ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಆಗಸ್ಟ್, 2008 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಆ ಆಂದೋಲನ ಕರ್ನಾಟಕವನ್ನು ಪ್ರಭಾವಿಸಿದ್ದು ಹೀಗೆ

ಉತ್ತರದಲ್ಲಿ ಗುಜರಾತ್‌ನಿಂದ ದಕ್ಷಿಣದಲ್ಲಿ ಕೇರಳ ರಾಜ್ಯದವರೆಗೆ ಮಹಾರಾಷ್ಟ್ರ ಮತ್ತು ಕರ್ನಾಟಕ ರಾಜ್ಯಗಳ ಮೂಲಕ ಹಾದುಹೋಗುವ ಶಿಖರ ಶ್ರೇಣಿಗೆ ಸಹ್ಯಾದ್ರಿ ಪರ್ವತಗಳು ಅಂತ ಹೆಸರು. ಇದನ್ನೇ ಪಶ್ಚಿಮ ಘಟ್ಟಗಳು ಅಂತಲೂ ಕರೆಯುತ್ತಾರೆ. ಇಲ್ಲಿ ದಟ್ಟ ಅರಣ್ಯವಿದೆ, ಹುಲ್ಲುಗಾವಲಿದೆ, ಜಗತ್ತಿನ ಕೆಲವೇ ಕೆಲವು ಪ್ರದೇಶಗಳಲ್ಲಿ ಮಾತ್ರ ಕಾಣಸಿಗುವಂಥ ಜೀವವೈವಿಧ್ಯವಿದೆ. ಇದು ದಕ್ಷಿಣ ಭಾರತದ ಅನೇಕ ಜೀವನದಿಗಳ ಉಗಮಸ್ಥಾನವೂ ಹೌದು. ಭಾರತಕ್ಕೆ ಸ್ವಾತಂತ್ರ್ಯ ಬಂದ ನಂತರ ಸುಮಾರು ೨೫-೩೦ ವರ್ಷಗಳ ಕಾಲ ದೇಶ ತೀವ್ರಗತಿಯ ಕೈಗಾರಿಕೀಕರಣಕ್ಕೆ ತನ್ನನ್ನು ತಾನು ತೆರೆದುಕೊಂಡಿತು. ಈಗಲೂ ತೆರೆದುಕೊಳ್ಳುತ್ತಿದೆ, ಅದು ಬೇರೆ ಮಾತು. ಅಂದಿನ ಕೈಗಾರಿಕೀಕರಣದ ಭರಾಟೆ ಹೇಗಿತ್ತೆಂದರೆ ಅರಣ್ಯನಾಶ, ಜೀವವೈವಿಧ್ಯ ನಾಶ, ನದಿಮೂಲಗಳ ಬತ್ತುವಿಕೆಯಂತಹ ಸಮಸ್ಯೆಗಳು ನಮ್ಮನ್ನು ಆಳುವ ಸರಕಾರಗಳಿಗೆ ಅರ್ಥವೇ ಆಗುತ್ತಿರಲಿಲ್ಲ. ಅವರ ಉದ್ದೇಶ ಒಂದೇ, ಭಾರತ ಕೂಡ ಯುರೋಪಿಯನ್ ರಾಷ್ಟ್ರಗಳಂತೆ ಔದ್ಯಮೀಕರಣಗೊಳ್ಳಬೇಕು. ಇದರ ಪರಿಣಾಮವಾಗಿ ಅಪಾರ ಪ್ರಮಾಣದ ಅರಣ್ಯ ನಾಶವಾಯಿತು. ಪಶ್ಚಿಮ ಘಟ್ಟಗಳೂ ಇದರಿಂದ ಹೊರತಾಗಲಿಲ್ಲ. ಅಲ್ಲಿನ ಅಪಾರ ಪ್ರಮಾಣದ ಜೀವವೈವಿಧ್ಯಕ್ಕೆ ಕೊಡಲಿಪೆಟ್ಟು ಬಿತ್ತು. ನದಿಮೂಲಗಳು ಬತ್ತತೊಡಗಿದವು. ಜನರು ತೊಂದರೆ ಅನುಭವಿಸತೊಡಗಿದರು. ಕಾಡು ಕಡಿದು, ಪರಿಸರ ನಾಶಮಾಡಿ ದೇಶಕಟ್ಟಲು ಸಾಧ್ಯವಿಲ್ಲ ಎಂಬ ಸತ್ಯ ನಿಧಾನವಾಗಿಯಾದರೂ ಜನರ ಅರಿವಿಗೆ ಬರಲಾರಂಭಿಸಿತು. ಈ ನಡುವೆ ೧೯೭೫

ವಿವೇಕ ವಾಣಿ ನೆನಪಿರಲಿ...

ಸ್ವಾಮಿ ವಿವೇಕಾನಂದರು ವಿದೇಶದಿಂದ ಭಾರತಕ್ಕೆ ಹಿಂದಿರುಗಿ ಬರುತ್ತಿದ್ದರು. ಸ್ವಾಮೀಜಿಯವರು ಬರುತ್ತಿದ್ದ ಹಡಗಿನಲ್ಲಿಯೇ ಒಬ್ಬ ಕ್ರೈಸ್ತ ಪಾದ್ರಿಯೂ ಇದ್ದ. ಸ್ವಾಮೀಜಿಯವರು ಆ ಪಾದ್ರಿಯ ಬಳಿ ಪ್ರತಿದಿನವೂ ಧರ್ಮ, ಸಂಸ್ಕೃತಿ ಸೇರಿದಂತೆ ಅನೇಕ ವಿಚಾರಗಳ ಬಗ್ಗೆ ಚರ್ಚೆ ಮಾಡುತ್ತಿದ್ದರು. ಪ್ರತಿ ಬಾರಿಯೂ ಆ ಪಾದ್ರಿ ಸ್ವಾಮೀಜಿಯ ಎದುರು ವಾದದಲ್ಲಿ ಸೋಲುತ್ತಿದ್ದ. ನಂತರ ವಿನಾಕಾರಣ ಭಾರತೀಯ ಸಂಸ್ಕೃತಿಯನ್ನು, ಹಿಂದೂ ಧರ್ಮವನ್ನು ನಿಂದಿಸುತ್ತಿದ್ದ. ಸ್ವಾಮೀಜಿ ಮೊದಮೊದಲು ಸುಮ್ಮನಿದ್ದರಾದರೂ ನಂತರ ಒಂದು ದಿನ ಆ ಪಾದ್ರಿಯು ಹಡಗಿನ ಅಂಚಿನಲ್ಲಿ ಇದ್ದಾಗ ಅವನ ಸಮೀಪಕ್ಕೆ ಹೋಗಿ, ಅವನನ್ನು ಬಿಗಿಯಾಗಿ ಹಿಡಿದುಕೊಂಡು, "ನೋಡು, ನೀನು ನನ್ನ ಧರ್ಮವನ್ನು, ದೇಶವನ್ನು ಬಯ್ಯುವುದನ್ನು ಬಿಡದೆ ಇದ್ದರೆ ನಿನ್ನನ್ನು ಹೀಗೆಯೇ ಸಮುದ್ರಕ್ಕೆ ನೂಕಿಬಿಡುವೆ!" ಎಂದು ಗದರಿಸಿದರು. ಆಗ ಪಾದ್ರಿಯ ಕೈಕಾಲುಗಳು ಭಯದಿಂದ ಕಂಪಿಸತೊಡಗಿದವು. "ದಯವಿಟ್ಟು ನನ್ನನ್ನು ಬಿಟ್ಟುಬಿಡಿ, ಇನ್ನುಮುಂದೆ ನಾನು ಹಾಗೆ ಮಾಡುವುದಿಲ್ಲ" ಎಂದು ಆ ಪಾದ್ರಿಯು ಸ್ವಾಮೀಜಿಯವರಲ್ಲಿ ಬೇಡಿಕೊಂಡನು. ಆತನ ಬೇಡಿಕೆಯನ್ನು ಮನ್ನಿಸಿದ ಸ್ವಾಮೀಜಿ ಅವನನ್ನು ಬಿಟ್ಟರು. ಅನಂತರ ಅವನು ಸ್ವಾಮೀಜಿಗೆ ಗೌರವ ನೀಡಲು ಪ್ರಾರಂಭಿಸಿದನು. ನಿಜ, ಸ್ವಾಮಿ ವಿವೇಕಾನಂದರು ಸರ್ವಸ್ವವನ್ನೂ ತ್ಯಾಗ ಮಾಡಿದ ಸನ್ಯಾಸಿ. ಅವರು ಒಬ್ಬ ಪಾದ್ರಿಯ ಮೇಲೆ ಈ ಥರ ಕೋಪಗೊಂಡಿದ್ದು ಸರಿಯೇ ಅನ್ನುವ ಅನುಮಾನ ಬರಬ

ಯಾರು ಒಳ್ಳೆಯವರು?

ಇದು ಸುಮಾರು ನಲವತ್ತು ವರ್ಷಗಳ ಹಿಂದೆ ನಡೆದ ಕತೆ. ಆತನ ಹೆಸರು ಸೋಮಣ್ಣ, ಅವನ ನೆರೆಮನೆಯವನ ಹೆಸರು ರಾಮಣ್ಣ. ಇಬ್ಬರೂ ವಾಸಿಸುತ್ತಿದ್ದದ್ದು ಕಾನೂರು ಎಂಬ ಪುಟ್ಟ ಹಳ್ಳಿಯಲ್ಲಿ. ಇಬ್ಬರೂ ಬ್ರಾಹ್ಮಣರು. ರಾಮಣ್ಣ ಬಹಳ ಸಾಧು ಸ್ವಭಾವದವ. ಯಾವತ್ತೂ, ಯಾರ ಮೇಲೂ ಹರಿಹಾಯ್ದವನಲ್ಲ. ದಿನದ ಮೂರೂ ಹೊತ್ತು ಶ್ರದ್ಧೆಯಿಂದ ಸಂಧ್ಯಾವಂದನೆ ಮಾಡುತ್ತಿದ್ದ. ಮೊಸ, ಕಪಟ, ಜೂಜು... ಇದ್ಯಾವುದೂ ರಾಮಣ್ಣನಿಗೆ ಗೊತ್ತಿಲ್ಲ. ಹೆಂಡ, ಮಾಂಸ, ಪರಸ್ತ್ರೀ ಸಹವಾಸಗಳಿಂದ ರಾಮಣ್ಣ ಮೈಲು ದೂರ. ಒಟ್ಟಿನಲ್ಲಿ ಒಬ್ಬ ಸಂಭಾವಿತ, ಸುಭಗ ನಾಗರಿಕ. ರಾಮಣ್ಣನ ವ್ಯಕ್ತಿತ್ವಕ್ಕೆ ಸ್ವಲ್ಪ ಮಟ್ಟಿಗೆ ವಿರುದ್ಧವಾದ ವ್ಯಕ್ತಿತ್ವ ಸೋಮಣ್ಣನದು. ಸೋಮಣ್ಣನಿಗೆ ಸುಳ್ಳು ಹೇಳಲು, ಸೋಗು ಹಾಕಲು, ಇನ್ನೊಬ್ಬರ ಮೇಲೆ ದ್ವೇಷ ಕಾರಲು ಬರುತ್ತಿರಲಿಲ್ಲವಾದರೂ ಸ್ವಲ್ಪ ಮುಂಗೋಪ. ಅದಲ್ಲದೆ ಸೋಮಣ್ಣನಿಗೆ ಹೆಂಡ, ಮಾಂಸಗಳ ಸಹವಾಸ ಸ್ವಲ್ಪ ಜೋರಾಗಿಯೇ ಇತ್ತು. ಇಸ್ಪೀಟು ಕೂಡಾ ಜನ್ಮಜಾತ ಕಲೆಯೆಂಬಂತೆ ಬಂದಿತ್ತು. ಅದೇ ಕಾರಣದಿಂದ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸೋಮಣ್ಣ ಒಬ್ಬ ಫಟಿಂಗನಾಗಿದ್ದ. ಆತ ಊರ ಬ್ರಾಹ್ಮಣರ ದೃಷ್ಟಿಯಲ್ಲಿ ಸಂಭಾವಿತನೂ ಅಲ್ಲ, ಸುಭಗನೂ ಅಲ್ಲ. ಸಾಧು ಸ್ವಭಾವದ ರಾಮಣ್ಣ ತನ್ನ ಜೀವಿತಾವಧಿಯ ಕಟ್ಟಕಡೆಯ ದಿನದವರೆಗೂ ಸಾಧು ಪ್ರಾಣಿಯಾಗಿಯೇ ಉಳಿದ. ಅವನಿಂದ ಯಾರಿಗೂ ಹಾನಿಯಾಗಲಿಲ್ಲ, ಯಾರಿಗೂ ಉಪಕಾರವೂ ಆಗಲಿಲ್ಲ. ಆದರೆ ರಾಜಾರೋಷವಾಗಿ ಹೆಂಡ, ಮಾಂಸಗಳ ಸಹವಾಸ ಮಾಡಿದ ಸೋಮಣ್ಣ ತನ್ನ ಜೀವಿತಾವಧಿಯ