ವಿಷಯಕ್ಕೆ ಹೋಗಿ

ಹೀಗೊಂದು ಅನುಭವ

ಕಳೆದ ವರ್ಷದ ಜುಲೈ ತಿಂಗಳಿನಲ್ಲಿ ಒಂದು ದಿನ ಕಾಲೇಜು ಬಿಟ್ಟ ನಂತರ ನಮ್ಮ ಪತ್ರಿಕೋದ್ಯಮ ವಿಭಾಗದ ಮುಖ್ಯಸ್ಥರ ಬಳಿ ಹೋಗಿದ್ದೆ. ಅದೇ ತಾನೆ ಬರೆದು ಮುಗಿಸಿದ್ದ ಎರಡು ಅಸೈನ್‌ಮೆಂಟುಗಳನ್ನು ಅವರಿಗೆ ತೋರಿಸಬೇಕಾಗಿತ್ತು.
ಅಸೈನ್‌ಮೆಂಟುಗಳನ್ನು ಅವರ ಟೇಬಲ್ಲಿನ ಮೇಲಿಟ್ಟು ವಾಪಸ್ ಬರಬೇಕು ಅನ್ನುವಷ್ಟರಲ್ಲಿ ವಿಭಾಗ ಮುಖ್ಯಸ್ಥರು ನನ್ನನ್ನು ಕರೆದು "ಬೆಂಗಳೂರಿನಿಂದ ಗರ್ವ ಪತ್ರಿಕೆಯ ಪತ್ರಕರ್ತರೊಬ್ಬರು ಇನ್ನೊಂದು ಸ್ವಲ್ಪ ಹೊತ್ತಿನಲ್ಲಿ ಇಲ್ಲಿಗೆ ಬರಲಿಕ್ಕಿದ್ದಾರೆ. ಅವರನ್ನು ಭೇಟಿ ಮಾಡಬೇಕು ಎನ್ನುವಂತಿದ್ದರೆ ಸ್ವಲ್ಪ ಸಮಯ ನಿಲ್ಲಿ. ಅವರ ಜೊತೆ ಮಾತನಾಡಿ ಹೋಗೋಣ" ಎಂದರು. ನಾನು ಆಗ ಗರ್ವ ಪತ್ರಿಕೆಯನ್ನು ಒಂದೂ ಬಿಡದೆ ಓದುತ್ತಿದ್ದೆ. ಹಾಗಾಗಿ ನಿಂತು ಅವರ ಜೊತೆ ಮಾತನಾಡಿ ಹೋಗುವ ಮನಸ್ಸಾಯಿತು.
ಐದೇ ನಿಮಿಷದಲ್ಲಿ ಅವರು ಬಂದರು. ನಮ್ಮ ವಿಭಾಗ ಮುಖ್ಯಸ್ಥರ ಬಳಿ ಸ್ವಲ್ಪ ಹೊತ್ತು ಪತ್ರಿಕೆ-ಸಾಹಿತ್ಯ-ಬರವಣಿಗೆ ಮುಂತಾದ ವಿಚಾರಗಳ ಬಗ್ಗೆ ಮಾತನಾಡಿದರು. ನಂತರ ನನ್ನ ಹೆಸರು ಕೇಳಿದರು. ತಮ್ಮ ಪರಿಚಯವನ್ನೂ ಮಾಡಿಕೊಂಡರು. ಆದರೆ ಅವರು ಗರ್ವ ಪತ್ರಿಕೆಯವರಲ್ಲ ಎಂದು ನಂತರ ತಿಳಿತು. ತಿಳಿದಾಗ ಸ್ವಲ್ಪ ಬೇಸರವೂ ಆತು!
ಅವರು ತುಂಬ ಓದಿಕೊಂಡಿದ್ದಾರೆ ಎಂಬುದು ಅವರ ಮಾತಿನಿಂದಲೇ ತಿಳಿಯುತ್ತಿತ್ತು. ನನ್ನ ಮತ್ತು ಅವರ ಸಂಬಂಧ ನಂತರದ ದಿನಗಳಲ್ಲಿ ಆತ್ಮೀಯವಾತು. ಅವರು ಕಾರ್ಕಳ, ಉಡುಪಿ, ಕುಂದಾಪುರದಂತಹ ಕರಾವಳಿಯ ಊರುಗಳಿಗೆ ಬಂದಾಗ ಅವರ ಜೊತೆ ಮಾತನಾಡಲೆಂದೇ ಅಲ್ಲಿಗೆ ಹೋಗುತ್ತಿದ್ದೆ.
ಪತ್ರಿಕೋದ್ಯಮ ವಿದ್ಯಾರ್ಥಿಯಾದ ನನಗೆ ಹೈಸ್ಕೂಲಿನ ದಿನಗಳಿಂದಲೂ ಗಾಂಧೀವಾದಿಗಳು, ಸಮಾಜವಾದಿಗಳು, ರಾಷ್ಟ್ರೀಯವಾದಿಗಳು, ಮಹಿಳಾವಾದಿಗಳು ಮುಂತಾದ ವಿಭಿನ್ನ ಸಿದ್ಧಾಂತಗಳ ಹಿನ್ನಲೆಯಿಂದ ಆಲೋಚಿಸುವವರ ಬಗ್ಗೆ ಕುತೂಹಲವಿತ್ತು. ಈ 'ವಾದಿ'ಗಳಲ್ಲಿ ಯಾರು ಶ್ರೇಷ್ಠರು ಎಂಬ ಪ್ರಶ್ನೆಯೂ ನನ್ನಲ್ಲಿತ್ತು. ಹಲವರ ಬಳಿ ಈ ಬಗ್ಗೆ ಕೇಳಿಯೂ ಇದ್ದೆ. ನಾನು ಅಲ್ಲಿಯವರೆಗೆ ಭೇಟಿಯಾದ ಎಲ್ಲರೂ ತಮ್ಮ ವಾದವನ್ನು ಸಮರ್ಥಿಸಿಕೊಂಡು ಇನ್ನೊಬ್ಬರ ವಾದವನ್ನು ಅಲ್ಲಗಳೆದವರೇ ಆಗಿದ್ದರು. ಅದೇ ಪ್ರಶ್ನೆಯನ್ನು ಇವರ ಬಳಿಯೂ ಕೇಳಿದೆ. ಉತ್ತರ ತುಂಬ ಅರ್ಥಗರ್ಬಿತವಾಗಿತ್ತು.
"ನೋಡು, ಇವರಲ್ಲಿ ಯಾರು ಶ್ರೇಷ್ಠರು ಯಾರು ಅಧಮರು ಎಂದು ಯೋಚಿಸುವುದು ಸರಿಯಲ್ಲ. ಇವರೆಲ್ಲರ ಗುರಿಯೂ ಉತ್ತಮ ಸಮಾಜವನ್ನು ನಿರ್ಮಾಣ ಮಾಡುವುದೇ ಆಗಿದೆ. ಇವರೆಲ್ಲರೂ ಕೂಡ ನಮ್ಮ ಸಮಾಜ ಜಾತಿ-ಮತಗಳ ಬಂಧನದಿಂದ ಹೊರಬರಲಿ ಎನ್ನುವವರೇ ಆಗಿದ್ದಾರೆ. ಆದರೆ ಸೈದ್ಧಾಂತಿಕ ಹಿನ್ನಲೆಟ್ಟುಕೊಂಡು ಆಲೋಚನೆ ಮಾಡುವವರಿಗೆ - ಮಾತನಾಡುವವರಿಗೆ ಸಮಾಜದ ಕೆಲವು ಹುಳುಕುಗಳು ಮಾತ್ರ ಗಾಢವಾಗಿ ಕಾಣುತ್ತವೆ. ಇನ್ನು ಕೆಲವು ಹುಳುಕುಗಳು ಅಷ್ಟೊಂದು ಗಾಢವಾಗಿ ಕಾಣಿಸುವುದಿಲ್ಲ. ಉದಾಹರಣೆಗೆ, ಕೆಲವರಿಗೆ ಕಾಶ್ಮೀರ ಸಮಸ್ಯೆ ಪ್ರಮುಖವಾಗಿ ಕಂಡರೆ ಇನ್ನು ಕೆಲವರಿಗೆ ಬಡತನ ಪ್ರಮುಖವಾಗಿ ಕಾಣುತ್ತದೆ. ಆದರೆ ಇವೆರಡೂ ನಮ್ಮ ದೇಶವನ್ನು ಕಿತ್ತು ತಿನ್ನುತ್ತಿರುವ ಸಮಸ್ಯೆಗಳೇ ಆಗಿವೆ. ಹಾಗಾಗಿ ಎಲ್ಲರ ವಿಚಾರಗಳನ್ನೂ ಚೆನ್ನಾಗಿ ಓದಿಕೊಂಡು, ಎಲ್ಲ ರೀತಿಯಿಂದಲೂ ಯೋಚಿಸುವುದನ್ನು ಕಲಿತಾಗ ನೀನು ಉತ್ತಮ ಪತ್ರಕರ್ತನಾಗಬಲ್ಲೆ" ಎಂದರು.
ಅಲ್ಲಿಯವರೆಗೂ ತಮ್ಮನ್ನು ಸಮರ್ಥಿಸಿಕೊಳ್ಳುತ್ತಾ ಇನ್ನೊಬ್ಬರನ್ನು ತೆಗಳುವುದರಲ್ಲೇ ಕಾಲಹರಣ ಮಾಡುವ ಅನೇಕರನ್ನು ಕಂಡಿದ್ದ ನನಗೆ ಇವರ ಮಾತುಗಳು ಹೊಸ ಆಲೋಚನೆಯನ್ನು ನೀಡಿದವು. ಅವತ್ತಿನಿಂದ ನಾನು ಎಲ್ಲ ಬಗೆಯ ವಿಚಾರಗಳ ಪುಸ್ತಕಗಳನ್ನೂ ಓದಲು ಆರಂಭಿಸಿದ್ದೇನೆ. ಒಮ್ಮೆ ಲೋಹಿಯಾರ ಜೀವನಚರಿತ್ರೆಯನ್ನು ಓದಿದರೆ ಇನ್ನೊಮ್ಮೆ ಗುರೂಜಿಯವರದ್ದು. ಮತ್ತೊಮ್ಮೆ ಗಾಂಧೀಜಿಯವರದ್ದು. ಒಟ್ಟಿನಲ್ಲಿ ಕೆಲವು ಸಿದ್ಧಾಂತವಾದಿಗಳಿಗಿರುವ 'ಪುಸ್ತಕ ಮೈಲಿಗೆ'ಯನ್ನು ಸಾಧ್ಯವಾದಷ್ಟರ ಮಟ್ಟಿಗೆ ಬಿಡಲು ಪ್ರಾರಂಭಿಸಿದ್ದೇನೆ.
ಅಂದಹಾಗೆ ಲೇಖನದುದ್ದಕ್ಕೂ 'ಅವರು' 'ಇವರು' ಅಂತಲೇ ಸಂಬೋಧಿಸಿರುವ ಅವರು ಯಾರು ಅಂತ ಕೇಳಬೇಡಿ. ನನಗೂ ಆ ಬಗ್ಗೆ ಗೊಂದಲಗಳು ಪ್ರಾರಂಭವಾಗಿ ಬಿಟ್ಟಿವೆ. ಗುರುಗಳು ಅಂತ ಕರೆಯೋಣವೆಂದರೆ ಅವರು ಗುರುಗಳಿಗಿಂತ ಆತ್ಮೀಯರಾಗಿಬಿಟ್ಟಿದ್ದಾರೆ. ಸ್ನೇಹಿತ ಅಂತ ಕರೆಯೋಣವೆಂದರೆ ಸ್ನೇಹಿತರಂತೆ ನನ್ನನ್ನು ಅವರು ಗದರಿಸಿಲ್ಲ. ಹಾಗಾಗಿ ಅವರು ಯಾರು ಎನ್ನುವುದು ಇಲ್ಲಿ ಬೇಡ. ಆದರೆ ಅವರ ವಿಚಾರಗಳು ನನ್ನಂಥ ಸಾಮಾನ್ಯ ವಿದ್ಯಾರ್ಥಿಗಳಿಗೆ ಸರಿಯಾಗಿ ಅರ್ಥವಾದರೆ ಸಾಕು.

ಕಾಮೆಂಟ್‌ಗಳು

ಅನಾಮಧೇಯಹೇಳಿದ್ದಾರೆ…
Who is this "AVARU"?
ಚಿತ್ರಾ ಸಂತೋಷ್ ಹೇಳಿದ್ದಾರೆ…
ಬ್ಲಾಗ್ ಚೆನ್ನಾಗಿದೆ..ಆದ್ರೂ 'ಅವರ'ಹೆಸರನ್ನು ಪ್ರಸ್ತಾಪಿಸಿದ್ದರೆ ಚೆನ್ನಾಗಿತ್ತು..ಇವತ್ತು ಮೊದಲ ಬಾರಿಗೆ ನಿಮ್ ಬ್ಲಾಗ್ ನೋಡಿದ್ದು. ಇನ್ನಷ್ಟು ಬರೆಯಿರಿ..ತಾತ್ವಿಕತೆ ಜೊತೆಗೆ ಕ್ರಿಯಾಶೀಲತೆನೂ ಇರಲಿ. ನನ್ ಬ್ಲಾಗ್ ಗೆ ಬಂದಿದ್ದಕ್ಕೆ ಕೃತಜ್ಞತೆಗಳು....
ಚಿತ್ರಾ
Annapoorna Daithota ಹೇಳಿದ್ದಾರೆ…
Lekhana utthamavaagide. `Avaru' heliddu noorakke nooru sathya.
Sree ಹೇಳಿದ್ದಾರೆ…
nice to read that there are people like you who look into and beyond 'ism's. it is heartening to see open mindedness at such young age! keep it up! blog nalli bEre barahagaLU chennaagi bartive.
ಅನಾಮಧೇಯಹೇಳಿದ್ದಾರೆ…
Nice Article VIRAT.
In a non-commercial TV ad, they say Use CONDOME for safe SEX. What's meant by this????
And that ad is being published by Government authorities in public interest..!!
SO they are encouraging mens to go to prostitutes..??????
OR Y a man should use CONDOME with his own wife..????

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಪತ್ರಿಕೋದ್ಯಮದ ವಿದ್ಯಾರ್ಥಿ ಮಿತ್ರರಿಗೆ...

ನಾನಿನ್ನೂ ಪತ್ರಿಕೋದ್ಯಮದ ವಿದ್ಯಾರ್ಥಿ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆಯಲು ಇನ್ನೂ ಎರಡು ವರ್ಷ ಕಾಯಬೇಕು. ಪತ್ರಿಕೋದ್ಯಮದ ಜಂಜಡಗಳ ನೇರ ಅನುಭವವಿಲ್ಲ. ಪತ್ರಿಕಾರಂಗದಲ್ಲಿ ಎದುರಿಸಬೇಕಾಗಿರುವ ಸವಾಲುಗಳ ಬಗ್ಗೆ ಕೇಳಿ ಗೊತ್ತೆ ಹೊರತು ಸ್ವಲ್ಪವೂ ಅನುಭವಿಸಿ ಗೊತ್ತಿಲ್ಲ. ಹಾಗಾಗಿ ಈ ಹೊತ್ತಿನಲ್ಲಿ ಇಂಥ ಒಂದು ಲೇಖನವನ್ನು ಬರೆಯುವುದು ಸರಿಯೋ ತಪ್ಪೋ ಎಂಬ ಪ್ರಶ್ನೆ ನನ್ನನ್ನು ಹಲವು ಬಾರಿ ಕಾಡಿದೆ. ಆದರೂ ಈ ವಿಷಯವನ್ನು ನಿಮ್ಮ ಮುಂದೆ ಹೇಳಿಕೊಳ್ಳದಿದ್ದರೆ ಸಮಾಧಾನವಿಲ್ಲ ಅಂತ ಅನಿಸಿದ್ದರಿಂದ "ಬರೆಯಬೇಕು, ಬರೆಯುತ್ತೇನೆ" ಎಂದು ನಿರ್ಧರಿಸಿದ್ದೇನೆ. ರಾಜ್ಯದಲ್ಲಿ ಪತ್ರಿಕೋದ್ಯಮದಲ್ಲಿ ಪದವಿಯನ್ನು ನೀಡುವ ಹಲವಾರು ಕಾಲೇಜುಗಳು ಹುಟ್ಟಿಕೊಳ್ಳುತ್ತಿವೆ. ಹಲವಾರು ಪ್ರತಿಷ್ಠಿತ ಕಾಲೇಜುಗಳು ತಮ್ಮ ಮಾನವಿಕ ವಿಭಾಗದಲ್ಲಿ ಪತ್ರಿಕೋದ್ಯಮವನ್ನೂ ಒಂದು ಆಯ್ಕೆಯ ವಿಷಯವನ್ನಾಗಿ ಸೇರಿಸಿದ್ದಾರೆ. ಇತಿಹಾಸ, ರಾಜ್ಯಶಾಸ್ತ್ರ, ಅರ್ಥಶಾಸ್ತ್ರಗಳಂತೆ ಪತ್ರಿಕೋದ್ಯಮವನ್ನೂ ಶಾಸ್ತ್ರೀಯವಾಗಿ ಓದುವ ಅವಕಾಶ ಇಂದಿನ ಯುವಕರಿಗೆ ಇದೆ. ಪತ್ರಿಕೋದ್ಯಮವನ್ನು ಇಷ್ಟೊಂದು ಶಾಸ್ತ್ರೀಯವಾಗಿ ಓದಿದ್ದರೂ ನಾವು ಕೆಲವೊಮ್ಮೆ ವರ್ತಿಸುತ್ತಿರುವ ರೀತಿ ಸ್ವಲ್ಪ ಬೇಸರ ಮೂಡಿಸುತ್ತಿದೆ. ಮೊನ್ನೆ ಪತ್ರಿಕೋದ್ಯಮ ಓದುತ್ತಿರುವ ನನ್ನ ಹಳೆಯ ಸ್ನೇಹಿತರೊಬ್ಬರ ಜೊತೆ ಮಾತನಾಡುತ್ತಿದ್ದಾಗ ಭಾರತೀಯ ಮೂಲದ ವಿಶ್ವದ ಶ್ರೇಷ್ಠ ಪತ್ರಿಕೆಯೊಂದರ ಬಗ್ಗೆ ಮಾತು ಬಂತು. ಸುಮಾರು ನ...

Remember, we have sisters at home…

He was a married man of 30 and had two kids. What’s more, he had a loving spouse who loved him more than anybody could love! He was workin g in a sales promoting company where he, for the second time, fell in love with a charming lady. She was his colleague of 25 and single who loved him in spite of knowing his marital status. Suddenly one day he decided to marry his girlfriend and hence divorced his wife. His new wife didn’t had to wait long to witness his ugly face. She had to face many irking words daily. He used to beat her daily and force himself on her whenever she refused to respond to his sexual urges. She was actually raped by the same man whom, she thought, she loved! The above story is not one of Ekta Kapoor’s ‘K’ series, but is the story of hundreds of Indian women. Now imagine a married woman trying to marry for the second time when her husband is still alive! Imagine a mother of two kids falling in love with a man younger to her or at least imagine a widow expressing her ...

Get up Indians, hang him!

Do you think that whatever the Indian government and its ministers do are according to the secular principle? If your answer is ‘YES’, then you need not read this article! You might be well aware of the case of S.S.Sandhu, Superintendent of Police, Taran Taaran, who himself protected the people of Panjab from the brutal hands of terrorists in the 80s decade. He and his fellowmen had conducted many military operations against Sikh terrorists throughout Panjab and had strived hard to restore normalcy in the Panjab state. Later the National Human Right Commission of India filed many cases against him for he had, allegedly, violated the ‘human rights’ of terrorists! At that time no secularists, no human rights activists were present to advocate on behalf of Sandhu. Later Sandhu surrendered to death as he was unable to prove that he had not violated the ‘human rights’ of terrorists! It is strange but true that many a times Indian ‘secularists’ and ‘human right’ activists advocate on behalf ...