ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಸೆಪ್ಟೆಂಬರ್, 2014 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಮೂರು ತೀರ್ಪುಗಳ ಕತೆ

ಸುಪ್ರೀಂ ಕೋರ್ಟ್‌ ಮತ್ತು ಹೈ­ಕೋರ್ಟ್‌­­­ಗಳಿಗೆ ನ್ಯಾಯ­ಮೂರ್ತಿಗಳನ್ನು ‘ಕೊಲಿ­ಜಿಯಂ’ ಮೂಲಕ ನೇಮಕ ಮಾಡ­ಬೇಕು ಎಂದು ಸಂವಿಧಾನ ಹೇಳುವುದಿಲ್ಲ. ಆದರೆ 1993ರಲ್ಲಿ ಸುಪ್ರೀಂ ಕೋರ್ಟ್‌ನ ವಿಸ್ತೃತ ಪೀಠ, ಹೈಕೋರ್ಟ್‌ ಮತ್ತು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಗಳ ನೇಮಕ ‘ಕೊಲಿಜಿಯಂ’ ಮೂಲಕ ಆಗಬೇಕು ಎಂದು ಹೇಳಿತು. ಭಾರತದ ನ್ಯಾಯಾಂಗಕ್ಕೆ ನಡೆಯುವ ನೇಮಕಾತಿಗಳು ಕೊಲಿಜಿಯಂ ಮೂಲಕ ಆಗಬೇಕು ಎಂಬ ವ್ಯವಸ್ಥೆ ಜಾರಿಗೆ ಬಂದಿದ್ದು ಹಂತಹಂತವಾಗಿ. ಇದೊಂದು ವಿಕಸನದ ಕತೆ. ಕಾರ್ಯಾಂ­ಗವು ನ್ಯಾಯಾಂ­ಗದ ಜೊತೆ ಸಂಘರ್ಷಕ್ಕೆ ಮುಂದಾ­ದಾಗ ರಕ್ಷಣಾತ್ಮಕ ಕ್ರಮವಾಗಿ ‘ಕೊಲಿಜಿಯಂ’ ವ್ಯವಸ್ಥೆ ಜನ್ಮತಾಳಿತು ಎಂಬ ವಾದ ಇದೆ. ಕೊಲಿಜಿಯಂ ವ್ಯವಸ್ಥೆ ವಿಕಸನ ಹೊಂದಲು ಮೂಲ, ಕೇಂದ್ರ ಕಾನೂನು ಸಚಿವರು ಹೊರಡಿ­ಸಿದ ಒಂದು ಸುತ್ತೋಲೆ ಎಂದು ತಜ್ಞರು ಹೇಳುತ್ತಾರೆ. ‘ಯಾವುದೇ ರಾಜ್ಯದ ಹೈಕೋರ್ಟ್‌ನ ಶೇಕಡ 33ರಷ್ಟು ನ್ಯಾಯಮೂರ್ತಿಗಳು ಹೊರ ರಾಜ್ಯ­ಗಳಿಗೆ ಸೇರಿದವರಾಗಿದ್ದರೆ ಉತ್ತಮ. ದೇಶದಲ್ಲಿ ಏಕತೆ ಮೂಡಿಸಲು ಇದು ನೆರವಾಗುತ್ತದೆ’ ಎಂಬ ಮಾತಿ­ನೊಂದಿಗೆ 1981ರಲ್ಲಿ ಹೊರಡಿಸಿದ್ದ ಸುತ್ತೋಲೆ ಆರಂಭವಾಗುತ್ತದೆ. ಪಂಜಾಬ್‌ನ ರಾಜ್ಯಪಾಲರು ಮತ್ತು ಎಲ್ಲ ರಾಜ್ಯಗಳ ಮುಖ್ಯಮಂತ್ರಿಗಳಿಗೆ (ಈಶಾನ್ಯ ರಾಜ್ಯಗಳನ್ನು ಹೊರತುಪಡಿಸಿ) ರವಾನಿಸಿದ ಸುತ್ತೋಲೆ ಇದು. ನಂತರ ಈ ಸುತ್ತೋಲೆಯಲ್ಲಿ ಒಂದು ಮಾತು ಬರುತ್ತದೆ. ‘ನಿಮ್ಮ ರಾಜ್ಯಗಳ ಹೈಕೋರ್ಟ್‌ನಲ್ಲಿ ಹೆಚ್ಚು­ವರಿ ನ್ಯಾಯಮೂರ್ತಿ ಯಾಗಿ ಕೆ