ವಿಷಯಕ್ಕೆ ಹೋಗಿ

ಇತಿಹಾಸದ ಬಗ್ಗೆ ನಮ್ಮ ಹರಟೆ

ಮೊನ್ನೆ ವೈಯುಕ್ತಿಕ ಕಾರಣಕ್ಕಾಗಿ ಉತ್ತರ ಕನ್ನಡ ಜಿಲ್ಲೆಯ ಶಿರಸಿಗೆ ಹೋಗಿದ್ದೆ. ಹಲವಾರು ಐತಿಹಾಸಿಕ ಸ್ಥಳಗಳನ್ನು ತನ್ನ ಒಡಲೊಳಗೆ ಹುದುಗಿಸಿಕೊಂಡಿರುವ ಊರು ಶಿರಸಿ. ಕದಂಬರಾಳಿದ ಇತಿಹಾಸ ಪ್ರಸಿದ್ಧ ಬನವಾಸಿ, ಅರಸಪ್ಪ ನಾಯಕನ ಸೋದೆ (ಅಥವಾ ಸೋಂದಾ)ಯಂತಹ ಐತಿಹಾಸಿಕ ಪ್ರದೇಶಗಳಿರುವುದು ಶಿರಸಿ ತಾಲೂಕಿನಲ್ಲಿ. ಪಶ್ಚಿಮ ಘಟ್ಟಗಳ ಬೆಟ್ಟವೊಂದರ 'ಶಿರ' ಭಾಗದಲ್ಲಿ ಈ ಪಟ್ಟಣ ಬೆಳೆದಿರುವುದರಿಂದಲೇ ಇದಕ್ಕೆ 'ಶಿರಸಿ' ಎಂಬ ಹೆಸರು ಬಂತು.

ಹಾಗೆ ಶಿರಸಿ ತಾಲೂಕಿನ ಸೋಂದಾ ಗ್ರಾಮಕ್ಕೆ ಹೋಗಿದ್ದಾಗ ಧಾರವಾಡ ವಿಶ್ವವಿದ್ಯಾಲಯದಲ್ಲಿ ಪುರಾತತ್ವ ಶಾಸ್ತ್ರದಲ್ಲಿ ಸ್ನಾತಕೋತ್ತರ ವ್ಯಾಸಂಗ ಮಾಡಿ ಈಗ ಕಾಲೇಜೊಂದರಲ್ಲಿ ಪ್ರಾಧ್ಯಾಪಕರಾಗಿರುವ ನನ್ನ ಯುವ ಮಿತ್ರರೊಬ್ಬರನ್ನು ಭೇಟಿಯಾಗುವ ಅವಕಾಶವೂ ಸಿಕ್ಕಿತ್ತು. ಹಾಗೇ ಅವರ ಜೊತೆ ಅದು-ಇದು ಅಂತ ಮಾತನಾಡುತ್ತಿದ್ದಾಗ ನಮ್ಮ ಮಾತುಕತೆ ನಿಧಾನವಾಗಿ ಇತಿಹಾಸವನ್ನು ಶಾಸ್ತ್ರೀಯವಾಗಿ ಓದುವುದರ ಅಗತ್ಯತೆಯ ಬಗ್ಗೆ ಹೊರಳಿತು.

ಪ್ರಾಥಮಿಕ ಶಾಲೆಗಳ ಇತಿಹಾಸ ಪಠ್ಯಪುಸ್ತಕಗಳು, ಅವುಗಳಲ್ಲಿ ಬರುವ ಯುದ್ಧ ವಿವರಣೆಗಳು, ರಾಜರ ಜೀವನ ವಿಧಾನಗಳ ಬಗ್ಗೆಯೂ ನಾವು ಮಾತನಾಡಿದೆವು. ಇತಿಹಾಸವನ್ನು ಓದಲು ಇವತ್ತಿನ ಯುವ ಸಮುದಾಯ ತೋರಿಸುತ್ತಿರುವ ನಿರಾಸಕ್ತಿಯ ಬಗ್ಗೆ ನಮ್ಮಲ್ಲಿ ನಡೆದ ಮಾತುಕತೆಯ ಸಾರವನ್ನು ನಿಮಗೂ ಉಪಯೋಗವಾಗಬಹುದು ಎಂಬ ಕಾರಣದಿಂದ ಇಲ್ಲಿ ಬರೆದಿದ್ದೇನೆ. ಈ ಬರಹದಲ್ಲಿ 'ಇತಿಹಾಸ ಪಠ್ಯಪುಸ್ತಕಗಳು' ಎಂಬ ಮಾತು ಬಂದಲ್ಲೆಲ್ಲಾ ಓದುಗರು ಅದನ್ನು 'ಶಾಲೆಗಳಲ್ಲಿ ಬಳಸುವ ಇತಿಹಾಸದ ಪಠ್ಯಪುಸ್ತಕಗಳು' ಎಂದು ತಿಳಿಯಬೇಕಾಗಿ ವಿನಂತಿ.
____________________________________________________________________

"ನಾನೊಬ್ಬ ಸಾಮಾನ್ಯ ವಿದ್ಯಾರ್ಥಿ. ಇತಿಹಾಸದ ಬಗ್ಗೆ ಸ್ಥೂಲವಾದ ತಿಳುವಳಿಕೆ ನನಗಿದ್ದರೆ ಸಾಕು ಎಂಬುದು ನನ್ನ ಅಭಿಪ್ರಾಯ. ಅದರಲ್ಲೂ ನಾನು ಕನಸಿನಲ್ಲೂ ಕಂಡಿರದ (ಆದರೆ ಬೇರೆಯವರ ಬಾಯಿಯಲ್ಲಿ ಕೇಳಿರುವ) ಜಗತ್ತಿನ ಯಾವುದೋ ಮೂಲೆಯೊಂದರ ಇತಿಹಾಸವನ್ನು ಓದಬೇಕಾದ ಅಗತ್ಯತೆ ನನಗೇನಿದೆ. ಯುರೋಪು, ಅಮೆರಿಕಾ, ಆಫ್ರಿಕಾದಂತಹ ನಮ್ಮ ಭಾರತೀಯ ಸಮಾಜಕ್ಕಿಂತ ತುಂಬ ಭಿನ್ನ ಸಮಾಜವನ್ನು ಹೊಂದಿರುವ ಪ್ರದೇಶಗಳ ಇತಿಹಾಸವನ್ನು ಓದಿ ನಾನೇನು ಮಾಡಬೇಕಿದೆ? ಹಿಂದೆ ಯಾವುದೋ ಕಾಲದಲ್ಲಿ ಯಾರ್ಯಾರದೋ ನಡುವೆ ನಡೆದ ಯುದ್ಧಗಳು, ಅವುಗಳಲ್ಲಿ ಎಷ್ಟು ಮಂದಿ ಕಾದಾಡಿದರು, ಎಷ್ಟು ಮಂದಿ ಮಡಿದರು, ಎಷ್ಟು ಮಂದಿ ವಿಧವೆಯರಾದರು, ಎಷ್ಟು ಮಂದಿ ಮಹಿಳೆಯರ ಮೇಲೆ ಅತ್ಯಾಚಾರಗಳು ನಡೆದವು ಎನ್ನುವುದನ್ನೆಲ್ಲಾ ತಿಳಿದುಕೊಂಡು ನಾನೇನು ಮಾಡಬೇಕು? ವರ್ತಮಾನದಲ್ಲಿ ಬದುಕುತ್ತಿರುವ ನನಗೆ ಭೂತ ಕಾಲಕ್ಕೆ ಹೋಗಿ ಹಿಂದೆ ನಡೆದ ಅನ್ಯಾಯಗಳ ಬಗ್ಗೆ ಏನಾದರೂ ಮಾಡಲು ಸಾಧ್ಯವೇ? ಭೂತಕಾಲದಲ್ಲಿ ಅನ್ಯಾಯವೆಸಗಿ ಈಗ ಅಸ್ತಿತ್ವದಲ್ಲೇ ಇಲ್ಲದ ವ್ಯಕ್ತಿಗಳನ್ನು ನಾವು ಶಿಕ್ಷಿಸಲು ಸಾಧ್ಯವೇ? ಅಥವಾ ಆಗ ಅನ್ಯಾಯಕ್ಕೊಳಗಾದವರಿಗೆ ಈಗ (ಇವತ್ತು ಅವರು ಬದುಕಿಲ್ಲ) ನ್ಯಾಯ ಒದಗಿಸಲು ಸಾಧ್ಯವೇ? ಇಲ್ಲ, ಸಾಧ್ಯವಿಲ್ಲ. ಹಾಗಿರುವಾಗ ರಾಜ ಮಹಾರಾಜರ ಇತಿಹಾಸ, ಅವರು ನಡೆಸಿದ ಯುದ್ಧಗಳ ಇತಿಹಾಸ ಓದಿಕೊಂಡು ನಮಗೇನಾಗಬೇಕಿದೆ?" ಎನ್ನುವ ಮನೋಭಾವ ಇವತ್ತಿನ ಸಾಕಷ್ಟು ಯುವಕರಲ್ಲಿ, ವಿದ್ಯಾರ್ಥಿಗಳಲ್ಲಿ ಇದೆ.

ಆ ರೀತಿಯ ಮನೋಭಾವ ಅವರಲ್ಲಿ ಬೆಳೆಯುವಲ್ಲಿ ಸಾಕಷ್ಟು ಕಾರಣವೂ ಇದೆ.
ನಮ್ಮ ಶಾಲಾ ಇತಿಹಾಸದ ಪಠ್ಯಪುಸ್ತಕಗಳನ್ನೊಮ್ಮೆ ನೋಡಿ. ಅವುಗಳಲ್ಲಿ ಹಲವಾರು ವಿಚಾರಗಳು ಸಿದ್ಧಾಂತ-ಪಂಥದ ಆಧಾರದಲ್ಲಿ ತಿರುಚಲ್ಪಟ್ಟಿವೆ, ಅವು ಕೇವಲ ಅರ್ಧಸತ್ಯಗಳು ಎಂಬ ಆಪಾದನೆಗಳನ್ನು ಒಮ್ಮೆ ಬದಿಗಿಡಿ. ಆದರೆ ನಮ್ಮ ಇತಿಹಾಸಗಳು ಕೇವಲ ರಾಜ-ಮಹಾರಾಜರ ಇತಿಹಾಸಗಳೇ ಹೊರತು ಜನಸಾಮಾನ್ಯರ ಇತಿಹಾಸವಲ್ಲ ಎಂಬ ಗಂಭೀರ ಆರೋಪ ಇವತ್ತಿನ ನಮ್ಮ ಇತಿಹಾಸ ಪುಸ್ತಕಗಳ ಮೇಲಿದೆ.

ನಿಜ, ನಮ್ಮ ಇತಿಹಾಸ ಜನಸಾಮಾನ್ಯರ ಅಂದಿನ ಬದುಕನ್ನು ಪರಿಣಾಮಕಾರಿಯಾಗಿ ಚಿತ್ರಿಸುವುದಿಲ್ಲ. ಅಂದಿನ ರಾಜರುಗಳು ಎಷ್ಟು ದೇವಸ್ಥಾನ ಕಟ್ಟಿಸಿದರು, ಎಷ್ಟು ದೇವಸ್ಥಾನ ಒಡೆದರು ಎಂಬ ಬಗ್ಗೆ ವಿವರ ನೀಡುವ ನಮ್ಮ ಇತಿಹಾಸ ಪುಸ್ತಕಗಳು ಹಾಗೆ ಕಟ್ಟಲ್ಪಟ್ಟ ಅಥವಾ ಕೆಡವಲ್ಪಟ್ಟ ದೇವಸ್ಥಾನಗಳಿಂದ ನಮ್ಮ ಜನಸಾಮಾನ್ಯನಿಗೆ ಯಾವ ರೀತಿಯಲ್ಲಿ ಉಪಕಾರವಾಯಿತು, ಅವನ ಜೀವನ ಸುಧಾರಣೆಯಲ್ಲಿ ದೇವಸ್ಥಾನ ಕಟ್ಟುವ ಕೆಲಸಗಳು ಯಾವ ರೀತಿಯ ಪರಿಣಾಮ ಬೀರಿದವು ಎಂಬ ಬಗ್ಗೆ ಸಮಾಧಾನಕರ ವಿವರಣೆ ನೀಡುವುದಿಲ್ಲ.

ಈ ಮಾತು ಕೇವಲ ದೇವಸ್ಥಾನ, ಮಸೀದಿಗಳಂತಹ ಧಾರ್ಮಿಕ ವಿಚಾರಗಳ ಬಗ್ಗೆ ಮಾತ್ರ ಸೀಮಿತವಲ್ಲ. ಹಿಂದೆ ನಡೆದ ಯುದ್ಧಗಳ ಬಗ್ಗೆಯೂ ಈ ಮಾತು ಅನ್ವಯವಾಗುತ್ತದೆ. ಹಿಂದೆ ನಡೆದ ಯುದ್ಧಗಳಲ್ಲಿ ಎಷ್ಟು ಮಂದಿ ಮಡಿದರು, ಯಾವ ರಾಜ ಸೋತ, ಯಾವ ರಾಜ ಗೆದ್ದ ಎಂಬ ವಿಚಾರಗಳ ಬಗ್ಗೆ ನಮ್ಮ ಇತಿಹಾಸದಲ್ಲಿ ಸಾಕಷ್ಟು ವಿವರಣೆಗಳು ಸಿಗುತ್ತವೆ. ಆದರೆ ಅಂತಹ ಯುದ್ಧಗಳಿಂದ ಅವತ್ತಿನ ಆರ್ಥಿಕ ಪರಿಸ್ಥಿತಿಯ ಮೇಲೆ ಯಾವ ಪರಿಣಾಮ ಉಂಟಾಯಿತು, ಆಗ ನಡೆದ ಸಾಮಾಜಿಕ ಪಲ್ಲಟಗಳೇನು, ರಾಜಕೀಯ ಮತ್ತು ಆಡಳಿತಾತ್ಮಕ ಸ್ಥಿತ್ಯಂತರಗಳೇನು ಎಂಬಿತ್ಯಾದಿ ವಿಚಾರಗಳ ಬಗ್ಗೆ ನಮ್ಮ ಇತಿಹಾಸ ಪುಸ್ತಕಗಳು - ಸಾಮಾನ್ಯವಾಗಿ - ಮಾತನಾಡುವುದೇ ಇಲ್ಲ. ಆದರೆ ಯುದ್ಧ ನಡೆದ ಇಸವಿ, ನಡೆದ ಜಾಗಗಳ ಬಗ್ಗೆ ಕರಾರುವಾಕ್ ಮಾಹಿತಿಯನ್ನು ನೀಡುತ್ತವೆ.

ಯುದ್ಧಗಳ ಬಗ್ಗೆ ಸಾಕಷ್ಟು ಮಾಹಿತಿಯನ್ನು ನೀಡಿದ ನಂತರ ನಮ್ಮ ಇತಿಹಾಸ ಪುಸ್ತಕಗಳು ಅವತ್ತಿನ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ಬಗ್ಗೆಯೂ ಸ್ವಲ್ಪ ವಿವರಣೆ ನೀಡುತ್ತವೆ. ಆದರೆ ಆ ವಿವರಣೆಗಳು ಇಂಥ ರಾಜ ಕಲೆ, ಸಾಹಿತ್ಯ, ಸಂಸ್ಕೃತಿಗೆ ಉದಾರ ನೆರವು ನೀಡಿದನು. ಅವನ ಆಳ್ವಿಕೆಯಲ್ಲಿ ರಾಜ್ಯವು ಕಲೆ, ಸಾಹಿತ್ಯ, ಸಂಸ್ಕೃತಿಯಲ್ಲಿ ಸುವರ್ಣಯುಗವನ್ನು ಕಂಡಿತು ಎಂಬ ವಿಚಾರಕ್ಕಷ್ಟೇ ಸೀಮಿತವಾಗುತ್ತವೆ. ಬದಲಿಗೆ, ಅವತ್ತಿನ ಸಂದರ್ಭದಲ್ಲಿ ಸಾಹಿತ್ಯ ಹುಟ್ಟಲು ಪೂರ್ಕವಾಗಬಲ್ಲ ಸಾಮಾಜಿಕ ಪರಿಸ್ಥಿತಿ ಹೇಗಿತ್ತು, ಸಾಹಿತ್ಯದೆಡೆಗೆ ಜನರ ಪ್ರತಿಕ್ರಿಯೆ ಹೇಗಿತ್ತು ಎಂಬಿ ವಿಚಾರಗಳ ಬಗ್ಗೆ ನಮ್ಮ ಇತಿಹಾಸ ಪಠ್ಯ ಪುಸ್ತಕಗಳಲ್ಲಿ ವಿವರಣೆ ಕಡಿಮೆ.

ಇಂತಹ ಸಂಗತಿಗಳಿಂದಾಗಿಯೇ ನಮ್ಮ ಇತಿಹಾಸ ಪಠ್ಯಪುಸ್ತಕಗಳು ರಾಜಮಹಾರಾಜರ ಬದುಕನ್ನು ಹೇಳುತ್ತವೆ ಮತ್ತು ಅವನ್ನೇ ವೈಭವೀಕರಿಸುತ್ತವೆಯೇ ಹೊರತು ಜನಸಾಮಾನ್ಯರ ಬದುಕಿನ ಬಗ್ಗೆ ವಿವರಿಸುವ ಗೋಜಿಗೆ ಹೋಗುವುದಿಲ್ಲ.

ನಮ್ಮ ಮಕ್ಕಳಲ್ಲಿ ಇತಿಹಾಸದ ಅಧ್ಯಯನದ ಬಗ್ಗೆ ನಿರಾಸಕ್ತಿ ಮೂಡಲು ಇದೂ ಒಂದು ಕಾರಣ. ಹೇಗಿದ್ದರೂ ಇತಿಹಾಸ ಓದುವುದರಿಂದ ಒಂದಷ್ಟು ಯುದ್ಧಗಳ ಬಗ್ಗೆ ತಿಳಿಯುತ್ತದೆ, ಅವು ಯಾವಾಗ ನಡೆಯಿತು, ಎಲ್ಲಿ ನಡೆಯಿತು, ಆಗ ಎಷ್ಟು ಮಂದಿ ನಡೆದರು ಎಂಬ ಬಗ್ಗೆ ತಿಳಿಯುತ್ತದೆಯೇ ಹೊರತು ಅವುಗಳಿಂದ ನಮ್ಮ ಇಂದಿನ ಬದುಕಿಗೇನೂ ಉಪಯೋಗವಿಲ್ಲ ಎಂಬ ಭಾವ ವಿದ್ಯಾರ್ಥಿಗಳಲ್ಲಿ ಮೂಡುತ್ತದೆ. ಎಳೆ ವಯಸ್ಸಿನಲ್ಲಿಯೇ ಇತಿಹಾಸ ಅಧ್ಯಯನದ ಬಗ್ಗೆ ನಿರಾಸಕ್ತಿ ಮೂಡಿದರೆ ಮುಂದೆ ಅದರಲ್ಲಿ ಆಸಕ್ತಿ ಬರುವುದು ದುಸ್ಸಾಧ್ಯದ ಮಾತು.

ಬರೀ ಮಹಾರಾಜರ ಜೀವನವನ್ನು, ಅವರ ಆದೇಶಗಳನ್ನು ಬರೆಯುವುದರ ಬದಲು ಹಿಂದಿನ ಜನನೀವನ ಹೇಗಿತ್ತು, ಅವರು ದುರಿಸಿದ ಸವಾಲುಗಳು ಹೇಗಿದ್ದವು, ಅವರು ಆರ್ಥಿಕ ಮುಗ್ಗಟ್ಟುಗಳು ಎದುರಾದಾಗ ಹೇಗೆ ಅದರಿಂದ ಹೊರಬರುತ್ತಿದ್ದರು ಎಂಬ ವಿಚಾರಗಳ ಬಗ್ಗೆಯೂ ನಮ್ಮ ಇತಿಹಾಸ ವಿವರಣೆ ನೀಡಬೇಕು. ಅವತ್ತಿನ ಸಮಾಜದಲ್ಲಿ ಇದ್ದ ಮೂಢನಂಬಿಕೆಗಳ ಹುಟ್ಟಿಗೆ ಕಾರಣಗಳೇನು, ಅದರಿಂದಾದ ಸಾಮಾಜಿಕ ವಿಪ್ಲವಗಳು ಯಾವವು ಎಂಬ ಬಗ್ಗೆಯೂ ಮಾಹಿತಿ ಸಿಕ್ಕರೆ ಚೆನ್ನ. ಅಂದು ನಮ್ಮ ಧರ್ಮ ಹೇಗಿತ್ತು, ಧರ್ಮ-ಧರ್ಮಗಳ ನಡುವೆ ಆಗ ಸಂಘರ್ಷಗಳೇರ್ಪಟ್ಟಾಗ ವಿವೇಕಿಗಳು ಯಾವ gರಿತಿ ಪ್ರತಿಕ್ರಿಯಿಸುತ್ತಿದ್ದರು, ಅವತ್ತಿನ ನ್ಯಾಯ ತೀರ್ಮಾನ ಪದ್ಧತಿ ಹೇಗಿತ್ತು ಎಂಬುದನ್ನು ಇತಿಹಾಸ ಪುಸ್ತಕಗಳು ತಿಳಿಸಬೇಕು.

ತನ್ನ ಇತಿಹಾಸವನ್ನು ಸರಿಯಾಗಿ ಅರಿಯದ ಸಮಾಜಕ್ಕೆ ಭವಿಷ್ಯವೇ ಇಲ್ಲ ಎಂದು ಒಂದು ಮಾತಿದೆ. ಈ ಮಾತನ್ನು ಒಪ್ಪುವುದಾದರೆ ಇತಿಹಾಸದ ಅಧ್ಯಯನಕ್ಕೆ ನಿರಾಸಕ್ತಿ ತೋರಿಸುತ್ತಿರುವ ಭಾರತೀಯ ಸಮಾಜ ಕೂಡ ಆಪತ್ತಿನಲ್ಲಿದೆ ಎನ್ನುವುದನ್ನೂ ಒಪ್ಪಬೇಕಾಗುತ್ತದೆ. ಭಾರತೀಯ ಸಮಾಜ ತನ್ನ ಪರಂಪರೆ, ಸಂಸ್ಕೃತಿ, ಸಾಹಿತ್ಯ, ಧರ್ಮ, ರಾಜನೀತಿ ಮುಂತಾದವುಗಳ ಇತಿಹಾಸವನ್ನು ಸರಿಯಾಗಿ ಅರಿಯದೆ ಎತ್ತ ಸಾಗಬಹುದು ಎಂಬುದನ್ನು ಆಲೋಚಿಸಿದರೂ ಆತಂಕವಾಗುತ್ತದೆ.

ನಮ್ಮ ಇತಿಹಾಸ ಪಠ್ಯಪುಸ್ತಕಗಳನ್ನು ಮತ್ತಷ್ಟು ಆಸಕ್ತಿದಾಯಕವಾಗಿ ಮಾಡಿ, ಮಕ್ಕಳಲ್ಲಿ ಅದರ ಅಧ್ಯಯನದ ಬಗ್ಗೆ ಕುತೂಹಲ ಹುಟ್ಟುವಂತೆ ಮಾಡಬೇಕಾಗಿರುವುದು ನಾಡಿನ ಪ್ರಜ್ಞಾವಂತರ ಸದ್ಯದ ಜವಾಬ್ದಾರಿಯೂ ಹೌದು. ನೀವೇನಂತೀರಿ?

ಕಾಮೆಂಟ್‌ಗಳು

Harisha - ಹರೀಶ ಹೇಳಿದ್ದಾರೆ…
ಹೌದು.. ನನಗೂ ಇತಿಹಾಸ ಅಂದ್ರೆ ಬೋರಿಂಗ್ ಸಬ್ಜೆಕ್ಟ್ ಅಂತ ಅನ್ಸ್ತಾ ಇತ್ತು.. ಇದನ್ನು ಪರಿಷ್ಕರಿಸುವ ಅಗತ್ಯ ಖಂಡಿತ ಇದೆ.
vishalmkamath ಹೇಳಿದ್ದಾರೆ…
ya, what ever u said is true but u need to mention about why it is not interesting may be because people think they don't use it in their life as they use the science in their daily life.secondary the education department has not utilised the platform for giving a idea to the people about causes of homicide,war etc
Shree ಹೇಳಿದ್ದಾರೆ…
hai......
becoz f exams coudnt visit your blog these days,-sorry:)

schhol level nalli maklige ithihaasa odovaga ast chik chik chapter ne thumbaa kashta pattu odthare innu vistharavaagi kotre fail agodu guarentee:) history idre olledu adre necissaty alla ansutte alwa?
ಅನಾಮಧೇಯಹೇಳಿದ್ದಾರೆ…
i vote for u...history in text books should be made more interesting...students need to study it not coz of exam fear or by force but vid d genuine interest to know d past...

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...

Get up Indians, hang him!

Do you think that whatever the Indian government and its ministers do are according to the secular principle? If your answer is ‘YES’, then you need not read this article! You might be well aware of the case of S.S.Sandhu, Superintendent of Police, Taran Taaran, who himself protected the people of Panjab from the brutal hands of terrorists in the 80s decade. He and his fellowmen had conducted many military operations against Sikh terrorists throughout Panjab and had strived hard to restore normalcy in the Panjab state. Later the National Human Right Commission of India filed many cases against him for he had, allegedly, violated the ‘human rights’ of terrorists! At that time no secularists, no human rights activists were present to advocate on behalf of Sandhu. Later Sandhu surrendered to death as he was unable to prove that he had not violated the ‘human rights’ of terrorists! It is strange but true that many a times Indian ‘secularists’ and ‘human right’ activists advocate on behalf ...