ಮೊಟ್ಟಮೊದಲನೆಯದಾಗಿ ಮತಾಂತರವೆಂಬ ಪೀಡೆಯ ಬಗ್ಗೆ ಆರೋಗ್ಯಕರ ಚರ್ಚೆಯೊಂದನ್ನು ಆರಂಭಿಸಿದ್ದಕ್ಕಾಗಿ ವಿಜಯ ಕರ್ನಾಟಕದ ಹೆಮ್ಮೆಯ ಸಂಪಾದಕ ವಿಶ್ವೇಶ್ವರ ಭಟ್ಟರಿಗೆ ಮತ್ತು ಅದರ ವಿ.ಕ ಬಳಗಕ್ಕೆ ಅಭಿನಂದನೆಗಳು. ಆ ದಿನ ವಿಜಯ ಕರ್ನಾಟಕದ ಮೊದಲ ಪುಟದಲ್ಲಿ ಭೈರಪ್ಪನವರ ಲೇಖನವನ್ನು ನೋಡಿದಾಗಲೇ ಇದು ಸಾಮಾನ್ಯ ವಿಷಯವಲ್ಲ, ಭೈರಪ್ಪನವರು ಎಂದಿನಂತೆ ವರ್ಷಗಳಕಾಲ ಅಧ್ಯಯನ ಮಾಡಿಯೇ ಇಂಥದ್ದೊಂದು ಸಾಹಸ ಮಾಡಿದ್ದಾರೆ ಅನಿಸಿತು. ವಿ.ಕ ಕೂಡ ತಾನು ಈ ವಿಷಯದ ಮೇಲಣ ಚರ್ಚೆಗೆ ವೇದಿಕೆಯೇ ಹೊರತು ವಕ್ತಾರ ಅಲ್ಲ ಎಂದು ಸ್ಪಷ್ಟವಾಗಿ ತಿಳಿಸಿತ್ತು. ಹಾಗಾಗಿ ಈ ವಿಚಾರದ ಬಗ್ಗೆ ಒಂದು ಆರೋಗ್ಯಕರ ಚರ್ಚೆ ನಡೆಯಬಹುದೆಂಬ ನಿರೀಕ್ಷೆ ಖಂಡಿತಾ ಎಲ್ಲರಿಗೂ ಇತ್ತು. ಅದು ಒಂದು ಹಂತದ ಮಟ್ಟಿಗೆ ನಿಜವಾಗಿದೆ ಕೂಡ. ಆದರೆ ವಿಷಯ ಅದಲ್ಲ. ಭೈರಪ್ಪನವರು ಬರೆದ ಲೇಖನ ಓದಿದರೇ ಗೊತ್ತಾಗುತ್ತದೆ; ಇದು ಒಂದೋ ಎರಡೋ ದಿನದಲ್ಲಿ ಕುಳಿತು ಬರೆದದ್ದಲ್ಲ. ಬದಲಿಗೆ ಭೈರಪ್ಪನವರು ಸಾಕಷ್ಟು ಪರಿಶ್ರಮ ಪಟ್ಟು, ಅಧ್ಯಯನ ಮಾಡಿ ಬರೆದಿದ್ದಾರೆ ಅನ್ನುವುದು ಯಾರಿಗೂ ತಿಳಿಯುತ್ತದೆ. ಅದಲ್ಲದೆ ಅವರು ತಮ್ಮ ಲೇಖನದ ಕೊನೆಯಲ್ಲಿ ಕೊಟ್ಟಿರುವ ಆಕರ ಗ್ರಂಥಗಳ ಪಟ್ಟಿಯಲ್ಲಿರುವುದೆಲ್ಲ ಅರುಣ್ ಶೌರಿ, ನವರತ್ನ. ಎಸ್. ರಾಜಾರಾಮ್, ಸೀತಾರಾಮ್ ಗೋಯೆಲ್‌ರಂಥ ಖ್ಯಾತ ಸಂಶೋಧಕರು ಬರೆದದ್ದೇ. ಅವುಗಳಲ್ಲಿ ಯಾವೊಂದೂ ನಿರ್ಲಕ್ಷಿಸುವಂಥದ್ದಲ್ಲ. ಅದಿರಲಿ. ಈಗ ನೀವೇ ಹೇಳಿ... ಭೈರಪ್ಪನವರ ತಾರ್ಕಿಕ ಲೇಖನಕ್ಕೆ ಬಂದಿರುವ ಕೆಲವ...
ಆನೋ ಭದ್ರಾಃ ಕೃತವೋ ಯಂತು ವಿಶ್ವತ: