ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಏಪ್ರಿಲ್, 2011 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ದೇಶಪ್ರೇಮ ಅನ್ನುವುದು ಪಾಕಿಸ್ತಾನ ವಿರುದ್ಧ ಕ್ರಿಕೆಟ್ ಪಂದ್ಯಕ್ಕೆ ಮಾತ್ರ ಸೀಮಿತವಾ?

ಮೊಹಾಲಿಯಲ್ಲಿ ಭಾರತ ಪಾಕಿಸ್ತಾನದ ವಿರುದ್ಧ ಗೆಲುವು ಸಾಧಿಸಿದ್ದು ಕ್ರಿಕೆಟ್ ಆಟದಲ್ಲಾ? ಅಥವಾ ಯುದ್ಧದಲ್ಲಾ? ಮೊಹಾಲಿಯಲ್ಲಿ ನಡೆದ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನದ ಎದುರು ಭಾರತ ತಂಡ ಪಂದ್ಯ ಗೆದ್ದ ನಂತರ ಕ್ರಿಕೆಟ್ ಪ್ರೇಮಿಗಳು ಬೆಂಗಳೂರಿನ ಎಂ.ಜಿ. ರಸ್ತೆಯಲ್ಲಿ ಸಂಭ್ರಮಿಸಿದ ಪರಿ ನೋಡಿದರೆ, ಭಾರತ ಗೆಲುವು ಸಾಧಿಸಿದ್ದು ಕ್ರಿಕೆಟ್ ಪಂದ್ಯವೊಂದರಲ್ಲಿ ಅಲ್ಲ; ಅದಕ್ಕಿಂತಲೂ ಮಿಗಿಲಾದ ಸ್ಪರ್ಧೆಯೊಂದರಲ್ಲಿ ಎಂಬ ಭಾವನೆ ಮೂಡುತ್ತಿತ್ತು. ‘ಯುವಜನತೆಯಲ್ಲಿ ದೇಶದ ಬಗ್ಗೆ ಗೌರವ ಇಲ್ಲ, ದೇಶಭಕ್ತಿಯೇ ಇಲ್ಲ’ ಎಂಬಂತಹ ಗೊಣಗಾಟಗಳಿಗೆ ಉತ್ತರ ಎಂಬಂತಿತ್ತು ಅಂದಿನ ಸಂಭ್ರಮಾಚರಣೆ. ಹಾಗಾದರೆ ಯುವಕರ ದೇಶಪ್ರೇಮ ಎಂದರೆ ಪಾಕಿಸ್ತಾನದ ವಿರುದ್ಧ ಕ್ರಿಕೆಟ್ ಪಂದ್ಯದಲ್ಲಿ ಗೆಲುವು ಸಾಧಿಸಿದಾಗ ಮಾತ್ರ ಉಕ್ಕಿಬರುವಂಥದ್ದಾ? ಬೇರೆ ದೇಶಗಳ ವಿರುದ್ಧ ಭಾರತ ಜಯಗಳಿಸಿದಾಗ ಈ ಪರಿಯ ಖುಷಿ ಏಕಿರುವುದಿಲ್ಲ? ವಿಶ್ವದ ಶ್ರೇಷ್ಠ ಕ್ರಿಕೆಟ್ ತಂಡಗಳಾದ ದಕ್ಷಿಣ ಆಫ್ರಿಕಾ, ಆಸ್ಟ್ರೇಲಿಯಾ ವಿರುದ್ಧದ ಪಂದ್ಯಗಳಲ್ಲಿ ಭಾರತ ಗೆದ್ದಾಗ ಈ ಪರಿಯ ದೇಶಪ್ರೇಮ ಎಲ್ಲಿ ಅಡಗಿರುತ್ತದೆ? ಸಚಿನ್ ತೆಂಡೂಲ್ಕರ್ ಪಾಕಿಸ್ತಾನದ ವಿರುದ್ಧದ ಪಂದ್ಯದಲ್ಲಿ ೮೫ ರನ್ ಸಿಡಿಸಿದಾಗ ನಮ್ಮಲ್ಲಿ ಉಕ್ಕಿ ಬರುವ ಭಾವನೆಗಳು ಅದೇ ‘ಕ್ರಿಕೆಟ್ ದೇವತೆ’ ಇಂಗ್ಲೆಂಡ್ ವಿರುದ್ಧ ಶತಕ ಸಿಡಿಸಿದಾಗ ಏಕೆ ಸ್ಫುರಿಸುವುದಿಲ್ಲ? ಎಂಬ ಪ್ರಶ್ನೆಗಳೂ ಹಿರಿಯರಿಂದ ಸಹಜವಾಗಿಯೇ ಬಂದವು. ನಿಜ, ಪಾಕಿಸ್ತಾನದ ವಿರು...

ಆ ಪ್ರಶ್ನೆಗೆ ಮಹಾತ್ಮ ಗಾಂಧೀಜಿಯೂ ಉತ್ತರ ನೀಡಲಾರರು...

‘ ನೀವು ಭೇಟಿ ಮಾಡುವ ಪುಟಾಣಿಗಳನ್ನೆಲ್ಲಾ ವಿಜ್ಞಾನಿ , ಎಂಜಿನಿಯರ್ , ಡಾಕ್ಟರ್ ಆಗು ಎಂದು ಹುರಿದುಂಬಿಸುತ್ತೀರಿ . ಆದರೆ ನೀವು ಯಾರನ್ನೂ ರೈತನಾಗು ಎಂದು ಪ್ರೋತ್ಸಾಹಿಸುವುದಿಲ್ಲ . ಯಾಕೆ ಕಲಾಂ ?’ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಭಾರತರತ್ನ ಅಬ್ದುಲ್ ಕಲಾಂಗೆ ಶಾಲಾ ವಿದ್ಯಾರ್ಥಿಯೊಬ್ಬ ಈ ಪ್ರಶ್ನೆ ಕೇಳಿದಾಗ ಒಮ್ಮೆ ಅವರ ಬಾಯಿ ತಡವರಿಸಿರಬಹುದು . ಆದರೆ ಅವರಿಗೆ ಆ ಪ್ರಶ್ನೆಗೆ ಉತ್ತರ ಥಟ್ಟನೆ ಹೊಳೆದಿರಲಿಕ್ಕಿಲ್ಲ . ಕಾಲಚಕ್ರದ ಮೇಲೆ ಕುಳಿತು ಒಮ್ಮೆ ಹಿಮ್ಮುಖವಾಗಿ ಚಲಿಸೋಣ . ‘ ಅಂವ ತನ್ನ ತೋಟವನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲವಂತೆ . ಅವನ ಅಪ್ಪ ಅದೆಷ್ಟು ಕಷ್ಟಪಟ್ಟು ಆ ತೋಟವನ್ನು ಬೆಳೆಸಿದರು . ಅವನಿಗಾಗಿ ಬಿಟ್ಟುಹೋದರು . ಈ ಸೋಂಬೇರಿ ಪಿತ್ರಾರ್ಜಿತ ತೋಟವನ್ನು ಹಾಳುಮಾಡಿಕೊಳ್ಳುತ್ತಿದ್ದಾನೆ .’ ನಾವಿನ್ನೂ ಚಿಕ್ಕವರಾಗಿದ್ದಾಗ ನಮ್ಮ ಊರಿನಲ್ಲಿ ಈ ರೀತಿಯ ಮಾತುಗಳು ಊರಿನ ಹಿರಿಯರ ಬಾಯಲ್ಲಿ ಆಗಾಗ ಕೇಳಿಬರುತ್ತಲೇ ಇದ್ದವು . ‘ ಬೇಜವಾಬ್ದಾರಿ ’ ವ್ಯಕ್ತಿ ತನ್ನ ಕುಟುಂಬವನ್ನು ಸರಿಯಾಗಿ ನೋಡಿಕೊಳ್ಳದಿದ್ದರೂ ಆದೀತು , ಆದರೆ ಆತ ತನ್ನ ತೋಟವನ್ನೋ ಅಥವಾ ಹೊಲವನ್ನೋ ಚೆನ್ನಾಗಿ ನೋಡಿಕೊಂಡಿರದಿದ್ದರೆ ಊರವರ ಬಾಯಲ್ಲಿ ನಗೆಪಾಟಲಿಗೆ ಈಡಾಗುತ್ತಿದ್ದ . ಕೃಷಿ ಮತ್ತು ರೈತಾಪಿಯ ಬಗ್ಗೆ ವ್ಯಕ್ತಿಯೊಬ್ಬ ತೋರಿಸುತ್ತಿದ್ದ ಶ್ರದ್ಧೆಯ ಆಧಾರದ ಮೇ...