‘ನೀವು ಭೇಟಿ ಮಾಡುವ ಪುಟಾಣಿಗಳನ್ನೆಲ್ಲಾ ವಿಜ್ಞಾನಿ, ಎಂಜಿನಿಯರ್, ಡಾಕ್ಟರ್ ಆಗುಎಂದು ಹುರಿದುಂಬಿಸುತ್ತೀರಿ. ಆದರೆ ನೀವು ಯಾರನ್ನೂ ರೈತನಾಗು ಎಂದುಪ್ರೋತ್ಸಾಹಿಸುವುದಿಲ್ಲ. ಯಾಕೆ ಕಲಾಂ?’
ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಭಾರತರತ್ನ ಅಬ್ದುಲ್ ಕಲಾಂಗೆ ಶಾಲಾವಿದ್ಯಾರ್ಥಿಯೊಬ್ಬ ಈ ಪ್ರಶ್ನೆ ಕೇಳಿದಾಗ ಒಮ್ಮೆ ಅವರ ಬಾಯಿ ತಡವರಿಸಿರಬಹುದು. ಆದರೆಅವರಿಗೆ ಆ ಪ್ರಶ್ನೆಗೆ ಉತ್ತರ ಥಟ್ಟನೆ ಹೊಳೆದಿರಲಿಕ್ಕಿಲ್ಲ.
ಕಾಲಚಕ್ರದ ಮೇಲೆ ಕುಳಿತು ಒಮ್ಮೆ ಹಿಮ್ಮುಖವಾಗಿ ಚಲಿಸೋಣ. ‘ಅಂವ ತನ್ನ ತೋಟವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಂತೆ. ಅವನ ಅಪ್ಪ ಅದೆಷ್ಟು ಕಷ್ಟಪಟ್ಟು ಆ ತೋಟವನ್ನು ಬೆಳೆಸಿದರು. ಅವನಿಗಾಗಿ ಬಿಟ್ಟುಹೋದರು. ಈ ಸೋಂಬೇರಿ ಪಿತ್ರಾರ್ಜಿತತೋಟವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ.’
ನಾವಿನ್ನೂ ಚಿಕ್ಕವರಾಗಿದ್ದಾಗ ನಮ್ಮ ಊರಿನಲ್ಲಿ ಈ ರೀತಿಯ ಮಾತುಗಳು ಊರಿನ ಹಿರಿಯರ ಬಾಯಲ್ಲಿ ಆಗಾಗ ಕೇಳಿಬರುತ್ತಲೇಇದ್ದವು. ‘ಬೇಜವಾಬ್ದಾರಿ’ ವ್ಯಕ್ತಿ ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳದಿದ್ದರೂ ಆದೀತು, ಆದರೆ ಆತ ತನ್ನ ತೋಟವನ್ನೋಅಥವಾ ಹೊಲವನ್ನೋ ಚೆನ್ನಾಗಿ ನೋಡಿಕೊಂಡಿರದಿದ್ದರೆ ಊರವರ ಬಾಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದ. ಕೃಷಿ ಮತ್ತುರೈತಾಪಿಯ ಬಗ್ಗೆ ವ್ಯಕ್ತಿಯೊಬ್ಬ ತೋರಿಸುತ್ತಿದ್ದ ಶ್ರದ್ಧೆಯ ಆಧಾರದ ಮೇಲೆ ಆತನ ವ್ಯಕ್ತಿತ್ವವನ್ನು ಅಳೆಯುತ್ತಿದ್ದರು ನಮ್ಮ ಹಿರಿಯರು.
ಇವತ್ತಿನ ಸಂದರ್ಭ ಬೇರೆಯೇ ಆಗಿದೆ. ‘ಅಂವ ತನ್ನ ತೋಟ ಮಾರಿದ. ಬೆಂಗಳೂರಿನಲ್ಲಿ ಫ್ಲಾಟ್ ಕೊಂಡಿದ್ದಾನಂತೆ. ಇನ್ನು ಅಂವಅಲ್ಲೇ ಇರ್ತಾನಂತೆ’ ಇಂಥ ಮಾತುಗಳು ಇವತ್ತು ನಮ್ಮ ಹಳ್ಳಿಗರ ಬಾಯಲ್ಲಿ ಬಹಳ ಹೆಮ್ಮೆಯಿಂದ ಬರುತ್ತಿವೆ. ಜೊತೆಗೇಮುಂದೊಂದು ದಿನ ತಮ್ಮ ಮಕ್ಕಳೂ ಬೆಂಗಳೂರಿನಲ್ಲೊಂದು ಚೆಂದದ ಮನೆ ಕಟ್ಟಿಸಬಹುದು, ನಾವೂ ಅಲ್ಲಿಗೇ ವಲಸೆಹೋಗಬಹುದೆಂಬ ಸಣ್ಣ ಆಶಾಭಾವವೂ ಅವರ ಮಾತುಗಳಲ್ಲಿ ಇರಬಹುದು. ರೈತಾಪಿಯಲ್ಲಿನ ಯಶಸ್ಸನ್ನು ಜೀವನದ ಯಶಸ್ಸುಎಂದು ಅರ್ಥೈಸುತ್ತಿದ್ದ ಕಾಲದಿಂದ ರೈತಾಪಿಯನ್ನು ಬಿಟ್ಟರೇ ಜೀವನದಲ್ಲಿ ಯಶಸ್ಸು ಎಂದು ಅರ್ಥೈಸುವವರೆಗೆ ಕಾಲ ಮುಂದೆಸಾಗಿದೆ - ಅಥವಾ ಹಿಂದೆ ನಡೆದಿದೆ.
೧೯೯೦ರ ನಂತರ ಭಾರತ ಕಂಡ ಆರ್ಥಿಕ ಸಮೃದ್ಧತೆ ನಮ್ಮಲ್ಲಿನ ಅನೇಕ ಸಾಮಾಜಿಕ ಚಳವಳಿಗಳನ್ನು ಕೊಂದುಹಾಕಿತು. ಜಾಗತೀಕರಣ, ಉದಾರೀಕರಣ ಮತ್ತು ಖಾಸಗೀಕರಣದಿಂದಾಗಿ ಖಾಸಗಿ ವಲಯದಲ್ಲಿ ಅಸಂಖ್ಯ ಹೊಸ ಉದ್ಯೋಗಗಳುಸೃಷ್ಟಿಯಾದವು. ಭಾರತೀಯ ಸಮಾಜದ ಒಂದು ವರ್ಗ ಈ ಹೊಸ ಅವಕಾಶಗಳನ್ನು ಸಮರ್ಥವಾಗಿ ಬಾಚಿಕೊಂಡಿತು; ಆ ಮೂಲಕಆರ್ಥಿಕವಾಗಿ ಸಾಕಷ್ಟು ಬಲವಾಯಿತು. ಒಟ್ಟಾರೆಯಾಗಿ ನಮ್ಮ ಸಮಾಜದ ಒಂದು ದೊಡ್ಡ ವರ್ಗ ‘ಹಣಮಾಡುವ ಚಳವಳಿ’ಯ ಹಿಂದೆಸಾಗಿತು. ಆರ್ಥಿಕ ಸಮೃದ್ಧಿಯ ಫಲವಾದ ಮೇಲ್ಮಧ್ಯಮ ಮಟ್ಟದ ಬದುಕನ್ನು ಅನುಭವಿಸತೊಡಗಿತು.
‘ಹಣ ಮಾಡುವ ಚಳವಳಿ’ಯ ಹಿಂದೆ ಸಮಾಜದ ಬಹುದೊಡ್ಡ ವರ್ಗವೊಂದು ಸಾಗಿದ್ದು ತಪ್ಪಲ್ಲ. ಆದರೆ ಅಂಥದ್ದೊಂದು ಮಹತ್ವದಕಾಲಘಟ್ಟವನ್ನು ಹಾದು ಬಂದು ಎರಡು ದಶಕದ ನಂತರ ತಿರುಗಿ ನೋಡಿದರೆ, ಸಮಾಜದಲ್ಲಾದ ಅನೇಕ ಉತ್ಪಾತಗಳಿಗೆ ‘ಹಣ’ವೇಮೂಲ ಕಾರಣ ಎನ್ನುವುದನ್ನು ಅಲ್ಲಗಳೆಯಲು ಸಾಧ್ಯವಿಲ್ಲ.
ಸಾಫ್ಟ್ವೇರ್ ಕಂಪೆನಿಯಲ್ಲಿ ಕೆಲಸ ಗಿಟ್ಟಿಸಿಕೊಂಡರೆ ಐದಂಕಿ ಸಂಬಳ ಖಚಿತ ಎಂಬ ವಿಷಯ ತಿಳಿಯುತ್ತಿದ್ದಂತೆಯೇ ಸಾಹಿತ್ಯ, ಸಂಸ್ಕೃತಿ ಮತ್ತಿತರ ಮಾನವಿಕ ವಿಷಯಗಳ ಬಗ್ಗೆ ತೀವ್ರ ಕುತೂಹಲ ತೋರುತ್ತಿದ್ದ ವಿದ್ಯಾರ್ಥಿಗಳಿಗೆ ಇದಕ್ಕಿದ್ದಂತೆ ಕಂಪ್ಯೂಟರ್ವಿಜ್ಞಾನದ ಬಗ್ಗೆ ಆಸಕ್ತಿ ಮೂಡಿದ್ದನ್ನು ನಮ್ಮ ಓರಗೆಯ ಅನೇಕರು ಖುದ್ದಾಗಿ ಗಮನಿಸಿರುತ್ತಾರೆ.
ಹಾಗಂತ ಅಲ್ಲಿಯವರೆಗೆ ಯಾರೂ ಸಾಫ್ಟ್ವೇರ್ ಎಂಜಿನಿಯರಿಂಗ್ ಓದಿರಲಿಲ್ಲ ಎಂಬ ವಾದ ಇಲಿಲ್ಲ. ಅಲ್ಲಿಯವರೆಗೂ ಆಸಕ್ತಿಯಿಂದಓದುತ್ತಿದ್ದರು, ಆದರೆ ನಂತರದ ದಿನಗಳಲ್ಲಿ ಪಾಲಕರ ಒತ್ತಡದ ಕಾರಣ ಈ ಕೋರ್ಸ್ ಓದುವವರ ಸಂಖ್ಯೆ ಹೆಚ್ಚಾಯಿತು, ಹಾಗೆಯೇಹಣದ ಒತ್ತಡದಿಂದಲೂ ಸಹ.
ಎಂಜಿನಿಯರಿಂಗ್ ಓದುವುದು, ಹಣ ಮಾಡುವುದು, ವಿದೇಶಕ್ಕೆ ಹಾರುವುದು... ಇವೆಲ್ಲದಕ್ಕೂ ಮಿಗಿಲಾದ ಬದುಕು ಇದೆ ಎಂದು ಗಟ್ಟಿಸ್ವರದಲ್ಲಿ ಹೇಳುತ್ತಿದ್ದ ವಿದ್ಯಾರ್ಥಿ ಚಳವಳಿಗಳು, ರೈತ ಚಳವಳಿಗಳು ‘ಹಣ ಮಾಡುವ ಚಳವಳಿ’ಯನ್ನು ಎದುರಿಸಲಾಗದೆಬಡವಾದವು. ಅನಿಶ್ಚಿತ ಹವಾಮಾನ, ಬೆಳೆ ಮತ್ತು ಮಾರುಕಟ್ಟೆಯ ಉರುಳು ಯಾವತ್ತಿನಂತೆ ರೈತನ ಕೊರಳ ಸುತ್ತ ಸುತ್ತಿಕೊಂಡೇಇತ್ತು. ೯೦ರ ದಶಕದ ಆರಂಭದಿಂದ ದೇಶದೊಳಕ್ಕೆ ಹರಿದು ಬಂದು ವಿದೇಶಿ ಹಣ ಹೇಗೋ ರೈತನ ಜೇಬು ತುಂಬಲಿಲ್ಲ. ಆ ಹಣಕೃಷಿಯೇತರ ಕಾಯಕದಲ್ಲಿ ತೊಡಗಿಸಿಕೊಂಡವರಲ್ಲೇ ಉಳಿದುಬಿಟ್ಟಿತು.
‘ಸೆನ್ಸೆಕ್ಸ್ನಲ್ಲಿ ಒಂದಂಶ ಕುಸಿತ ಕಂಡರೂ ದೇಶದ ಹಣಕಾಸು ಸಚಿವರು ಶೇರು ದಲ್ಲಾಳಿಗಳ ಯೋಗಕ್ಷೇಮ ವಿಚಾರಿಸಲು ಓಡೋಡಿಬರುತ್ತಾರೆ. ಆದರೆ ನೂರಾರು ರೈತರು ಸಾಲುಸಾಲಾಗಿ ಆತ್ಮಹತ್ಯೆ ಮಾಡಿಕೊಂಡರೂ ಈ ದೇಶದ ಪ್ರಧಾನಿ ರೈತರತ್ತ ಮುಖಮಾಡಲಾರ’ ಎಂಬ ದಾರುಣ ಸತ್ಯ ಕೂಡ ರೈತನಿಗೆ ಅರ್ಥವಾಯಿತು. ಇಂಥ ಬಿಕ್ಕಟ್ಟಿನ ಸಂದರ್ಭದಲ್ಲೇ ನಮ್ಮ ದೇಶದ ರೈತ ತನ್ನಜೀವದ ಕಸುಬನ್ನು ಬಿಟ್ಟು ತಿಂಗಳ ಸಂಬಳ ಬರುವ ಕೆಲಸಗಳತ್ತ ಮುಖ ಮಾಡಿದ್ದು.
ಓದಿನಲ್ಲಿ ಬುದ್ಧಿವಂತನಾಗಿರುವವ ರೈತನಾಗಿ ಜೀವನ ನಡೆಸುವುದು ಅಪರಾಧ ಎಂಬ ಭಾವನೆಯನ್ನು ಎಳೆಯ ಮಕ್ಕಳ ಮನಸ್ಸಿನಲ್ಲಿವ್ಯವಸ್ಥಿತವಾಗಿ ಬಿತ್ತುವ ಇಂದಿನ ಶಿಕ್ಷಣ ಪದ್ಧತಿಯೂ ರೈತಾಪಿಯಿಂದ ಇತರೆ ವೃತ್ತಿಗಳೆಡೆ ಜನ ಆಕರ್ಷಿತರಾಗುವಂತೆ ಮಾಡಿದೆಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ. ಬೆಳೆದ ಬೆಳೆಗೆ ಸೂಕ್ತ ಬೆಲೆ ಇಲ, ವೈಜ್ಞಾನಿಕ ಮಾರುಕಟ್ಟೆ ವ್ಯವಸ್ಥೆ ಇಲ್ಲ... ಮುಂತಾದ ಅನೇಕಇಲ್ಲ’ಗಳಿಗಿಂತ ಹೆಚ್ಚಾಗಿ ರೈತರಿಗೆ ನಮ್ಮ ಸಮಾಜ ನಿರಾಕರಿಸುತ್ತಿರುವ ಆತ್ಮಗೌರವ ಕೂಡ ಆ ವೃತ್ತಿಯಿಂದ ಅಸಂಖ್ಯ ಮಂದಿವಿಮುಖರಾಗುವಂತೆ ಮಾಡಿದೆ. ಸಾಫ್ಟ್ವೇರ್, ಹಾರ್ಡ್ವೇರ್...ಉದ್ಯೋಗಿಗಳಿಗೆ ನಾವು ತೋರಿಸುತ್ತಿರುವ ಗೌರವದಅರ್ಧದಷ್ಟನ್ನಾದರೂ ರೈತನಿಗೆ ನೀಡಿದ್ದರೆ ಇವತ್ತಿಗೂ ಒಂದಿಷ್ಟು ಮಂದಿ ಯುವಕರು ಹೆಮ್ಮೆಯಿಂದ ನೊಗ ಹೊರುತ್ತಿದ್ದರು. ತಮ್ಮತೋಟ-ಹೊಲಗಳ ಮಣ್ಣು ಮುಟ್ಟಿ ಖುಷಿ ಅನುಭವಿಸುತ್ತಿದ್ದರು.
ಬ್ರೆಜಿಲ್ನ ಶಿಕ್ಷಣ ವ್ಯವಸ್ಥೆಯಲ್ಲಿ ಪ್ರಾಥಮಿಕ ಹಂತದಿಂದಲೇ ಮಕ್ಕಳಿಗೆ ಕೃಷಿಯ ಕುರಿತು ಪ್ರಾಯೋಗಿಕ ತರಗತಿಗಳಿರುತ್ತವೆ. ತರಗತಿಗಳು ಅಂದರೆ ನಮ್ಮ ದೇಶದಲ್ಲಿ ಆಗುವಂತೆ ಕರಿ ಹಲಗೆಯ ಮೇಲೆ ನೇಗಿಲ ಚಿತ್ರ ಬರೆದು ‘ಇದು ರೈತನ ಸಾಧನ’ ಎಂದುಗಿಳಿಪಾಠ ಹೇಳಿಕೊಡುವಂತಹ ಕ್ರಮ ಅಲ್ಲ ಅದು. ಅಲ್ಲಿ ಪ್ರತಿ ಮಗುವನ್ನೂ ಹೊಲಕ್ಕೆ ಕರೆದೊಯ್ದು, ಮಗು ಮಣ್ಣನಲ್ಲಿ ಕೆಲಸಮಾಡುವಂತೆ ಮಾಡಿ, ಮಗುವಿಗೆ ಮಣ್ಣಿನ ಜೊತೆ ಅವಿನಾಭಾವ ಸಂಬಂಧ ಬೆಳೆಯುವಂತೆ ಮಾಡಲಾಗುತ್ತದೆ.
ಪ್ರಾಥಮಿಕ ಹಂತದಿಂದ ಆರಂಭವಾಗುವ ಈ ಕ್ರಮ ಪ್ರೌಢ ಶಿಕ್ಷಣದ ವರೆಗೂ ಮುಂದುವರೆಯುತ್ತದೆ. ಮುಂದೆ ಆ ಮಗು ಯಾವುದೇಜ್ಞಾನ ಶಾಖೆಯನ್ನು ಅಧ್ಯಯನ ಮಾಡುವ ಆಸಕ್ತಿ ಬೆಳೆಸಿಕೊಂಡರೂ ಮಣ್ಣು ಮತ್ತು ಕೃಷಿಯ ಬಗ್ಗೆ ತಾತ್ಸಾರ ಅಥವಾತಿರಸ್ಕಾರವನ್ನಂತೂ ಬೆಳೆಸಿಕೊಳ್ಳುವುದಿಲ್ಲ. ‘ನಾನು ಎಂಜಿನಿಯರ್, ನಾನ್ಯಾಕೆ ಬಂದು ಹೊಲದಲ್ಲಿ ಕೆಲಸ ಮಾಡಲಿ?’ ಎಂಬಂಥಅಹಂಕಾರದ ಮಾತನ್ನೂ ಖಂಡಿತ ಆಡುವುದಿಲ್ಲ. ಭಾರತದ ಮಟ್ಟಿಗೆ ಶ್ರಮ ಸಂಸ್ಕೃತಿ ಬೇರೆ ಅಲ ಕೃಷಿ ಬದುಕು ಬೇರೆ ಅಲ. ಅಂಥಬದುಕಿಗೆ ಹೆಮ್ಮೆಯಿಂದ ಮರಳಲು ಬ್ರೆಜಿಲ್ ನಮಗೆ ಅತ್ಯುತ್ತ ಮಾದರಿಯಾಗಬಲ್ಲದು.
ಎಳೆ ವಯಸ್ಸಿನಿಂದಲೇ ಮಕ್ಕಳಲ್ಲಿ ಕೃಷಿಯ ಬಗ್ಗೆ ಕಿಂಚಿತ್ ಅಭಿಮಾನವನ್ನೂ ಮೂಡಿಸದೆ ಯುವಕರು ಕೃಷಿಯೆಡೆಗೆಆಕರ್ಷಿತರಾಗುತ್ತಾರೆ ಎಂದು ನಿರೀಕ್ಷಿಸುವುದೇ ಮೂರ್ಖತನವಾಗುತ್ತದೆ. ಅಂಥದ್ದೊಂದು ಶಿಕ್ಷಣ ಕ್ರಮ ನಮ್ಮಲ್ಲಿ ಜಾರಿಗೆಬರುವವರೆಗೆ ಆ ಪುಟಾಣಿ ಕೇಳಿದ ಪ್ರಶ್ನೆಗೆ ಭಾರತರತ್ನ ಅಬ್ದುಲ್ ಕಲಾಂ ಮಾತ್ರವಲ್ಲ ಭಾರತರತ್ನಕ್ಕಿಂತ ಮಿಗಿಲಾದ ಮಹಾತ್ಮಗಾಂಧಿ ಕೂಡ ಉತ್ತರ ನೀಡಲು ಸಾಧ್ಯವಿಲ್ಲ.
‘ - ವಿಜಯ್ ಜೋಷಿ.

ಕಾಮೆಂಟ್‌ಗಳು
ನಮ್ಮ ಶಿಕ್ಷಣ ವ್ಯವಸ್ತೆ ಮಕ್ಕಳನ್ನು ಮಣ್ಣಿನಿಂದ ದೂರ ಮಾಡುತ್ತಲಿದೆ. ಅದರಲ್ಲಿ ವ್ಯವಸಾಯದ ಬಗ್ಗೆ ಇನ್ನೂ ಹೆಚ್ಚಿನ ಅಳವಡಿಕೆ ಬೇಕಾಗಿದೆ. ಅದರ ಬಗ್ಗೆ ಆಸಕ್ತಿ ಹುಟ್ಟಿಸುವ ಕೆಲಸವೂ ಆಗಬೇಕಾಗಿದೆ. ಓದಿದವರು ಎಂದರೆ ಕೃಷಿ ಮಾಡುವುದು ಅವಮಾನ ಎನ್ನುವ ಮನೋಸ್ಥಿತಿ ಮೊದಲು ಹೋಗಬೇಕು.
ಜಾಗತಿಕರಣಬಾರದಿದ್ದರೆ ನಮ್ಮ ದೆಶದ ಯುವಕರು ಇನ್ನು ಸಗಣಿ ಬಾಚಬೆಕಗುತ್ತದೆ ಎoದು ನಮ್ಮ ರಾಜ್ಯದ ಮಹಾ ಕವಿಗಳೊಬ್ಬರು ಹಳೀಕೊoಡಿದ್ದರು ಅದರೆ ಈ ತರಹ ಹೆಳೀದವರ್ಯರು ಇಗ ಬದುಕುಳಿದಿಲ್ಲ ಇಗ ಜಾಗತಿಕರಣದಿನ್ದಗಿರುವ ದುಶ್ಪರಿಣಮ ದಡ್ಡಾದಗಿದೆ.ಮುನ್ದೆ ದೆಶದ ಯುವಕರು ಸಗಣಿ ಬಾಚುವುದರಿನ್ದಾ ಪರಿಸರಕ್ಕೆ ಹಾನಿಇಲ್ಲವೆoದು ವ್ಯವಸಾಯಾ ಮಡಲು ಮುoದೆ ಬರುತಾರೆ.ದನ ಲಕ್ಷ್ಮೀ ಇಗ ಪ್ರಪoಚದಲ್ಲಿ ಚನ್ನಗಿ ಇದ್ದಾಳೆ,ಮುನ್ದೊoನ್ದು ದಿನ ದನ ಲಕ್ಷ್ಮೀ ಇದ್ದರು ದಾನ್ಯ ಲಕ್ಷ್ಮೀ ಕಟಾಕ್ಶ ಇರುವುದಿಲ್ಲ ಹಾಗಾಗಿ ವ್ಯಯಸಯ ಪ್ರೋತ್ಸಾಹಿಸಿ ದಾನ್ಯ ಲಕ್ಷ್ಮೀ ಕೃಪೆಗೆ ಪಾತ್ರರಗಿ.
ಗಾಂಧಿಯವರ ಆಭಿವೃಧ್ಧಿಯ ಕಲ್ಪನೆ ಈಗಿನ materialistic ಅಭಿವೃದ್ಧಿಯೆಡೆಯಾಗಿರಲಿಲ್ಲ. ಅವರ ಗ್ರಾಮ ಸ್ವರಾಜ್ಯದ ಕಲ್ಪನೆಯೇ ಬೇರೆಯಾಗಿತ್ತು.