ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ನವೆಂಬರ್, 2016 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಏಕರೂಪ ನಾಗರಿಕ ಸಂಹಿತೆ ಎಂಬ ಜಾತ್ಯತೀತ ಬೇಡಿಕೆ

ಏಕರೂಪ ನಾಗರಿಕ ಸಂಹಿತೆಯನ್ನು ದೇಶದಲ್ಲಿ ಜಾರಿಗೆ ತರುವುದು ಸಂವಿಧಾನ ನಿರ್ಮಾತೃಗಳ ಕನಸು, ಆಶಯ. ಸಂವಿಧಾನ ಕರಡು ರಚನಾ ಸಭೆಯಲ್ಲಿ ಡಾ. ಬಿ.ಆರ್.ಅಂಬೇಡ್ಕರ್, ಕೆ.ಎಂ.ಮುನ್ಷಿ ಸೇರಿದಂತೆ ಹಲವರು ಆಡಿದ ಮಾತುಗಳು ಇದನ್ನು ದೃಢಪಡಿಸುತ್ತವೆ.

ಆದರೆ, ಕರಡು ರಚನಾ ಸಮಿತಿಯ ಎಲ್ಲ ಸದಸ್ಯರಿಂದ ಇದಕ್ಕೆ ಬೆಂಬಲ ಸಿಗಲಿಲ್ಲ. ನಿರ್ದಿಷ್ಟ ವರ್ಗಗಳಿಂದ ವಿರೋಧ ವ್ಯಕ್ತವಾದರೂ, ಸಂವಿಧಾನದ 44ನೇ ವಿಧಿಯಲ್ಲಿ, ‘ಸರ್ಕಾರವು ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆಯನ್ನು ಜಾರಿಗೆ ತರಲು ಯತ್ನಿಸಬೇಕು’ ಎಂದು ಹೇಳಲಾಗಿದೆ. ಇಲ್ಲಿ ಒಂದು ವಿಚಾರ ಸ್ಪಷ್ಟ. ಸಮಾನತೆಯನ್ನು ಹೇಳುವ 14ನೇ ವಿಧಿ, ಧಾರ್ಮಿಕ ಸ್ವಾತಂತ್ರ್ಯವನ್ನು ನೀಡುವ 25ನೇ ವಿಧಿಯನ್ನು ರಚಿಸಿದ ನಂತರವೇ, ಕರಡು ರಚನಾ ಸಮಿತಿಯು 44ನೇ ವಿಧಿಯನ್ನು ರೂಪಿಸಿತು.

ದೇಶದಲ್ಲಿ ವಿವಿಧ ಧರ್ಮ, ಜಾತಿ, ವರ್ಗಗಳನ್ನು ಪ್ರಭುತ್ವ ಸಮಾನವಾಗಿ ಕಾಣಬೇಕು (12ನೇ ವಿಧಿ), ಅವರ ಧಾರ್ಮಿಕ ಸ್ವಾತಂತ್ರ್ಯಕ್ಕೆ ರಕ್ಷಣೆ ನೀಡಬೇಕು (25ನೇ ವಿಧಿ) ಎಂದು ಹೇಳುವ ಸಂವಿಧಾನ, ಆಸ್ತಿ– ವಿವಾಹ– ದತ್ತು ಸ್ವೀಕಾರ ಸೇರಿದಂತೆ ವೈಯಕ್ತಿಕ ಕಾನೂನುಗಳ ವ್ಯಾಪ್ತಿಗೆ ಬರುವ ವಿಚಾರಗಳಲ್ಲಿ ಎಲ್ಲರಿಗೂ ಅನ್ವಯವಾಗುವ ಸಮಾನ ಸಂಹಿತೆಯನ್ನು ರೂಪಿಸಬೇಕು ಎಂದಿದೆ. ಅಂದರೆ ಸಮಾನತೆ, ಧಾರ್ಮಿಕ ಸ್ವಾತಂತ್ರ್ಯವನ್ನು ಕಾಯ್ದುಕೊಂಡೇ ದೇಶದಲ್ಲಿ ಏಕರೂಪ ನಾಗರಿಕ ಸಂಹಿತೆ ಜಾರಿಗೊಳಿಸಲು ಸಾಧ್ಯ ಎಂಬ ನಂಬಿಕೆ ಕರಡು ರಚನಾ ಸಭೆಗೆ ಇತ್ತು ಎಂದು ಪರಿಭಾವಿಸಬಹುದು. ‘19…