ವಿಷಯಕ್ಕೆ ಹೋಗಿ

ಪೋಸ್ಟ್‌ಗಳು

ಜನವರಿ, 2013 ರಿಂದ ಪೋಸ್ಟ್‌ಗಳನ್ನು ತೋರಿಸುತ್ತಿದೆ

ಪಂಕ್ತಿಭೇದ ಮತ್ತು ಮುಸ್ಲಿಂ ವಿಶ್ವವಿದ್ಯಾಲಯ

ಒಂದೆರಡು ವಿಷಯಗಳ ಬಗ್ಗೆ ಮಾತನಾಡಬೇಕಿದೆ - ಪಂಕ್ತಿಭೇದ ಮತ್ತು ಮುಸ್ಲಿಂ ವಿಶ್ವವಿದ್ಯಾಲಯದ ಬಗ್ಗೆ. ದಕ್ಷಿಣ ಕನ್ನಡ ಜಿಲ್ಲೆಯ ವಿಟ್ಲದ ಪಂಚಲಿಂಗೇಶ್ವರ ದೇವಸ್ಥಾನದ ಬ್ರಹ್ಮಕಲಶೋತ್ಸವ ಕಾರ್ಯಕ್ರಮದಲ್ಲಿ ಪಂಕ್ತಿಭೇದ ತಾಂಡವವಾಡಿದೆ. ಅಲ್ಲಿ ಬ್ರಾಹ್ಮಣರಿಗೆ ಪ್ರತ್ಯೇಕ ಪಂಕ್ತಿ ಮತ್ತು ಇನ್ನುಳಿದ ಜಾತಿಯ ಭಕ್ತರಿಗೆ ಒಂದು ಪಂಕ್ತಿಯಲ್ಲಿ ಊಟದ ವ್ಯವಸ್ಥೆ ಮಾಡಲಾಗಿತ್ತು ಎಂದು ಪತ್ರಿಕೆಗಳಲ್ಲಿ ವರದಿಯಾಗಿದೆ. ನಾಲ್ಕು ವರ್ಣಗಳು (ಅಥವಾ ಜಾತಿಗಳು) ಜನ್ಮದಿಂದ ಬರುವುದಿಲ್ಲ. ಅದು ಮನುಷ್ಯ ಮಾಡುವ ಕಾರ್ಯಗಳಿಂದ, ಆತ ಪಡೆಯುವ ಸಂಸ್ಕಾರದಿಂದ ದೊರೆಯುವಂಥದ್ದು. ಬ್ರಾಹ್ಮಣ್ಯ ಎಂಬುದು ಶ್ರೇಷ್ಠ ಎಂಬ ಬಗ್ಗೆ ಸಹಮತವಿದೆ. ಆದರೆ ಅದು ಹುಟ್ಟಿನಿಂದ ಬರುವಂಥದ್ದಲ್ಲ. ಜ್ಞಾನಾರ್ಜನೆಯಿಂದ ಮತ್ತು ಒಳ್ಳೆಯ ಸಂಸ್ಕಾರದಿಂದ ಬರುವಂಥದ್ದು ಅದು. ಇವತ್ತು ಬ್ರಾಹ್ಮಣರು ಎಂದು ಹೇಳಿಕೊಂಡು, ಜಾತಿಯ ಅಹಮಿಕೆ ತೋರುತ್ತಿರುವ ಬಹುತೇಕರು ಸಂಸ್ಕಾರದಿಂದ ಬ್ರಾಹ್ಮಣರಲ್ಲ. ಅವರಿಗೆ ನಾಡಿನ ಯಾವುದೇ ದೇವಸ್ಥಾನದಲ್ಲೂ ಪ್ರತ್ಯೇಕ ಪಂಕ್ತಿಯಲ್ಲಿ ಊಟ ಬಡಿಸುವ ಸಂಪ್ರದಾಯ ಇರಕೂಡದು. ತಮಗೆ ಪ್ರತ್ಯೇಕ ಪಂಕ್ತಿಯೇ ಬೇಕು, ಎಲ್ಲರ ಜೊತೆಗೂಡಿ ಊಟ ಮಾಡಲು ಸಾಧ್ಯವಿಲ್ಲ ಎನ್ನುವ ಸ್ವಯಂಘೋಷಿತ ಬ್ರಾಹ್ಮಣರು, ಮನೆಯಲ್ಲೇ ಅಡುಗೆ ಮಾಡಿಕೊಂಡು ಉಣ್ಣುವುದು ಒಳಿತು. ಹಿಂದೂ ಸಮಾಜದಿಂದ ಇಂಥದೊಂದು ಖಡಕ್ ಸಂದೇಶ ಹೋಗಲೇಬೇಕಿದೆ. ಇಲ್ಲವಾದರೆ, ಸಮಾಜದ ಸಾಮರಸ್ಯಕ್ಕೆ ಪಂಕ್ತಿಭೇದ ಎಂಬುದು ಮಾ...