೇ ರಾಜ್ಯದ ಹೈಕೋರ್ಟ್‌ನ ಶೇಕಡ 33ರಷ್ಟು ನ್ಯಾಯಮೂರ್ತಿಗಳು ಹೊರ ರಾಜ್ಯ­ಗಳಿಗೆ ಸೇರಿದವರಾಗಿದ್ದರೆ ಉತ್ತಮ. ದೇಶದಲ್ಲಿ ಏಕತೆ ಮೂಡಿಸಲು ಇದು ನೆರವಾಗುತ್ತದೆ’ ಎಂಬ ಮಾತಿ­ನೊಂದಿಗೆ 1981ರಲ್ಲಿ ಹೊರಡಿಸಿದ್ದ ಸುತ್ತೋಲೆ ಆರಂಭವಾಗುತ್ತದೆ. ಪಂಜಾಬ್‌ನ ರಾಜ್ಯಪಾಲರು ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ (ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ) ರವಾನಿಸಿದ ಸುತ್ತೋಲೆ ಇದು. ನಂತರ ಈ ಸುತ್ತೋಲೆಯಲ್ಲಿ ಒಂದು ಮಾತು ಬರುತ್ತದೆ. ‘ನಿಮ್ಮ ರಾಜ್ಯಗಳ ಹೈಕೋರ್ಟ್‌ನಲ್ಲಿ ಹೆಚ್ಚು­ವರಿ ನ್ಯಾಯಮೂರ್ತಿ ಯಾಗಿ ಕೆ...

ನವ ಮಾಧ್ಯಮ ಮುಂದಿಟ್ಟಿರುವ ಚುನಾವಣಾ ಸವಾಲು

ಮೂಡುಬಿದಿರೆಯ ಮಹಾಬಲ ಕೊಠಾರಿ  ಈ ಬಾರಿ ಜನ ಸಂಘರ್ಷ ಪಕ್ಷದಿಂದ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯಾಗಿ ಚುನಾವಣೆಗೆ ಸ್ಪರ್ಧಿಸುತ್ತಿ ದ್ದಾರೆ. (ಕೊಠಾರಿ ಕಾಲ್ಪನಿಕ ವ್ಯಕ್ತಿ, ಅವರು ಚುನಾವಣೆಗೆ ಸ್ಪರ್ಧಿಸುತ್ತಿದ್ದಾರೆ ಎಂಬುದು ಕಾಲ್ಪನಿಕ ಸಂದರ್ಭ). ಕೊಠಾರಿ ಅವರು ಕಾನೂನಿಗೆ ವಿರುದ್ಧವಾಗಿ ಕೆಲಸ ಮಾಡುವವರಲ್ಲ. ಆದರೆ ಮತದಾನಕ್ಕೆ 48 ಗಂಟೆಗಳು ಬಾಕಿ ಇವೆ ಎನ್ನುವಾಗ, ಅವರನ್ನು ಸೋಲಿಸುವಂತೆ ಕೋರಿ ಫೇಸ್‌ಬುಕ್‍, ಟ್ವಿಟರ್‌ಗಳಲ್ಲಿ ಸಂದೇಶ ರವಾನೆ ಯಾಗಲು ಶುರುವಾಗುತ್ತದೆ. ಅದು ಸಹಸ್ರಾರು ಜನರನ್ನು ಏಕಕಾಲದಲ್ಲಿ ತಲುಪುತ್ತದೆ, ಬಹಿರಂಗ ಸಭೆ ಮೂಲಕ ಮತದಾರರಿಗೆ ಚುನಾವಣಾ ಸಂದೇಶ ನೀಡಿದಂತೆ. ಅವರನ್ನು ವೈಯಕ್ತಿಕವಾಗಿ ನಿಂದಿಸುವ ದೃಶ್ಯಾವಳಿಗಳು ಯೂಟ್ಯೂಬ್‍ ಮೂಲಕ ದ.ಕ. ಲೋಕಸಭಾ ಕ್ಷೇತ್ರದ  ಮತದಾರರನ್ನು ತಲುಪು ತ್ತವೆ. ಫೇಸ್‌ಬುಕ್‌ನ ನಕಲಿ ಖಾತೆಗಳ ಮೂಲಕ ಕೊಠಾರಿ ಅವರನ್ನು ಅಸಭ್ಯ ವಾಗಿ ನಿಂದಿಸಲಾಗು ತ್ತದೆ. ಕೊಠಾರಿ ಈ ಕುರಿತು ಚುನಾವಣಾ ಆಯೋಗಕ್ಕೆ ದೂರು ಸಲ್ಲಿಸುತ್ತಾರೆ. ಹೀಗೆ ಮಾಡು ತ್ತಿರುವವರು ಯಾರು ಎಂಬುದನ್ನು ಪತ್ತೆ ಮಾಡಲು ಆಯೋಗ ಮುಂದಾಗುತ್ತದೆ. ಫೇಸ್‌ಬುಕ್‍ ನಕಲಿ ಖಾತೆಗಳು ಅಮೆರಿಕ ದಲ್ಲಿರುವ ವ್ಯಕ್ತಿಯೊಬ್ಬರ ನಿಯಂತ್ರಣದಲ್ಲಿವೆ, ಟ್ವಿಟರ್‍ ಖಾತೆಯನ್ನು ಮಲೇಷ್ಯದಲ್ಲಿರುವ ವ್ಯಕ್ತಿ ಯೊಬ್ಬರು ನಿರ್ವಹಿಸುತ್ತಿದ್ದಾರೆ, ಆಸ್ಟ್ರೇಲಿಯಾ ದಲ್ಲಿರುವ ವ್ಯಕ್ತಿಯೊಬ್ಬರು ತಮ್ಮ ಸ್ಮಾರ್ಟ್‌ಫೋನ್‍ ಬಳಸ...

ಸುರಿಹೊಂಡ ಭರತಖಂಡ?

ನಾವು ಬಳಸುವ ಸ್ಮಾರ್ಟ್‌ ಫೋನ್‌, ಟ್ಯಾಬ್ಲೆಟ್‌ ಕಂಪ್ಯೂಟರ್‌, ಲ್ಯಾಪ್‌ ಟಾಪ್‌, ಡೆಸ್ಕ್‌ ಟಾಪ್‌ಗಳು ಅದೆಷ್ಟು ಅಂದವಾಗಿರುತ್ತೆ ಅಲ್ಲವೇ? ಸ್ಮಾರ್ಟ್‌ ಫೋನ್‌, ಟ್ಯಾಬ್‌ಗಳನ್ನು ಅಂಗೈಯಲ್ಲಿ ಹಿಡಿದು ನಮ್ಮ ಗೆಳೆಯರೆದುರು ಅದನ್ನು ತೋರಿಸಿದಾಗ, ಕಚೇರಿಯ ಕೆಲಸಗಳನ್ನು ಅವುಗಳ ಮೂಲವೇ ನಿರ್ವಹಿಸಿದಾಗ ಆಗುವ ಸಂತಸಕ್ಕೆ ಪಾರವೇ ಇಲ್ಲ. ಈ ವಸ್ತುಗಳು ನಮಗೆ ಹೊಸದಾಗಿ ದೊರೆತಾಗ ಮನಸ್ಸು ಕುಂತಲ್ಲಿ–ನಿಂತಲ್ಲಿ ಅವುಗಳ ಬಗ್ಗೆಯೇ ಧೇನಿಸುತ್ತಿರುತ್ತದೆ. ಆದರೆ ಆಯಸ್ಸು ಮುಗಿದ ನಂತರ ಅವುಗಳಿಂದ ಆಗುವ ಅಪಾಯದ ಬಗ್ಗೆ ನಾವು ಹೆಚ್ಚಿನ ಸಂದರ್ಭಗಳಲ್ಲಿ ಚಿಂತಿಸಿರುವುದಿಲ್ಲ. ಆರ್ಥಿಕ ಉದಾರೀಕರಣದ ನಂತರ ಭಾರತ, ಅದರಲ್ಲೂ ಬೆಂಗಳೂರು, ಮಾಹಿತಿ ತಂತ್ರಜ್ಞಾನ ಉದ್ಯಮದ ಮೂಲಕ ಅಪಾರ ಪ್ರಮಾಣದ ವಹಿವಾಟು ನಡೆಸಿದೆ. ದೊಡ್ಡ ಸಂಖ್ಯೆಯ ಜನರಿಗೆ ಕೈತುಂಬಾ ಸಂಬಳ ಬರುವ ನೌಕರಿ ನೀಡಿದೆ. ಇದರ ಜೊತೆಜೊತೆಗೇ ಅವರಿಗೆ ಬೇಕೆಂದ ಎಲೆಕ್ಟ್ರಾನಿಕ್‍ ವಸ್ತುಗಳನ್ನು ಖರೀದಿಸುವ ಆರ್ಥಿಕ ಶಕ್ತಿ ನೀಡಿದೆ. ಇದನ್ನು ಉದಾರೀಕರಣದ ವರ ಎನ್ನಿ ಅಥವಾ ಶಾಪ ಎನ್ನಿ – ಇ -ತ್ಯಾಜ್ಯದ ಉತ್ಪಾದನೆಯ ಪ್ರಮಾಣ ಕೂಡ ದೇಶದಲ್ಲಿ ತೀವ್ರವಾಗಿ ಏರುತ್ತಿದೆ. ಇದು, ಬೆಂಗಳೂರಿನಲ್ಲಂತೂ ಅಪಾಯದ ಮಟ್ಟ ತಲುಪಿದೆ. ಖಾಸಗಿ ಸಂಸ್ಥೆಯೊಂದು 2012ರಲ್ಲಿ ನಡೆಸಿದ್ದ ಸಮೀಕ್ಷೆಯ ಪ್ರಕಾರ ಮುಂಬೈ ಮಹಾನಗರಿಯಲ್ಲಿ ವರ್ಷಕ್ಕೆ ಅಂದಾಜು 61,500 ಮೆಟ್ರಿಕ್‍ ಟನ್‍ ಇ-–ತ್ಯಾಜ್ಯ ಉತ್ಪಾದನೆಯಾಗುತ್ತದೆ. ಇದರ ನಂತರದ ಸ...

ಮೂರನೆಯ ಇರುವಿಕೆಯ ಹುಡುಕಾಟ...

ವಿದ್ಯಾಧರ ಎಸ್. ನೈಪಾಲ್ ಅವರ ಬಗ್ಗೆ ಇತ್ತೀಚೆಗೆ ಗಿರೀಶ ಕಾರ್ನಾಡರು ಒಂದು ಹೇಳಿಕೆ ನೀಡಿದ್ದರು. ಅದು ವಿವಾದಕ್ಕೂ  ಕಾರಣವಾಗಿತ್ತು. (ಅಂದಹಾಗೆ ನಮ್ಮಲ್ಲಿ ಎಲ್ಲವೂ ವಿವಾದಕ್ಕೆ ಹೇತುವಾಗುತ್ತಿದೆಯಲ್ಲ?!) ಈ ಸಂದರ್ಭದಲ್ಲಿ ನೈಪಾಲರನ್ನು ನಿಮ್ಮ ಅಭಿಪ್ರಾಯದಲ್ಲಿ ಸೆಕ್ಯುಲರಿಸಂ ಅಂದರೆ ಏನು ಎಂದು ಒಬ್ಬರು ಪ್ರಶ್ನಿಸಿದ್ದರು. “ಭಾರತದ ಮಟ್ಟಿಗೆ ಸೆಕ್ಯುಲರಿಸಂ ಅಂದರೆ ಯಾವುದೋ ಒಂದು ರಾಜಕೀಯ ಪಕ್ಷದ ಜೊತೆ ಗುರುತಿಸಿಕೊಳ್ಳುವುದು ಅಥವಾ ಗುರುತಿಸಿಕೊಳ್ಳದೇ ಇರುವುದು. ಅದಕ್ಕಿಂತ ಹೆಚ್ಚಿನ ಯಾವುದೇ ಅರ್ಥ ಇಲ್ಲ” ಎಂದು ನೈಪಾಲರು ಉತ್ತರಿಸಿದ್ದರು. ಹೌದು ನಮ್ಮಲ್ಲಿ ಸೆಕ್ಯುಲರಿಸಂ ಅಂದರೆ ಏನರ್ಥ? ಈ ಬಗ್ಗೆ ಬೇರೆ ಬೇರೆ ಸಂದರ್ಭಗಳಲ್ಲಿ ಬರೆದ ಮೂರು ಪುಟ್ಟ ಪುಟ್ಟ ಬರಹಗಳು ಇಲ್ಲಿವೆ. ನೋಡಿ. ಓದಿದ ನಂತರ ನಿಮಗೆ ಏನನ್ನಿಸಿತು ಎಂಬುದನ್ನು ಬರೆಯಿರಿ. *** ನಾನು ಭಾರತೀಯ . ನಾನು ಯಾವುದೇ ಮತದ ಅನುಯಾಯಿ ಅಲ್ಲ . ಅಂದರೆ ಯಾವುದೇ ಒಂದು ನಿರ್ದಿಷ್ಟ ಗ್ರಂಥ ಹಾಗೂ ನಿರ್ದಿಷ್ಟ ಮತಸ್ಥಾಪಕನ ಅನುಯಾಯಿ ನಾನಲ್ಲ . ಭಾರತದಲ್ಲಿರುವ ಬಹುಪಾಲು ಮಂದಿ ನನ್ನಂಥವರೇ . ಅವರಿಗೆ ಒಂದೇ ದೇವರು , ಒಂದೇ ಗ್ರಂಥ , ಒಬ್ಬನೇ ಗುರು ಇಲ್ಲ .   ಹಿಂದೂ   ಎಂಬ   ರಿಲಿಜನ್ ‍ ನನಗೆ ಇನ್ನೂ ಅರ್ಥವಾಗುತ್ತಿಲ್ಲ . ನಾನು ಯಾವುದೇ ರಿಲಿಜನ್ ‍ ನ ಅನುಯಾಯಿ ಅಲ್ಲದ ಕಾರಣ , ರಿಲಿಜನ್ ‍ ಇರುವ ದೇಶಗಳಿಗೆ ಬೇಕ...